ನಿಯಮ ಮೀರಿದ ಖಾಸಗಿ ಶಾಲೆಗಳಿಗೆ ನೋಟಿಸ್!
Team Udayavani, May 25, 2020, 6:16 AM IST
ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರದ ನಿಯಮ ಮೀರಿ ಮಕ್ಕಳ ಪಾಲಕ, ಪೋಷಕರಿಂದ ಶುಲ್ಕ ವಸೂಲಿಗೆ ಇಳಿದಿರುವ ಕೆಲವು ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡುವ ಮೂಲಕ ಬಿಸಿ ಮುಟ್ಟಿದೆ. ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ತರಗತಿ ನೆಪದಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಅಲ್ಲದೆ, ಶೈಕ್ಷಣಿಕ ಶುಲ್ಕವನ್ನು ಕಟ್ಟಲು ಸ್ವ ಇಚ್ಛೆಯಿಂದ ಬರುವ ಪಾಲಕರಿಂದ ಮಾತ್ರ ಪಡೆಯಬೇಕು.
ಆದರೆ, ಯಾವುದೇ ಒತ್ತಡ ಹೇರುವಂತಿಲ್ಲ. ಕಂತುಗಳ ರೂಪದಲ್ಲಿ ಶುಲ್ಕ ಪಾವತಿಗೆ ಅನುವು ಮಾಡಿಕೊಡಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿತ್ತು. ಆದರೂ, ಕೆಲವು ಖಾಸಗಿ ಶಾಲಾಡಳಿತ ಮಂಡಳಿ ಇದನ್ನು ಉಲ್ಲಂಘಿ ಸಿತ್ತು. ಈ ಸಂಬಂಧ 800ಕ್ಕೂ ಅಧಿಕ ಪಾಲಕ, ಪೋಷಕರು ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಸದಂತೆ, ಶುಲ್ಕ ಸಂಗ್ರಹಿಸದಂತೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಆದೇಶ ಉಲ್ಲಂಘಿ ಸಿದ ಶಾಲೆಗಳ ವಿರುದ ಪಾಲಕರು ನೀಡಿರುವ ದೂರಿನ ಆಧಾರದಲ್ಲಿ 160ಕ್ಕೂ ಅಧಿಕ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಿಂದ 710ಕ್ಕೂ ಅಧಿಕ ದೂರು ದಾಖಲಾಗಿದ್ದು, ಈ ಪೈಕಿ 114 ಶಾಲೆಗೆ ನೋಟಿಸ್ ನೀಡಲಾಗಿದೆ. ಬೆಂ.ಉತ್ತರ ಜಿಲ್ಲೆಯಿಂದ 110ಕ್ಕೂ ದೂರು ದಾಖಲಾಗಿದ್ದು, ಈ ಪೈಕಿ 45 ಶಾಲೆಗೆ ಹಾಗೂ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 6 ದೂರು ದಾಖಲಾಗಿದ್ದು, 2 ಶಾಲೆಗೆ ನೋಟಿಸ್ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಉನ್ನತ ಅಧಿಕಾರಿ ಖಚಿತಪಡಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ವಿಚಾರಣೆ: ಪಾಲಕರಿಂದ ಶುಲ್ಕ ವಸೂಲಿ, ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ವಿರುದಟಛಿ ದಾಖಲಾಗುವ ದೂರುಗಳನ್ನು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯವಾಣಿ ಮತ್ತು ನೇರವಾಗಿ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬರುವ ದೂರು ಕ್ರೋಢೀಕರಿಸಿ ಉಪನಿರ್ದೇಶಕರಿಗೆ ನೀಡಲಾಗುತ್ತದೆ.
ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅದನ್ನು ಹಸ್ತಾಂತರಿಸಿ, ಶೋಕಾಸ್ ನೋಟಿಸ್ ಜಾರಿ ಮಾಡಿ, ಬಗೆಹರಿಸಲು ಸೂಚನೆ ನೀಡುತ್ತಿದ್ದಾರೆ. ಬಿಇಒ ಹಂತದಲ್ಲಿ ಬಗೆಹರಿಯದ ದೂರು-ಶೋಕಾಸ್ ನೋಟಿಸ್‌ಗೆ ಉತ್ತರ ಬಾರದ ಶಾಲೆಗಳ ಪ್ರಕರಣವನ್ನು ನೇರವಾಗಿ ಡಿಡಿಪಿಐ ನಿರ್ವಹಿಸುತ್ತಾರೆ. ಅಲ್ಲಿಯೂ ಸಾಧ್ಯವಾಗದ ದೂರು ಇಲಾಖೆ ನಿರ್ದೇಶಕರ ಹಂತಕ್ಕೆ ಬರುತ್ತದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಂದಿರುವ ದೂರು, ಶಾಲಾಡಳಿತ ಮಂಡಳಿಯಿಂದ ಉಲ್ಲಂಘಿಘನೆಯಾಗಿರುವ ಅಂಶ ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗುತ್ತದೆ. ಪಾಲಕ, ಪೋಷಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸರ್ಕಾರ ಸೂಚಿಸಿರುವ ಕ್ರಮಗಳನ್ನು ಶಾಲಾಡಳಿತ ಮಂಡಳಿ ಪಾಲಿಸಬೇಕು. ಕಾನೂನು ಉಲ್ಲಂಘಿಘನೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಇಲಾಖೆ ಉನ್ನತ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಪಾಲಕರು ನೀಡಿರುವ ದೂರಿನಂತೆ ಶಾಲೆಗಳಿಗೆ ನೋಟಿಸ್ ನೀಡಿದ್ದೇವೆ. ಶಾಲಾಡಳಿತ ಮಂಡಳಿ ಉತ್ತರದ ಆಧಾರದಲ್ಲಿ ಕ್ರಮ ತೆಗೆದು ಕೊಳ್ಳುತ್ತೇವೆ. ಆದರೆ, ಕಾನೂನು ಉಲ್ಲಂಘಿ ಸಿ, ಮಕ್ಕಳು- ಪೋಷಕರ ಮೇಲೆ ಒತ್ತಡ ಹೇರಲು ಬಿಡುವುದಿಲ್ಲ.
-ಎಸ್.ರಾಜೇಂದ್ರ, ಡಿಡಿಪಿಐ ಬೆಂಗಳೂರು ದಕ್ಷಿಣ
ಕಾನೂನು ಉಲ್ಲಂಘಿಘನೆ ಖಚಿತವಾದರೆ, ಪರವಾನಗಿ ರದ್ದು ಮಾಡಬಹುದಾಗಿದೆ. ಬಂದಿರುವ ಎಲ್ಲಾ ದೂರುಗಳಿಗೂ ಬಿಇಒ ಮೂಲಕ ಶಾಲೆಗಳಿಗೆ ಶೋಕಾಸ್ ನೋಟಿಸ್ ನೀಡಿದ್ದೇವೆ.
-ಸಿ.ಬಿ.ಜಯರಂಗ, ಡಿಡಿಪಿಐ, ಬೆಂಗಳೂರು ಉತ್ತರ
* ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.