ಸಿಗ್ನಲ್ ನಲ್ಲೇ ನಿಂತ ಓಕಳಿಪುರ ಕಾರಿಡಾರ್
ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ನೂರೆಂಟು ವಿಘ್ನ| ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ ಕಾರ್ಯ ವಿಳಂಬ
Team Udayavani, Feb 15, 2021, 1:04 PM IST
ಬೆಂಗಳೂರು: ಓಕಳಿಪುರ ಅಷ್ಟ ಪಥ ಕಾರಿಡಾರ್‌ಯೋಜನೆ ಈ ವರ್ಷವೂ ಪೂರ್ಣಗೊಳ್ಳುವುದು ಅನುಮಾನ. 2016ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಾರಂಭದ ಕೆಲವು ತಿಂಗಳನ್ನು ಹೊರತುಪಡಿಸಿ, ಕಾಮಗಾರಿ ಬಹು ತೇಕ ಆಮೆ ವೇಗದಲ್ಲೇ ಸಾಗಿ ಬಂದಿದೆ. ಇಂದಿಗೂ ಆಮೆ ವೇಗ ದಲ್ಲೇ ಸಾಗುತ್ತಿದೆ. ಕಾಮಗಾರಿಗೆ ನಿರ್ದಿಷ್ಟ ರೂಪ ನೀಡುವ ಜವಾ ಬ್ದಾರಿ ಇದೀಗ ರೈಲ್ವೆ ಇಲಾಖೆಯ ಹೆಗಲೇರಿದೆ.
ಇನ್ನು ಕಾರಿಡಾ ರ್‌ನ ಭಾಗವಾಗಿ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಕೆಳಸೇತುವೆ ಕಾಮಗಾರಿಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ತ್ಯಾಜ್ಯ ನೀರು ಕೊಳವೆ ಅಳವಡಿಕೆ ಹಾಗೂ ಕೆಪಿಟಿಸಿಎಲ್ ಕೇಬಲ್ ಲೈನ್ ಸ್ಥಳಾಂತ ರ ಮಾಡಲು ಸಿದ್ಧತೆ ಮಾಡಿ ಕೊಳ್ಳಲಾಗಿತ್ತು. ಕೆಪಿಟಿಸಿಎಲ್ ಕೇಬಲ್ ಲೈನ್ ಸ್ಥಳಾಂತ ರ ಕೆಲಸ ನಡೆಯುತ್ತಿದ್ದು, ಮುಂದಿನ ಒಂದು ವಾರ ಅಥವಾ ಹತ್ತು ದಿನ ಗ ಳಲ್ಲಿ ಈ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಾರಿಡಾರ್ ಮಾರ್ಗ ದಲ್ಲಿ ಚೆನ್ನೈಟ್ರ್ಯಾಕ್‌ನ ಕೆಳಗೆ ನಾಲ್ಕು (ರೈಲ್ವೆ ಅಂಡ ರ್ ಪಾಸ್ ಬ್ರಿಡ್ಜ್) ಬಾಕ್ಸ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಎರಡು ಬಾಕ್ಸ್ ಗಳ ನಿರ್ಮಾಣ ಬಾಕಿ ಇದ್ದು, ಕೆಲಸ ನಡೆಯುತ್ತಿದೆ. ತುಮಕೂರು ಟ್ರ್ಯಾಕ್‌ನ ಕೆಳಗೆ ಆರು ಬಾಕ್ಸ್ ನಿರ್ಮಿ ಸಲು ಉದ್ದೇಶಿಸಲಾಗಿತ್ತು. ಇದರಲ್ಲಿ ಒಂದು ಬಾಕ್ಸ್ ನಿರ್ಮಾಣ
ಮಾತ್ರ ಬಾಕಿ ಉಳಿದಿದ್ದು, ಮಾರ್ಚ್ ಅಥವಾ ಏಪ್ರಿಲ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿ ದ್ದಾರೆ. ಅಷ್ಟ ಪಥ ಕಾರಿಡಾರ್ ನಿಂದಾಗಿ ಗುಬ್ಬಿ ತೋಟದ ಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣ ಮಿಲ್ ರಸ್ತೆ ಗ ಳಲ್ಲಿ ಸಂಚಾರ ಸಿಗ್ನಲ್ ಮುಕ್ತ ವಾ ಗುವ ನಿರೀಕ್ಷೆ ಇದೆ.
ನಿರ್ಮಾಣ ಸವಾಲಿನ ಕೆಲಸ: ರೈಲ್ವೆ ಅಂಡ ರ್ ಪಾಸ್ ಬ್ರಿಡ್ಜ್ ನಿರ್ಮಾಣ ಮಾಡುವುದು ಸವಾಲಿನ ಕೆಲಸವಾಗಿದ್ದು, ಒಂದು ದಿನಕ್ಕೆ ಒಂದು ಮೀ. ಮಾತ್ರಕೊರೆಯಬಹುದು. ಈಗಾಗಲೇ ಟ್ರ್ಯಾಕ್ ಇರುವುದರಿಂದ ಹೆಚ್ಚು ಜಾಗರೂಕತೆಯಿಂದ ಇದೇ ಜಾಗದಲ್ಲಿ ಬ್ರಿಡ್ಜ್ ಗಾಗಿ ಕೊರೆಯುವ ಕೆಲಸವಾಗಬೇಕು. ಬಾಕ್ಸ್ ಗಳ ನಿರ್ಮಾಣದ ಸಂದರ್ಭದಲ್ಲಿ ಅಜಾಗರೂಕತೆ ಮಾಡಿ ದ ರೆ, ರೈಲ್ವೆ ಬಂಡ್ ಮೇಲಿರುವ ಮಣ್ಣು ಕುಸಿಯುವ ಅಪಾಯವೂ ಇದೆ. ಅಲ್ಲದೆ, ರೈಲು ಸಂಚ ರಿ ಸದೆ ಇರುವ ವೇಳೆ ಮಾತ್ರ ಮಣ್ಣು ಕೊರೆಯುವ ಕೆಲಸ ನಡೆಯಬೇಕು ಎನ್ನುತ್ತಾರೆ ಪಾಲಿ ಕೆಯ ಅಧಿಕಾರಿಗಳು. ಚೆನ್ನೈ ಟ್ರ್ಯಾಕ್ ಕೆಳ ಗೆ ಈ ಮಾರ್ಗ ದಲ್ಲಿ ನಿರ್ಮಾ ಣ ವಾ ಗುವ ಬಾಕ್ಸ್
ಮೆಜೆ ಸ್ಟಿಕ್ ರೈಲ್ವೆ ನಿಲ್ದಾ ಣದ ಹಿಂಭಾ ಗದ ಫ್ಲಾಟ್ ಫಾರಂಗೆ ಹಾಗೂ ರಾಜಾಜಿನಗರ ಮಾರ್ಗಕ್ಕೆ ಸಂಪರ್ಕ ಕಲ್ಪಿ ಸು ತ್ತದೆ. ತುಮ ಕೂರು ಟ್ರ್ಯಾಕ್ ಕೆಳಗೆ ಒಂದು ಬಾಕ್ಸ್ ಬಾಕಿ ಉಳಿ ದಿದ್ದು, ಇದು ರಾಜಾಜಿನಗರ ದಿಂದ ಮೆಜೆ ಸ್ಟಿಕ್ ಸಂಪರ್ಕ ಕಲ್ಪಿಸುತ್ತದೆ.
ರೈಲ್ವೆ ಇಲಾಖೆಯಿಂದ ವಿಳಂಬ ನೀತಿ ಆರೋಪ :
ಉದ್ದೇಶಿತ ಕಾರಿಡಾರ್ ಯೋಜನೆಗೆ ರೈಲ್ವೆ ಇಲಾಖೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹ ಕಾರ ಸಿಗುತ್ತಿಲ್ಲ. ಸ್ಥಳೀಯ ನಾಯಕರು, ಅಧಿಕಾರಿಗಳಿಗಿಂತ ಅವರು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಗೆ ಅವರು ಉತ್ತರ ನೀಡುತ್ತಾರೆ. ಈ ಕಾಮಗಾರಿ ಸವಾಲಿನದ್ದೂ ಆಗಿರುವುದರಿಂದ ಅವರು ತುರ್ತಾಗಿ ನಿರ್ಣಯ ತೆಗೆದುಕೊಳ್ಳುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪಾಲಿ ಕೆಯ ಎಂಜಿನಿಯರ್‌ವೊಬ್ಬರು ಮಾಹಿತಿ ನೀಡಿದರು.
ಕಾಮಗಾರಿ ಸವಾಲು :
ರೈಲ್ವೆ ಹಳಿಗಳು ಹಾದು ಹೋಗಿ ರುವ ಭಾಗದಲ್ಲಿ ಬಾಕ್ಸ್ ಗಳನ್ನು ಅಳವಡಿಸಬೇಕು. ರೈಲು ಸಂಚಾರ ಇಲ್ಲದ ಸಂದರ್ಭದಲ್ಲೇ ಕೆಲಸ ನಡೆಯಬೇಕು !
ಪೂರ್ಣ ಯಾವಾಗ? :
ರೈಲ್ವೆಯಿಂದ ಬಾಕ್ಸ್ ನಿರ್ಮಾ ಣಕ್ಕೆ (ಒಂದು) 4ರಿಂದ 5 ತಿಂಗಳ ಕಾಲ ಬೇಕು. ರಸ್ತೆ ನಿರ್ಮಾ ಣಕ್ಕೆ ಪಾಲಿ ಕೆ ಯಿಂದ ಕನಿಷ್ಠ ಎರಡು ತಿಂಗಳು ಬೇಕು. ಒಟ್ಟಾರೆ ಇನ್ನೂ ಒಂದು ವರ್ಷವಾಗುವ ನಿರೀಕ್ಷೆ.
ರೈಲ್ವೆ ಇಲಾ ಖೆಯಿಂದ ಬಾಕ್ಸ್ ಗಳನ್ನು ಅಳವಡಿಸುವ ಕಾರ್ಯವಾದರೆ ಪಾಲಿಕೆಯಿಂದ ರಸ್ತೆ ಕಾಮಗಾರಿ ನಡೆಸಲಾಗುವುದು. ಪಾಲಿಕೆಯಿಂದ ಹೆಚ್ಚು ಕಾಮಗಾರಿ ಬಾಕಿ ಉಳಿದಿಲ್ಲ. –ಬಿಬಿಎಂಪಿ ಸಹಾಯಕ ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.