ಕಳೆದ ಇಪ್ಪತ್ತು ದಿನದಲ್ಲಿ ಸಂಗ್ರಹ ಪಾಲಿಕೆಯ ಆರ್ಥಿಕ ಸಂಜೀವಿನಿ “ಆಸ್ತಿ ತೆರಿಗೆ’
ಆಸ್ತಿ ತೆರಿಗೆ ಸಂಗ್ರಹವೇ 135 ಕೋಟಿ ರೂ.!
Team Udayavani, Apr 23, 2020, 11:49 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಪಾಲಿಕೆಗೆ ಬರುವ ಎಲ್ಲ ಆದಾಯ ಮೂಲಗಳು ತಾತ್ಕಾಲಿಕವಾಗಿ ನಿಂತಿದೆ. ಆದರೆ, ಪಾಲಿಕೆಯ ಆರ್ಥಿಕ ಸಂಜೀವಿನಿ ಎಂದೇ ಗುರುತಿಸಲ್ಪಟ್ಟಿರುವ “”ಆಸ್ತಿ ತೆರಿಗೆ”ಯಿಂದ ಕಳೆದ 20 ದಿನಗಳಲ್ಲಿ 135 ಕೋಟಿ ರೂ. ಸಂಗ್ರಹವಾಗಿದೆ! ವಿಶೇಷವೆಂದರೆ ಇದರಲ್ಲಿ 124 ಕೋಟಿ ರೂ. ಆಸ್ತಿ ತೆರಿಗೆ ಆನ್‌ಲೈನ್ ಮೂಲಕವೇ ಆಗಿದೆ. ಬಿಬಿಎಂಪಿಯು ಪ್ರತಿ ಆರ್ಥಿಕ ವರ್ಷದ ಪ್ರಾರಂಭ ಅಂದರೆ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ. 5ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡುತ್ತದೆ. ಕೋವಿಡ್ ದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಮಧ್ಯೆಯೂ ಸಾರ್ವಜನಿಕರು ಈ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿಸುತ್ತಿರುವುದಕ್ಕೆ ವಿನಾಯಿತಿಯೂ ಕಾರಣವಾಗಿದೆ.
ವಿನಾಯಿತಿ ಮುಂದುವರಿಕೆ ಸಾಧ್ಯತೆ ಕಡಿಮೆ: ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹದ ಮೇಲೆ ನೀಡುವ ಶೇ.5ರಷ್ಟು ವಿನಾಯಿತಿಯನ್ನು ಮೇ ತಿಂಗಳಿಗೂ ವಿಸ್ತರಿಸುವ ಸಾಧ್ಯತೆ ಕಡಿಮೆ ಇದೆ. ಈಗಾಗಲೇ ಪಾಲಿಕೆ ಆರ್ಥಿಕವಾಗಿ ನಷ್ಟದಲ್ಲಿದ್ದು, ಹೆಚ್ಚಿನ ಆದಾಯ ಮೂಲವಾಗಿರುವ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಆಸ್ತಿ ತೆರಿಗೆ ಮೇಲೆ ಶೇ.5 ರಷ್ಟು ವಿನಾಯಿತಿ ಪಾವತಿ ಮಾಡುವುದಕ್ಕೆ ಏ.30 ಕೊನೆಯ ದಿನ ಎಂದು ಎಚ್ಚರಿಕೆ ಸಂದೇಶ ಇದೆ. ಆಸ್ತಿ ತೆರಿಗೆ ಸಂಗ್ರಹದ ಮೇಲೆ ಶೇ.5ರಷ್ಟು ವಿನಾಯಿತಿ ಏ.30ಕ್ಕೆ ಕೊನೆಯಾಗುವ ಬಗ್ಗೆ ಪಾಲಿಕೆ ಎಲ್ಲಿಯೂ ಜಾಹೀರಾತು ಮೂಲಕ ಜಾಗೃತಿ ಮೂಡಿಸಿಲ್ಲ.
ಅವಕಾಶ ತಪ್ಪುವ ಸಾಧ್ಯತೆ: ಆನ್‌ಲೈನ್ ಬಳಕೆದಾರಿರಿಗೆ ತೆರಿಗೆ ಪಾವತಿಯಿಂದ ಶೇ.5ರಷ್ಟು ವಿನಾಯಿತಿ ಸಿಕ್ಕಿದೆಯಾದರೂ, ಬಿಬಿಎಂಪಿ ವಿನಾಯಿತಿಯನ್ನು ಮೇ ತಿಂಗಳಿಗೂ ಮುಂದುವರಿಸದೆ ಇದ್ದಲ್ಲಿ ಆನ್‌ಲೈನ್ ವ್ಯವಸ್ಥೆಯ ಬಗ್ಗೆ ತಿಳವಳಿಕೆ ಇಲ್ಲದವರು ಅಥವಾ ಇದನ್ನು ಇಲ್ಲಿಯವರೆಗೆ ಬಳಸದೆ ಇರುವವರು ಶೇ.5ರಷ್ಟು ತೆರಿಗೆ ವಿನಾಯಿತಿ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಏ.30ಕ್ಕೆ ಈ ಅವಕಾಶ ಮುಕ್ತಾಯವಾಗಲಿದೆ. ಲಾಕ್‌ಡೌನ್ ಮೇ.3ಕ್ಕೆ ಮುಕ್ತಾಯವಾಗಲಿದೆ.
ಆನ್‌ಲೈನ್ ಮೂಲಕವೇ ಪಾವತಿಸಲು ಮನವಿ
ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ www. bbmp.gov.in ತೆರೆಯುತ್ತಿದ್ದಂತೆಯೇ ನೋಟ್ ಎಂಬ ಅಂಶ ಬರುತ್ತಿದ್ದು, ಕೋವಿಡ್ ಲಾಕ್‌ಡೌನ್‌ನಿಂದಾಗಿ ಬ್ಯಾಂಕ್‌ಗಳಲ್ಲಿ ನಿರ್ದಿಷ್ಟ ಸಿಬ್ಬಂದಿ ಮಾತ್ರ ಸೇವೆ ನೀಡುತ್ತಿದ್ದಾರೆ. ಹೀಗಾಗಿ, ಸಾಧ್ಯವಾದಷ್ಟು ಆನ್‌ಲೈನ್‌ನ ಮೂಲಕವೇ ವ್ಯವಹರಿಸಲು ಕೋರಲಾಗುತ್ತಿದೆ. ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡುವುದು ಹೇಗೆ? ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ಗೆ www. bbmp.gov.in ಗೆ ಭೇಟಿ ನೀಡಿದರೆ ಅದರಲ್ಲಿ ನಾಗರೀಕ ಸೇವೆಗಳು ಎಂಬ ವಿಭಾಗವಿದ್ದು, ಇದರಲ್ಲಿ ಮೊದಲ ಆಯ್ಕೆ ಆಸ್ತಿ ತೆರಿಗೆ ಪಾವತಿ ಎಂದಿದೆ. ಇದನ್ನು ಕ್ಲಿಕ್ಕಿಸಿದರೆ ಆಸ್ತಿ ಪಾವತಿಸುವುದು ಹೇಗೆ, ಕಂದಾಯ ಅಧಿಕಾರಿಗಳು, ಸಹಾಯ ಕಂದಾಯ ಅಧಿಕಾರಿಗಳ ವಿವರ ಲಭ್ಯವಾಗಲಿದೆ. ಇದರೊಂದಿಗೆ ನಿಮ್ಮ ಆಸ್ತಿ ತೆರಿಗೆ ಪಾವತಿಸಲು ಇಲ್ಲಿ ಕ್ಲಿಕ್ ಮಾಡಿ ಎಂಬ ಆಯ್ಕೆಯೂ ಕಾಣಿಸುತ್ತದೆ. ಆಸ್ತಿ ತೆರಿಗೆ ಪಾವತಿ ಮೇಲೆ ಕ್ಲಿಕ್ ಮಾಡಿದರೆ, ತೆರಿಗೆ ಪಾವತಿಸುವ ಆಯ್ಕೆಯು ಮುಖಪುಟದಲ್ಲಿ ಆಸ್ತಿ ತೆರಿಗೆ ಪಾವತಿದಾರರು
ತಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ಇದಾದ ನಂತರ ಆಸ್ತಿ ತೆರಿಗೆ ಪಾವತಿಸಿದ ಖಾತ್ರಿ ಮಾಹಿತಿ ಸಿಗಲಿ¨
– ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ. 5ರಷ್ಟು ಆಸ್ತಿ ತೆರಿಗೆ ವಿನಾಯಿತಿ
– ಏ.30 ಕೊನೆಯ ದಿನ ಎಂದು ಎಚ್ಚರಿಕೆ ಸಂದೇಶ
ಹಿತೇಶ್ ವೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.