Love Jihad: ಯುವತಿಗೆ ಪ್ರಾಣ ಬೆದರಿಕೆ
Team Udayavani, Sep 8, 2023, 11:59 AM IST
ಬೆಂಗಳೂರು: ಉತ್ತರ ಭಾರತ ಮೂಲದ ಯುವತಿಯೊಬ್ಬಳು ಕಾಶ್ಮೀರ ಮೂಲದ ಯುವಕನಿಂದ ಲವ್ ಜಿಹಾದ್‌ಗೆ ಸಿಲುಕಿದ್ದು, ಆತನಿಂದ ಪ್ರಾಣ ಬೆದರಿಕೆಯಿದೆ. ದಯವಿಟ್ಟು ರಕ್ಷಣೆ ಕೊಡಿ ಎಂದು ನಗರ ಪೊಲೀಸರ ಮೊರೆ ಹೋಗಿದ್ದಾಳೆ.
ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ನಗರ ಪೊಲೀಸರನ್ನು ಸಂಪರ್ಕಿಸಿರುವ ಯುವತಿ, ‘ನಾನು ಲವ್ ಜಿಹಾದ್‌ಗೆ ಒಳಗಾಗಿದ್ದೇನೆ. ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಮತ್ತು ಒತ್ತಾಯಪೂರ್ವಕ ಮತಾಂತರ ಮಾಡಲಾಗಿದೆ. ನನಗೆ ಕೂಡಲೇ ಬೆಂಗಳೂರು ಪೊಲೀಸರ ರಕ್ಷಣೆ ಕೊಡಿಸಿ. ನನ್ನ ಪ್ರಾಣ ಅಪಾಯದಲ್ಲಿದೆ’ ಎಂದು ನಗರ ಪೊಲೀಸರು, ನಗರ ಪೊಲೀಸ್ ಆಯುಕ್ತರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಪ್ರಧಾನ ಮಂತ್ರಿ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಕೂಡಲೇ ತಮ್ಮ ಸಂಪರ್ಕ ಸಂಖ್ಯೆ ಕಳುಹಿಸಿ ಎಂದ ಕೋರಿದ್ದು, ಬಳಿಕ ಸಮೀಪದ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ.
ಸದ್ಯ ಯುವತಿ ಮೌಖಿಕವಾಗಿ ದೂರು ನೀಡಿದ್ದು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. 2018-19ರ ಅವಧಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೂಂದಡೆ ಯಾವುದೇ ಮಾಧ್ಯಮದವರ ಸಹಾಯ ಅಗತ್ಯವಿಲ್ಲ. ಪೊಲೀಸರು ನನ್ನ ಕಾಳಜಿ ವಹಿಸಿದ್ದಾರೆ ಎಂದು ಕೆಲ ಮಾಧ್ಯಮದ ಪ್ರಶ್ನೆಗೆ ಟ್ವಿಟರ್ ನಲ್ಲೇ ಉತ್ತರಿಸಿದ್ದಾರೆ.
ಏನಿದು ಲವ್ ಜಿಹಾದ್?: ಯುವತಿ ಟ್ವಿಟರ್‌ನಲ್ಲಿ ಹೇಳಿಕೊಂಡಂತೆ, ಕಾಶ್ಮೀರ ಮೂಲದ ಯುವಕನೊಬ್ಬ ಫೇಸ್‌ಬುಕ್ ನಲ್ಲಿ ಪರಿಚಯವಾಗಿದ್ದ. ಬಳಿಕ ಆತ್ಮೀಯತೆ ಬೆಳೆದು, ಆತನಿಗೆ ಹಣ ಕೂಡ ನೀಡಿದ್ದೇನೆ. ಆದರೆ, ಇದೀಗ ಹಣ ವಾಪಸ್ ಕೇಳಿದಾಗ ಬೆದರಿಕೆ ಹಾಕುತ್ತಿದ್ದಾನೆ. ಈ ಮಧ್ಯೆ ಬೆಂಗಳೂರಿಗೆ ಬಂದು ಭೇಟಿಯಾಗಿದ್ದ ಯುವಕ, ಮದುವೆಯಾಗುವುದಾಗಿ ನಂಬಿಸಿ ತನ್ನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಈ ನಡುವೆ ಮದುವೆಯಾಗಬೇಕೆಂದಾದರೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದಾನೆ. ಯುವತಿಗೆ ಮತಾಂತರವಾಗುವುದು ಇಷ್ಟವಿಲ್ಲದಿದ್ದರೂ ಬೆದರಿಸಿ ಧರ್ಮ ಬದಲಾವಣೆ ಮಾಡಲಾಗಿದೆ. ಆದರೂ, ಇದೀಗ ಮದುವೆಗೆ ಒಪ್ಪುತ್ತಿಲ್ಲ. ಹೀಗಾಗಿ ಆತನನ ವಿರುದ್ಧ ಕ್ರಮಕೈಗೊಳ್ಳುವಂತೆ ಯುವತಿ ಕೋರಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.