25 Years: ರಜತ ವರ್ಷಾಚರಣೆ ಸಂಭ್ರಮದಲ್ಲಿ Microsoft India ಡೆವಲಪ್ಮೆಂಟ್ ಸೆಂಟರ್
Team Udayavani, Dec 13, 2023, 3:55 PM IST
ಬೆಂಗಳೂರು: ಮೈಕ್ರೋಸಾಫ್ಟ್ ಇಂಡಿಯಾ ಡೆವಲಪ್ಮೆಂಟ್ ಸೆಂಟರ್ (IDC) ಸಂಸ್ಥೆಯು ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ಸಂಶೋಧನೆ, ಎಂಜಿನಿಯರಿಂಗ್ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಳೆದ 25 ವರ್ಷಗಳಿಂದ ಸಂಸ್ಥೆಯು ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ.
ಕೊಪಿಲಾಟ್ಸ್ ಮತ್ತು ಇತರ AI ಅಪ್ಲಿಕೇಶನ್ ಗಳು ಸೇರಿದಂತೆ ವಿಶ್ವ ದರ್ಜೆಯ ಉತ್ಪನ್ನಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೈದ್ರಾಬಾದ್ ನ IDCಯಲ್ಲಿ ನಡೆಯಲಿರುವ ಈ 25 ವರ್ಷಗಳ ಸಾರ್ಥಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಪಾಲ್ಗೊಂಡರು.
Azure, ವಿಂಡೋಸ್, ಆಫೀಸ್ ಮತ್ತು ಬಿಂಗ್ ನಂತಹ ಮೈಕ್ರೋಸಾಫ್ಟ್ ನ ಅತ್ಯಂತ ಜನಪ್ರಿಯ ಅಪ್ಲಿಕೇಷನ್ಗಳನ್ನು ನೀಡುವಲ್ಲಿ IDC ಪ್ರಮುಖ ಪಾತ್ರ ವಹಿಸುತ್ತಿದೆ. ತನ್ನ ಕಾರ್ಯದ ಮೂಲಕ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಸಂಸ್ಥೆಯೂ ಹೆಚ್ಚಿನ ಸಾಧನೆ ಮಾಡಲು ಪೂರಕವಾಗಿ ಆಧುನಿಕತೆಗೆ ಸಶಕ್ತರನ್ನಾಗಿಸುವ ಮೈಕ್ರೋಸಾಫ್ಟ್ ನ ಗುರಿಯನ್ನು ತಲುಪುವ ನಿಟ್ಟಿನಲ್ಲಿ IDC ತನ್ನದೇ ಆದ ಕೊಡುಗೆ ನೀಡುತ್ತಿದೆ.
ಹಾಲಿ ಇರುವ ಉತ್ಪನ್ನಗಳ ವರ್ಧನೆ, ಹೊಸ ಉತ್ಪನ್ನಗಳ ಆವಿಷ್ಕಾರ ಮತ್ತು ಉತ್ಪನ್ನಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕೆಂಬುದನ್ನು ಮಾರ್ಪಡಿಸುವ ನಿಟ್ಟಿನಲ್ಲಿ AI ಮತ್ತು LLM ಗಳನ್ನು ನಿಯಂತ್ರಿಸುವ ಮೂಲಕ ನಾವೀನ್ಯತೆ ಮತ್ತು ಪ್ರಭಾವದ ಮುಂದಿನ ಹಂತಕ್ಕೆ ತಲುಪುವತ್ತ ಸಾಗಿದೆ.
ಕಳೆದ 25 ವರ್ಷಗಳಲ್ಲಿ IDC ಯ ಕೆಲವು ಸಾಧನೆಗಳು:
ಮೈಕ್ರೋಸಾಫ್ಟ್ 365 (ಆಫೀಸ್) ಮೊಬೈಲ್: IDC ಮೈಕ್ರೋಸಾಫ್ಟ್ 365 (ಆಫೀಸ್) ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ಗ್ರಾಹಕರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಪಂಚದಾದ್ಯಂತ 100 ಮಿಲಿಯನ್ ಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆ್ಯಂಡ್ರಾಯ್ಡ್ ಮತ್ತು iOS ಸಾಧನಗಳಿಗೆ ಅಪ್ಲಿಕೇಶನ್ ಗಳನ್ನು ನೀಡಿದೆ.
ಭಾರತೀಯ ಭಾಷೆಗಳಿಗೆ ಬೆಂಬಲ: ಮೈಕ್ರೋಸಾಫ್ಟ್ ಟ್ರಾನ್ಸ್ ಲೇಟರ್ ನಲ್ಲಿ ಭಾರತೀಯ 20 ಕ್ಕೂ ಹೆಚ್ಚು ಭಾಷೆಗಳನ್ನು ಶಕ್ತಗೊಳ್ಳುವಂತೆ ಮಾಡುವಲ್ಲಿ IDCಯು ಸಫಲವಾಗಿದೆ. ಈ ಮೂಲಕ ಭಾಷಾ ವೈವಿಧ್ಯತೆ ಮತ್ತು ಭಾಷೆಗಳ ನಡುವಿನ ಅಡ್ಡಿಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕೊಡುಗೆ ನೀಡಿದೆ. ಭಾಷೆಗಳ ನಡುವಿನ ಜುಗಲ್ಬಂದಿ, ಜನರೇಟಿವ್ AI ಚಾಟ್ ಬಾಟ್ ಮೂಲಕ ಲಕ್ಷಾಂತರ ಭಾರತೀಯರು ತಮ್ಮದೇ ಸ್ಥಳೀಯ ಭಾಷೆಯಲ್ಲಿ ಸರ್ಕಾರಿ ಸೇವೆಗಳ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಲು ಅನುವಾಗುವ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
Azure ಸ್ಪೆಷಲೈಸ್ಡ್ AI ಸೂಪರ್ ಕಂಪ್ಯೂಟರ್: ಮೈಕ್ರೋಸಾಫ್ಟ್ ನ ಕ್ಲೌಡ್ ಕಂಪ್ಯೂಟಿಂಗ್ ಪ್ಲಾಟ್ ಫಾರ್ಮ್ Azureಗಾಗಿ ಮೂಲಸೌಕರ್ಯ ಮತ್ತು ಸೇವೆಗಳನ್ನು ರಚಿಸುವ ಮತ್ತು ನಿರ್ವಹಣೆ ಮಾಡುವಲ್ಲಿ IDC ಮುಂಚೂಣಿಯಲ್ಲಿದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ AI ಸೂಪರ್ ಕಂಪ್ಯೂಟರ್ ಗಳಲ್ಲಿ ಒಂದಾಗಿರುವ Azure ಸೂಪರ್ ಕಂಪ್ಯೂಟರ್ ಅನ್ನು ರಚಿಸುವಲ್ಲಿ ಕಾರ್ಯನಿರತವಾಗಿದೆ. ಇದು ದೊಡ್ಡ ಪ್ರಮಾಣದ AI ಮಾದರಿಗಳು ಮತ್ತು ಅಪ್ಲಿಕೇಶನ್ ಗಳನ್ನು ದಾಖಲೆಯ ವೇಗ ಮತ್ತು ದಕ್ಷತೆಯೊಂದಿಗೆ ಕಾರ್ಯನಿರ್ವಹಣೆ ಮಾಡುತ್ತದೆ.
ತಂತ್ರಜ್ಞಾನವನ್ನು ಹೆಚ್ಚು ಸುಲಭವಾಗಿ ಮತ್ತು ಒಳಗೊಳ್ಳುವಂತೆ ಮಾಡುವ ಮೈಕ್ರೋಸಾಫ್ಟ್ ನ ಬದ್ಧತೆಯ ಭಾಗವಾಗಿ IDC ವಿಂಡೋಸ್ 11 ನಲ್ಲಿ ಧ್ವನಿ ಪ್ರವೇಶ, ನಿರೂಪಕ, ವರ್ಧಕ, ಕಣ್ಣಿನ ನಿಯಂತ್ರಣ ಮತ್ತು ಡಿಕ್ಟೇಶನ್ ನಂತಹ ವೈಶಿಷ್ಟ್ಯತೆಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಸುಧಾರಣೆ ಮಾಡಿದೆ. ಇದು ಬಳಕೆದಾರರಿಗೆ ತಮ್ಮ ಸಾಧನಗಳೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸುತ್ತದೆ.
ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ IDC ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಕ್ಸ್ ಪೀರಿಯನ್ಸಸ್+ ಡಿವೈಸಸ್ ಇಂಡಿಯಾದ ಸಿವಿಪಿ ರಾಜೀವ್ ಕುಮಾರ್, ನಾವು ಜನರೇಟಿವ್ AI ನ ಕ್ರಾಂತಿಕಾರಿ ತಂತ್ರಜ್ಞಾನದ ಮುಂದಿನ ಹಂತವನ್ನು ಪ್ರವೇಶಿಸುತ್ತಿದ್ದು, ಮುಂದಿನ 25 ವರ್ಷಗಳು ಇನ್ನೂ ಹೆಚ್ಚಿನ ಭರವಸೆಯನ್ನು ಮೂಡಿಸಿವೆ. ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಸಂಸ್ಥೆಯನ್ನು ಇನ್ನಷ್ಟು ತಂತ್ರಜ್ಞಾನ ಸ್ನೇಹಿಗಳನ್ನಾಗಿ ಶಕ್ತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.