ಬೂತ್‌ಮಟ್ಟದಲ್ಲಿ ಮಾಸ್ಕ್ ತಯಾರಿಕಾ ಅಭಿಯಾನ
ಮೋದಿ ಕರೆ ಹಿನ್ನೆಲೆ ಬಿಜೆಪಿ ಬೂತ್ ಕಾರ್ಯಕರ್ತರ ಉತ್ಸಾಹ; ಮಾಸ್ಕ್ ತಯಾರಿಸಿ ಬಡವರಿಗೆ ವಿತರಿಸಲು ತೀರ್ಮಾನ
Team Udayavani, Apr 17, 2020, 2:12 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರ ಮೂಲಕ ಮಾಸ್ಕ್ ಸಿದ್ಧಪಡಿಸಿ, ಬಡವರಿಗೆ ವಿತರಿಸಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಸುಮಾರು 58ಸಾವಿರ ಬೂತ್‌ಗಳಿದ್ದು, ಪ್ರತಿ ಎರಡು ಬೂತೆಗೆ ಒರ್ವ ಕೋವಿಡ್-19, ಜಾಗೃತಿ ಪ್ರಮುಖ್ ನೇಮಕ ಮಾಡಲಾಗಿದೆ. ಇವರು ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ ಎಂದು ರಾಜ್ಯ
ಬಿಜೆಪಿ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ. ಪ್ರತಿ ಬೂತ್‌ಗಳಲ್ಲಿ ಕನಿಷ್ಠ 500ರಿಂದ 2ಸಾವಿರದ ವರೆಗೂ ಮಾಸ್ಕ್ ಸಿದ್ಧಪಡಿಸಲು ನಿರ್ದೇಶನ ನೀಡಲಾಗಿದೆ. ಅದರಂತೆ ಮಾಸ್ಕ್ ಸಿದ್ಧಪಡಿಸುವ ಕಾರ್ಯವೂ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯ ಮುಖಂಡರೊಬ್ಬರು ಮಾಹಿತಿ ನೀಡಿದರು. ಬೂತ್‌ಗಳಲ್ಲಿ ಯಾರ ಮನೆಗಳಲ್ಲಿ ಹೊಲಿಗೆ ಯಂತ್ರ ಇದೆ ಎಂಬುದರ ಮಾಹಿತಿ ಪಡೆಯಲಾಗಿದೆ. ಇವುಗಳಲ್ಲಿ ಅವರಾಗಿಯೇ ಮಾಸ್ಕ್ ಸಿದ್ಧಪಡಿಸುವವರನ್ನು ಗುರುತಿಸಲಾಗಿದೆ. ಅದರ ಜತೆಗೆ ಬಿಜೆಪಿಯಿಂದಲೇ ಮಾಸ್ಕ್ ಸಿದ್ಧಪಡಿಸಲು ಬಟ್ಟೆಯ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಬೂತ್ ಗಳಲ್ಲೇ ವಿತರಣೆ: ಬಿಜೆಪಿಯಿಂದ ಮಾಸ್ಕ್
ಸಿದ್ಧಪಡಿಸುವ ದೊಡ್ಡ ಮಟ್ಟದ ಅಭಿಯಾನ ಆರಂಭವಾಗಿದೆ. ಆಯಾ ಬೂತ್‌ಗಳಲ್ಲಿ ಸಿದ್ಧಪಡಿಸಿದ ಮಾಸ್ಕ್ಗಳನ್ನು ಸ್ಥಳೀಯವಾಗಿಯೇ ವಿತರಣೆ ಮಾಡಲಾಗುತ್ತದೆ. ಮಾಸ್ಕ್ ಕೊರತೆಯಾದ ಸಂದರ್ಭದಲ್ಲಿ ಸಮೀಪದ ಬೂತ್‌ಗಳಿಂದ ಎರವಲು ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಮಾಸ್ಕ್ ಯಾರಿಗೆ ನೀಡಬೇಕು ಎಂಬುದರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು, ಬೂತ್ ನಲ್ಲಿರುವ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಮಾಸ್ಕ್
ವಿತರಣೆ ಮಾಡಲಿದ್ದೇವೆ. ಮಾಸ್ಕ್ ಬಳಕೆ ಹೇಗೆ ಮತ್ತು ಪುನರ್ ಬಳಕೆ ಕುರಿತ ಮಾಹಿತಿ ನೀಡಲಾಗುವುದು ಎಂದರು.
ಮಾಸ್ಕ್ ತಯಾರಿ: ಬಿಜೆಪಿಯ ಮಹಿಳಾ ಮೋರ್ಚಾದ ಸದಸ್ಯೆರು ಬೂತ್, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಂತರ ಕಾಯ್ದುಕೊಂಡು ಮಾಸ್ಕ್ ತಯಾರಿಸುವ ಕಾರ್ಯದಲ್ಲಿ ತಲ್ಲಿನರಾಗಿದ್ದಾರೆ. ಮಾಸ್ಕ್ ನ ಅಗತ್ಯ ಹೆಚ್ಚಿರುವುದರಿಂದ ದೊಡ್ಡ ಪ್ರಮಾಣದಲ್ಲೇ ಮಾಸ್ಕ್ ತಯಾರಿಸುವ ಕಾರ್ಯ ನಡೆಯುತ್ತಿದೆ ಎಂದು ಮಹಿಳಾ ಮೋರ್ಚಾ ತಿಳಿಸಿದೆ. ಬಿಜೆಪಿಯಿಂದ ಈಗಾಗಲೇ 15.60ಲಕ್ಷಕ್ಕೂ ಅಧಿಕ ಮಾಸ್ಕ್ಗಳ ವಿತರಣೆ ಮಾಡಿಯಾಗಿದೆ. ಹಾಗೆಯೇ ಬಡವರಿಗೆ, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್, ಊಟದ ಪೊಟ್ಟಣ ನೀಡಿವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಆಯುಷ್ ಸಲಹೆ
ನಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು ಹೇಗೆ ಎಂಬುದರ ಕುರಿತಂತೆ ಆಯುಷ್ ಇಲಾಖೆ ಈಗಾಗಲೇ ಆಯುರ್ವೇದ ಸಲಹೆಗಳನ್ನು ನೀಡಿದೆ. ಇದನ್ನು ಅನುಸರಿ ಸುವಂತೆ ಪ್ರಧಾನಿ ಮೋದಿಯವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಇದರ ವ್ಯಾಪಕ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಿಯಮಿತವಾಗಿ ಬಿಸಿನೀರು ಕುಡಿಯುವುದು, ಯೋಗಾಸನ ಪ್ರಾಣಾಯಾಮ, ಕಷಾಯ ಇತ್ಯಾದಿ ಜತೆಗೆ ಆಹಾರದಲ್ಲಿ ಅರಶಿನ, ಜಿರಿಗೆ, ಧನಿಯಾ, ಬೆಳ್ಳುಳ್ಳಿ ಹೆಚ್ಚು ಬಳಸುವುದು ಸೇರಿ ಆಯುಷ್ ಮಾರ್ಗಸೂಚಿಯ ಮಾಹಿತಿ, ಆಹಾರ ಸಾಮಗ್ರಿ ವಿತರಣೆ ಸಂದರ್ಭದಲ್ಲಿ ನೀಡಲಿದ್ದಾರೆ.
ಬಿಜೆಪಿಯಿಂದ ಬೂತ್ ಮಟ್ಟದಲ್ಲಿ ಮಾಸ್ಕ್ ತಯಾರಿಸುವ ದೊಡ್ಡ ಯೋಜನೆ ರೂಪಸಿದ್ದೇವೆ. ಇದಕ್ಕಾಗಿ ಪ್ರಮುಖರ ನೇಮಕ ಮಾಡಿದ್ದೇವೆ. ಪ್ರತಿ ಬಡವರಿಗೂ ಮಾಸ್ಕ್ ದೊರೆಯುವಂತೆ ಆಗಬೇಕು. ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ ಮಾಸ್ಕ್ ಜತೆಗೆ ಅಗತ್ಯ ಆಹಾರ
ಸಾಮಗ್ರಿ ಕಿಟ್ ಕೂಡ ನೀಡುತ್ತಿದ್ದೇವೆ.
ಎನ್.ರವಿಕುಮಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.