ಇದೀಗ ಒಂದೇ ಕಡೆ ಮಿಯಾ ಬೈ ತನಿಷ್ಕ್, ಟೈಟಾನ್ ಐಪ್ಲಸ್, ತನೈರಾ, ಹಿಲಿಯೋಸ್ ಲಭ್ಯ
Team Udayavani, Oct 29, 2021, 10:27 AM IST
ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್ ನಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಮಿಯಾ ಬೈ ತನಿಷ್ಕ್, ಟೈಟಾನ್ ಕಂಪನಿಯ ನಾಲ್ಕು ಲೈಫ್ಸ್ಟೈಲ್ ಉತ್ಪನ್ನಗಳಾದ ಮಿಯಾ ಬೈ ತನಿಷ್ಕ್, ಟೈಟಾನ್ ಐಪ್ಲಸ್, ತನೈರ, ಹಿಲಿಯೋಸ್ ಮಳಿಗೆಗಳು ಒಂದೇ ಕಡೆ ಸ್ಥಾಪನೆಯಾಗಿವೆ.
ಮೊದಲ ಮಳಿಗೆಯಾದ ಹಿಲಿಯೋಸ್‌ನಲ್ಲಿ ಆಕರ್ಷಕ ಮತ್ತು ಅತ್ಯುತ್ತಮ ಗುಣಮಟ್ಟದ ವಾಚ್ ಮತ್ತು ಗೋಡೆಯ ಗಡಿಯಾರಗಳು ಲಭ್ಯವಿದೆ. ಪಕ್ಕದ ಮಳಿಗೆ ತನೈರದಲ್ಲಿ ಮಹಿಳೆಯರಿಗೆ ಆಕರ್ಷಕ ಸೀರೆ ಸಂಗ್ರಹ ಸೇರಿದಂತೆ ಆಕರ್ಷಕ ಉಡುಪುಗಳು, ಟೈಟಾನ್ ಐಪ್ಲಸ್‌ನಲ್ಲಿ ಅತ್ಯುತ್ತಮ ವಿನ್ಯಾಸದ ಕನ್ನಡಕಗಳಿದ್ದು, ಮಿಯಾ ಬೈ ತನಿಷ್ಕ್ ನಲ್ಲಿ ಅತ್ಯಾಕರ್ಷಕ ಆಭರಣಗಳ ಸಂಗ್ರಹವಿದೆ. ಸದ್ಯ ದೀಪಾವಳಿ ಮತ್ತು ಹೊಸ ಮಳಿಗೆ ಆರಂಭದ ಹಿನ್ನೆಲೆ ವಿಶೇಷ ರಿಯಾಯಿತಿ, ಕೊಡುಗೆಗಳು ಲಭ್ಯವಿದೆ.
ಪ್ರಮುಖವಾಗಿ ಹಿಲಿಯೋಸ್ ಮಳಿಗೆಯಲ್ಲಿ ಟೈಟಾನ್, ಟಾಮ್ಮಿ ಹಿಲ್ಪಿಂಗರ್, ಸಂಗ್ರಹ ಇವೆ. ಟೈಟಾನ್‌ನಲ್ಲಿ ಐಪ್ಲಸ್, ಎನಿಗ್ಮ, ಆಡ್ರೆನೊ ಮತ್ತು ಡ್ಯಾಶ್, ರೇಬನ್, ವೋಗ್, ಟ್ಯಾಗ್ ಹ್ಯೂವರ್ ಮತ್ತು ಇತರೆ ಫ್ರೇಮ್‌ಗಳು ಲಭ್ಯ. ಉತ್ಕೃಷ್ಟ ಸರಣಿಯ ಲೆನ್ಸ್‌ಗಳು ಪ್ಲಾಸ್ಟಿಕ್, ಗ್ಲಾಸ್, ಪಾಲಿ ಕಾರ್ಬೊನೆಟ್ ಮಾದರಿಯಲ್ಲಿ ಲಭ್ಯವಿವೆ. ಕೊರೊನಾ ಹಿನ್ನೆಲೆ ನಾಲ್ಕೂ ಮಳಿಗೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೃಹತ್ ಉದ್ಘಾಟನಾ ಕಾರ್ಯಕ್ರಮ
ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ನಾಲ್ಕು ನೂತನ ಮಳಿಗೆಗಳನ್ನು ಟೈಟಾನ್ ಕಂಪನಿ ವ್ಯವಸ್ಥಾಪಕ ನಿದೇಶಕ ಸಿ.ಕೆ.ವೆಂಕಟರಣ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಟೈಟಾನ್ ಕಂಪನಿಯ ಹಲವು ಉತ್ಪನ್ನಗಳು ಒಂದೇ ಕಡೆ ಗ್ರಾಹಕರಿಗೆ ನೀಡುವ ಉದ್ದೇಶದಿಂದ ಈ ಮಳಿಗೆಗಳಿಗೆ ಚಾಲನೆ ನೀಡಿದ್ದೇವೆ. ಇದೇ ಮೊದಲ ಬಾರಿ ಟೈಟಾನ್ ಕಂಪನಿಯ ನಾಲ್ಕು ಉತ್ಪನ್ನಗಳು ಒಂದೇ ಕಡೆಗಳಲ್ಲಿ ಲಭ್ಯವಿದ್ದು, ಭವಿಷ್ಯದಲ್ಲಿ ಉದ್ಯಮಿಗಳು ಮುಂದೆ ಬಂದರೆ ಇಂತಹ ಸರಣಿ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗುವುದು. ಗ್ರಾಹಕರ ಹೆಚ್ಚಿನ ವಹಿವಾಟು ನಡೆಸುವುದಕ್ಕಿಂತಲೂ ಗುಣಮಟ್ಟದ ಮತ್ತು ಸಂತಸದ ಖರೀದಿ ನಡೆಸಬೇಕು ಎಂಬ ಉದ್ದೇಶವನ್ನು ಟೈಟಾನ್ ಹೊಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದೇಶಾದ್ಯಂತ ಶುಕ್ರವಾರವೂ ತೈಲ ಬೆಲೆ ಏರಿಕೆ, ಬೆಂಗಳೂರಲ್ಲಿ ನೂರರ ಗಡಿ ದಾಟಿದ ಡೀಸೆಲ್ ಬೆಲೆ
ಶೀಘ್ರದಲ್ಲಿಯೇ ಟೈಟಾನ್ ಸ್ಮಾರ್ಟ್ ವಾಚ್
ಮುಂದಿನ 2-3 ತಿಂಗಳಲ್ಲಿ ಟೈಟಾನ್ ಕಂಪನಿಯ ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್ ವಾಚ್ ಮಾರುಕಟ್ಟೆಗೆ ಬರಲಿದೆ. ಆರೋಗ್ಯ, ಕ್ರೀಡೆ ಹಾಗೂ ವಿನ್ಯಾಸ ಮೂರು ಅಂಶಗಳನ್ನು ಒಳಗೊಂಡಿರಲಿದ್ದು, ಗ್ರಾಹಕರ ಮನಸೆಳೆಯಲಿದೆ. ಟೈಟಾನ್ ಪ್ರತಿ ಮಳಿಗೆ ಮತ್ತು ಆನ್‌ಲೈನ್‌ನಲ್ಲಿ ಡಿಜಿಟೆಲ್ ಶಾಪಿಂಗ್‌ಗೆ ಅಗತ್ಯ ವ್ಯವಸ್ಥೆ ಮಾಡಕಲಾಗಿದೆ. ಟೈಟಾನ್ ಉತ್ಪನ್ನ ಮಳಿಗೆಗಳನ್ನು ಜಿಲ್ಲಾ ಕೇಂದ್ರಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ವಿಸ್ತರಿಸಲು ಕ್ರಮವಹಿಸಲಾಗಿದೆ ಎಂದು ಟೈಟಾನ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ. ವೆಂಕಟರಮಣ್ ವಿಶ್ವಾಸ ವ್ಯಕ್ತಪಡಿಸಿದರು.
ಒಂದೇ ಕಡೆ ನಾಲ್ಕು ಟೈಟಾನ್‌ನ ಎಲ್ಲಾ ಉತ್ಪನ್ನಗಳು ಲಭ್ಯವಿರುವುದರಿಂದ ವಿವಾಹ ಸೇರಿದಂತೆ ಶುಭ ಸಂದರ್ಭಗಳಲ್ಲಿ ಖರೀದಿಗೆ ಅಲೆದಾಡುವುದು ತಪ್ಪಲಿದೆ. ಮಳಿಗೆಗಳು ಕೂಡ ಆಕರ್ಷಕ ಉತ್ಪನ್ನಗಳನ್ನು ಹೊಂದಿದ್ದು, ಗ್ರಾಹಕ ಸ್ನೇಹಿಯಾಗಿವೆ. -ಸುನೀತಾ, ಗ್ರಾಹಕಿ
ಟೈಟಾನ್ ಸರಣಿ ಮಳಿಗೆ ವಿಳಾಸ
818, 27ನೇ ಮುಖ್ಯರಸ್ತೆ, 1ನೇ ವಲಯ, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು.