Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!

ಯಶಸ್ಸಿನ ಬೆನ್ನಲ್ಲೇ ಮೇಘಾಲಯ-ಗೋವಾದಿಂದ ಅಧ್ಯಯನ ತಂಡಗಳ ಭೇಟಿ ; ಇದೇ ಮಾದರಿ ರಾಜ್ಯಾದ್ಯಂತ ವಿಸ್ತರಣೆಗೆ ಸಿದ್ದತೆ

Team Udayavani, Dec 15, 2024, 4:45 PM IST

20-

ಬೆಂಗಳೂರು: ಉತ್ತರ ಕನ್ನಡದ ಅರಣ್ಯ ಭಾಗ ದ ಲ್ಲಿನ ಬುಡಕಟ್ಟು ಸಮುದಾಯದ ಮಹಿ ಳೆಯರಿಗೆ ಜೀವನೋಪಾಯ ಹಾಗೂ ವಿಶಿಷ್ಟ ಸಂಪ್ರದಾಯವನ್ನು ಜನ ರಿಗೆ ಪರಿ ಚಯಿಸು ನಿಟ್ಟಿನಲ್ಲಿ ಪ್ರಾರಂಭಿಸಲಾದ “ಸಿದ್ದಿ ಕಮ್ಯುನಿಟಿ ಟೂರಿಸಂ’ ದೇಶ-ವಿದೇಶದ ಪ್ರವಾಸಿ ಗರನ್ನು ಸೆಳೆಯುವಲ್ಲಿ ಯಶ್ವಸಿಯಾದ ಬೆನ್ನಲ್ಲಿಯೇ “ಕಮ್ಯುನಿಟಿ (ಇಕೋ) ಟೂರಿಸಂ’ ಅನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಂದಾಗಿದೆ.

ಕರ್ನಾಟಕದಲ್ಲಿ ಸಿದ್ದಿ ಸಮುದಾಯವೆಂದರೆ ಮೊದಲು ನೆನಪಾಗೋದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ. ಯಲ್ಲಾಪುರ, ಹಳಿಯಾಳ, ಮುಂಡಗೋಡ, ಅಂಕೋಲಾ ಭಾಗದ ಅರಣ್ಯದಲ್ಲಿ ಸಿದ್ದಿ ಸಮುದಾಯದವರು ಬದುಕು ಕಟ್ಟಿಕೊಂಡಿದ್ದಾರೆ. ಪೋರ್ಚುಗೀಸರ ಅವಧಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಬಂದವರೇ ಸಿದ್ದಿ ಸಮುದಾಯದವರಾಗಿದ್ದಾರೆ. ವಿಶೇಷವಾಗಿ ಯಲ್ಲಾಪುರ ತಾಲೂಕಿನ ಇಡಗಂದಿಯ ಸಿದ್ದಿ ಸಮುದಾಯದ ಆಚರಣೆಗಳು, ಆಹಾರ ಪದ್ಧತಿ, ಸಂಸ್ಕೃತಿ, ಜೀವನ ಶೈಲಿ ಸಂಪೂರ್ಣ ವಿಭಿನ್ನವಾಗಿದೆ. ಇದನ್ನೇ ಮುಖ್ಯವಾಗಿಸಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಮತ್ತು ಸಂಜೀವಿನಿ ಸ್ವ ಸಹಾಯ ಮಹಿಳೆಯರನ್ನು ಬಳಸಿಕೊಂಡು ಸಿದ್ದಿ ಕಮ್ಯುನಿಟಿ ಟೂರಿಸಂ ಪ್ರಾರಂಭಿಸಿದೆ.

2024ರ ಮಾರ್ಚ್‌ನಲ್ಲಿ “ಸಿದ್ದಿ ಸಮು ದಾಯ ಹೋಂ ಟೂರಿಸಂ’ ಪ್ರಾರಂಭಿಸಲಾಗಿದೆ. ಇಲ್ಲಿನ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು 4 ಹೋಂ ಸ್ಟೇಯನ್ನು ಮುನ್ನಡೆಸುತ್ತಿದ್ದಾರೆ. ಇದುವರೆಗೆ ಗೋವಾ, ಮೇಘಾಲಯ ಹಾಗೂ ಕರ್ನಾ ಟಕದ ಬೆಂಗಳೂರು ನಗರದಿಂದ ಹೆಚ್ಚಾಗಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಸಿದ್ದಿ ಸಮು ದಾಯ, ಪರಿಸರ, ಅಪರೂಪದ ಪಕ್ಷಿ-ಪ್ರಾ ಣಿಗಳ ಕುರಿತು ಅಧ್ಯಯನ ಮಾಡಲು ಬಯಸುವವರು ಸಹ ಭೇಟಿ ನೀಡುತ್ತಿದ್ದಾರೆ.

ಸಿದ್ದಿ -ಕಾಡು ಪರಿಚಯ : ಸಿದ್ದಿ ಹೋಂ ಸ್ಟೇಗೆ ಆಗಮಿಸುವ ಅತಿಥಿಗಳ ಕೋರಿಕೆ ಅನ್ವಯ ಆಹಾರ ಹಾಗೂ ಇತರೆ ಚಟುವಟಿಕೆಯನ್ನು ಆಯೋಜಿಸಲಾಗುತ್ತದೆ. ಆಹಾರ ತಯಾರಿಕೆ ಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಚಾರಣ ಮಾಡಲು ಬಯಸುವವರಿಗೆ ಅರಣ್ಯ ಪರಿಚಯವಿರುವ ಸಮುದಾಯದವರೇ ಮಾರ್ಗ ದರ್ಶಿಗಳಾಗಿ ಇರಲಿದ್ದಾರೆ. ಕಾಡಿನಲ್ಲಿ ಸಂಚರಿಸುವ ಮೂಲಕ ಪಕ್ಷಿ ವೀಕ್ಷಣೆ, ಪ್ರಾಣಿ ವೀಕ್ಷಣೆ, ಕಾಡಿನಲ್ಲಿರುವ ಔಷಧ ಸಸ್ಯ, ಕಾಡಿನ ಜೊತೆ ಸಿದ್ದಿಗಳ ಒಡನಾಟದ ಪರಿಚಯ ಮಾಡಿಕೊಡಲಾಗುತ್ತದೆ. ರಾತ್ರಿ ವೇಳೆ ಸಮುದಾಯದ ಮಹಿಳೆಯರು ಡಮಾಮಿ ನೃತ್ಯ ಮಾಡುವ ಮೂಲಕ ಬಂದ ಪ್ರವಾಸಿಗರನ್ನು ರಂಜಿಸುವ ಕೆಲಸಕ್ಕೆ ಮುಂದಾಗು ತ್ತಾರೆ. ಇದು ಸಮುದಾಯ ಹಾಗೂ ಅರಣ್ಯದ ಸಂಪೂರ್ಣ ಪರಿಚಯ ಸಿಗಲಿದೆ.

ರಾಜ್ಯಾದ್ಯಂತ ವಿಸ್ತರಣೆ:ಕಮ್ಯುನಿಟಿ ಟೂರಿಸಂನ ಪ್ರಾಯೋಗಿಕ ಯೋಜನೆ ಉತ್ತರ ಕನ್ನಡ ದಲ್ಲಿ “ಸಿದ್ದಿ ಕಮ್ಯುನಿಟಿ ಟೂರಿಸಂ’ ಯಶ ಸ್ವಿ ಯಾದ ಬೆನ್ನಲ್ಲಿಯೇ ರಾಜ್ಯಾದ್ಯಂತ ವಿಸ್ತರಿ ಸಲು ರಾಷ್ಟ್ರೀಯ ಗ್ರಾಮೀಣ ಜೀವ ನೋ ಪಾಯದ ಮಿಷನ್‌ ಮುಂದಾಗಿದೆ. ಸಂಜೀವಿನಿ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ಆಯಾ ಪ್ರದೇಶಗಳ ವೈವಿಧ್ಯತೆಗೆ ಅನುಗುಣ ವಾಗಿ ಕಮ್ಯುನಿಟಿ (ಇಕೋ) ಟೂ ರಿಸಂ ಮುನ್ನ ಡೆಸಲಿದ್ದಾರೆ. ಇದಕ್ಕೆ ಅಗತ್ಯವಿ ರುವ ಅನುದಾನ ಹಾಗೂ ತರಬೇತಿಯನ್ನು ನೀಡಲಾಗುತ್ತದೆ.

ವಿವಿಧ ರಾಜ್ಯಗಳಿಂದ ಅಧ್ಯಯನ: ರಾಜ್ಯದ ಸಿದ್ದಿ ಕಮ್ಯುನಿಟಿ ಟೂರಿಸಂ ಕುರಿತು ಗೋವಾ, ಮೇಘಾಲಯ ಸೇರಿ ವಿವಿಧ ರಾಜ್ಯ ಗಳಿಂದ ಎನ್‌ಆರ್‌ಎಲ್‌ಎಂನ ಅಧಿಕಾರಿಗಳು ಕಮ್ಯು ನಿಟಿ ಟೂರಿಸಂನ ಅಧ್ಯಯನ ನಡೆಸಿ ದ್ದು, ಇದೇ ಮಾದರಿಯನ್ನು ತಮ್ಮ ರಾಜ್ಯಗಳಲ್ಲಿ ಪ್ರಾರಂಭಿಸಲು ಚಿಂತನೆ ನಡೆಸುತ್ತಿದ್ದಾರೆ.

ಕಮ್ಯುನಿಟಿ ಟೂರಿಸಂ ಭಾಗವಾಗಿ ಉತ್ತರ ಕನ್ನಡದಲ್ಲಿ ಪ್ರಾರಂಭಿಸಲಾದ ಸಿದ್ದಿ ಟೂರಿಸಂ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ. ಮುಂದೆ ಕಮ್ಯುನಿಟಿ ಟೂರಿಸಂ ಅನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗುತ್ತದೆ. ●ಶ್ರೀವಿದ್ಯಾ ಮಿಶನ್‌ ನಿರ್ದೇಶಕಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಮಿಷನ್‌

ಟೂರಿಸಂ ಸಂಪರ್ಕ

ನಗರದಿಂದ ದೂರ ಉಳಿದು, ಅರಣ್ಯಕ್ಕೆ ಹತ್ತಿರವಾಗಿ ಅರಣ್ಯದೊಂದಿಗೆ ಕ್ಷಣಗಳ ಕಳೆಯ ಬಯಸುವವರು, ಪ್ರಾಣಿ ಪಕ್ಷಿ, ಗಿಡ ಮರಗಳ ಕುರಿತು ಆಸಕ್ತಿ ಹೊಂದಿದವರು https://www. damami.in ವೆಬ್‌ಸೈಟ್‌ನಲ್ಲಿ ಸಿದ್ದಿ ಹೋಂ ಸ್ಟೇಗೆ ಹೋಗಲು ನೊಂದಾಯಿಸಿಕೊಂಡು ನಿಗದಿತ ಶುಲ್ಕ ಪಾವತಿಸಬೇಕು. ಸಿದ್ದಿ ಕಮ್ಯುನಿಟಿ ಟೂರಿಸಂನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಮಹಿಳೆಗೂ ಅತಿಥ್ಯತೆ ಕುರಿತು ತರಬೇತಿ ನೀಡಲಾಗಿದೆ.

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

1-yogi

Sambhal; ಮತ್ತೆ ತೆರೆದ ದೇವಾಲಯ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ: ಸಿಎಂ ಯೋಗಿ

kejriwal-2

Delhi; 38 ಅಭ್ಯರ್ಥಿಗಳ ಫೈನಲ್ ಪಟ್ಟಿ ಪ್ರಕಟಿಸಿದ ಆಪ್

BGV-Mothr

Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು

20-

Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-

Health: ಎಸ್ಸಿ, ಎಸ್ಟಿ: ವಿರಳ ಕಾಯಿಲೆಯಿಂದ ಇನ್ನಷ್ಟು ಸುರಕ್ಷೆ

12-butterfly-park

Bengaluru: ಕೈ ಬೀಸಿ ಕರೆಯುತ್ತಿದೆ ಯಲಹಂಕದ ನೂತನ ಚಿಟ್ಟೆ ಉದ್ಯಾನವನ

7-bng

Bengaluru: ಡಿಸಿಆರ್‌ಇನಲ್ಲಿ ಅವ್ಯವಹಾರ: ಎಸ್‌ಡಿಎ ವಿರುದ್ದ ಕೇಸ್‌

6-bng

Bengaluru: ಬಸ್‌ ಚಾಲಕನ ಮೇಲೆ ಮಹಿಳೆ ಹಲ್ಲೆ

4-bng

Bengaluru: ಉದ್ಯಮಿಯ ಕಾರಿನಲ್ಲಿದ್ದ 50 ಲಕ್ಷ ಕದ್ದ ಚಾಲಕ; 4 ತಾಸಿನಲ್ಲಿ ಸೆರೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-yogi

Sambhal; ಮತ್ತೆ ತೆರೆದ ದೇವಾಲಯ ಇತಿಹಾಸದ ಸತ್ಯವನ್ನು ಪ್ರತಿನಿಧಿಸುತ್ತದೆ: ಸಿಎಂ ಯೋಗಿ

kejriwal-2

Delhi; 38 ಅಭ್ಯರ್ಥಿಗಳ ಫೈನಲ್ ಪಟ್ಟಿ ಪ್ರಕಟಿಸಿದ ಆಪ್

BGV-Mothr

Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು

car-parkala

Sagara: ಪ್ರವಾಸಿ ಬಸ್ ಅಪಘಾತ; 15ಕ್ಕೂ ಹೆಚ್ಚು ಮಂದಿಗೆ ಗಾಯ

20-

Bengaluru: ದೇಶ-ವಿದೇಶಿಗರ ಗಮನ ಸೆಳೆಯುತ್ತಿರುವ ಸಿದ್ದಿ ಕಮ್ಯುನಿಟಿ ಟೂರಿಸಂ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.