Dasara ಹಬ್ಬಕ್ಕೆ ಊರಿಗೆ ಹೊರಟ ಲಕ್ಷಾಂತರ ಜನ: ಹಲವೆಡೆ ಭಾರೀ ಸಂಚಾರ ದಟ್ಟಣೆ
ದಸರಾ ಹಬ್ಬಕ್ಕೆ ಊರಿಗೆ ಹೊರಟ ಲಕ್ಷಂತರ ಜನ: ಹಲವೆಡೆ ಭಾರೀ ಸಂಚಾರ ದಟ್ಟಣೆ
Team Udayavani, Oct 11, 2024, 1:00 PM IST
ಬೆಂಗಳೂರು: ದಸರಾ ಹಬ್ಬ ಸೇರಿದಂತೆ ಸರಣಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಗರು ತಮ್ಮ ಊರುಗಳ ಕಡೆ ತೆರಳಿದ್ದರಿಂದ ಮೆಜೆಸ್ಟಿಕ್ ಸೇರಿ ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಭಾರೀ ಜನದಟ್ಟಣೆ ಜತೆಗೆ ಸಂಚಾರ ದಟ್ಟಣೆಯು ಉಂಟಾಗಿತ್ತು.
ಶುಕ್ರವಾರ ಆಯುಧ ಪೂಜೆ, ಶನಿವಾರ ವಿಜಯ ದಶಮಿ ಮತ್ತು ಭಾನುವಾರ ವಾರದ ರಜೆ ಸೇರಿ 3 ದಿನಗಳು ಸರಣಿ ರಜೆ ಇದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿ ನಿಂದ ಲಕ್ಷಾಂತರ ಮಂದಿ ಗುರುವಾರ ಬೆಳಗ್ಗೆಯಿಂದಲೇ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದರು. ಮತ್ತೂಂದೆಡೆ ಕೆಎಸ್‌ಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 1200 ಬಸ್‌ಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವ್ಯವಸ್ಥೆ ಮಾಡಿದೆ. ಕೆಲ ಪ್ರಯಾಣಿಕರು ಮುಂಗಡ ಸೀಟು ಕಾಯ್ದಿರಿಸಿದರೆ, ಕೆಲವರು ನೇರವಾಗಿ ಬಸ್ ನಿಲ್ದಾಣಕ್ಕೆ ಬಂದು ಬಸ್ ಏರಿದರು.
ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ: ಗುರುವಾರ ಬೆಳಗ್ಗೆ 7 ಗಂಟೆಯಿಂದಲೇ ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಮೈಸೂರು ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ ಇತ್ತು. ಕೆಲವರು ಸ್ವಂತ ವಾಹನಗಳ ಮೂಲಕ ಊರುಗಳತ್ತ ಪ್ರಯಾಣಿಸಿದರೆ, ಬಹುತೇಕ ಮಂದಿ ಸಮೂಹ ಸಾರಿಗೆ ಬಳಸಿದರು. ಅದರಿಂದ ಮೆಜೆಸ್ಟಿಕ್, ಸ್ಯಾಟಲೈಟ್, ಯಶವಂತಪುರ, ಹೆಬ್ಟಾಳ, ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಮಂದಗತಿಯ ವಾಹನ ಸಂಚಾರ ಇತ್ತು.
ಇನ್ನು ಮೆಜೆಸ್ಟಿಕ್, ಯಶವಂತರದ ಗೋವರ್ಧನ ಟಾಕೀಸ್, ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪ ತಡರಾತ್ರಿ 1 ಗಂಟೆವರೆಗೂ ನಿರೀಕ್ಷೆಗೂ ಮೀರಿದ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸಿಗ್ನಲ್ ದಾಟಲು ತಾಸುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಜೆ ನಾಲ್ಕು ಗಂಟೆ ಬಳಿಕ ಸಂಚಾರ ದಟ್ಟಣೆ ದುಪ್ಟಟ್ಟಾಗಿತ್ತು.
ಮುಂಜಾನೆಯಿಂದಲೇ ರಸ್ತೆಗಳಿದ ಸಂಚಾರ ಪೊಲೀಸರು, ನಗರದಲ್ಲಿ ಉಂಟಾದ ಸಂಚಾರ ದಟ್ಟಣೆ ನಿಯಂತ್ರಿಸಲು ಹೈರಾಣಾದರು. ಮೆಜೆಸ್ಟಿಕ್ ಸುತ್ತ-ಮುತ್ತ ಸುಮಾರು 50ಕ್ಕೂ ಅಧಿಕ ಮಂದಿ ಹಾಗೂ ಯಶವಂತಪುರ ಗೋವರ್ಧನ ಟಾಕೀಸ್ ಬಳಿ ಸುಮಾರು 30ಕ್ಕೂ ಅಧಿಕ ಮಂದಿ ಸಂಚಾರ ಪೊಲೀಸರ ನಿಯೋಜಿಸಲಾಗಿದೆ.
ಮೆಜೆಸ್ಟಿಕ್‌ನಲ್ಲಿ 10 ನಿಮಿಷಕ್ಕೆ ಬಸ್ ಫುಲ್ ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಬೇರೆ ಸಂದರ್ಭದಲ್ಲಿ ಒಂದು ಬಸ್ ಭರ್ತಿಯಾಗಲು ಕನಿಷ್ಠ 30 ನಿಮಿಷ ಬೇಕಾಗಿತ್ತು. ಆದರೆ, ಗುರುವಾರ ಕೇವಲ 10 ನಿಮಿಷಕ್ಕೆ ಒಂದು ಬಸ್ ಭರ್ತಿಯಾಗಿ ನಿಲ್ದಾಣದಿಂದ ಹೊರಡುತ್ತಿವೆ. ಪ್ರಯಾಣಿಕರನ್ನು ನಿಯಂತ್ರಿಸಲು ದೊಡ್ಡ ಸವಾಲಾಗಿತ್ತು. ಬಹುತೇಕ ಇನ್ನು 500 ಬಸ್‌ಗಳು ಹೆಚ್ಚುವರಿಯಾಗಿ ನೀಡಿದರೆ, ಆ ಬಸ್‌ಗಳು ಭರ್ತಿಯಾಗುವ ಸಾಧ್ಯತೆ ಇತ್ತು. ಇನ್ನು ಸಂಚಾರ ಪೊಲೀಸರು ನಿಲ್ದಾಣದ ಪ್ರವೇಶ ದ್ವಾರದಲ್ಲಿ ನಿಂತು ಬಸ್‌ಗಳು ನಿಲ್ದಾಣದಿಂದ ಸುಗ ಮವಾಗಿ ಹೊರಡಲು ಸಹಾಯ ಮಾಡಿದರು ಮೆಜೆಸ್ಟಿಕ್ ಬಸ್ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.