Bengaluru: ನಗರದಲ್ಲಿ ದಯವಿಟ್ಟು ಗುಂಡಿ ಮುಚ್ಚಿ : ಟ್ವಿಟರ್‌ನಲ್ಲಿ ಸಚಿವ ಕೃಷ್ಣ ಅಸಹಾಯಕತೆ

ರಾಜಧಾನಿ ಗುಂಡಿಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದ ಸಚಿವರ ಟ್ವೀಟ್‌

Team Udayavani, Aug 16, 2024, 12:47 PM IST

8-road

ಬೆಂಗಳೂರು: ರಾಜಧಾನಿಯ ರಸ್ತೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ “ಬಿಬಿಎಂಪಿ ರಸ್ತೆ ಗುಂಡಿ ಗಮನ ‘ ಎಂಬ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ಆದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ ಈ ಮಧ್ಯೆ ಸಿಲಿಕಾನ್‌ ಸಿಟಿಯ ರಸ್ತೆ ಗುಂಡಿಗಳ ವಿಚಾರವಾಗಿ ಸಚಿವ ಕೃಷ್ಣ ಬೈರೇಗೌಡ ಅವರೇ ಜಾಲತಾಣದಲ್ಲಿ ಟ್ವೀಟ್‌ ಮಾಡಿದ್ದು, ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

ಜಾಲತಾಣ ಎಕ್ಸ್‌ ನಲ್ಲಿ ಬರೆದುಕೊಂಡಿರುವ ಅವರು, “ವೀರಣ್ಣಪಾಳ್ಯದಿಂದ ಹೆಬ್ಟಾಳ ಕಡೆಗಿನ ರಿಂಗ್‌ ರೋಡಿನ ಸರ್ವಿಸ್‌ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಅಥವಾ ಬಿಎಂಆರ್‌ಸಿಎಲ್‌ ಎಂಡಿ ಯಾರಾದರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ’ ಎಂದು ಕೋರಿಕೊಂಡಿದ್ದಾರೆ.

ಜಾಲತಾಣದಲ್ಲಿ ಚರ್ಚೆ: ಸಚಿವರ ಕೋರಿಕೆ ಬೆನ್ನಲ್ಲೇ ನೆಟ್ಟಿಗರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಮಂತ್ರಿ ಗಳೇ ಇಷ್ಟು ಅಸಹಾಯಕ ರಾದರೆ ಹೇಗೆ? ಒಂದು ಫೋನ್‌ ಮಾಡಿದರೆ ಬಿಬಿಎಂಪಿ ಕಮಿಷನರ್‌ ನಿಮ್ಮ ಫೋನ್‌ ಸ್ವೀಕರಿಸುತ್ತಿದ್ದಾರೆ ಇಲ್ಲವೋ? ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಸಿಲ್ಕ್ ಬೋರ್ಡ್‌ ಸುತ್ತಮುತ್ತಲೂ ಕೂಡ ಇಂತಹದ್ದೇ ಅವ್ಯವಸ್ಥೆಯಿದೆ. ನಿಮ್ಮ ಗನಮಕ್ಕೆ ಬಾರದಿರುವುದು ವಿಪರ್ಯಾಸ ಎಂದು ಮತ್ತೂಬ್ಬರು ಟ್ವೀಟ್‌ ಮಾಡಿದ್ದಾರೆ.

ರಸ್ತೆ ಗುಂಡಿಗಳಿಗೆ ಮುಕ್ತ ಹಾಡು ನಿಟ್ಟಿನಲ್ಲಿ ಬಿಬಿಎಂಪಿ ರಸ್ತೆ “ಗುಂಡಿ ಗಮನ’ ಎಂಬ ಹೊಸ ಆ್ಯಪ್‌ ಬಿಡುಗಡೆ ಮಾಡಿದೆ. ಜನರು ತಮ್ಮ ಪ್ರದೇಶ ವ್ಯಾಪ್ತಿಯಲ್ಲಿ ಬಿದ್ದಿರುವ ರಸ್ತೆ ಗುಂಡಿಗಳ ಬಗ್ಗೆ ಆ್ಯಪ್‌ನಲ್ಲಿ ಚಿತ್ರ ಸಮೇತ ಕಳುಹಿಸಿ ಕೊಡಬಹುದಾಗಿದೆ. ಈಗಾಗಲೇ ಆ್ಯಪ್‌ ಕಾರ್ಯಾರಂಭ ಮಾಡಿದ್ದು ಆದರೂ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳು ಗುಂಡಿಮುಕ್ತವಾಗಿಲ್ಲ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.

ಸಚಿವರ ಟ್ವೀಟ್‌ಗೆ ಅಶೋಕ್‌ ವ್ಯಂಗ್ಯ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳು ಕುರಿತಂತೆ ಸಚಿವ ಕೃಷ್ಣಬೈರೇಗೌಡ ಅವರ ಟ್ವೀಟ್‌ ಅಸ್ತ್ರವಾಗಿರಿಸಿಕೊಂಡು ಇದೀಗ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರ ಮಧ್ಯೆ ಪರಸ್ಪರ ತಾಳಮೇಳವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಂದಾಯ ಸಚಿವರು ಮತ್ತು ಬ್ಯಾಟರಾಯನಪುರ ಶಾಸಕರಾದ ಕೃಷ್ಣಬೈರೇಗೌಡರು ಅತ್ಯಂತ ಅಸಹಾಯಕರಾಗಿ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುವುತ್ತಿರುವುದನ್ನು ನೋಡಿದರೆ ಕರ್ನಾಟದಲ್ಲಿರುವ ಕಾಂಗ್ರೆಸ್‌ ಸರ್ಕಾರ ಎಂತಹ ನಾಲಾಯಕ್‌ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಸಚಿವ ಕೃಷ್ಣಬೈರೇಗೌಡ ಅವರೇ, ಆದೇಶ ಮಾಡಿ ಕೆಲಸ ಮಾಡಿಸಬೇಕಾದ ಸ್ಥಾನದಲ್ಲಿರುವ ತಾವು ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟೊಂದು ಅಸಹಾಯಕರಾಗಿ ಅಂಗಲಾಚುತ್ತಿದ್ದೀರಲ್ಲ, ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಟಾಂಗ್‌ ಕೊಡುತ್ತಿದ್ದೀರೋ? ಅಥವಾ ಇದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಬಹಿರಂಗ ಬಂಡಾಯದ ಮುನ್ಸೂಚನೆಯೋ ಎಂದು ಕಾಲೆಳೆದಿದ್ದಾರೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

6

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.