ಬೆಂಗಳೂರಿನಲ್ಲಿ ವಿಶೇಷ “ರಿಮ್ಯಾಂಡ್ ಕೋರ್ಟ್’
Team Udayavani, Jul 6, 2020, 5:43 AM IST
ಬೆಂಗಳೂರು: ನ್ಯಾಯಾಲಯದ ಆವರಣದಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸುವ ಸುಲುವಾಗಿ ಆರೋಪಿಗಳು, ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲು ಹೈಕೋರ್ಟ್ ಮೊಟ್ಟ ಮೊದಲ ಬಾರಿಗೆ “ರಿಮ್ಯಾಂಡ್ ಕೋರ್ಟ್’ ಅನ್ನು ಸ್ಥಾಪಿಸಿದೆ. ಬೆಂಗಳೂರಿನ ಗುರುನಾನಕ್ ಭವನದಲ್ಲಿ ಈ ರಿಮ್ಯಾಂಡ್ ಕೋರ್ಟ್ ಕಾರ್ಯಾರಂಭಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಕೋರ್ಟ್‌ಗಳ ಕಾರ್ಯನಿರ್ವಹಣೆಗೆ ರಚಿಸಲಾದ ಮಾರ್ಗಸೂಚಿಗಳ (ಎಒಪಿ) ಅನ್ವಯ ಈ ರಿಮ್ಯಾಂಡ್ ಕೋರ್ಟ್ ಆರಂಭಿಸಲಾಗಿದೆ. ಆರೋಪಿಯನ್ನು ಬಂಧಿಸಿದರೆ, ವಿಚಾರಣಾಧೀನ ಕೈದಿಯನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸ ಬೇಕಾದರೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಈ ರಿಮ್ಯಾಂಡ್ ಕೋರ್ಟ್‌ನಲ್ಲಿ ಕಲಾಪ ನಡೆಸಿ ವಿಚಾರಣೆ ಮಾಡಿ ಬಂಧಿತ ಆರೋಪಿಗಳ ಹಾಗೂ ವಿಚಾರಣಾಧೀನ ಕೈದಿಗಳ ಖುದ್ದು ಹಾಜರಾತಿ ಮತ್ತು ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.
ಬಂಧಿತ ಆರೋಪಿಗಳ ಹಾಗೂ ವಿಚಾರಣಾಧೀನ ಕೈದಿಗಳ ಖುದ್ದು ಹಾಜರಾತಿ ವೇಳೆ ಅನುಸರಿಸಬೇಕಾದ ಎಲ್ಲಾ ಸುರಕ್ಷಿತ ಕ್ರಮಗಳನ್ನು ಈ ರಿಮ್ಯಾಂಡ್ ಕೋಟ್‌ನಲ್ಲಿ ಕೈಗೊಳ್ಳಲಾಗುತ್ತದೆ. ಸರ್ಕಾರಿ ಪ್ರಾಧಿಕಾರಗಳು ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿ ಪಾಲಿಸಿ ವಿಚಾರಣಾಧೀನ ಕೈದಿ ಹಾಗೂ ಬಂಧಿತ ಆರೋಪಿಯನ್ನು ಸುರಕ್ಷಿತವಾಗಿ ರಿಮಾಂಡ್ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ರಿಜಿಸ್ಟ್ರಾರ್ ಜನರಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.