![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 23, 2020, 5:35 AM IST
ಬೆಂಗಳೂರು: ಆಡಳಿತದಲ್ಲಿ ಪಾರದರ್ಶಕತೆ, ಕೆಲಸಗಳಿಗೆ ವೇಗ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ) ಇ- ಆಫೀಸ್ ಅಳವಡಿಸಿಕೊಂಡಿದ್ದು, ಆಯು ಕ್ತರು ಮತ್ತು ಕಾರ್ಯದರ್ಶಿಗಳ ಕಚೇರಿ ಹೊರತು ಪಡಿಸಿದರೆ ಉಳಿದ ಯಾವ ವಿಭಾಗಗಳಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ!
ಭೂ ಸ್ವಾಧೀನ ವಿಭಾಗ, ಅಭಿಯಂತರ ವಿಭಾಗ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಭಾಗ ಸೇರಿ ಹತ್ತಾರು ವಿಭಾಗಗಳು ಬಿಡಿಎ ಕೇಂದ್ರ ಕಚೇರಿಯಲ್ಲಿ ಕಾರ್ಯಾಚರಿಸುತ್ತಿದ್ದು, ಇದುವರೆಗೂ ಪರಿಣಾಮಕಾರಿಯಾಗಿ ಇ- ಆಫೀಸ್ ಅನುಷ್ಠಾನಗೊಂಡಿಲ್ಲ. ಆದ್ದರಿಂದ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ವಿವಿಧ ಕೆಲಸ ನಿಮಿತ್ತ ಸಾರ್ವಜನಿಕರು ಕಚೇರಿ ಅಲೆಯುವುದು ತಪ್ಪುತ್ತಿಲ್ಲ.
ಆಡಳಿತದಲ್ಲಿ ಪಾರದರ್ಶಕತೆ ತರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಲಹೆಯಂತೆ ಕಳೆದ ವರ್ಷ ಇ -ಆಫೀಸ್ ಜಾರಿಗೊಳಿದೆ. ಬಿಡಿಎನಲ್ಲಿ ನಿವೇಶನಗಳ ಹಂಚಿಕೆ ಮತ್ತು ಮಾರಾಟದಲ್ಲಿ ಬೋಗಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆ, ಖಚಿತ ಅಳತೆ ವರದಿಯನ್ನು ಇ- ಆಫೀಸ್ ಮೂಲಕವೇ ವಿತರಿಸಲು ಪ್ರಾಧಿಕಾರ ಮುಂದಾಗಿತ್ತು. ಆದರೆ, ಇದು ಇನ್ನೂ ಕಾರ್ಯಗತವಾಗಿಲ್ಲ. ಬಿಡಿಎ ಭೂ ಸ್ವಾಧೀನಪಡಿಸಿಕೊಂಡು ನಿರ್ಮಿಸಿರುವ ಬಡಾವಣೆಗಳಲ್ಲಿ ನಿವೇಶನಗಳನ್ನು ರಚಿಸಿ, ಅರ್ಹರಿಂದ ಕಾಲ ಕಾಲಕ್ಕೆ ಅರ್ಜಿ ಆಹ್ವಾನಿಸಿ ವಸತಿ ನಿವೇಶನಗಳನ್ನು ಕೊಡುವ, ಲಿಖೀತ ರೂಪದಲ್ಲಿ ನಿವೇಶನಗಳ ಖಚಿತ ಅಳತೆ ವರದಿ,
ಆಯವ್ಯಯ ಅಂದಾಜು ವೆಚ್ಚಗಳ ಮಾಹಿತಿಯನ್ನು ಮಂಡಿಸಲು ಡಿಜಿಟಲ್ ಸ್ಪರ್ಶ ಹಾಗೂ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ದಾಖಲಿಕರಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಪ್ರಸ್ತುತ ಯೋಜನೆ ಪೇಪರ್ ಮೇಲಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸಚಿವಾಲಯ ಸೇರಿದಂತೆ ಹಲವು ಇಲಾಖೆಗಳು ಇ- ಆಫೀಸ್ ಮೂಲಕವೇ ಕಾರ್ಯ ನಡೆಸುತ್ತಿದ್ದರೆ, ಅಭಿವೃದ್ಧಿ ಪ್ರಾಧಿಕಾರ ಮಾತ್ರ ಅಭಿವೃದ್ಧಿಯತ್ತ ಗಮನಹರಿಸುತ್ತಿಲ್ಲ.
ಬಿಡಿಎ ಆಯುಕ್ತರು ಡಾ. ಜಿ.ಸಿ.ಪ್ರಕಾಶ್ ?: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ ಅಭಿವೃದ್ಧಿ ಪಡಿಸುತ್ತಿದೆ ಹೊರತು ತನ್ನ ವೆಬ್ ಸೈಟ್ ಅನ್ನು ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ ವಹಿಸಿದೆ. ಪ್ರಾಧಿಕಾರಕ್ಕೆ ನೂತನ ಆಯುಕ್ತರಾಗಿ ಡಾ.ಎಚ್.ಆರ್.ಮಹಾದೇವ್ ಅವರು ಅಧಿಕಾರ ಸ್ವೀಕರಿಸಿ ಸುಮಾರು ತಿಂಗಳಾಗುತ್ತಿದ್ದರೂ, ಪ್ರಾಧಿಕಾರದ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಡಾ.ಜಿ.ಸಿ.ಪ್ರಕಾಶ್ ಬಿಡಿಎ ಆಯುಕ್ತರೆಂದು ಉಲ್ಲೇಖವಿದೆ.
ಬಿಡಿಎ ಕಚೇರಿಯಲ್ಲಿ ಇ- ಆಫೀಸ್ ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿರುವ ಬಗ್ಗೆ ಗಮನಕ್ಕೆ ಬಂದಿದೆ. ಇನ್ನೂ ಮೂರು ತಿಂಗಳಲ್ಲಿ ಭೂ ಸ್ವಾಧೀನ, ಅಭಿಯಂತರ ವಿಭಾಗ ಸೇರಿ ಎಲ್ಲ ಕಚೇರಿಯಲ್ಲಿಯೂ ಇ – ಆಫೀಸ್ ಅಳವಡಿಸಲಾಗುವುದು. ಇದರಿಂದ ಪ್ರಾಧಿಕಾರದ ಕೆಲಸಗಳು ವೇಗ ಪಡೆಯಲಿವೆ.
-ಡಾ.ಎಚ್.ಆರ್.ಮಹಾದೇವ್, ಬಿಡಿಎ ಆಯುಕ್ತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.