ರಾಜ್ಯ ಯೋಗಿಗಳು;ಕರ್ನಾಟಕದ ಕೆಲವು ಸಾಧಕರ ಕಿರು ಪರಿಚಯ
Team Udayavani, Jun 21, 2019, 11:06 AM IST
ಕರ್ನಾಟಕಕ್ಕೆ ಅದಮ್ಯವಾದ ಯೋಗ ಇತಿಹಾಸವಿದೆ. ಹಿಂದಿನಂತೆ, ಈಗಲೂ ಅನೇಕ ಯೋಗ ಸಾಧಕರು, ಶಿಕ್ಷಕರು ಈ ವಿದ್ಯೆಯನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವ ಮಹೋನ್ನತ ಕಾರ್ಯದಲ್ಲಿ ತೊಡಗಿದ್ದಾರೆ. ಅಂಥ ಆಯ್ದ ಕೆಲವು ಸಾಧಕರ ಕಿರು ಪರಿಚಯ ಇಲ್ಲಿದೆ..
ವಿಯಟ್ನಾಂ ಯೋಗ: ಯೋಗದಿಂದ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ಹಾರಿದ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ ಸಂತೋಷ ಉಮಚಗಿ,ಧಾರವಾಡದ ದೇವರಾಜ ದೇವಾಡಿಗ ಹಾಗೂ ಕುಂದಗೋಳದ ಮಂಜುನಾಥ ಕಲ್ಮಠ ಎಂಬ ಯೋಗಪಟುಗಳು ವಿಯೆಟ್ನಾಂ ದೇಶದಲ್ಲಿ ಆರಂಭಿಸಿರುವ “ಶುಭ ಯೋಗ’ ಹೆಸರಿನ ಎರಡು ಕೇಂದ್ರಗಳು ಆ ದೇಶದ ಜನರ ಪ್ರೀತಿಗೆ ಪಾತ್ರವಾಗಿವೆ. ಸದ್ಯ ಈ ಎರಡೂ ಕೇಂದ್ರದಲ್ಲಿ ದಿನ ನಿತ್ಯ 600 ಜನ ಯೋಗಾಭ್ಯಾಸಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರಧಾನಿಯ ಸಲಹೆಗಾರ: ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಸಲಹೆಗಾರರಾದ ಎಚ್.ಆರ್.ನಾಗೇಂದ್ರ ಕನ‚°ಡಿಗರೇ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ರೂವಾರಿಯೂ ಆದ ಇವರು, ಯೋಗ ಕುರಿತು 35ಕ್ಕೂ ಅಧಿಕ ಕೃತಿಗಳನ್ನು ಬರೆದಿದ್ದಾರೆ. ಯೋಗವನ್ನು ಜಾಗತಿಕವಾಗಿವಿಸ್ತರಿಸುವುದರಲ್ಲಿ ತಮ್ಮದೇ ಕಾಣೆಕೆ ನೀಡಿದ್ದಾರೆ. ಕ್ಯಾನ್ಸರ್‌ನಂಥ ಮಾರಣಾಂತಿಕ ರೋಗಗಳಿಗೂ ಯೋಗ ಚಿಕಿತ್ಸೆ ನೀಡಿದ ಖ್ಯಾತಿ. ಯೋಗ ಸಂಬಂಧಿತ ಇವರ ಸೇವೆ ಪರಿಗಣಿಸಿ, 2016ರಲ್ಲಿ ಇವರಿಗೆ “ಪದ್ಮಶ್ರೀ’ ಪುರಸ್ಕಾರವನ್ನೂ ನೀಡಲಾಗಿದೆ.
ಶ್ವಾಸ ಗುರುವಿನ ಸಂಗ:“ಶ್ವಾಸ ಗುರು’ ಎಂದೇ ಹೆಸರಾಗಿರುವ ಸ್ವಾಮಿ ವಚನಾನಂದ ಅವರು ಬಹಳ ಚಿಕ್ಕ ವಯಸ್ಸಿಗೇ ಸನ್ಯಾಸತ್ವವನ್ನು ಸ್ವೀಕರಿಸಿದವರು. ಉಸಿರಿನ ಮೇಲಿನ ನಿಯಂತ್ರಣದಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಸಾಧ್ಯ ಎಂಬುದನ್ನು ಆಗಲೇ ಅವರು ಕಲಿತಿದ್ದರು. “ಶ್ವಾಸ’ ಎನ್ನುವ ಎನ್‌ಜಿಓ ಮೂಲಕ ಭಾರತ ಹಾಗೂ ವಿದೇಶಗಳಲ್ಲಿ ಅನೇಕ ಯೋಗ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಮೂಲತಃ ಅಥಣಿಯವರಾದ ವಚನಾನಂದ ಅವರು ಯೋಗ ಸಂಸ್ಕೃತ ಅಧ್ಯಯನದ ಬಳಿಕ ಹಿಮಾಲಯಕ್ಕೆ ತೆರಳಿ ಪತಂಜಲಿ ಮಹರ್ಷಿಯ ಅಷ್ಟಾಂಗ ಯೋಗವನ್ನು ಕರಗತ ಮಾಡಿಕೊಂಡಿದ್ದರು.
ಯೋಗ ಸಾಧಕನ ಸಾಧನೆ:ಯೋಗ ಗುರು ಧೋಂಡಿರಾಮ ಚಾಂದಿವಾಲೆ 13 ವರ್ಷಗಳಿಂದ ಬೀದರ್‌ನಲ್ಲಿ ಉಚಿತ ಯೋಗ ತರಬೇತಿ ನೀಡುವ ಮೂಲಕ ಅನೇಕರ ಸಮಸ್ಯೆಗಳಿಗೆ ಮುಕ್ತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಗರದಲ್ಲಿ ನಿತ್ಯ ಯೋಗ ತರಬೇತಿನಡೆಯುತ್ತಿದ್ದು, 13 ವರ್ಷಗಳಲ್ಲಿ, 22 ಸಾವಿರ ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ಅಲ್ಲದೆ, ಇವರ ಮೂಲಕ ತರಬೇತಿ ಪಡೆದ ಇತರೆ ನಾಲ್ವರು ಕೂಡ ನಗರ, ಗ್ರಾಮೀಣ ಪ್ರದೇಶಕ್ಕೆ ತೆರಳಿ ತರಬೇತಿ ನೀಡುತ್ತಿದ್ದಾರೆ.
ಗುರು ಇಲ್ಲದೇ ಯೋಗ ಗುರಿ ಸಾಧಿಸಿದರು : ಡಾ| ಬಾಬು ನಾಗೂರ ವಿಜಯಪುರ ಜಿಲ್ಲೆಯ ಜನರಿಗೆ ಕ್ರೀಡಾ ರಂಗದಲ್ಲಿ ಎಲ್ಲರಿಗೂ ಚಿರಪರಿಚಿತ ಹೆಸರು. 40 ವರ್ಷಗಳ ಹಿಂದೆ ಫುಟ್‌ಬಾಲ್ ಆಟಗಾರರಾಗಿದ್ದ ನಾಗೂರ ಅವರ ಬೀದಿಯ ಗೋಡೆಯಲ್ಲಿದ್ದ ಯೋಗ ಭಿತ್ತಿಪತ್ರದಿಂದ ಸ್ಫೂರ್ತಿಗೊಂಡು ಗುರು ಇಲ್ಲದೇ ಯೋಗ ಸಾಧನೆ ಮಾಡಿದರು. ಚೀನಾ, ಮಲೇಷಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಜರುಗಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಹಾಗೂ ನಗದು ಬಹುಮಾನ ಪಡೆದಿದ್ದಾರೆ. ಕಳೆದ ಮೇ ತಿಂಗಳಲ್ಲಿ ಥೈಲ್ಯಾಂಡ್ ದೇಶದಲ್ಲಿ ಜರುಗಿದ ಅಂತಾರಾಷ್ಟ್ರೀಯ ಯೋಗ ಅಥ್ಲೆಟಿಕ್ ಸ್ಪರ್ಧೆಯ ಎರಡು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಇವರ ಯೋಗ ಸಾಧನೆಗೆ ಸಾಕ್ಷಿ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಯೋಗ ಡಿಪ್ಲೊಮಾ ಕೋರ್ಸ್ ಆರಂಭಿಸಿ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಯೋಗಾಂದೋಲಕ: ಯೋಗ ಕಲಿಕೆಯನ್ನು ಆಂದೋಲ ನವನ್ನಾಗಿಸಿದ ಕೀರ್ತಿ ಕೋಲಾರ ಜಿಲ್ಲೆಯ ಕಾಮಧೇನಹಳ್ಳಿ ಚೌಡಪ್ಪರಿಗೆ ಸಲ್ಲುತ್ತದೆ. ಮಲ್ಲಾಡಹಳ್ಳಿ ಶ್ರೀರಾಘವೇಂದ್ರಸ್ವಾಮಿಜಿ ಮಠಕ್ಕೆ ಹೋಗಿ ಯೋಗಾಭ್ಯಾಸವನ್ನು ಶಿಸ್ತುಬದ್ಧವಾಗಿ ಕಲಿತು ವಾಪಸ್ಸಾದ ಚೌಡಪ್ಪ, ಡಾ.ಕೆ. ಎಂ.ಜೆ.ಮೌನಿ ಮತ್ತು ಡಾ.ಕೃಷ್ಣಮೂರ್ತಿ ಇತರರೊಂದಿಗೆ ಕೂಡಿ ಕಾಮಧೇನು ಯೋಗಾಶ್ರಮ ಸ್ಥಾಪಿಸಿ ಯೋಗಾಭ್ಯಾಸ ತರಗತಿಗಳನ್ನು ಆರಂಭಿಸಿದ್ದರು.
ಜಲಯೋಗ ಸಾಧಕ:ಅಪ್ರತಿಮ ಯೋಗಪಟುವಾಗಿ ಗುರುತಿಸಿಕೊಂಡಿರುವ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದ್ರವನಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಜಲಯೋಗದಲ್ಲೂ ಅಪ್ರತಿಮ ಸಾಧನೆ ಮಾಡಿದವರು. 18ನೇ ವಯಸ್ಸಿನಲ್ಲೇ ಹಿಮಾಲಯದ ಯೋಗಿಯೊಬ್ಬರಿಂದ ಪ್ರೇರಿತರಾಗಿ ಯೋಗ ಕಲಿಯಲು ಆರಂಭಿಸಿದರು. ಈಗ ಕಳೆದ ಹದಿನೈದು ವರ್ಷಗಳಿಂದ ಜಲಯೋಗಕ್ಕೆ ಆಕರ್ಷಿತರಾಗಿ ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Belthangady: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಬಲಿಪೂಜೆ
Madikeri: ವಾಹನ ಅಪಘಾತಕ್ಕೀಡಾದ ವ್ಯಕ್ತಿ ಸಾವು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ: ಡಿ. 28 ರಂದು ಕೋರ್ಟ್ ತೀರ್ಪು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.