ಪತಿಯನ್ನೇ ಅಪಹರಿಸಲು ಸುಪಾರಿ
Team Udayavani, Jun 13, 2020, 5:22 AM IST
ಬೆಂಗಳೂರು: ಎರಡನೇ ಮದುವೆಯಾದ ಎಂಬ ಕಾರಣಕ್ಕೆ ತನ್ನ ಪತಿಯನ್ನೇ ಅಪಹರಿಸಲು ಸುಪಾರಿ ಕೊಟ್ಟಿದ್ದ ಮೊದಲ ಪತ್ನಿ ಪ್ರಕರಣದ ಭೇದಿಸಿರುವ ಉತ್ತರ ವಿಭಾಗದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಸರುಘಟ್ಟದ ಅಭಿಷೇಕ್ (26), ನಾಗಸಂದ್ರದ ಭರತ್ (25), ಜೆ.ಪಿ.ನಗರದ ಪ್ರಕಾಶ್ (22) ಹಾಗೂ ಬ್ಯಾಡರಹಳ್ಳಿಯ ಚೆಲುವಮೂರ್ತಿ (22) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆಯಲಾಗಿದ್ದು, ಇತರೆ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಜೂ.7ರಂದು ಆರೋಪಿಗಳು ಶಾಹೀದ್ ಶೇಖ್ ಎಂಬುವರನ್ನು ಅಪಹರಿಸಿದ್ದರು ಎಂದು ಬಾಗಲಗುಂಟೆ ಪೊಲೀಸರು ಹೇಳಿದರು. ಶಾಹೀದ್ ಶೇಖ್ ಕಟ್ಟಡ ನಿರ್ಮಾಣದ ಗುತ್ತಿಗೆದಾರರಾಗಿದ್ದು, ಪತ್ನಿ ರೋಮಾ ಶೇಖ್ ಜತೆ ಮಾರತ್ತಹಳ್ಳಿಯಲ್ಲಿ ವಾಸವಾಗಿದ್ದರು. ಮದು ವೆಗೂ ಮೊದಲೇ ಶಾಹೀದ್ ಗೆ ರತ್ನಾ ಕಾತುಮ್ ಎಂಬಾಕೆ ಜತೆ ಸ್ನೇಹವಿತ್ತು. ಮೊದಲನೇ ಪತ್ನಿ ರೋಮಾ ಕ್ಷುಲ್ಲಕ ವಿಚಾರಕ್ಕೆ ಪತಿ ಶಾಹಿದ್ ಜತೆ ಗಲಾಟೆ ಮಾಡುತ್ತಿದ್ದಳು. ಪತಿಯ ವರ್ತನೆಯಿಂದ ಬೇಸತ್ತಿದ್ದ ಶಾಹೀದ್ ರತ್ನಾ ಕಾತುಮ್ ಜತೆ ಎರಡನೇ ಮದುವೆಯಾಗಿದ್ದ.
ಮೊದಲನೇ ಪತ್ನಿಗೆ ಸೇರಿದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ದು ಎರಡನೇ ಪತ್ನಿಗೆ ಕೊಟ್ಟಿದ್ದ. ಅದೇ ವಿಚಾರಕ್ಕೆ ರೋಮಾ ತನ್ನ ಪತ್ನಿ ಶಾಹಿದ್ ಮೇಲೆ ಆಕ್ರೋಶಗೊಂಡಿದ್ದಳು. ಹೇಗಾದರೂ ಮಾಡಿ ಪತಿಯನ್ನು ಆಕೆಯಿಂದ ದೂರ ಮಾಡಬೇಕೆಂದು ನಿರ್ಧರಿಸಿದ್ದ ರೋಮಾ ಶೇಖ್ ಅಪಹರಣ ಮಾಡಿಸಲು ಸಲ್ಮಾನ್ ಎಂಬಾತನಿಗೆ ಸುಪಾರಿ ನೀಡಿದ್ದಳು.
ಪತಿಯನ್ನು ಅಪಹರಿಸಿ ಪ್ರಕರಣವನ್ನು ರತ್ನಾಳ ತಲೆಗೆ ಕಟ್ಟುವ ಉದ್ದೇಶ ಹೊಂದಿದ್ದರು. ಶಾಹಿದ್ ತನ್ನ ಸ್ನೇಹಿತನ ಜತೆ ಜೂ. 7 ರಂದು ಎಂಇಐ ಬಡಾವಣೆಯಲ್ಲಿ ತರಕಾರಿ ತರಲು ಹೋಗಿದ್ದರು. ಈ ವೇಳೆ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಶಾಹಿದ್‌ನನ್ನು ಅಪಹರಿಸಿ ಮಾರಕಾಸOಉ ಗಳಿಂದ ಹಲ್ಲೆ ನಡೆಸಿದ್ದರು. ರೋಮಾ ಸೂಚನೆಯಂತೆ 2ನೇ ಪತ್ನಿ ರತ್ನಾಳಿಗೆ ಕರೆ ಮಾಡಿ, 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ರತ್ನಾ ಕೊಟ್ಟ ದೂರಿನ ಮೇರೆಗೆ ಕಾರ್ಯಾ ಚರಣೆಗಿಳಿದ ಪೊಲೀಸರು ಆರೋಪಿಗಳ ಮೊಬೈಲ್ ಟವರ್‌ಆಧಾರದ ಮೇಲೆ ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಆರೋಪಿಗಳು ಹಾಸನದ ಸಾರಾಪುರದಲ್ಲಿರುವ ಸುಳಿವು ಸಿಕ್ಕಿತ್ತು. ಮಾಹಿತಿ ಆಧರಿಸಿ ಸಾರಾಪುರ ತೋಟದ ಮನೆ ಯೊಂದರಲ್ಲಿ ಅಕ್ರಮ ಬಂಧನದಲಿಟ್ಟಿದ್ದ ಶಾಹೀದ್ನನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಸುಪಾರಿ ಕೊಟ್ಟಿದ್ದ ರೋಮಾ ಬಂಧನಕ್ಕೂ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.