Bengaluru: ಪೊಲೀಸ್ ಆತ್ಮಹ*ತ್ಯೆ; ಡೆ*ತ್ ನೋಟ್‌ನಲ್ಲಿ ಪತ್ನಿ ಮತ್ತು ಮಾವನ ದೂಷಣೆ
ಟೆಕ್ಕಿ ಪ್ರಕರಣ ದೇಶಾದ್ಯಂತ ಸುದ್ದಿಯಾಗುತ್ತಿರುವ ವೇಳೆಯಲ್ಲೇ ಇನ್ನೊಂದು ಪ್ರಕರಣ.. ಪತ್ನಿ, ಮಾವನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು!
Team Udayavani, Dec 14, 2024, 8:57 PM IST
ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ 33 ವರ್ಷದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಆತ್ಮಹ*ತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ(ಡಿ13) ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ ಕರ್ತವ್ಯ ಮುಗಿಸಿ ಮನೆಗೆ ಮರಳಿದ ಬಳಿಕ ಈ ಘಟನೆ ನಡೆದಿದೆ. ಪತ್ನಿಯೊಂದಿಗೆ ತೀವ್ರ ವಾಗ್ವಾದ ನಡೆದ ಬಳಿಕ ಕಠಿನ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಂಬಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಿಪ್ಪಣ್ಣ ಅವರು ಕನ್ನಡದಲ್ಲಿ ಒಂದು ಪುಟದ ಡೆ*ತ್ ನೋಟ್ ಬರೆದಿದ್ದು, ಪತ್ನಿ ಮತ್ತು ಮಾವ ಚಿತ್ರಹಿಂಸೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 12 ರಂದು ರಾತ್ರಿ 7.26 ಕ್ಕೆ ತನ್ನ ಮಾವ ತನಗೆ ಬೆದರಿಕೆ ಹಾಕಿದ್ದು ಮತ್ತು ತನ್ನ ಮಗಳು ಶಾಂತಿಯಿಂದ ಬದುಕಲು ನೀನು ಸಾಯಬೇಕು ಎಂದು ಹೇಳಿದ್ದ ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ 2021ರಲ್ಲಿ ವಿವಾಹವಾಗಿದ್ದ ತಿಪ್ಪಣ್ಣ ಅವರಿಗೆ ಮಕ್ಕಳಿರಲಿಲ್ಲ.ಘಟನೆ ನಡೆದ ದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆ ಪಾಳಿಯಲ್ಲಿ ಕೆಲಸ ಮಾಡಿ ಮನೆಗೆ ಮರಳಿದ್ದರು. ಪತ್ನಿ ಜತೆಗಿನ ಜಗಳದ ಬಳಿಕ ಮನೆ ತೊರೆದು ಜೀವನ ಅಂತ್ಯಗೊಳಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತಂಡವನ್ನು ರವಾನಿಸಲಾಗಿದೆ. ಡೆ*ತ್ ನೋಟ್ ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಮತ್ತು ತಿಪ್ಪಣ್ಣ ಅವರ ಪತ್ನಿ ಮತ್ತು ಮಾವನ ವಿರುದ್ಧ ಕ್ರಿಮಿನಲ್ ಬೆದರಿಕೆ ಸೇರಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನ ಮಾರತ್ತ ಹಳ್ಳಿಯಲ್ಲಿ ಟೆಕ್ಕಿ ಅತುಲ್ ಸುಭಾಷ್, ತನ್ನ ಪತ್ನಿ ಮತ್ತು ಆಕೆಯ ಕುಟುಂಬದವರ ಕಿರುಕುಳದ ಆರೋಪ ಮಾಡಿ ಆತ್ಮಹ*ತ್ಯೆ ಮಾಡಿಕೊಂಡಿರುವ ವಿಚಾರ ದೇಶಾದ್ಯಂತ ಭಾರೀ ಸುದ್ದಿಯಾಗುತ್ತಿರುವ ವೇಳೆಯಲ್ಲೇ ಈ ಆಪಾದಿತ ಆತ್ಮಹ*ತ್ಯೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
ಚೆನ್ನಮ್ಮನ ವಂಶಸ್ಥರ ಮೇಲಿನ ಲಾಠಿ ಪ್ರಹಾರ ಮನುಕುಲಕ್ಕೆ ಮಾಡಿದ ಅಪಮಾನ: ರೇಣುಕಾಚಾರ್ಯ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Udupi; ಗೀತಾರ್ಥ ಚಿಂತನೆ 124: ದೇಹದಲ್ಲಿರುವ ಅನುಭವ ಆತ್ಮನಿಗೇ…
Davanagere: ನಗರದಲ್ಲಿ ಬಿ.ವೈ.ವಿಜಯೇಂದ್ರ ಬೆಂಬಲಿಗರ ಸಭೆ; 20ಕ್ಕೂ ಅಧಿಕ ನಾಯಕರು ಭಾಗಿ
Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ
Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್ ಕಸಿದು ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.