ರಾಜ್ಯ ವಿವಿ ಮತ್ತು ಇತರೆ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಗೆ ಅಂಕಿತ
Team Udayavani, Jun 20, 2020, 5:47 AM IST
ಬೆಂಗಳೂರು: ಇತ್ತೀಚೆಗಷ್ಟೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಇತರೆ ಕಾನೂನು(ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ವಿ.ಆರ್.ವಾಲಾ ಸಮ್ಮಿತಿ ಸೂಚಿಸಿದ್ದಾರೆ. ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯವೇ ದೂರ ಶಿಕ್ಷಣದ ಕೋರ್ಸ್ ನೀಡಬೇಕು. ಬೇರೆ ಯಾವ ವಿಶ್ವವಿದ್ಯಾಲಯವೂ ದೂರ ಶಿಕ್ಷಣದ ಕೋರ್ಸ್ ನೀಡು ವಂತಿಲ್ಲ.
ಬೆಂಗಳೂರಿನಲ್ಲಿರುವ ಗೃಹ ವಿಜ್ಞಾನ ಕಾಲೇಜಿಗೆ ಸ್ವಯತ್ತ ಸ್ಥಾನಮಾನ ನೀಡಿ, ನೃಪತುಂಗ ವಿಶ್ವವಿದ್ಯಾಲಯ ರೂಪಿಸುವ ಬಗ್ಗೆಯೂ ಈ ಕಾಯ್ದೆಯಲ್ಲಿದೆ. ಅಲ್ಲೆದೆ, ರಾಜ್ಯದಲ್ಲಿ ಹೊಸ ವಿವಿಗಳು ರಚನೆ ಸಂದರ್ಭದಲ್ಲಿ ವಿಶೇಷಾಧಿಕಾರಿ ನೇಮಕ, ಮೊದಲ ಕುಲಪತಿ ನೇಮಕದ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರಲಿದೆ. ಮಹಾರಾಣಿ ಕ್ಲಸ್ಟರ್ ವಿವಿ ಮತ್ತು ಮಂಡ್ಯ ವಿವಿಗೆ ಮೊದಲ ಕುಲಪತಿಯನ್ನು ಸರ್ಕಾರವೇ ನೇಮಿಸಲಿದೆ.
ಹಾಗೆಯೇ ಐಎಎಸ್ ಅಥವಾ ರಾಜ್ಯ ಸರ್ಕಾರದ ಗ್ರೂಪ್ ಎ ಹುದ್ದೆಯ ಹಿರಿಯ ಅಧಿಕಾರಿಯನ್ನು ಕುಲ ಸಚಿವರನ್ನಾಗಿ ನೇಮಿಸಲಿದೆ. ವಿಶ್ವವಿದ್ಯಾಲಯಕ್ಕೆ ಉಪ ಪ್ರಧಾನ ಲೆಕ್ಕಾಧಿಕಾರಿ ದರ್ಜೆ ಅಧಿಕಾರಿಯನ್ನು ನೇಮಿಸಬಹುದು ಅಥವಾ ವಿವಿ ಕುಲಾಧಿಪತಿಗಳು ತತ್ಸಮಾನ ಅರ್ಹತೆ ಹಣಕಾಸು ಅಧಿಕಾರಿಯನ್ನು ನೇಮಿಸಬಹುದು.
ಹಾಗೆಯೇ ಸಿಂಡಿಕೇಟ್ ಸದಸ್ಯರ ನೇಮಕ, ಡೀನ್‌ಗಳ ಅವಧಿ ಸಹಿತವಾಗಿ ಹಲವು ಅಂಶಗಳನ್ನು ಈ ಕಾಯ್ದೆಯಲ್ಲಿ ಉಲ್ಲೇಖೀಸಲಾಗಿದೆ. ಬೆಂಗಳೂರು ಕೇಂದ್ರ ವಿವಿ ಹೆಸರನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಬದಲಿಸಲಾಗಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿರುವುದರಿಂದ ತಿದ್ದುಪಡಿ ಕಾಯ್ದೆಯಲ್ಲಿ ಸರ್ಕಾರ ಪ್ರತಿಪಾದಿಸಿರುವ ಎಲ್ಲಾ ಅಂಶಗಳು ಅನುಷ್ಠಾನಕ್ಕೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.