ಕೃಷಿ ಮೇಳದಲ್ಲಿ ದುಬಾರಿ ಬೆಲೆ ಬಗ್ಗೆ ಚರ್ಚೆ; ಮಳವಳ್ಳಿಯ ಹಳ್ಳಿಕಾರ್ ಹೋರಿಗೇಕೆ ಕೋಟಿ ರೂ.?
ಬರೋಬ್ಬರಿ 700 ಕೆ.ಜಿ.ಗೂ ಹೆಚ್ಚಿನ ತೂಕವನ್ನು ಹೊಂದಿದೆ. "ಕೃಷ್ಣ' ಎಂದು ಹೆಸರಿಡಲಾಗಿದೆ ಎಂದರು.
Team Udayavani, Nov 12, 2021, 1:27 PM IST
ಬೆಂಗಳೂರು: ಕೃಷಿ ಮೇಳದಲ್ಲಿ ಗುರುವಾರ ಮಳವಳ್ಳಿಯ ಹಳ್ಳಿಕಾರ್ ಹೋರಿಯದ್ದೇ ದರ್ಬಾರ್… ಹೌದು, ಜಿಟಿಜಿಟಿ ಮಳೆಯ ನಡುವೆಯೂ ಆರಂಭವಾದ ಕೃಷಿ ಮೇಳದಲ್ಲಿ ಮಳವಳ್ಳಿಯ ಹಳ್ಳಿಕಾರ್ ಹೋರಿಯದ್ದೇ ಮಾತಾಗಿತ್ತು. ಬರೋಬ್ಬರಿ ಒಂದು ಕೋಟಿ ರೂ. ಬೆಲೆಯ ಹೋರಿಯಾಗಿದ್ದರಿಂದ ಮೇಳಕ್ಕೆ ಆಗಮಿಸಿದ್ದ ರೈತರು ಹಾಗೂ ಸಾರ್ವ ಜನಿಕರ ಚಿತ್ತ ಹೋರಿಯತ್ತ ನೆಟ್ಟಿತ್ತು.
ಮಳೆ ಸುರಿಯುತ್ತಿದ್ದರೂ ಹೋರಿ ಮಳಿಗೆ ಮುಂಭಾಗ ಮಾತ್ರ ಜನ ಗಿಜಿಗಿಜಿ ಎನ್ನುತ್ತಿದ್ದರು. ಅದರ ಮೈಕಟ್ಟು ಹಾಗೂ ಕೋಟಿ ರೂ. ಬೆಲೆ ಬಾಳುವ ಹೋರಿ ಎಂಬ ಕಾರಣದಿಂದ ನೋಡುಗರು ಸೆಲ್ಫಿಗೆ ಮುಗಿಬಿದ್ದರು. ಈ ಹೋರಿಗೆ ಸವಾಲು ನೀಡಲು ಹಳ್ಳಿಕಾರ್ ಎತ್ತುಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಎತ್ತುಗಳಿಗೆ ಸುಮಾರು 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ. ಗಳು ಮಾತ್ರ ಬೆಲೆ ಬಾಳುತ್ತಿದ್ದವು. ಈ ಎತ್ತುಗಳ ಮಾಲೀಕರ ಬಳಿಯೂ ಜನ ಕೋಟಿ ರೂ.ಗಳ ಹಳ್ಳಿಕಾರ್ ಹೋರಿಯನ್ನು ಕೇಳುತ್ತಿದ್ದರಿಂದ, ಎತ್ತುಗಳ ಮಾಲೀಕರು, ತಮ್ಮ ತಾಳ್ಮೆ ಕಳೆದುಕೊಂಡು ಜನರು ಮೇಲೆ ರೇಗಾಡಿದ್ದು ಉಂಟು.
ಹಳ್ಳಿಕಾರ್ ಹೋರಿಗೇಕೆ ಕೋಟಿ ರೂ.:
ಮಳ್ಳಿವಳ್ಳಿಯ ಬೋರೇಗೌಡ ಎಂಬುವವರು ಹಳ್ಳಿಕಾರ್ ಹೋರಿಯನ್ನು ಸಾಕಿದ್ದು, ದಕ್ಷಿಣ ಭಾರತದಲ್ಲಿಯೇ ತಳಿ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಹೋರಿಯ ವೀರ್ಯಾಣುವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ, ಈ ಹಿಂದೆ 65 ಲಕ್ಷ ರೂ.ವೆಂದು ಹೇಳಿದ್ದವರು, ಈಗ ಹೋರಿ ಬೆಲೆಯನ್ನು ಕೋಟಿಗೆ ಹೆಚ್ಚಳ ಮಾಡಿಕೊಂಡಿದ್ದಾರೆ.
ಹೋರಿಗೆ ಕೋಟಿ ರೂ. ಕುರಿತು ಮಾತನಾಡಿದ ಬೋರೇಗೌಡ, ಸುಮಾರು ಮೂರೂವರೆ ವರ್ಷ ವಯಸ್ಸಿನ ಹೋರಿ ವೀರ್ಯಕ್ಕೆ ದೇಶಾದ್ಯಂತ ಭಾರೀ ಬೇಡಿಕೆಯಿದೆ. ವಾರಕ್ಕೆ ಎರಡು ಬಾರಿ ವೀರ್ಯಾಣು ತೆಗೆದು, ಸಂಗ್ರಹಿಸಿಟ್ಟು ಒಂದು ಡೋಸ್ ವೀರ್ಯಾಣು ವನ್ನು ಒಂದು ಸಾವಿರ ರೂ. ನಂತೆ ಮಾರಲಾಗುತ್ತದೆ. ಹೀಗಾಗಿಯೇ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ರಾಮನಗರ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದರ ವೀರ್ಯ ಮಾರಾಟ ಘಟಕಗಳನ್ನು ತೆರೆಯಲಾಗಿದೆ. ಈ ಹೋರಿ ನೋಡಲು ದಷ್ಟಪುಷ್ಟವಾಗಿದ್ದು, 6.2 ಅಡಿ ಎತ್ತರ, ಸುಮಾರು 8 ಅಡಿಗೂ ಹೆಚ್ಚು ಉದ್ದವಿದೆ. ಬರೋಬ್ಬರಿ 700 ಕೆ.ಜಿ.ಗೂ ಹೆಚ್ಚಿನ ತೂಕವನ್ನು ಹೊಂದಿದೆ. “ಕೃಷ್ಣ’ ಎಂದು ಹೆಸರಿಡಲಾಗಿದೆ ಎಂದರು.
ಈ ತಳಿಯಿಂದ ಅಭಿವೃದ್ಧಿಗೊಂಡ ಹಸುವಿನ ಹಾಲಿನಲ್ಲಿ ಎ2 ಪ್ರೋಟೀನ್ ಅಂಶವನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದುದು. ಈ ಎಲ್ಲಾ ಕಾರಣಗಳಿಂದಾಗಿಯೇ ಈ ಹೋರಿಗೆ ಬೇಡಿಕೆಯಿದ್ದು, ಬೆಲೆಯೂ ದುಬಾರಿಯಾಗಿದೆ. ಇದಕ್ಕೆ ಕಾಳುಗಳ ತೌಡು, ಕುದುರೆ ಮೆಂತ್ಯ, ಜೋಳದ ಕಡ್ಡಿ ಇತ್ಯಾದಿಗಳನ್ನು ಮೇಯಿಸಲಾಗುತ್ತಿದೆ. ಅಚ್ಚುಕಟ್ಟಾಗಿ ನೋಡಿಕೊಂಡರೆ ಸುಮಾರು 20 ವರ್ಷ ಬದುಕುತ್ತದೆ ಎಂದು ಮಾಹಿತಿ ಹಂಚಿಕೊಂಡರು.
*ಎನ್.ಎಲ್.ಶಿವಮಾದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.