ನಿರ್ಬಂಧದ ಜತೆ ಸರಳ ರಂಜಾನ್
Team Udayavani, May 26, 2020, 6:08 AM IST
ಬೆಂಗಳೂರು: ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಮುಸಲ್ಮಾನರು ಸೋಮವಾರ ಸರಳ ರೀತಿಯಲ್ಲಿ ರಂಜಾನ್ ಆಚರಿಸಿದರು. ಹಬ್ಬದ ಸಂಭ್ರಮ ಕಳೆಗುಂದಿತ್ತು. ಆದರೆ. ಕಷ್ಟದಲ್ಲಿರುವ ಬಡವರು, ನಿರ್ಗತಿಕರಿಗೆ ದಾನ ಮಾಡುವ ಮೂಲಕ ಹಬ್ಬದ ಸಾರ್ಥಕತೆ ಮೆರೆಯಲಾಯಿತು. ಕೊರೊನಾ ಆತಂಕದ ನಡುವೆಯೇ ಏ.25ರಂದು ಲಾಕ್‌ಡೌನ್‌ನಲ್ಲಿ ಆರಂಭವಾದ ರಂಜಾನ್ ತಿಂಗಳು ಸೋಂಕು ಹರಡುವಿಕೆಯ ಕಾರ್ವೋಡದಲ್ಲೇ ಮೇ 25ಕ್ಕೆ ಕೊನೆಗೊಂಡಿತು.
ವೈರಸ್ ವಿರುದಟಛಿ ಸಮರ ಸಾರಿ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾ ರದ ಆದೇಶ, ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ಮುಖಂಡರ ಮನವಿಯಂತೆ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಹಬ್ಬದ ಪ್ರಾರ್ಥನೆ (ನಮಾಜ್) ಸಲ್ಲಿಸಿದರು. ನಮಾಜ್ ಸಲ್ಲಿಸುವ ಮತ್ತು ಪರಸ್ಪರ ಹಬ್ಬದ ಶುಭಾಶಯ ಕೋರುವ ಸಂದರ್ಭದಲ್ಲಿ ಸಾಮಾಜಿಕ ಅಂತರದ ನಿಯಮಗಳ ಪಾಲನೆ ಮಾಡಲಾಗಿತ್ತು. ಶುಚಿತ್ವ ಕಾಯ್ದುಕೊಳ್ಳಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಧಾರ್ಮಿಕ ಆಚರಣೆ ನಿರ್ಬಂಧಿಸಿದ ಪರಿಣಾಮ ಜನರು ಈದ್ಗಾ, ಮಸೀದಿ ಮತ್ತು ದರ್ಗಾಗಳಿಗೆ ತೆರಳದೆ ತಮ್ಮ ಕುಟುಂಬದ ಸದಸ್ಯರ ಜತೆ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು.
ವಿಶೇಷ ದುವಾ: ಮನೆಗಳಲ್ಲೇ ಈದ್ ನಮಾಜ್ ನೆರವೇರಿಸಿದ ಮುಸಲ್ಮಾನರು ಕೊರೊನಾ ಮಹಾಮಾರಿ ತೊಲಗಲಿ, ಜನರ ಸಂಕಷ್ಟ ದೂರವಾಗಲಿ ಎಂದು ಅಲ್ಲಾಹನಲ್ಲಿ ವಿಶೇಷ ದುವಾ ಮಾಡಿದರು. ಅಲ್ಲದೇ ದೇಶದಲ್ಲಿ ಮತ್ತು ನಮ್ಮ ನಾಡಿನಲ್ಲಿ ಶಾಂತಿ-ಸಹಬಾಳ್ವೆ ನೆಲೆಸಲು ಮತ್ತು ಸೌಹಾರ್ದ ವಾತಾವರಣ ನಿರ್ಮಾಣವಾಗಲೆಂದು ಬೇಡಿಕೊಳ್ಳಲಾಯಿತು ಎಂದು ಖುದ್ದೂಸ್ ಸಾಬ್ ಈದ್ಗಾ ಬೋರ್ಡ್‌ನ ಟ್ರಸ್ಟೀ ಉಸ್ಮಾನ್ ಶರೀಫ್ ತಿಳಿಸಿದರು.
ರಂಜಾನ್ ದಿನ ಬಿಕೋ ಎನ್ನುತ್ತಿದ್ದ ಈದ್ಗಾ ಮೈದಾನ: ಪ್ರತಿ ವರ್ಷ ಹಬ್ಬದ ದಿನದ ವಿಶೇಷ ಪ್ರಾರ್ಥನೆಗೆ ಈದ್ಗಾ ಮೈದಾನ, ದೊಡ್ಡ ಮಸೀದಿ ಹಾಗೂ ದರ್ಗಾದ ಆವರಣಗಳಲ್ಲಿ ಸಾವಿರಾರು ಮುಸಲ್ಮಾನರು ಸೇರುತ್ತಿದ್ದರು. ಆದರೆ, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಮೂಹಿಕ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಇರುವುದರಿಂದ ಹಾಗೂ ಸರಳ ರೀತಿಯಲ್ಲಿ ಹಬ್ಬ ಆಚರಿಸಿ ಮನೆಗಳಲ್ಲಿ ನಮಾಜ್ ಮಾಡುವಂತೆ ಸರ್ಕಾರದ ಆದೇಶ, ವಕ್ಫ್ ಮಂಡಳಿಯ ಮನವಿಯಂತೆ ಮುಸಲ್ಮಾನರು ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿದರು.
ಇದರಿಂದಾಗಿ ನಗರದ ಪ್ರಮುಖ ಈದ್ ನಮಾಜ್‌ನ ಕೇಂದ್ರಗಳಾದ ಚಾಮರಾಜಪೇಟೆ ಈದ್ಗಾ ಮೈದಾನ, ಖುದ್ದೂಸ್ ಸಾಬ್ ಈದ್ಗಾ ಮೈದಾನ, ಟ್ಯಾನರಿ ರಸ್ತೆ ಈದ್ಗಾ ಮೈದಾನ, ಜಯನಗರ ಈದ್ಗಾ ಮಸೀದಿ, ಸಿಟಿ ಮಾರ್ಕೆಟ್‌ನ ಜಾಮಿಯಾ ಮಸೀದಿ, ಬನ್ನೇರುಘಟ್ಟ ರಸ್ತೆಯ ಬಿಲಾಲ್ ಮಸೀದಿ ಸೇರಿದಂತೆ ಬಹುತೇಕ ಈದ್ಗಾ ಮೈದಾನಗಳು ಬಿಕೋ ಎನ್ನುತ್ತಿದ್ದವು. ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ಈದ್ಗಾ ಮೈದಾನಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.
15 ಸಾವಿರ ಬಿರಿಯಾನಿ: ಲಾಕ್‌ಡೌನ್ ಸಡಿಲಿಕೆ ಬಳಿಕ ಹೊರ ರಾಜ್ಯಗಳಿಗೆ ತೆರಳಲು ಬಯಸಿ ಸರ್ಕಾರದ ಅನುಮತಿಗಾಗಿ ನಗರದ ಅರಮನೆ ಮೈದಾನದಲ್ಲಿ ಕಾದಿರುವ ಉತ್ತರ ಭಾರತದ ಸಾವಿರಾರು ವಲಸೆ ಕಾರ್ಮಿಕರಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡುತ್ತಿರುವ “ನಮ್ಮ ಗೆಳೆಯರ ತಂಡ’ ಹಬ್ಬದ ದಿನ ಈ ಕಾರ್ಮಿಕರು ಸಹ ಸಂಭ್ರಮ ಆಚರಿಸಬೇಕು ಎಂಬ ಉದ್ದೇಶದಿಂದ ಸೋಮವಾರ 15 ಸಾವಿರ ಚಿಕನ್ ಬಿರಿಯಾನಿ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು ಎಂದು ತಂಡದ ಫಹದ್ ಖಾಲಿದ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಕೋವಿಡ್-19 ಪರಿಣಾಮ ಸರ್ಕಾರದ ಆದೇಶ, ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ಮುಖಂ ಡರ ಮನವಿ ಯಂತೆ ಮುಸಲ್ಮಾನರು ಸರಳ ರೀತಿಯಲ್ಲಿ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದ್ದಾರೆ. ವೈರಸ್ ವೇಗವಾಗಿ ಹರಡು ತ್ತಿರುವುದರಿಂದ ಮುಂದಿನ ದಿನಗಳು ನಮ್ಮ ಪಾಲಿಗೆ ಸವಾಲಿನ ದಿನಗಳಾಗಿವೆ. ಕೊರೊನಾ ಮನುಷ್ಯ ಸಮಾಜಕ್ಕೆ ಅಂಟಿ ಕೊಂಡ ಸೋಂಕು. ಇದರ ವಿರುದಟಛಿ ಎಲ್ಲಾ ಜಾತಿ-ಧರ್ಮಗಳು ಒಂದಾಗಿ ಹೋರಾಡಬೇಕು.
-ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಇಮಾಮ್-ಖತೀಬ್, ಸಿಟಿ ಜಾಮೀಯಾ ಮಸೀದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.