ಒನ್ ನೇಶನ್ ಒನ್ ರೇಶನ್ ಕಾರ್ಡ್ ಆ್ಯಪ್‌ನಲ್ಲಿ ಕನ್ನಡ
Team Udayavani, Apr 19, 2021, 2:26 PM IST
ದಾವಣಗೆರೆ: ವಲಸಿಗರಿಗೆ ದೇಶದ ಯಾವುದೇಭಾಗದಲ್ಲಿಯೂ ಸುಲಭವಾಗಿ ಪಡಿತರಆಹಾರಧಾನ್ಯ ಸಿಗುವಂತೆ ಮಾಡಲು ಕೇಂದ್ರಸರ್ಕಾರ ಈಗಾಗಲೇ ಜಾರಿಗೆ ತಂದಿರುವ”ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್‌ನಲ್ಲಿ ಇತ್ತೀಚೆಗೆ ಕನ್ನಡ ಭಾಷೆಯನ್ನೂಅಳವಡಿಸಲಾಗಿದೆ. ಇದು ಕನ್ನಡಿಗ ವಲಸಿಗರಿಗೆಉಪಯುಕ್ತವಾಗಿದೆ.
“ಒನ್ ನೇಶನ್ ಒನ್ ರೇಶನ್ ಕಾರ್ಡ್’ಆ್ಯಪ್‌ನಲ್ಲಿ ಮೊದಲು ಇಂಗ್ಲಿಷ್ ಹಾಗೂ ಹಿಂದಿಎರಡೇ ಭಾಷೆಗಳನ್ನು ಅಳವಡಿಸಲಾಗಿತ್ತು.ಆ್ಯಂಡ್ರಾಯ್ಡ ಮೊಬೈಲ್ ಬಳಕೆ ಗೊತ್ತಿದ್ದುಇಂಗ್ಲಿಷ್ ಅಥವಾ ಹಿಂದಿ ಭಾಷೆ ಓದಲುಬಾರದೇ ಇರುವವರಿಗೆ ಈ ಆ್ಯಪ್ ಬಳಕೆಕಷ್ಟವಾಗಿತ್ತು. ಈಗ ಕನ್ನಡ ಭಾಷೆ ಅಳವಡಿಸಿರುವುದರಿಂದ ಸಾಮಾನ್ಯ ಕನ್ನಡ ಓದಲುಬರುವವರೂ ಸಹ ಆ್ಯಪ್ ಪ್ರಯೋಜನಪಡೆದುಕೊಳ್ಳಬಹುದಾಗಿದೆ.
ವ್ಯಕ್ತಿಯ ಭೌತಿಕ ಸ್ಥಳವನ್ನು ಲೆಕ್ಕಿಸದೆರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಬರುವ ಎಲ್ಲ ಫಲಾನುಭವಿಗಳಿಗೆ ಆಹಾರಭದ್ರತೆ ಒದಗಿಸುವ ಏಕೈಕ ಗುರಿಯೊಂದಿಗೆ”ಒನ್ ನೇಶನ್ ಒನ್ ರೇಶನ್ ಕಾರ್ಡ್’ ಆ್ಯಪ್‌ಅಭಿವೃದ್ಧಿಪಡಿಸಲಾಗಿದ್ದು, ಈ ಆ್ಯಪ್ ಬಳಕೆಗೆಅಡ್ಡಿಯಾಗಿದ್ದ ಭಾಷಾ ತೊಂದರೆಗೂ ಕೇಂದ್ರಸರ್ಕಾರ ತೆರೆ ಎಳೆದಂತಾಗಿದೆ.
ತೆಲುಗು,ತಮಿಳು, ಮಲಯಾಳಿ, ಪಂಜಾಬಿ, ಓರಿಯಾಪ್ರಾದೇಶಿಕ ಭಾಷೆಗಳ ಜತೆಗೆ ಕನ್ನಡವನ್ನೂಅಳವಡಿಸಲಾಗಿದೆ.ಎಲ್ಲವೂ ಕನ್ನಡದಲ್ಲೇ ಇದೆ: “ಒನ್ ನೇಶನ್‌ಒನ್ ರೇಶನ್ ಕಾರ್ಡ್’ ಆ್ಯಪ್‌ನಲ್ಲಿನೋಂದಣಿ, ನಿಮ್ಮ ಅರ್ಹತೆಯನ್ನು ತಿಳಿಯಿರಿ,ಹತ್ತಿರದ ಪಡಿತರ ಅಂಗಡಿಗಳು, ನನ್ನವ್ಯವಹಾರಗಳು, ಅರ್ಹತಾ ಮಾನದಂಡ,ಆಧಾರ್ ಪರಿಶೀಲನೆ, ಸಲಹೆ, ಲಾಗಿನ್ ಮಾಡಿಎಂಬ ವಿಭಾಗಗಳು ಈಗ ಕನ್ನಡದಲ್ಲಿ ತೆರೆದುಕೊಳ್ಳುತ್ತಿವೆ.
ಈ ವಿಭಾಗಗಳನ್ನು ತೆರೆದಾಗಮುಂದೆಯೂ ಕನ್ನಡದಲ್ಲಿಯೇ ಮುಂದುವರಿಯಲು ಅವಕಾಶ ಕಲ್ಪಿಸುವ ಮೂಲಕ ಈ ಸೇವೆದೇಶಾದ್ಯಂತ ಇರುವ ಕನ್ನಡಿಗ ವಲಸಿಗರು ಸಹಸುಲಭವಾಗಿ ತಮ್ಮ ಪಡಿತರ ಪೂರಕ ಮಾಹಿತಿಪಡೆದುಕೊಳ್ಳಲು ಅನುಕೂಲವಾಗಿದೆ.
ತಪ್ಪು ತಿಳಿವಳಿಕೆ ಬೇಡ: ಕೇವಲ ಆಧಾರ್‌ನಂಬರ್ ಇದ್ದರೆ ಸಾಕು ಒನ್ ನೇಶನ್ ಒನ್‌ರೇಶನ್ ಕಾರ್ಡ್’ ಆ್ಯಪ್‌ನಲ್ಲಿಯೇ ಲಿಂಕ್‌ಆಗಿರುವ ರೇಶನ್ ಕಾರ್ಡ್ ನಂಬರ್, ಪಡಿತರವ್ಯವಹಾರ ಮಾಹಿತಿ, ಪಡಿತರ ಲಭ್ಯತೆ ಹಾಗೂಜಿಪಿಎಸ್ ಮೂಲಕ ಹತ್ತಿರದ ಪಡಿತರಅಂಗಡಿಗಳ ಮಾಹಿತಿಯೂ ಲಭ್ಯವಾಗಲಿದೆ.ಕೆಲ ವಲಸಿಗರು ವಲಸೆ ಬಂದ ಸ್ಥಳದಲ್ಲಿ ಪಡಿತರಪಡೆದರೆ ಮೂಲ ಸ್ಥಳದಲ್ಲಿನ ರೇಶನ್ ಕಾರ್ಡ್‌ರದ್ದಾಗಬಹುದು ಎಂಬ ತಪ್ಪು ತಿಳಿವಳಿಕೆಯಿಂದಪಡಿತರ ಪಡೆಯಲು ಹಿಂದೇಟುಹಾಕುತ್ತಿದ್ದಾರೆ. ಇನ್ನು ಕೆಲವರು ತಾವುನೆಲೆಯೂರಿದ ಸ್ಥಳದ ಹತ್ತಿರದ ಪಡಿತರಅಂಗಡಿ ಎಲ್ಲಿದೆ ಎಂಬುದನ್ನು ತಿಳಿಯಲುಅಲೆದಾಡುತ್ತಾರೆ. ವಲಸೆ ಬರುವಾಗ ಪಡಿತರಚೀಟಿ ಬಿಟ್ಟು ಬಂದು ಪರದಾಡುತ್ತಾರೆ.
ಇಂಥಎಲ್ಲ ಸಮಸ್ಯೆಗಳಿಗೆ ಅಂಗೈಯಲ್ಲೇ ಈ ಆ್ಯಪ್‌ಮೂಲಕ ಈಗ ಕನ್ನಡದಲ್ಲೇ ಪರಿಹಾರ ಕಂಡುಕೊಳ್ಳಬಹುದಾಗಿದೆ.ಆ್ಯಪ್ ಜಾಗೃತಿ: ವಲಸಿಗರಿಗೆ ಹೆಚ್ಚುಉಪಯುಕ್ತವಾಗಿರುವ ಒನ್ ನೇಶನ್ ಒನ್‌ರೇಶನ್ ಕಾರ್ಡ್’ ಆ್ಯಪ್‌ನಲ್ಲಿ ಕನ್ನಡ ಭಾಷೆಅಳವಡಿಸಿದ್ದರಿಂದ ಇತೀ¤ಚೆಗೆ ಈ ಆ್ಯಪ್ ಹೆಚ್ಚುಜನರನ್ನು ಆಕರ್ಷಿಸಿದೆ. ಆಹಾರ ಇಲಾಖೆ ಸಹನ್ಯಾಯಬೆಲೆ ಅಂಗಡಿ, ಜಾಹೀರಾತು ಫಲಕಗಳಮೂಲಕ ಆ್ಯಪ್ ಬಗ್ಗೆ ಹೆಚ್ಚು ಪ್ರಚಾರಮಾಡುತ್ತಿದೆ. ಕೇವಲ ಪಡಿತರ ಪಡೆಯಲುಅನುಕೂಲವಾಗಲೆಂದು ಈ ಆ್ಯಪ್‌ರೂಪಿಸಲಾಗಿದ್ದು, ಎಲ್ಲಿಯೇ ಪಡಿತರತೆಗೆದುಕೊಂಡರೂ ಮೂಲ ಸ್ಥಳದಲ್ಲಿ ಪಡಿತರಚೀಟಿ ರದ್ದಾಗುವುದಿಲ್ಲ ಎಂಬ ಬಗ್ಗೆಯೂಇಲಾಖೆ ತಿಳಿವಳಿಕೆ ನೀಡುತ್ತಿದೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
MUST WATCH
ಹೊಸ ಸೇರ್ಪಡೆ
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.