ಬೆಂಗಳೂರಿಗೆ ಒಡಿಎಫ್ ಪ್ಲಸ್ ಪ್ಲಸ್ ಗರಿ
Team Udayavani, May 21, 2020, 5:36 AM IST
ಬೆಂಗಳೂರು: ಬಿಬಿಎಂಪಿಯು ಒಡಿಎಫ್ ಪ್ಲಸ್ ಪ್ಲಸ್ (ನಗರದಲ್ಲಿನ ಶೇ.25ರಷ್ಟು ಶೌಚಾಲಯಗಳು ಸ್ವಚ್ಛವಾಗಿದ್ದರೆ ಗ್ರೇಡ್ ಸಿಗುತ್ತದೆ) ಮಾನ್ಯತೆ ಪಡೆದುಕೊಂಡಿದ್ದು, ಒಡಿಎಫ್ (ಬಹಿಲು ಬಹಿರ್ದೆಸೆ ಮುಕ್ತ)ದ ನಂತರದ ಎರಡು ಹಂತಗಳಲ್ಲಿಯೂ ಪಾಲಿಕೆ ಮಾನ್ಯತೆ ಪಡೆದಂತಾಗಿದೆ. ಇದರೊಂ ದಿಗೆ ಬಿಬಿಎಂಪಿಗೆ ಸ್ವಚ್ಛ ಸರ್ವೇ ಕ್ಷಣೆಗೆ 500 ಅಂಕಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.
ಹೀಗಾಗಿ, ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಒಡಿಎಫ್ ಪ್ಲಸ್ ಪ್ಲಸ್ (ಓಪನ್ ಡಿಫಕೇಶನ್ ಫೀ ) ಅನ್ನು ಬೆಂಗಳೂರು ಮತ್ತು ಮೈಸೂರು ಮಾತ್ರ ಗಳಿಸಿದೆ. ಇದು ಸಹ ಸ್ವಚ್ಛ ಸರ್ವೇಕ್ಷಣೆ ಭಾಗವಾಗಿದ್ದು, ಬಿಬಿಎಂಪಿ ಒಡಿಎಫ್ ಪ್ಲಸ್ ಪ್ಲಸ್ ಗೆ ಅರ್ಜಿ ಸಲ್ಲಿಸಿತ್ತು. ಒಡಿಎಫ್ ಪ್ಲಸ್ ಪ್ಲಸ್‌ನ ಮುಖ್ಯ ಮಾನದಂಡವೇ ನಗರದ ಶೌಚಾಲಯಗಳನ್ನು ಅತ್ಯಂತ ಉತ್ತಮ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು.
ನಗರದಲ್ಲಿ ಶೇ. 25ರಷ್ಟು ಶೌಚಾಲಯಗಳು ನಿರ್ದಿಷ್ಟ ಮಾನಂಡ ಒಳಗೊಂಡಿರಬೇಕು. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿನ ಶೌಚಾಲಯಗಳ ಸ್ಥಿತಿ ತೀರ ಹೇಳಿಕೊಳ್ಳುವ ಮಟ್ಟ ದಲ್ಲಿ ಉತ್ತಮವಾಗಿಲ್ಲ. ಇದರ ಮಧ್ಯೆಯೂ ಒಡಿಎಫ್ ಪ್ಲಸ್ ಪ್ಲಸ್ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಕಳೆದ ಬಾರಿ ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣೆಯಲ್ಲಿ 194ನೇ ರ್‍ಯಾಂಕ್‌ಗೆ ತೃಪ್ತಿಪಟ್ಟುಕೊಂಡಿತ್ತು. ಆಗ ಪಾಲಿಕೆ ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಸಹ ಘೋಷಣೆ ಮಾಡಿಕೊಂಡಿರಲಿಲ್ಲ.
ಈ ಬಾರಿ ಬಯಲು ಬಹಿರ್ದೆಸೆ ಮುಕ್ತವನ್ನೂ ಘೋಷಣೆ ಮಾಡಿಕೊಂಡಿದೆ. ಬಯಲು ಬಹಿರ್ದೆಸೆ ಮುಕ್ತಕ್ಕೆ ಸಂಬಂಧಿಸಿದ ವಿಭಾಗಕ್ಕೆಂದೇ ಸ್ವಚ್ಛ ಸರ್ವೇಕ್ಷಣೆಯಲ್ಲಿ 1,500 ಅಂಕಗಳನ್ನು ನಿಗದಿ ಮಾಡಲಾಗಿದೆ. ಹೀಗಾಗಿ, ಈ ವರ್ಷ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಅಂದಾಜು 50 ರ್‍ಯಾಂಕ್‌ಗಳು ಮುನ್ನಡೆ ಸಾಧಿಸುವ ಸಾಧ್ಯತೆ ಇದೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ರಂದೀಪ್, ನಗರದಲ್ಲಿನ ಶೌಚಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಈ ಹಿಂದೆ ಟೆಂಡರ್ ವಿಚಾರದಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈಗ ಕೇಂದ್ರ ಸರ್ಕಾರ ನೀಡಿರುವ ಒಡಿಎಫ್ ಪ್ಲಸ್ ಪ್ಲಸ್ ಇನ್ನು ಆರು ತಿಂಗಳಲ್ಲಿ ಪರಿಷ್ಕರಣೆ ಆಗಲಿದೆ. ಆರು ತಿಂಗಳಲ್ಲಿ ಶೌಚಾಲಯಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು, ಸಂಖ್ಯೆ ಹೆಚ್ಚಿಸುವುದು ಸೇರಿದಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ. ಮಾನ್ಯತೆ ಸಿಕ್ಕಿದೆ ಎಂದು ಇಲ್ಲಿಗೆ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಮುಂದಿನ ವರ್ಷ ಫೈವ್ ಸ್ಟಾರ್‌ಗೆ ಅರ್ಜಿ: ಮೈಸೂರು ಸ್ವಚ್ಛ ಸ್ವರ್ವೇಕ್ಷಣಾ ಅಭಿಯಾನದ ಸ್ಪರ್ಧೆಯಲ್ಲಿ ಭಾಗವಹಿಸಿ ಪಂಚತಾರಾ (ಫೈವ್ ಸ್ಟಾರ್ ಗಾಬೇಜ್ ಫ್ರೀ ಸಿಟಿ) ಮಾನ್ಯತೆ ಪಡೆದಂತೆ ಬಿಬಿಎಂಪಿಯೂ ಮುಂದಿನ ವರ್ಷ ಫೈವ್ ಸ್ಟಾರ್ ಗಾಬೇಜ್ ಫ್ರೀ ಸಿಟಿ ಮಾನ್ಯತೆಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ರಂದೀಪ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಪ್ಯಾಕ್ಟರ್‌ಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ, ಕಸ ನಿರ್ವಹಣೆಗೆ ಕಂಟ್ರೋಲ್ ರೂಮ್, ಕಸ ಟ್ರ್ಯಾಕಿಂಗ್, ಮನೆ ಮನೆ ಕಸ ಸಂಗ್ರಹಣೆ, ಸ್ಯಾನಿಟೈಸರ್ ವೇಸ್ಟ್ ಪ್ರತ್ಯೇಕ ಸಂಗ್ರಹ ಸೇರಿದಂತೆ ಹಲವು ಸಿದಟಛಿತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇದೆಲ್ಲವನ್ನು ಅಂತಿಮ ಮಾಡಿಕೊಂಡು ಫೈವ್ ಸ್ಟಾರ್ ಗಾಬೇಜ್ ಫ್ರೀ ಸಿಟಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಒಡಿಎಫ್ ಪ್ಲಸ್ ಪ್ಲಸ್ ಮಾನದಂಡವೇನು?: ನಗರದ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯ ಗಳು ಸ್ವಚ್ಛವಾಗಿರಬೇಕು. ಏರ್‌ಪ್ರಷನರ್, ಟವೆಲ್, ಸಾಬೂನು, ಮಕ್ಕಳಿಗೆ ಅನುಕೂಲಕರ ಶೌಚಾಲಯ (ಎತ್ತರ), ನ್ಯಾಪ್‌ಕಿನ್, ಕೈ ಬಣಗಿಸುವ ಯಂತ್ರ (ಆಯಂಡ್‌ಡ್ರೆ ಮಿಷಿನ್), ಶೌಚಾಲಯದ ಹೊರ ಪ್ರದೇಶ ರಾತ್ರಿ ವೇಳೆ ಕತ್ತಲಿನಿಂದ ಕೂಡಿರಬಾರದು. ಎಲ್ಲ ಶೌಚಾಲಯಗಳ ಕಟ್ಟಡಗಳು ಸುವ್ಯವಸ್ಥೆಯಲ್ಲಿವೆ ಎಂದು ಪ್ರಮಾಣೀಕರಿಸಿರಬೇಕು ಎನ್ನುವುದು ಸೇರಿದಂತೆ ಹಲವು ಪ್ರಮುಖ ಮಾನದಂಡಗಳ ಮೇಲೆ ಒಡಿಎಫ್ ಪ್ಲಸ್ ಪ್ಲಸ್ ಸಿಗುತ್ತದೆ. ಇದಕ್ಕೆ ನಗರದಲ್ಲಿ ಶೇ 25 ಶೌಚಾಲಯಗಳು ಮೇಲಿನ ಎಲ್ಲ ಮಾನದಂಡ ಹೊಂದಿರಬೇಕು. ಒಡಿಎಫ್ ಪ್ಲಸ್‌ಗೆ ಶೇ 10ರಷ್ಟಾದರೂ ಶೌಚಾಲಯಗಳು ಸ್ವಚ್ಛವಾಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.