ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ


Team Udayavani, Jun 2, 2020, 6:08 AM IST

rachane rain

ಬೆಂಗಳೂರು: ನಗರದಲ್ಲಿ ಮಳೆ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಬಿಬಿಎಂಪಿ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ , ಬೆಸ್ಕಾಂ,  ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಗರದಲ್ಲಿ ಮಳೆ ಅನಾಹುತ ತಪ್ಪಿಸುವ ಉದ್ದೇಶದಿಂದ ಸಿವಿಲ್‌ ಡಿಫೆನ್ಸ್‌ ನಿಂದ 500 ಜನ  ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು.

ಇವರ ಸಂಪೂರ್ಣ  ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ ಎಂದರು. ಕಂದಾಯ ವಿಭಾಗದಲ್ಲಿರುವ ಕರ್ನಾಟಕ ವಿಪತ್ತು ನಿರ್ವಹಣಾ ತಂಡವನ್ನು ಮಳೆ ಅನಾಹುತ ತಡೆಗೆ ಬಳಸಿ  ಕೊಳ್ಳಲು ಉದ್ದೇಶಿಸಲಾಗಿದೆ. ಎಲ್ಲೆಲ್ಲಿ ಎಷ್ಟು ಮಳೆ ಬೀಳಲಿದೆ, ಎಲ್ಲಿ ಪ್ರವಾಹ ಸೃಷ್ಟಿಯಾಗಲಿದೆ, ಎಷ್ಟು ಪ್ರಮಾಣದಲ್ಲಿ ಮಳೆ ಬೀಳಲಿದೆ, ಯಾವ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು ಎನ್ನುವ ಮಾಹಿತಿ  ಯನ್ನು ಇನ್ನೊಂದು ವಾರದಲ್ಲಿ  ನೀಡಲಾಗುವುದು.

ಇದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯ  ಗಳಿಗೆ ಎಸಿಪಿ ಮಟ್ಟದ ಅಧಿಕಾರಿ ನೇಮಕ ಮಾಡಲಾಗಿದ್ದು, ಇದರಲ್ಲಿ ಬಿಬಿಎಂಪಿ ಜಂಟಿ ಆಯುಕ್ತರು, ಅರಣ್ಯ ವಿಭಾಗದ ಅಧಿಕಾರಿಗಳು, ಬೆಸ್ಕಾಂ, ಜಲಮಂಡಳಿ ಸೇರಿ ಒಂದು ತಂಡ ರಚನೆ ಮಾಡಲಾಗಿದೆ ಎಂದರು. ಪ್ರತಿದಿನ ಹವಾಮಾನ ವರದಿ ಬಂದ ಕೂಡಲೇ ಮಳೆ ಕುರಿತು ಕಂದಾಯ ಇಲಾಖೆಯಿಂದ ನೇರ ಮೆಸೇಜ್‌ ಕಳುಹಿಸಲಾಗುವುದು.

ಬೆಂಗಳೂರಿನಲ್ಲಿ ಈಗಾಗಲೇ 210 ಪ್ರವಾಹ ಪೀಡಿತ  ಪ್ರದೇಶಗಳನ್ನು ಗುರುತಿಸಲಾಗಿದೆ. ಇನ್ನು ವಿಪತ್ತು ನಿರ್ವಹಣಾ ತಂಡದಿಂದ 21 ರಾಜಕಾಲುವೆಗಳಲ್ಲಿ ಸೆನ್ಸಾರ್‌ ಅಳವಡಿಕೆ ಮಾಡಲಾಗಿದ್ದು, ಇಲ್ಲಿ ಶೇ.75 ರಷ್ಟು ನೀರು ತುಂಬಿದರೂ ಎಚ್ಚರಿಕೆಯ ಸಂದೇಶ ರವಾನೆ  ಯಾಗುತ್ತದೆ. ಸೆನ್ಸಾರ್‌  ಸಂದೇಶದ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ರೀತಿಯ ಸೆನ್ಸಾರ್‌ ಅಳವಡಿಕೆಯನ್ನು ಇನ್ನು 200ಕಡೆಗಳಲ್ಲಿ ಅಳವಡಿಸುವ ಚಿಂತನೆ ಇದೆ ಎಂದರು. ನಗರದಲ್ಲಿ ಮರಗಳು ಧರೆಗುರುಳಿದರೆ ಪೊಲೀಸರು ಬ್ಯಾರಿಕೇಡ್‌ ವ್ಯವಸ್ಥೆ  ಮಾಡಬೇಕು. ವಿದ್ಯುತ್‌ ತಂತಿಗಳ ಅನಾಹುತ ಹಾಗೂ ಅವಘಡ ತಪ್ಪಿಸುವ ಉದ್ದೇಶದಿಂದ ಈ ಕ್ರಮಕ್ಕೆ ಸೂಚಿಸಲಾಗಿದೆ.

ರಾತ್ರಿ ವೇಳೆ ಮರಕಡಿಯಲು ಪ್ಲೆಡ್‌ಲೈಟ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು. ಮೇಯರ್‌  ಎಂ.ಗೌತಮ್‌ಕುಮಾರ್‌, ಉಪಮೇ ಯರ್‌ ರಾಮಮೋಹನರಾಜ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ವಿಶೇಷ ಆಯುಕ್ತ (ಆಡಳಿತ) ಅನುºಕುಮಾರ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌, ರಾಜ್ಯ ನೈಸರ್ಗಿಕ  ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇ ಶಕ ಡಾ. ಶ್ರೀನಿವಾಸ್‌ ರೆಡ್ಡಿ, ಬೆಸ್ಕಾಂ ವ್ಯವಸಾ §ಪಕ ನಿರ್ದೇಶಕ ರಾಜೇಶ್‌ ಗೌಡ, ಸಂಚಾರ ವಿಭಾ  ಗದ ಜಂಟಿ ಆಯುಕ್ತ ರವಿಕಾಂತೆ ಗೌಡ ಇತರರಿದ್ದರು.

ಟಾಪ್ ನ್ಯೂಸ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Tirupathi

TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Himachal-Bhavan

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

Russia-Putin

‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ದಾಳಿ ಎಚ್ಚರಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Accident: ಆರೋಪಿ ಸೆರೆಗೆ 200 ಕ್ಯಾಮೆರಾ ಪರಿಶೀಲನೆ

Bengaluru: ಅಪಘಾತದಲ್ಲಿ ಬೈಕ್‌ ಸವಾರ ಸಾವು; ಬಸ್‌ ಚಾಲಕನಿಗೆ 15 ತಿಂಗಳು ಜೈಲು

Bengaluru: ಅಪಘಾತದಲ್ಲಿ ಬೈಕ್‌ ಸವಾರ ಸಾವು; ಬಸ್‌ ಚಾಲಕನಿಗೆ 15 ತಿಂಗಳು ಜೈಲು

Bengaluru: ಪತಿಯಿಂದ ಭಾರೀ ಸಾಲ; ಪತ್ನಿ ಆತ್ಮಹತ್ಯೆ

Bengaluru: ಪತಿಯಿಂದ ಭಾರೀ ಸಾಲ; ಪತ್ನಿ ಆತ್ಮಹತ್ಯೆ

Tragic: ಕ್ರಿಕೆಟ್‌ ತಂಡಕ್ಕೆ ಆಯ್ಕೆ ಆಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Tragic: ಕ್ರಿಕೆಟ್‌ ತಂಡಕ್ಕೆ ಆಯ್ಕೆ ಆಗದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

5

Mangaluru: ಪ್ಲಾಸ್ಟಿಕ್‌ ಉತ್ಪಾದನ ಘಟಕ, ಮಾರಾಟದ ಮೇಲೆ ನಿಗಾ

4

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

3

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

2

Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.

1

Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.