ಶಂಕಿತರ “ಬಂಧನ’ವೇ ಹೋಟೆಲ್‌ಗಳಿಗೆ ವರ!
Team Udayavani, May 11, 2020, 4:42 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರಕ್ಕೆ ಬಂದಿಳಿಯಲಿರುವ ಅನಿವಾಸಿ ಕನ್ನಡಿಗರ ಪಾಲಿಗೆ ಚಲನ-ವಲನ ನಿರ್ಬಂಧಿಸುವ “ಕ್ವಾರಂಟೈನ್’ ಶಿಕ್ಷೆಯಾದರೆ, ಅವರನ್ನು ಸ್ವಾಗತಿಸಲು ಸಿದ್ಧಗೊಂಡ ಸ್ಟಾರ್ ಹೋಟೆಲ್ ಗಳಿಗೆ ಅದೇ ಕ್ವಾರಂಟೈನ್ ವರವಾಗಿದೆ!
ಸದ್ಯ ನಗರದಲ್ಲಿ ಕೋವಿಡ್ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ನಗರದ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ಸುದೀರ್ಘ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಹೋಟೆಲ್‌ಗಳಿಗೆ ತಕ್ಕಮಟ್ಟಿಗೆ ಆದಾಯ ಹರಿದುಬರುತ್ತಿದೆ. ಸಾಮಾನ್ಯವಾಗಿ ತಾರಾ ಹೋಟೆಲ್‌ಗಳಲ್ಲಿ ದಿನಕ್ಕೆ 3-4 ಸಾವಿರ ರೂ. ಬಾಡಿಗೆ ಇರುತ್ತದೆ. ಆದರೆ, ಒಂದೂವರೆ ತಿಂಗಳಿಂದ ಗ್ರಾಹಕರಿಲ್ಲದೆ ಐಷಾರಾಮಿ ಹೋಟೆಲ್‌ಗಳು ಕಂಗಾಲಾಗಿದ್ದವು. ಈಗ ನಿತ್ಯ 1,200 ರೂ. ದರದಲ್ಲಿ “ಕ್ವಾರಂಟೈನ್ ಅತಿಥಿ’ಗಳು ಆಗಮಿಸುತ್ತಿದ್ದಾರೆ. ಅಂದಾಜು 7 ಸಾವಿರಕ್ಕೂ ಹೆಚ್ಚು ಜನ ಬೆಂಗಳೂರು ಹಾಗೂ ಬೆಂಗಳೂರು ಹೊರವಲಯದ ಫೈವ್‌ಸ್ಟಾರ್, ತ್ರಿಸ್ಟಾರ್ ಸೇರಿದಂತೆ ಅವರ ಆರ್ಥಿಕ ಅನುಕೂಲಕ್ಕೆ ಅನುಗುಣವಾಗಿ ಹೋಟೆಲ್‌ಗಳನ್ನು ಆಯ್ಕೆ
ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಇದರಿಂದ ಕೆಲವು (ವಸತಿ ವ್ಯವಸ್ಥೆ ಇರುವ) ಹೋಟೆಲ್, ಲಾಡ್ಜ್ಗಳ ಮಾಲಿಕರಿಗೆ ಮರು ಭೂಮಿಯಲ್ಲಿ ಒಯಾಸಿಸ್ ಕಂಡಂತಾಗಿದೆ.
ಸವಾಲೂ ಕೂಡ: ಈ ರೀತಿ ಹೋಟೆಲ್‌ಗಳಲ್ಲಿ ಕೋವಿಡ್ ಶಂಕಿತರು ಹಾಗೂ ಕೋವಿಡ್ ಸೋಂಕಿನ ಸಂಪರ್ಕಿತರನ್ನು ಕ್ವಾರಂಟೈನ್ ಮಾಡುವುದು ಸವಾಲಿನ ಕೆಲಸವೂ ಹೌದು.
ರೂಮ್‌ಗಳಲ್ಲಿ ಬಳಸಿದ ಬೆಡ್‌ಶೀಟ್, ಊಟಕ್ಕೆ ಬಳಸಿದ ವಸ್ತು ಹಾಗೂ ರೂಮ್ ಸ್ವಚ್ಛತೆ ಸವಾಲಿನ ಕೆಲಸ. ಅಲ್ಲದೆ, ನಿರ್ದಿಷ್ಟ ಹೋಟೆಲ್‌ಗಳನ್ನು ಕ್ವಾರಂಟೈನ್‌ಗೆ ಬಳಸಲಾಗಿತ್ತು ಎಂದು ತಿಳಿದು ಬಂದರೆ ಮುಂದಿನ ದಿನಗಳಲ್ಲಿ ಈ ಹೋಟೆಲ್‌ಗೆ ಗ್ರಾಹಕರು ಬರುವ ಸಾಧ್ಯತೆ ತೀರಾ ಕಡಿಮೆ. ಅಲ್ಲದೆ, ಇತ್ತೀಚೆಗೆ ಶಿವಾಜಿನಗರದ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್‌ಗೆ ಒಪ್ಪಿಗೆ ನೀಡಿದ್ದ ಹೋಟೆಲ್‌ನಲ್ಲಿದ್ದ ಒಬ್ಬ ಸಹಾಯಕ ಸಿಬ್ಬಂದಿಗೂ ಕೋವಿಡ್ ಸೋಂಕು ತಗುಲಿದ್ದು, ಸಹಜವಾಗಿಯೇ ಆತಂಕ ಹೆಚ್ಚಾಗಿದೆ. ನಗರದ ಹೊರವಲಯಗಳಲ್ಲಿನ ಕೆಲವು ಪಿಜಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಪಾಲಿಕೆ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ವ್ಯವಸ್ಥೆಗೆ ಬಳಸಿಕೊಂಡಿದೆ.
ಸಣ್ಣ ಹೋಟೆಲ್‌ಗಳಿಗೆ ತೀವ್ರ ಆರ್ಥಿಕ ಸಂಕಷ್ಟ: ಲಾಕ್‌ಡೌನ್‌ನಿಂದ ಸಣ್ಣ ಹೋಟೆಲ್‌ಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ರಾಜ್ಯ ಹೋಟಲ್ ಉದ್ಯಮಿಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಹೆಬ್ಟಾರ್, ನಗರದಲ್ಲಿ ಅಂದಾಜು 5 ಸಾವಿರ ಹಾಗೂ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಲಾಕ್‌ಡೌನ್‌ನಿಂದ ಈಗಾಗಲೇ ಸಂಕಷ್ಟ ಅನುಭವಿಸಿದ್ದು, ಈಗ ಕಾರ್ಮಿಕರ ಕೊರತೆ ಸೃಷ್ಟಿಯಾಗಿದೆ.
ಹೋಟೆಲ್‌ಗಳನ್ನು ಕೋವಿಡ್ ಕ್ವಾರಂಟೈನ್ ಕೇಂದ್ರಗಳಂತೆ ಬಳಸಿಕೊಳ್ಳಲಾಗುತ್ತಿದೆ. ಹೊರರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕೇಂದ್ರ ವ್ಯವಸ್ಥೆಯೂ ಇದ್ದು, ಅವರಿಗೆ
ಬೇಡವಾದರೆ ಹೋಟೆಲ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.
ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
– ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.