ಟ್ಯಾಬ್‌ಗೆ ದುಂಬಾಲು ಬಿದ್ದ ಸದಸ್ಯರು
Team Udayavani, Jun 21, 2020, 6:02 AM IST
ಬೆಂಗಳೂರು: ಬಿಬಿಎಂಪಿಯ ಪಾಲಿಕೆ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರ ಅಧಿಕಾರಾವಧಿ 2 ತಿಂಗಳಲ್ಲಿ ಮುಗಿಯಲಿದೆ. ಆದರೆ, ಈ ಅಲ್ಪಾವಧಿಗೆ ಸದಸ್ಯರು ಟ್ಯಾಬ್ (ಐ -ಪ್ಯಾಡ್) ನೀಡುವಂತೆ ದುಂಬಾಲು ಬಿದ್ದಿದ್ದಾರೆ. ನಾಮನಿರ್ದೇಶಿತರ ಈ ಬೇಡಿಕೆ ಮೇಯರ್ ಎಂ.ಗೌತಮ್‌ಕುಮಾರ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ. ಕೋವಿಡ್ 19 ದಿಂದ ರಾಜಧಾನಿ ಸಮಸ್ಯೆ ಎದುರಿಸುತ್ತಿರುವ ಈ ವೇಳೆಯಲ್ಲಿ ಅಂದಾಜು 40 ಸಾವಿರ ಮೌಲ್ಯದ ಟ್ಯಾಬ್ ಖರೀದಿ ಅವಶ್ಯಕವೇ ಎಂಬ ಚರ್ಚೆ ಶುರುವಾಗಿದೆ.
ಪಾಲಿಕೆಯ 20 ನಾಮನಿರ್ದೇಶಿತ ಸದಸ್ಯ ರಿಗೂ ಟ್ಯಾಬ್ ನೀಡುವಂತೆ ಕೆಲವು ನಾಮ ನಿರ್ದೇಶಿತ ಸದಸ್ಯರು ಮೇಯರ್ ಅವರಿಗೆ ಮನವಿ ಮಾಡಿದ್ದು, ಮೇಯರ್ ಅವರು ನಾಮ ನಿರ್ದೇಶಿತ ಸದಸ್ಯರಿಗೆ ಟ್ಯಾಬ್ ನೀಡುವ ಸಂಬಂಧ ಪರಿಶೀಲನೆ ನಡೆಸುವಂತೆ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಗಳು ಈ ಕುರಿತ ಕಡತವನ್ನು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರಿಗೆ ನೀಡಿ ದ್ದಾರೆ ಎಂದು ಹೆಸರು ಹೇಳ ಲಿಚ್ಛಿಸದ ಬಿಬಿ ಎಂಪಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ತಿಂಗಳಿಗೆ 8 ಲಕ್ಷ ವೆಚ್ಚ ಬೇಕೆ?: ಪಾಲಿಕೆ ಸದಸ್ಯರು, ಮೇಯರ್, ಉಪಮೇಯರ್ ಸೇರಿದಂತೆ ನಾಮನಿರ್ದೇಶಿತ 20 ಜನ ಸದಸ್ಯರ ಅಧಿಕಾರ ಅವಧಿ ಇದೇ ಆಗಸ್ಟ್ ವೇಳೆಗೆ ಅಂತ್ಯವಾಗಲಿದೆ. ಈ ಅಲ್ಪಾವಧಿಗೆ 20 ಜನ ನಾಮನಿರ್ದೇಶಿತ ಸದಸ್ಯರಿಗೆ ತಲಾ 40 ಸಾವಿರದಂತೆ ಟ್ಯಾಬ್ ಖರೀದಿಸಿದರೆ ಎಂಟು ಲಕ್ಷ ರೂ. ವೆಚ್ಚವಾಗಲಿದೆ. ಈಗಾಗಲೇ ಈ ಹಿಂದೆ ನಾಮನಿರ್ದೇಶಿತ 20ಜನ ಸದಸ್ಯರಿಗೂ ಟ್ಯಾಬ್ ನೀಡಲಾಗಿತ್ತು.
ಅದನ್ನು ಬಹುತೇಕರು ಪಾಲಿಕೆಗೆ ಹಿಂದಿರುಗಿಸದೆ ತಮ್ಮ ವೈಯಕ್ತಿಕ ಬಳಕೆಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲವು ಸದಸ್ಯರು ಕೌನ್ಸಿಲ್ ಸಭೆ ಸೇರಿದಂತೆ ಪಾಲಿಕೆಯ ವಿವಿಧ ಸಭೆಗಳಿಗೆ ತರುತ್ತಿಲ್ಲ. ಅಲ್ಲದೆ, ಪಾಲಿಕೆ ಸದ ಸ್ಯರ ಟ್ಯಾಬ್‌ಗಳಿಗೆ ಆಡಳಿತಾತ್ಮಕ ವಿಚಾರಗಳು, ನಿರ್ಣಯಗಳ ಬಗ್ಗೆ ಪಾಲಿಕೆ ಅಧಿಕಾರಿ ಗಳು ಮಾಹಿತಿ ರವಾ ನಿಸುತ್ತಿಲ್ಲ ಎನ್ನುವ ಆರೋಪವೂ ಇದೆ.
ಸಾಧ್ಯತೆ ಇಲ್ಲ: ಪಾಲಿಕೆಯ ಎಲ್ಲ ಸದಸ್ಯರ ಅಧಿಕಾರಾವಧಿ ಇದೇ ಆಗಸ್ಟ್ ಅಂತ್ಯಕ್ಕೆ ಮುಗಿಯುವ ಹಿನ್ನೆಲೆಯಲ್ಲಿ ಎಲ್ಲರೂ ಟ್ಯಾಬ್‌ಗಳನ್ನು ಪಾಲಿಕೆಗೆ ಹಿಂದಿರುಗಿಸುವರೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಅಪ್‌ಡೇಟ್ ಆಗುವರೇ?: 2017-18ನೇ ಸಾಲಿನಲ್ಲಿ ಐಟಿ ವಿಭಾಗಕ್ಕೆ 4 ಕೋಟಿ ರೂ. ಅನುದಾನ ನೀಡಲಾಗಿತ್ತು. ಇದರಲ್ಲಿ ಉಳಿದ ಅನುದಾನದಲ್ಲಿ 225 ಟ್ಯಾಬ್‌ಗಳನ್ನು ಖರೀದಿಸಲಾಗಿತ್ತು. ಒಂದು ಟ್ಯಾಬ್‌ಗ 38,600 ರೂ., ಪೌಚ್‌ಗೆ 2 ಸಾವಿರ ರೂ., ತಂತ್ರಾಂಶ ಅಳವಡಿಕೆ ಮತ್ತು ಸದಸ್ಯರಿಗೆ ತರಬೇತಿ ನೀಡುವುದು ಎಲ್ಲವೂ ಸೇರಿ ಪ್ರತಿ ಟ್ಯಾಬ್‌ಗ 44 ಸಾವಿರ ರೂ. ವೆಚ್ಚ ಮಾಡಲಾಗಿತ್ತು.
ಪಾಲಿಕೆಯಿಂದ ತೆಗೆದುಕೊಳ್ಳುವ ನಿರ್ಣಯಗಳು, ಆದೇಶಗಳು ಹಾಗೂ ಕೌನ್ಸಿಲ್ ಚರ್ಚೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಟ್ಯಾಬ್‌ನ ಮೂಲಕ ಪಾಲಿಕೆ ಸದಸ್ಯರಿಗೆ ನೀಡಿದರೆ ಆಡಳಿತಾತ್ಮಕ ವಿಷಯಗಳು ಸುಲಭವಾಗಿ ಬಗೆಹರಿ ಯಲಿದೆ ಎಂದು ಟ್ಯಾಬ್ ಪರಿಚಯಿಸಲಾಗಿತ್ತು. ಅಲ್ಲದೆ, ಟ್ಯಾಬ್ ನೀಡುವ ಮೂಲಕ ಇ- ಆಡಳಿತ ಉತ್ತೇಜನ ಹಾಗೂ ಕಾಗದ ರಹಿತ ವ್ಯವಹಾರ ನಡೆಸುವ ಯೋಜನೆಗಳನ್ನು ರೂಪಿಸಿ ಕೊಳ್ಳ ಲಾಗಿತ್ತು. ಆದರೆ, ಇದರಲ್ಲಿ ಬಹುತೇಕ ವಿಚಾರಗಳು ಕಾರ್ಯರೂಪಕ್ಕೆ ಬರಲಿಲ್ಲ. ಕೆಲವು ಸದಸ್ಯರಿಗೆ ಟ್ಯಾಬ್‌ಬಳಸಲು ಬರುವುದಿಲ್ಲ, ಟ್ಯಾಬ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಿಲ್ಲ ಎನ್ನುವ ದೂರು ಅಧಿಕಾರಿಗಳಿಂದ ಕೇಳಿಬಂದಿದೆ.
ನಾಮನಿರ್ದೇಶಿತ ಸದಸ್ಯರು ಟ್ಯಾಬ್ ಬೇಡಿಕೆ ಇರಿಸಿರುವುದು ನಿಜ. ಆದರೆ, ನಾಮನಿರ್ದೇಶಿತರ ಅಧಿಕಾರ ಅವಧಿ ಕೇವಲ ಎರಡು ತಿಂಗಳಿದೆ. ಹೀಗಾಗಿ, ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
* ಹಿತೇಶ್ ವೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.