Orchid Flower: ಇಂದಿನಿಂದ ಮತ್ತೆ ಆರ್ಕಿಡ್ ಪ್ರದರ್ಶನ
ಮನೆ, ಕಚೇರಿ, ಮದುವೆಗಳಲ್ಲಿ ಅಂದ ಹೆಚ್ಚಿಸುವ ಆರ್ಕಿಡ್ ಹೂ
Team Udayavani, Oct 28, 2023, 8:27 AM IST
ಬೆಂಗಳೂರು: ನಗರ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಟೆರಸ್ ಗಾರ್ಡನ್, ಹೈಡ್ರೋಪೋನಿಕ್‌ಗೆ ಹೆಚ್ಚು ಆಸಕ್ತಿ ತೋರಿಸಿದರೂ, ಆರ್ಕಿಡ್‌ಗಳ ವ್ಯಾಮೋಹ ಕಡಿಮೆಯಾಗಿಲ್ಲ. ಮನೆಗಳಲ್ಲಿ ಮಾತ್ರವಲ್ಲದೆ ಐಟಿಬಿಟಿ ಕಚೇರಿ, ಬೃಹತ್ ಹೋಟೆಲ್, ಮದುವೆ, ಸಮಾರಂಭಗಳಲ್ಲಿ ಆರ್ಕಿಡ್ ಬಳಸುವುದು ಹೆಚ್ಚಾಗಿದ್ದು, ಬೇಡಿಕೆಯೂ ಹೆಚ್ಚಾಗಿದೆ.
ಅತಿ ಹೆಚ್ಚು ಹೂವುಗಳನ್ನು ಬಿಡುವ ಸಸ್ಯ ಕುಟುಂಬಗಳಲ್ಲಿ ಒಂದಾಗಿರುವ ಆರ್ಕಿಡ್, ವಿಶ್ವಾದ್ಯಂತ ಸುಮಾರು 30 ಸಾವಿರ ಜಾತಿಗಳನ್ನು ಹೊಂದಿದೆ. ಆರ್ಕಿಡ್‌ಗಳು ಸುಂದರವಾಗಿದ್ದು, ಅಪರೂಪವಾಗಿರುತ್ತವೆ ಹಾಗೂ ದೀರ್ಘಾಯುಷ್ಯವುಳ್ಳ ಸಸ್ಯಗಳಾಗಿವೆ. ಈ ಸಸ್ಯಗಳು ಮೊದಲು ಕಾಡಿನಲ್ಲಿ ಅಂದರೆ, ಪಶ್ಚಿಮ ಘಟ್ಟಗಳಲ್ಲಿ ಬೆಳೆಯುತ್ತಿದ್ದವು. ಆದರೆ, ಈಗ ಹಸಿರು ಮನೆಯಲ್ಲಿ ಹಾಗೂ ಹೈಬ್ರಿಡ್ ಜಾತಿಯ ಸಸ್ಯಗಳನ್ನು ಮನೆಗಳಲ್ಲಿಯೂ ಬೆಳೆಯಬಹುದು.
ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕದಿಂದ ಪ್ರತಿ ವರ್ಷ ನಡೆಸುತ್ತಿದ್ದ ಆರ್ಕಿಡ್ ಪ್ರದರ್ಶನವು ಕೋವಿಡ್ ಕಾರಣದಿಂದಾಗಿ 4 ವರ್ಷಗಳ ಕಾಲ ಸ್ಥಗಿತಗೊಳಿಸಿದ್ದ ಪ್ರದರ್ಶನ ಈ ಬಾರಿ ನಡೆಯು ತ್ತಿದೆ. ಆರ್ಕಿಡ್ ಪ್ರಿಯರೇ, ಬಣ್ಣ-ಬಣ್ಣದ ವಿವಿಧ ಹೂ ಗಿಡಗಳನ್ನು ನೋಡಬೇಕೇ ಅಥವಾ ಬೆಳೆಯ ಬೇಕು ಅಥವಾ ಅವುಗಳ ಬಗ್ಗೆ ತಿಳಿದು ಕೊಳ್ಳ ಬೇಕು ಎಂದರೆ, ಇದೇ ವಾರಾಂತ್ಯದ ಎರಡೂ ದಿನಗಳ ಕಾಲ ಅ.28 ಮತ್ತು 29ರಂದು ನಗರದ ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಡಿ.
ಈ ಪ್ರದರ್ಶನದಲ್ಲಿ ಡೆಂಡ್ರೋಬಿಯಮ್, ಕ್ಯಾಟಿÉಯಾಸ್, ಫಲೇನೊಪ್ಸಿಸ್, ಕ್ಯಾಟ್ರಿಯಾ, ರ್‍ಯಾಂಡಾ, ಆನ್‌ಸಿàಡಿಯಂ, ಗ್ರಮಟೋμಲಂ ಸೇರಿದಂತೆ ಸುಮಾರು 60 ನೈಸರ್ಗಿಕ ಆರ್ಕಿಡ್ ಗಳು ಹಾಗೂ 70 ಹೈಬ್ರಿಡ್ ಪ್ರಭೇದಗಳನ್ನು ಒಟ್ಟು 100ಕ್ಕೂ ಹೆಚ್ಚು ಆರ್ಕಿಡ್ ಪ್ರಭೇದಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
2005ರಲ್ಲಿ ಪ್ರಾರಂಭವಾದ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕವು ಕೇವಲ 15 ಸದಸ್ಯರನ್ನು ಹೊಂದಿತ್ತು. ಪ್ರಸ್ತುತ 650ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಬಹುತೇಕರು ಕರ್ನಾಟಕ ದವರೇ ಇದ್ದಾರೆ. ಉಳಿದಂತೆ ಪುಣೆ, ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ವೈದ್ಯರು, ಐಟಿ ವೃತ್ತಿಪರರು, ನಿವೃತ್ತಿ ಪಡೆದವರು, ಉಪನ್ಯಾಸಕರು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.
2012ರಲ್ಲಿ ಆರಂಭಿಸಿದ ಆರ್ಕಿಡ್ ಪ್ರದರ್ಶನವು ಇದೀಗ ತನ್ನ 8ನೇ ಆವೃತ್ತಿಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಿಶ್ವಾದ್ಯಂತದ ಕೆಲವು ಅತ್ಯಂತ ಆಸಕ್ತಿದಾಯಕ ವಿವಿಧ ಆರ್ಕಿಡ್ ಪ್ರಭೇದಗಳು ಮತ್ತು ಅತ್ಯಂತ ಮೋಡಿಮಾಡುವ ಪುಷ್ಪಯುಕ್ತ ಮಿಶ್ರತಳಿಗಳು ಒಂದೇ ಸೂರಿನಡಿ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಆರ್ಕಿಡ್‌ಗಳನ್ನು ಬೆಳೆಸುವ ಹವ್ಯಾಸಿಗಳನ್ನು ಪ್ರೇರೇಪಿಸಲಾಗುತ್ತದೆ.
ಜತೆಗೆ ಆರ್ಕಿಡ್ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸಂದೇಶ ಹರಡುವ ಪ್ರಯತ್ನದಲ್ಲಿ ಪುಸ್ತಕಗಳು, ಪೋಸ್ಟರ್‌ಗಳನ್ನು ಪ್ರಸ್ತುತಪಡಿಸಲಾಗಿದೆ. ವಿವಿಧ ಲೇಖಕರ ಆರ್ಕಿಡ್ ಕುರಿತು ಬರೆದಿರುವ ಪುಸ್ತಕಗಳನ್ನು ಮಾರಾಟಕ್ಕಿಡಲಾಗಿದ್ದು, ಇಲ್ಲಿ ಆರ್ಕಿಡ್ ಬೆಳೆಯುವ ರೀತಿ ಹಾಗೂ ಪ್ರಾಯೋಗಿಕ ಸಲಹೆಗಳೊಂದಿಗೆ ಬೆಳೆಗಾರರಿಗೆ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಸೊಸೈಟಿ ಅಧ್ಯಕ್ಷ ಡಾ| ಕೆ.ಎಸ್. ಶಶಿಧರ್ ಶಾಸ್ತ್ರೀ ತಿಳಿಸುತ್ತಾರೆ.
ನಾಲ್ಕು ವರ್ಷಗಳ ನಂತರ ಉದ್ಯಾನ ನಗರಿಯಲ್ಲಿ ಇಂದು ಮತ್ತು ನಾಳೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಆರ್ಕಿಡ್ ಪ್ರದರ್ಶನ ನಡೆಯಲಿದ್ದು, ಕರ್ನಾಟಕ ಸೇರಿದಂತೆ ತಮಿಳುನಾಡು ಮತ್ತು ಕೇರಳದ ವಿವಿಧ ನರ್ಸರಿಗಳಿಂದ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದೆ. ಈ ಪ್ರದರ್ಶನವು ಯುವ ಮನಸ್ಸುಗಳು ಮತ್ತು ವಿದ್ಯಾರ್ಥಿಗಳನ್ನು ಪ್ರಕೃತಿ ಮತ್ತು ಅದರ ಸಂರಕ್ಷಣೆಯನ್ನು ಪೋಷಿಸಲು ಮತ್ತು ಕಾಳಜಿ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ● ಡಾ|ಕೆ.ಎಸ್. ಶಶಿಧರ್ ಶಾಸ್ತ್ರೀ, ಅಧ್ಯಕ್ಷರು, ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ
ಅಡವಿ ಸುಂದರಿ ಸೀತೆ ಹೂ
ಆರ್ಕಿಡನ್ನು ಅಡವಿ ಸುಂದರಿ ಸೀತೆ ಹೂ ಎಂದು ಕರೆಯಲಾಗುತ್ತದೆ. ಕೊಡಗು, ಚಿಕ್ಕಮಗಳೂರು ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ ಈ ಹೂವನ್ನು ಮಳೆಗಾಲದಲ್ಲಿ ಮಾತ್ರ ಕಾಣಲು ಸಾಧ್ಯ. ಇದು ಮರಗಳನ್ನು ಆಶ್ರಯಿಸಿ ಬೆಳೆಯುವ ಪರಾವಲಂಬಿ ಸಸ್ಯ. ಇದು ನೆಲದಲ್ಲಿ ಮಣ್ಣಿನಲ್ಲಿ ಕಂಡು ಬರುವುದಿಲ್ಲ. ಬೇಸಿಗೆಯಲ್ಲಿ ಮರದಲ್ಲೇ ಒಣಗಿ ಹೋಗುವ ಈ ಸಸ್ಯವು ಮಳೆಗಾಲದಲ್ಲಿ ಪುನಃ ಚಿಗುರೊಡೆಯುತ್ತದೆ. ಒಂದೇ ಗೊಂಚಲಲ್ಲಿ 5ರಿಂದ 20ರವರೆಗೆ ಹೂಗಳು ಅರಳುತ್ತವೆ. ನೋಡಲು ಕಣ್ಮನ ಸೆಳೆಯುತ್ತವೆ. ಸೀತೆ ವನವಾಸಕ್ಕೆ ಬಂದಾಗ ಈ ಹೂವನ್ನು ಮುಡಿದ ಕಾರಣ ಸೀತೆ ಹೂ ಎಂದು ಹೆಸರು ಬಂದೆದೆ ಎಂಬ ಪ್ರತೀತಿ ಇದೆ. ಯಾರು ಕೂಡ ಈ ಹೂವನ್ನು ತಲೆಗೆ ಮುಡಿದುಕೊಳ್ಳುವುದಿಲ್ಲ. ಅಲ್ಲದೆ, ಪೂಜೆಗೆ ಕೂಡ ಬಳಸುವುದಿಲ್ಲ. ಇದೀಗ ಮನೆಯಲ್ಲಿ ಬೆಳೆಯುವಂತಹ ಆರ್ಕಿಡ್ ಹೈಬ್ರಿಡ್ ಸಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
● ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.