ಕರ್ನಾಟಕದ ಹಾಲಿಗೂ ಇದೆ ಬಹು ಬೇಡಿಕೆ!

Team Udayavani, Jun 1, 2020, 6:22 AM IST

kartaka-haalu

ಬೆಂಗಳೂರು: ಇಂದು ವಿಶ್ವ ಹಾಲು ದಿನ. ಕರ್ನಾಟಕ ಹಾಲಿನ ಉತ್ಪನ್ನದಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದು. ದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಕರ್ನಾಟಕದ ಹಾಲಿಗೆ ಬಹು ಬೇಡಿಕೆಯಿದೆ. ರಾಜ್ಯದ ರೈತ  ಕುಟುಂಬಗಳಲ್ಲಿ ಶೇ.70 ಭಾಗದಷ್ಟು ಹಾಲು ಉತ್ಪಾದನೆಯಲ್ಲೂ ತೊಡಗಿದ್ದು, ಹಾಲು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಆರೋಗ್ಯ ಕಾಪಾಡುವ ಜತೆಗೆ ರೈತಾಪಿ ಸಮುದಾಯದ ಆರ್ಥಿಕ ಬಲವರ್ಧನೆಗೂ ಕಾರಣವಾಗಿದೆ.

ರಾಜ್ಯ  ಸರ್ಕಾರ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ಹಾಲಿಗೆ ಪ್ರೋತ್ಸಾಹ ಧನ ಸಹ ನೀಡುತ್ತಿರುವುದರಿಂದ ಲಕ್ಷಾಂತರ ಕುಟುಂಬಗಳು ಹಾಲು ಉತ್ಪಾದನೆಯನ್ನೇ ಅವಲಂಬಿಸಿವೆ. ರಾಜ್ಯದಲ್ಲಿ ನಿತ್ಯ ಸುಮಾರು ಒಂದು ಕೋಟಿ ಲೀಟರ್‌ಗೂ  ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು ಕೆಎಂಎಫ್ ಮೂಲಕ ಶೇ.70 ರಷ್ಟು ಮಾರಾಟವಾದರೆ ಉಳಿದ ಶೇ.30 ಖಾಸಗಿ ವಲಯದ ಮೂಲಕವೂ ಮಾರಾಟವಾಗುತ್ತಿದೆ. ಕ್ಷೀರ ಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪ ಅವರ ಪ್ರಯತ್ನದಿಂದ  ಸ್ಥಾಪನೆಗೊಂಡ ಕೆಎಂಎಫ್ ರಾಜ್ಯದ ಹೆಗ್ಗುರುತಾಗಿದೆ.

ರಾಜ್ಯದ ಹನ್ನೆರಡು ಜಿಲ್ಲೆಗಳಿಗೆ ಭಾರತದ ಎರಡನೇ ಪ್ರಧಾನಿಯಾಗಿದ್ದ ಲಾಲ್‌ ಬಹುದ್ದೂರ್‌ ಶಾಸಿOಉ ಅವರನ್ನು ಕರೆಸಿ ಹಾಲು ಒಕ್ಕೂಟಗಳನ್ನು ಅವರು ಉದ್ಘಾಟಿಸುವ ಮೂಲಕ  ಕ್ಷೀರ ಕ್ರಾಂತಿಯ ಹರಿಕಾರ ಎಂದೇ ಪ್ರಸಿದಿಟಛಿ ಪಡೆದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿಟ್ಟಿದ್ದ ಎಂ.ವಿ.ಕೃಷ್ಣಪ್ಪ ಅವರು ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಗೆ ಹೆಚ್ಚು ಒತ್ತು ದೊರಕಿಸಿಕೊಡುವ  ನಿಟ್ಟಿನಲ್ಲಿ ರೈತರಿಗೆ ಉಪ ಕಸುಬುಗಳಲ್ಲಿ ಒಂದಾಗಿದ್ದ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದ್ದರು.

ಜಾನುವಾರು ಸಂಪತ್ತು ಬೇಸಾಯಗಾರರು ಆರ್ಥಿಕವಾಗಿ ಅಭಿವೃದಿಟಛಿಗೆ ನೆರವಾಗಬಹುದು ಎಂದು ಮನಗಂಡು ಕೆಎಂಎಫ್ ಸ್ಥಾಪನೆಗೆ  ಕಾರಣೀಭೂತರಾದರು. ರಾಜ್ಯದಲ್ಲಿ ಹದಿನಾಲ್ಕು ಹಾಲು ಒಕ್ಕೂಟಗಳಿದ್ದು 9 ಲಕ್ಷ ಹಾಲು ಉತ್ಪಾದಕರು ನಿತ್ಯ 70 ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ರಾಜ್ಯದ ರೈತರು ಅದರಲ್ಲೂ ಬರಪೀಡಿತ ಪ್ರದೇಶಗಳಾದ ಕೋಲಾರ,  ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಾಮರಾಜ  ನಗರ ,ಚಿತ್ರದುರ್ಗ ಜಿಲ್ಲೆಗಳಲ್ಲಂತೂ ರೈತರ ಆರ್ಥಿಕ ಬದುಕು ಹಾಲಿನ ಮೇಲೆಯೇ ಅವಲಂಬನೆಯಾಗಿದೆ. ಮಳೆ ಬಾರದೆ ಕೃಷಿ ಕೈಕೊಟ್ಟರೆ ಪಶು  ಸಂಗೋಪನೆಯೇ  ದಾರಿ.

ಪಶು ಸಂಗೋಪನೆಯಲ್ಲಿ  ಹಸು ಸಾಕಾಣಿಕೆ ಪ್ರಮುಖ. ಹಾಲು ಉತ್ಪಾದನೆ ಉಪ ಕಸುಬು ಮಾಡಿ ಕೊಂಡು ಲಕ್ಷಾಂತರ ಕುಟುಂಬಗಳು ಇಂದು ಜೀವನ ಸಾಗಿಸುತ್ತಿವೆ. ರೈತರು ಉತ್ಪಾದಿಸಿದ ಹಾಲು ಸ್ವೀಕರಿಸುವ ಮೂಲಕ ರಾಜ್ಯದ  ರೈತರ ಪಾಲಿಗೆ ಕೆಎಂಎಫ್ ಸಂಜೀವಿನಿ ಯಾಗಿದೆ. ತಿರುಪತಿಯಲ್ಲಿ ವೆಂಕಟೇಶ್ವರನ ಪ್ರಸಾದಕ್ಕೆ ಬಳಸುವುದು ನಂದಿನಿ ತುಪ್ಪವನ್ನೇ ಎಂಬುದು ವಿಶೇಷ. ಒಟ್ಟಾರೆ, ಭಾರತೀಯರ ಆಹಾರ ಪದಟಛಿತಿಯಲ್ಲೂ ಹಾಲು ವಿಶೇಷ ಸ್ಥಾನಮಾನ ಗಳಿಸಿದೆ. ಕರ್ನಾಟಕದ ವಿಚಾರದಲ್ಲಂತೂ ಹಾಲು ಆರ್ಥಿಕತೆಯ ಭಾಗವೂ ಆಗಿದೆ.

ಬಡವರಿಗೆ ಉಚಿತ ಹಾಲು ವಿತರಣೆ: ರಾಜ್ಯದಲ್ಲಿ ಉತ್ಪಾದನೆಯಾಗುವ 70 ಲಕ್ಷಲೀಟರ್‌ ಹಾಲಿನ ಪೈಕಿ 40 ಲಕ್ಷ ಲೀಟರ್‌ ಹಾಲು ಮೊಸರು ಮಾರಾಟವಾಗುತ್ತಿದೆ. 15 ರಿಂದ 20 ಲಕ್ಷ ಲೀಟರ್‌ ಹಾಲು ಪೌಡರ್‌ ಮಾಡಲಾಗುತ್ತಿದೆ. ನಂದಿನಿಯ  ಉತ್ಪನ್ನಗಳು ಜನಪ್ರಿಯತೆ ಪಡೆದಿವೆ. ಮಕ್ಕಳಿಗೆ ಹಾಲು ಪೂರೈಕೆ ಮೂಲಕ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಕೆಲಸವನ್ನೂ ಸರ್ಕಾರ ಮಾಡಿದೆ. ಕೋವಿಡ್‌ 19 ಸಂಕಷ್ಟ ಸಂದರ್ಭದಲ್ಲಿ ಸರ್ಕಾರವೇ ಉಚಿತವಾಗಿ ಬಡವರಿಗೆ ಹಾಲು  ವಿತರಿಸಿದ್ದೂ ಇದೆ.

ವಿಶ್ವ ಹಾಲಿನ ದಿನ ಅಂಗವಾಗಿ ಹಾಲಿನ ಮಹತ್ವ ಜನಸಮುದಾಯಕ್ಕೆ ತಿಳಿಯಬೇಕಿದೆ. ಹಾಲು ಎಂದರೆ ಸಂಪೂರ್ಣ ಆಹಾರ. ಹಾಲಿನಲ್ಲಿ ಎ ವಿಟಮಿನ್‌ ಇರುವುದರಿಂದ ಇದು ಆರೋಗ್ಯ ಹಾಗೂ ಮಾನಸಿಕ , ದೈಹಿಕ ಬೆಳವಣಿಗೆಗೆ ಸಹಕಾರಿ.  ಎಲ್ಲ ವಯೋಮಾನದವರಿಗೂ ಹಾಲು ಆಮೃತ ಸಮಾನ.
-ಬಿ.ಸಿ.ಸತೀಶ್‌, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.