Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
ಕೃತಕ ಗೂಡು 100 ಬಾರಿ ಮರುಬಳಕೆ ಸಾಧ್ಯ ; ನೈಸರ್ಗಿಕ ಗೂಡಿನ ಜೇನಿಗಿಂತ 2 ಪಟ್ಟು ಹೆಚ್ಚು ಉತ್ಪಾದನೆ ; ಜಿಕೆವಿಕೆಯಲ್ಲಿ ಸಂಶೋಧನೆ
Team Udayavani, Nov 16, 2024, 2:00 PM IST
ಬೆಂಗಳೂರು: ಶ್ರಮ ಜೀವನಕ್ಕೆ ಉತ್ತಮ ಉದಾಹರಣೆ ಜೇನು. ಆದರೆ, ಹೊಸ ಆವಿಷ್ಕಾರದ ಮೂಲಕ ಜೇನಿನ ಕೆಲಸವನ್ನೇ ಸುಲಭಗೊಳಿಸಲಾಗಿದೆ. ಈ ತಂತ್ರಜ್ಞಾನದಿಂದ ಜೇನು ಹುಳುಗಳು ನೈಸರ್ಗಿಕವಾಗಿ ಜೇನುಗೂಡುಗಳನ್ನು ಕಟ್ಟುವ ಅಗತ್ಯವಿಲ್ಲ. ಈ ಜಾಗಕ್ಕೆ ಕೃತಕ 3ಡಿ ಜೇನುಗೂಡುಗಳು ಕಾಲಿಟ್ಟಿದ್ದು, ಪರಿಣಾಮಕಾರಿ ಪರ್ಯಾಯವಾಗಿ ಮಾರ್ಪಟ್ಟಿದೆ. ಇದು ಜಿಕೆವಿಕೆಯಲ್ಲಿ ನಡೆಯುತ್ತಿರುವ 2024ನೇ ಸಾಲಿನ ಕೃಷಿ ಮೇಳದಲ್ಲಿ ಜೇನು ಸಾಕಾಣಿಕೆದಾರರ ಗಮನ ಸೆಳೆದಿದೆ.
ಜಿಕೆವಿಕೆಯ ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯದಿಂದ ಈ ಸಂಶೋಧನೆಯು ನಡೆದಿದೆ. ನೈಸರ್ಗಿಕ ಜೇನುಗೂಡು ಕಟ್ಟಲು ಜೇನು ಹುಳುವಿಗೆ 8 ರಿಂದ 9 ಲೀಟರ್ ಮೇಣದ ಅವಶ್ಯಕತೆಯಿ ರುತ್ತದೆ. ಇದನ್ನು ಎರಡರಿಂದ ಮೂರು ಬಾರಿ ಮಾತ್ರ ಮರುಬಳ ಸಬಹುದು. ಈ ಗೂಡು ಸಿಹಿ ಇರುವುದರಿಂದ “ಮಿಲಿಮೌತ್’ ಎನ್ನುವ ಹುಳುಗಳು ಗೂಡಿನಲ್ಲಿ ಸೇರಿಕೊಂಡು ಗೂಡನ್ನು ಹಾಳು ಮಾಡುತ್ತವೆ. ಈ ಸಮಸ್ಯೆಗೆ ಉತ್ತರವಾಗಿ ಎಫ್.ಡಿ.ಎಯಿಂದ ಮಾನ್ಯತೆ ಪಡೆದ 3ಡಿ ಮುದ್ರಿತ ಮಾದರಿಯ ಅಕ್ರಿಲೋಟ್ರೈಲ್ ಬ್ಯುಟಾಡೀನ್ ಸ್ವೈರೀನ್ (ಎಬಿಎಸ್)ನಿಂದ ಕೃತಕ ಜೇನುಗೂ ಡುನ್ನು ತಯಾರಿಸಲಾಗಿದೆ. ಇದನ್ನು ರೈಸ್ 3ಡಿ ಪ್ರಿಂಟರ್ಸ್ ಪ್ಲಸ್ ಮಾದರಿಯ 3ಡಿ ಪ್ರಿಂಟರ್ ಬಳಸಿ ಮುದ್ರಿಸಲಾಗಿದ್ದು, ಹನಿಕೊಂಬ್ ಸ್ಟ್ರಕ್ಚರ್ ಮಾದರಿಯಲ್ಲಿದೆ. ದೀರ್ಘ ಬಾಳಿಕೆ ಹಾಗೂ ಅಧಿಕ ಜೇನು ಉತ್ಪಾದನೆಗೆ ಇದು ಸಹಾಯಕ ಎನ್ನುತ್ತಾರೆ ಸಂಶೋಧಕರು.
ಒಂದು 3ಡಿ ಜೇನುಗೂಡಿಗೆ ಗರಿಷ್ಠ 2500 ರೂ.ಗಳಷ್ಟಿದ್ದು, ಸುಮಾರು 100ಕ್ಕಿಂತ ಹೆಚ್ಚು ಬಾರಿ ಮರುಬಳಸಬಹುದು. ಜತೆಗೆ ನೈಸರ್ಗಿಕವಾದ ಒಂದು ಜೇನು ಗೂಡಿನಲ್ಲಿ 200 ಎಂ.ಎಲ್. ಜೇನು ಲಭ್ಯವಾದರೆ ಇಲ್ಲಿ 500 ಎಂ.ಎಲ್. ಹೆಚ್ಚಿನ ಜೇನುತುಪ್ಪ ಲಭ್ಯವಾಗುತ್ತದೆ. ಇದರಿಂದ ಗೂಡುಕಟ್ಟಲು ಬಳಸುವ ಮೇಣವೂ ಜೇನು ತುಪ್ಪವಾಗಿಯೇ ದೊರೆಯುತ್ತದೆ. ಒಂದು ಪೆಟ್ಟಿಗೆಯಲ್ಲಿ 10 ರಿಂದ 12 ಕೃತಕ ಗೂಡುಗಳನ್ನು ಇಟ್ಟುಕೊಳ್ಳಬಹುದು ಹಾಗೂ ಒಂದು ಶೀಟ್‌ನಿಂದ 350 ಎಂ.ಎಲ್. ಜೇನು ತುಪ್ಪು ಸಿಗುತ್ತದೆ.
2 ಬಾರಿ ಸಂಶೋಧನೆ: ಮೊದಲ ಬಾರಿಗೆ ಕೃತಕ ಜೇನುಗೂಡಿಗೆ ಮೇಣದ ಲೇಪನ ಮಾಡದೆ ಹಾಗೇ ಉಪಯೋಗಿಸಲಾಗಿತ್ತು. ಆದರೆ ಜೇನು ಹುಳುಗಳು ಸೂಕ್ಷ್ಮ ಜೀವಿಗಳಾದ್ದರಿಂದ ಇದನ್ನು ಒಪ್ಪಿಕೊಳ್ಳಲಿಲ್ಲ. ಈ ಬಗ್ಗೆ ಪುನಃ ಸಂಶೋಧಿಸಿ ಹುಳುಗಳೇ ತಯಾ ರಿಸಿದ ಮೇಣವನ್ನು ಸಿಂಪಡಿಸಿದ ನಂತರ ಇದನ್ನು ಒಪ್ಪಿಕೊಂಡಿತು.
ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನ: ಸದ್ಯ ಈ ಗೂಡುಗಳು ಕೇವಲ ಜೇನು ತುಪ್ಪ ಉತ್ಪಾದನೆ ಮಾತ್ರ ಸೀಮಿತವಾಗಿದ್ದು, ಜೇನು ಹುಳುಗಳು ಇದರಲ್ಲಿ ಸಂತಾನೋತ್ಪತ್ತಿ ನಡೆಸುವುದಿಲ್ಲ. ಆದರೆ, ಜೇನು ತುಪ್ಪ ಉತ್ಪಾದನೆಗೆ ಪೂರಕವಾಗಿದ್ದು, ಹಲವು ರೈತರಿಂದ ಮೆಚ್ಚುಗೆಗಳಿಸಿಕೊಂಡಿದೆ. ಇವರೆಗೆ ಈ ತಂತ್ರಜ್ಞಾನವು “ತುಡುವೆ ಜೇನು’ ಸಾಕಾಣಿಕೆಗೆ ಮಾತ್ರ ಉಪಯೋಗಿಸಲಾಗಿದೆ.
ಸುಧಾರಿತ ತಂತ್ರಜ್ಞಾನ: ಈ ಹಿಂದೆ ಇದ್ದ “ಫೌಂಡೇಶನ್ ಶೀಟ್ ‘ತಂತ್ರಜ್ಞಾನದಲ್ಲಿಯೂ ಗೂಡು ಕಟ್ಟಿ ಕೊಳ್ಳಲು 2 ದಿನದ ಅವಶ್ಯಕತೆ ಇದ್ದು, ಈ ತಂತ್ರಜ್ಞಾನದಿಂದ ಆ ಸಮಯವನ್ನು ಉಳಿತಾಯ ಮಾಡಬಹುದು. ರೈತರಿಗೂ ಇದು ಸುಲಭವಾಗಿದ್ದು, ಮರುಬಳಕೆಗೆ ಒಗ್ಗಿಕೊಂಡಿದೆ.
3ಡಿ ಮುದ್ರಿತ ಕೃತಕ ಜೇನುಗೂಡು ಎಲ್ಲಿ ಲಭ್ಯ?
ವಿಶ್ವವಿದ್ಯಾಲಯದಲ್ಲಿ 3ಡಿ ಮುದ್ರಿತ ಕೃತಕ ಜೇನುಗೂಡು ಲಭ್ಯವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 500 ರೂ. ನಿಂದ 2500 ರೂವರೆಗಿನ ಗೂಡುಗಳು ದೊರೆಯುತ್ತಿದ್ದು, ಬೆಲೆಗೆ ತಕ್ಕಂತೆ ಗೂಡಿನ ಬಾಳಿಕೆ ನಿರ್ಧಾರವಾಗುತ್ತದೆ. ಆಸಕ್ತರು ಮೊ. 9449627325 ಗೆ ಸಂಪರ್ಕಿಸಬಹುದು ಎಂದು ವಿವಿ ತಿಳಿಸಿದೆ.
ಈ ಕೃತಕ ಗೂಡುಗಳು ಜೇನು ಹುಳುಗಳನ್ನು ಆಲಸಿ ಮಾಡದೆ, ಗೂಡು ತಯಾರಿಕೆಯ ಸಮಯವನ್ನು ಉಳಿಸಿ. ಹೆಚ್ಚು ಉತ್ಪಾದನೆಗೆ ಸಹಾಯಕವಾಗಿದೆ. ಈ ಸಂಶೋಧನೆಯ ಪೇಟೆಂಟ್‌ಗೆ ಕೆಲ ಹಂತಗಳು ಮಾತ್ರ ಬಾಕಿ ಇರುವುದು ಸಂತಸದ ವಿಚಾರ. ●ಡಾ.ಸಿ.ಟಿ.ರಾಮಚಂದ್ರ, ಎಂಜಿನಿಯರಿಂಗ್ ವಿವಿಯ ಪ್ರಾಧ್ಯಾಪಕ.
ಜೇನು ಕೃಷಿಯಲ್ಲಿ ಈ ಮಾದರಿಯನ್ನು ಈಗಾಗಲೇ ಅಳವಡಿಸಿಕೊಂಡಿದ್ದೇನೆ. ಇನ್ನು ಹೆಚ್ಚಿನ ಕೃತಕ ಗೂಡುಗಳನ್ನು ಅಳವಡಿಸಬೇಕೆಂದಿದ್ದೇನೆ. ●ಕಿರಣ್, ಜೇನು ಕೃಷಿಕ
-ಸುಚೇತಾ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.