ವರದಿ ಬಾಕಿಯಿಂದ ಕ್ವಾರಂಟೈನ್ ಪೀಕಲಾಟ
ವಲಸೆ ಬಂದವರು ಒಂದು ಲಕ್ಷಕ್ಕೂ ಅಧಿಕ ಜನ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
Team Udayavani, May 27, 2020, 11:28 AM IST
ಸಾಂದರ್ಭಿಕ ಚಿತ್ರ
ಕಲಬುರಗಿ: ಕೋವಿಡ್ ಮಾದರಿ ಪರೀಕ್ಷೆಗಳ ವರದಿ ವಿಳಂಬದಿಂದ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಳಬರು ಹಾಗೂ ಹೊಸಬರನ್ನು ಒಂದೇ ಕಡೆ ಕ್ವಾರಂಟೈನ್ ಮಾಡುತ್ತಿರುವುದರಿಂದ ಮಹಾಮಾರಿ ರೋಗ ಯಾರಿಂದ? ಯಾರಿಗೆ? ಹರಡುತ್ತದೆಯೋ ಎನ್ನುವ ಭೀತಿ ಕಾಡತೊಡಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ವಲಸೆ ಹೋದ ಊರುಗಳಲ್ಲಿ ಅನ್ನ, ನೀರು ಸಿಗದೆ ಪರದಾಡಿ ಕೂಲಿ ಕಾರ್ಮಿಕರು, ನೌಕರಸ್ಥರು ಮರಳಿ ಜಿಲ್ಲೆಗೆ ಬಂದಿದ್ದಾರೆ. ಇದು ವರೆಗೆ ಬೆಂಗಳೂರು, ಮಹಾರಾಷ್ಟ್ರ, ತೆಲಂಗಾಣ ಸೇರಿ ಅನೇಕ ಕಡೆಗಳಿಂದ ಒಂದು ಲಕ್ಷಕ್ಕೂ ಅಧಿಕ ಜನರು ವಾಪಸ್ ಆಗಿದ್ದಾರೆ. ಆರಂಭದಲ್ಲಿ ಬಂದವರನ್ನು ಕೇವಲ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ, ಮೇ 5ರ ನಂತರ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ವಲಸಿಗರ ಕ್ವಾರಂಟೈನ್‌ಗಾಗಿಯೇ ಜಿಲ್ಲಾದ್ಯಂತ ಸುಮಾರು 640 ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ.
ಸದ್ಯ ಅಂದಾಜು 32500 ಜನರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಪ್ರತಿಯೊಬ್ಬರ ಗಂಟಲು ದ್ರಾವಣ ಮಾದರಿ ಪರೀಕ್ಷೆ ಮಾಡಿದ ನಂತರವೇ ಕ್ವಾರಂಟೈನ್ ಕೇಂದ್ರದಿಂದ ಮುಕ್ತಗೊಳಿಸಬೇಕೆಂದು ಸರ್ಕಾರ ನಿಯಮ ಮಾಡಿದೆ. ಆದರೆ, ಪ್ರಯೋಗಾಲಯದ ವರದಿಯೇ ವಿಳಂಬವಾಗುತ್ತಿದೆ. ಹೀಗಾಗಿ 14 ದಿನ ಕಳೆದರೂ ಕ್ವಾರಂಟೈನ್‌ನಲ್ಲೇ ಇರಬೇಕಾದ ದುಃಸ್ಥಿತಿ ಎದುರಾಗಿದೆ.
ವಿಳಂಬ ಯಾಕೆ?: ಕೋವಿಡ್ ಪತ್ತೆಗೆ ವೇಗ ನೀಡಲೆಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಯ ಪ್ರಯೋಗಾಲಯದ ಸಾಮರ್ಥಯ ಹೆಚ್ಚಿಸಲಾಗಿದೆ. ಒಂದೇ ಪ್ರಯೋಗಾಲಯದಲ್ಲಿ ಮೂರು ಟೆಸ್ಟಿಂಗ್ ಕಿಟ್‌ಗಳು ಇದ್ದು, ನಿತ್ಯ ಮೂರು ಪಾಳಿಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ದಿನಕ್ಕೆ 850 ಮಾದರಿ ಪರೀಕ್ಷೆ ಮಾಡುವ ಸಾಮರ್ಥಯವನ್ನು ಲ್ಯಾಬ್ ಹೊಂದಿದೆ. ಆದರೆ, ಕ್ವಾರಂಟೈನ್ ಕೇಂದ್ರಗಳಲ್ಲಿ 32 ಸಾವಿರ ಜನರಿದ್ದು, ನಿರಂತರವಾಗಿ ಅವರ ಮಾದರಿಗಳನ್ನೇ ಪರೀಕ್ಷೆ ಮಾಡಿದರೂ ಕನಿಷ್ಠ 35 ದಿನಗಳಾದರೂ ಬೇಕಾಗುತ್ತದೆ. ಕಂಟೇನ್ಮೆಂಟ್ ಝೋನ್‌ಗಳಲ್ಲಿ ರ್‍ಯಾಂಡಮ್ ಟೆಸ್ಟಿಂಗ್‌ಗೆ ನಿರ್ಧರಿಸಲಾಗಿದ್ದು, ನಗರದ ಮೋಮಿನ್‌ಪುರ ಬಡಾವಣೆಯೊಂದರಲ್ಲೇ ನಾಲ್ಕು ಸಾವಿರ ಜನರ ಮಾದರಿ ಸಂಗ್ರಹಿಸಲಾಗಿದೆ. ಹೀಗಾಗಿ ಲ್ಯಾಬ್ ಮೇಲೆ ಕಾರ್ಯದ ಒತ್ತಡ ಹೆಚ್ಚುತ್ತಿದ್ದು, ಪರೀಕ್ಷಾ ವರದಿ ವಿಳಂಬಕ್ಕೆ ಕಾರಣವಾಗಿದೆ.
ಆತಂಕ ಯಾಕೆ?: ಮರಳಿ ಬಂದ ವಲಸಿಗರನ್ನು ಆಯಾ ತಾಲೂಕಗಳಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳು, ವಸತಿ ಗೃಹಗಳು,ಶಾಲೆ-ಕಾಲೇಜು ಕಟ್ಟಡಗಳು ಮತ್ತು ಸಮುದಾಯ ಭವನಗಳನ್ನು ಕ್ವಾರಂಟೈನ್‌ಗೆ ಬಳಕೆ ಮಾಡಲಾಗಿದೆ. ಆರಂಭದಲ್ಲಿ ಬೆಂಗಳೂರು, ಚೆನ್ನೈ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಸ್ವಲ್ಪ ಮಟ್ಟಿಗೆ ಕೆಲ ಸುರಕ್ಷತಾ ಪ್ರದೇಶಗಳಿಂದ ಬಂದವರು ಇದ್ದಾರೆ. ನಂತರ ಕೋವಿಡ್ ಹಾವಳಿ ಹೆಚ್ಚಿರುವ ಮಹಾರಾಷ್ಟ್ರದಿಂದ ಅತ್ಯಧಿಕ ಕೂಲಿ ಕಾರ್ಮಿಕರು ಆಗಮಿಸಿದ್ದು, ಎಲ್ಲರನ್ನು ಒಟ್ಟಿಗೆ ಇರಿಸಲಾಗಿದೆ. ಕೆಲವರು ಇನ್ನೇನು ಮನೆಗೆ ಮರಳುತ್ತೇವೆ ಎನ್ನುವ ವಿಶ್ವಾಸದಲ್ಲಿ ಇದ್ದರು. ಆದರೆ, ಮಹಾರಾಷ್ಟ್ರದಿಂದ ಬಂದವರಲ್ಲಿ ಕೋವಿಡ್ ಪತ್ತೆಯಾಗುತ್ತಿದ್ದು, ಬೆಂಗಳೂರು ಮತ್ತಿತರ ಕಡೆಗಳಿಂದ ಬಂದವರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ. ಈ ಸಂಬಂಧ ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲವರು ವಾಗ್ವಾದ ನಡೆಸಿದ ಘಟನೆಗಳು ನಡೆದಿವೆ.
77 ಜನರಿಗೆ ಚಿಕಿತ್ಸೆ: ಮೆಡಿಕಲ್ ರೆಪ್ರಸೆಂಟೇಟಿವ್ ಹಾಗೂ ಆತನ ಸಂಪರ್ಕಕ್ಕೆ ಬಂದು ಸೋಂಕಿಗೆ ತುತ್ತಾಗಿದ್ದ ಏಳು ಜನರು ಸೋಮವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 157 ಜನರಿಗೆ ಮಹಾಮಾರಿ ಸೋಂಕು ದೃಢಪಟ್ಟಿದೆ. ಇದರಲ್ಲಿ 73 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಏಳು ಜನರು ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. 77 ಜನ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬರಬೇಕಿದೆ 7,410 ವರದಿ
ಕೋವಿಡ್ ಮಹಾಮಾರಿ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಂಗಳವಾರ ಸಂಜೆ 5 ಗಂಟೆ ವರೆಗೆ 25,359 ಗಂಟಲು ದ್ರಾವಣ ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ 157 ಜನರಿಗೆ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟರೆ, 17,792 ವರದಿ ನೆಗೆಟಿವ್ ಎಂದು ಬಂದಿವೆ. ಉಳಿದಂತೆ ಇನ್ನು 7,410 ಮಾದರಿಗಳ ವರದಿ ಪ್ರಯೋಗಾಲಯದಿಂದ ಬರಬೇಕಿದೆ. ಇದು ವರೆಗೆ ಕೋವಿಡ್ ಪತ್ತೆಯಾದ 37 ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಸದ್ಯಕ್ಕೆ 19 ಕಂಟೇನ್ಮೆಂಟ್ ಝೋನ್‌ಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದ್ದಾರೆ.
ಖಾಸಗಿ ವೈದ್ಯ ಗುಣಮುಖ
ಕಲಬುರಗಿ ನಗರದ ಖೂಬಾ ಪ್ಲಾಟ್‌ನ 45 ವರ್ಷದ ಖಾಸಗಿ ವೈದ್ಯ (ಪಿ-926) ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಮೋಮಿನಪುರದ 35 ವರ್ಷದ ಮೆಡಿಕಲ್ ರೆಪ್ರಸೆಂಟೇಟಿವ್ (ಪಿ-848)ಗೆ ಚಿಕಿತ್ಸೆ ನೀಡಿದ್ದರಿಂದ ವೈದ್ಯರಿಗೆ ಸೋಂಕು ತಗುಲಿತ್ತು. ಅವರನ್ನು ಮೇ 13ರಂದು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.