ನಟಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ: ದೂರು
Team Udayavani, Jul 5, 2020, 5:22 AM IST
ಬೆಂಗಳೂರು: ನಟಿಯೊಬ್ಬರಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರವೆಸಗಿರುವ ಘಟನೆ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಜೆ.ನಗರದ ಖಾಸಗಿ ಅಪಾರ್ಟ್ ಮೆಂಟ್ ನಿವಾಸಿ 30 ವರ್ಷದ ನಟಿ ನೀಡಿದ ದೂರಿನ ಮೇರೆಗೆ ನಾಯಂಡಹಳ್ಳಿ ನಿವಾಸಿ ಮೋಹಿತ್, ಆತನ ತಂದೆ ಮಹ ದೇವ್, ತಾಯಿ ನಾಗವೇಣಿ ಹಾಗೂ ರಾಹುಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪಿ, ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. 2018ರಲ್ಲಿ ಗಾಂಧಿ ಬಜಾರ್ ಕಾಫಿ ಡೇಗೆ ಹೋಗಿದ್ದಾಗ ಮೋಹಿತ್ ಪರಿಚಿತ ವಾಗಿ ಖಾಸಗಿ ಕಂಪನಿ ಸಿಇಒ ಎಂದು ಹೇಳಿಕೊಂಡಿದ್ದಾನೆ. ಕೆಲ ತಿಂಗಳ ನಂತರ ಕಂಪನಿ ಪ್ರಚಾರ ರಾಯ ಭಾರಿಯಾಗಿ ನಟಿಯನ್ನು ನೇಮಿಸಿಕೊಂಡಿದ್ದ.
2019ರ ಜ.15ರಂದು ಗೋವಾಕ್ಕೆ ಕರೆದೊಯ್ದು ಫೋಟೋ ಶೂಟ್ ಮಾಡಿಸಿ ಕಂಪನಿ ಯಲ್ಲಿ ಆರ್ಥಿಕ ಸಮಸ್ಯೆ ಆಗಿದೆ ಎಂದು ಹೇಳಿ 1.50 ಲಕ್ಷ ರೂ. ಪಡೆದಿದ್ದ. ಕಳೆದ ವರ್ಷ ಜೂ.22ರಂದು ಮೋಹಿತ್ ಹುಟ್ಟು ಹಬ್ಬವಿತ್ತು. ಅಲ್ಲದೇ ಮರುದಿನ ನಟಿ ಹುಟ್ಟುಹಬ್ಬವಿತ್ತು. ಒಟ್ಟಿಗೆ ಊಟ ಮಾಡಿದ್ದರು. ಈ ವೇಳೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧ ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.
ಬ್ಲ್ಯಾಕ್‌ಮೇಲ್: ಇತ್ತೀಚೆಗೆ ಮನೆಗೆ ಹೋಗಿದ್ದ ಆರೋಪಿ, ನಿನ್ನ ಮೇಲೆ ಅತ್ಯಾಚಾರ ಎಸಗಿದ್ದೇನೆ. ಆ ಎಲ್ಲಾ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀ ಕರಿಸಿಕೊಂಡಿದ್ದೇನೆ. ಕೇಳಿದಾಗ ಹಣ ಕೊಡಬೇಕು ಎಂದು ಬೆದರಿಕೆಯೊಡಿದ್ದಾನೆ. ಹೀಗೆ ಹೇಳಿ ಇದುವರೆಗೂ ಬ್ಲ್ಯಾಕ್ ಮೇಲ್ ಮೂಲಕ ಆರೋಪಿಗೆ 20 ಲಕ್ಷ ರೂ. ಪಡೆದುಕೊಂಡಿದ್ದಾನೆ. ಇದೀಗ ಮತ್ತೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು
Bengaluru: ನಗರದಲ್ಲಿ ಏಕಕಾಲಕ್ಕೆ 200 ಗಣೇಶ ಮೂರ್ತಿಗಳ ಮೆರವಣಿಗೆ
Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್ಗಳು ಪತ್ತೆ
Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ
BBMP: ರಜೆ ದಿನದಲ್ಲೂ ಗುಂಡಿ ಮುಚ್ಚಿದ ಪಾಲಿಕೆ ನೌಕರರು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.