ಸೋಂಕು ತಡೆಗೆ ಮೊಬೈಲ್ ಕೋವಿಡ್ ಲ್ಯಾಬ್‌ಗ ಚಾಲನೆ
Team Udayavani, Aug 6, 2020, 10:37 AM IST
ಐಐಎಸ್ಸಿ ಆವರಣದಲ್ಲಿ ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮೊಬೈಲ್ ಲ್ಯಾಬ್‌ಗ ಚಾಲನೆ ನೀಡಿದರು.
ಬೆಂಗಳೂರು: ಪ್ರಯೋಗಾಲಯಗಳಲ್ಲಿ ಸೋಂಕು ಪರೀಕ್ಷೆ ತಡವಾಗುತ್ತಿರುವ ಹಿನ್ನೆಲೆ ನಾಲ್ಕು ಗಂಟೆಯಲ್ಲಿಯೇ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸುವ ಮೊಬೈಲ್ ಕೊರೊನಾ ಪರೀಕ್ಷಾ ಲ್ಯಾಬ್ ಯನ್ನು ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ಸಿ) ಸಿದ್ಧಪಡಿಸಿದೆ.
ದೇಶದ ಪ್ರಪ್ರಥಮ ಮತ್ತು ಏಕೈಕ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಅನು ಮೋದಿತ ಮೊಬೈಲ್ ಆರ್‌ಟಿ-ಪಿಸಿಆರ್ ಕೊರೊನಾ ಪರೀಕ್ಷಾ ಲ್ಯಾಬ್ ಇದಾಗಿದೆ. ಮೊದಲ ಮೊಬೈಲ್ ಲ್ಯಾಬ್ ಅನ್ನು ಐಐಎಸ್ಸಿ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹಸ್ತಾಂತರಿಸಿದೆ. ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಲ್ಯಾಬ್‌ಗ ಚಾಲನೆ ನೀಡಿದರು. ಸದ್ಯ ಬೆಂಗಳೂರು ವೈದ್ಯಕೀಯ ಕಾಲೇಜು ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ ವ್ಯಾಪ್ತಿಗೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಸುತ್ತಮುತ್ತ ಕಾರ್ಯಚಟುವಟಿಕೆ ಆರಂಭಿಸಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಏನಿದು ಮೊಬೈಲ್ ಲ್ಯಾಬ್?: ಮೊಬೈಲ್ ಲ್ಯಾಬ್ ಎಂಬುದು ಪ್ರಯೋಗಾಲಯಗಳ ಸಲಕರಣೆಗಳನ್ನು ಒಳಗೊಂಡ ಮೂರು ವಾಹನಗಳ (ವ್ಯಾನ್) ಯೂನಿಟ್ ಆಗಿದೆ. ಒಂದರಲ್ಲಿ ಶಂಕಿತ ವ್ಯಕ್ತಿ ಮಾದರಿ ಸಂಗ್ರಹ, ಎರಡನೇ ವಾಹನದಲ್ಲಿ ಬಿಎಸ್ ಎಲ್-2 ಲ್ಯಾಬ್ ಇದ್ದು, ಮಾದರಿಗಳ ಸಂಸ್ಕರಣೆ, ಪರೀಕ್ಷಾ ಪ್ರಕ್ರಿಯೆ ಆಗಲಿದೆ. ಮೂರನೇ ವಾಹನ ದಲ್ಲಿ ಮಾಲಿಕ್ಯೂಲರ್ ಟೆಸ್ಟಿಂಗ್, ಮಾದರಿ ವಿಶ್ಲೇಷಣೆ, ವರದಿ ತಯಾರಿ ಕಾರ್ಯ ನಡೆಯಲಿವೆ. ಮೊದಲ ವಾಹನವು ನಗರದ ವಿವಿಧ ಪ್ರದೇಶಕ್ಕೆ ತೆರಳಿ ಮಾದರಿ ಸಂಗ್ರಹಿಸಿದರೆ, ಉಳಿದ ಎರಡು ವಾಹನ ಗಳು ಒಂದು ಸ್ಥಳದಲ್ಲೇ ನಿಂತು ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಐಐಎಸ್ಸಿ ಪ್ರಾಧ್ಯಾ ಪಕರು ಮಾಹಿತಿ ನೀಡಿದರು.
ವಿಶೇಷತೆ ಏನು?
ಒಮ್ಮೆ 100 ಮಾದರಿಗಳನ್ನು, ದಿನಕ್ಕೆ ಒಟ್ಟು 400 ಮಾದರಿಗಳ ಪರೀಕ್ಷೆ ನಡೆಸುವ ಸಾಮರ್ಥ್ಯ
ಕೊರೊನಾ ಸೋಂಕಿನ ಜತೆಗೆ ಎಚ್1 ಎನ್ , ಎಚ್‌ಐವಿ, ಎಚ್‌ಬಿಬಿ, ಎಚ್‌ಸಿವಿ, ಟಿಬಿ ಪರೀಕ್ಷೆ ಸೌಲಭ್ಯ
ಕಂಟೈನ್ಮೆಂಟ್ ಝೋನ್‌ಗಳು, ಗ್ರಾಮೀಣ ಪ್ರದೇಶಗಳಿಗೆ ತೆರಳಿ ಶೀಘ್ರ ಪರೀಕ್ಷೆ ಅವಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.