ಅವಾಂತರ ಸೃಷ್ಟಿಸಿದ ವರ್ಷಧಾರೆ
Team Udayavani, May 30, 2020, 6:01 AM IST
ಬೆಂಗಳೂರು: ನಗರದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಮತ್ತೆ 46ಕ್ಕೂ ಅಧಿಕ ಮರ ಮತ್ತು ರೆಂಬೆಗಳು ನೆಲಕಚ್ಚಿವೆ. ಇದರಿಂದ ಹಲವು ವಾಹನಗಳು ಜಖಂಗೊಂಡಿದ್ದು, ಕೆ.ಆರ್. ವೃತ್ತ ಮತ್ತು ಜಯಮಹಲ್‌ನ ನಂದಿದುರ್ಗದಲ್ಲಿ ಚಲಿಸುತ್ತಿದ್ದ ಎರಡು ಆಟೋಗಳ ಮೇಲೆಯೇ ಮರದ ರೆಂಬೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂವಿಸಿಲ್ಲ.
ಮೂರು ದಿನಗಳ ಅಂತರದಲ್ಲಿ ಚಲಿಸುವ ಮೇಲೆ ರೆಂಬೆ ಬೀಳುತ್ತಿರುವುದು ಎರಡನೇ ಘಟನೆ ಇದಾಗಿದೆ. ಗಾಳಿ ಸಹಿತ ಮಳೆ ಹಾಗೂ ಪರಿಣಾಮ ಧರೆಗುರುಳುವ ಮರಗಳಿಗೆ ಇತ್ತೀಚೆಗೆ ವಾಹನಗಳು ಜಖಂಗೊಳ್ಳುತ್ತಿರುವು ದರಿಂದ ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ. ಮಲ್ಲೇಶ್ವರ, ಸುಬ್ರಹ್ಮಣ್ಯ ನಗರ, ಟಿ.ಆರ್. ಮಿಲ್, ಬಸವೇಶ್ವರನಗರ ಸೇರಿದಂತೆ ಹಲವೆಡೆ ರಸ್ತೆ ಬದಿ ನಿಂತಿದವಾಹನಗಳ ಮೇಲೆಯೇ ಮರ ಮತ್ತು ಮರದ ರೆಂಬೆಗಳು ಬಿದ್ದಿವೆ.
ಇದರಿಂದ ವಾಹನಗಳು ಜಖಂಗೊಂಡಿವೆ. ಸಂಜೆ ಕೆ.ವೃತ್ತದಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ರೆಂಬೆ ಬಿದ್ದಿದೆ. ಆಟೋದಲ್ಲಿ ಯಾರೂ ಹಾಗೂ ಹಿಂಭಾಗದಲ್ಲಿ ರೆಂಬೆ ಬಿದ್ದಿದ್ದರಿಂದ ಅನಾಹುತ ತಪ್ಪಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಮಾಹಿತಿ ನೀಡಿದರು. ವಿದ್ಯಾರಣ್ಯಪುರದಲ್ಲೂ ಮರದ ಕೊಂಬೆ ಬಿದ್ದು, ಆಟೋ ಜಖಂಗೊಂಡಿದೆ. ನಗರದ ಉತ್ತರ ಭಾಗದಲ್ಲಿ ಕನಿಷ್ಠ 30ರಿಂದ ಗರಿಷ್ಠ 70 ಮಿ.ಮೀ. ಮಳೆ ದಾಖಲಾಗಿದೆ.
ಈ ಭಾಗದ ಹೆಬ್ಟಾಳ ಮೇಲ್ಸೇತುವೆ ಬಳಿ ಎಸ್ಟೀಮ್ ಮಾಲ್ ಎದುರು ರಸ್ತೆ ಜಲಾವೃತಗೊಂಡಿತು. ಅದೇ ರೀತಿ, ಕೆ.ಆರ್. ವೃತ್ತ ಒಳಗೊಂಡಂತೆ ಪ್ರಮುಖ ಅಂಡರ್‌ಪಾಸ್‌ಗಳು, ಗ್ರೇಡ್ ಸಪರೇಟರ್‌ಗಳು, ಜಂಕ್ಷನ್‌ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತಡೆಯುಂಟಾಯಿತು. ಪೀಕ್ ಅವರ್‌ನಲ್ಲಿ ಮಳೆ ಶುರುವಾಗಿದ್ದರಿಂದ ಹಾಗೂ ಖಾಸಗಿ ವಾಹನಗಳ ಸಂಚಾರವೇ ಹೆಚ್ಚಿದ್ದುದರಿಂದ ವಾಹನ ಸವಾರರಿಗೆ ಇದರ ಬಿಸಿ ತುಸು ಜೋರಾಗಿಯೇ ತಟ್ಟಿತು.
ಮರಗಳು ಧರೆಗೆ – ವಿದ್ಯುತ್ ಕಡಿತ: ಅಲ್ಲಲ್ಲಿ ಮರ ಮತ್ತು ಮರದ ರೆಂಬೆಗಳು ಬಿದ್ದಿದ್ದರಿಂದ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕಾಯಿತು. ಪರಿಣಾಮ ಅಲ್ಲೆಲ್ಲಾ ಸಂಚಾರದಟ್ಟಣೆ ಉಂಟಾಯಿತು. ನಗರಟಿ.ಆರ್. ಮಿಲ್, ಶಿವಾಜಿನಗರ, ಪಟ್ಟೇಗಾರಪಾಳ್ಯ, ಬಸವೇಶ್ವರನಗರ, ರಾಜಾಜಿನಗರ 1ನೇ ಬ್ಲಾಕ್, ಮಾಗಡಿ ರಸ್ತೆ, ಜೆ.ಸಿ. ನಗರ, ಚಾಮರಾಜಪೇಟೆ, ಸೆಂಟ್ ಜೋಸೆಫ್ ಕಾಲೇಜು ಬಳಿ, ಲುಂಬಿನಿ ಗಾರ್ಡನ್, ವೆಸ್ಟ್ ಆಫ್ ಕಾರ್ಡ್ ರೋಡ್, ಜಿಪಿಒ, ಶೇಷಾದ್ರಿಪುರ,
ಸದಾಶಿವನಗರ, ಡಾ.ರಾಜಕುಮಾರ್ ರಸ್ತೆ, ಬಿಇಎಂಎಲ್ ಲೇಔಟ್ ಸೇರಿದಂತೆ ವಿವಿಧೆಡೆ ಮರ ಮತ್ತು ರೆಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ ಎಂದು ಬಿಬಿಎಂಪಿ ನಿಯಂತ್ರಣಾ ಕೊಠಡಿ ಮಾಹಿತಿ ನೀಡಿದೆ. ಈ ಮಧ್ಯೆ ಬೆಸ್ಕಾಂಗೆ ಗ್ರಾಹಕರು ದೂರುಗಳ ಮಳೆಗರೆದಿದ್ದಾರೆ. ಕೆಲವೆಡೆ ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಬಿದ್ದಿದ್ದರಿಂದ ನಗರದ ಹಲವು ಪ್ರದೇಶಗಳಲ್ಲಿ ಕತ್ತಲೆ ಆವರಿಸಿತ್ತು. ಗಂಟೆಗಟ್ಟಲೆ ಕರೆಂಟ್ ಇಲ್ಲದ್ದರಿಂದ ಸಹಾಯವಾಣಿ, ಬೆಸ್ಕಾಂ ಕಚೇರಿಗಳಿಗೆ ನೂರಾರು ಕರೆ ಬಂದಿವೆ.
ಎಲ್ಲೆಲ್ಲಿ ಟ್ರಾಫಿಕ್ ಜಾಮ್?: ಭಾರೀ ಮಳೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಶಿವಾನಂದ ವೃತ್ತ, ಮೆಜೆಸ್ಟಿಕ್, ಯಶವಂತಪುರ, ನಾಗವಾರ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ವಿಮಾನ ನಿಲ್ದಾಣ ರಸ್ತೆ, ಕೆ.ಆರ್. ವೃತ್ತ, ಮಾರುಕಟ್ಟೆ ಎಂ.ಜಿ.ರಸ್ತೆ ಸೇರಿ ಸಾಕಷ್ಟು ಪ್ರದೇಶಗಳಲ್ಲಿ ಭಾರೀ ಸಂಚಾರ ಠಾಣೆ ಉಂಟಾಗಿತ್ತು. ಪರಿಣಾಮ ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸ ಪಟ್ಟರು. ಶಿವಾನಂದ ವೃತ್ತದ ಕೆಳ ಭಾಗದಲ್ಲಿ ನೀರು ಬಿದ್ದು, ಅದರ ಮಧ್ಯೆಯೇ ಸವಾರರು ವಾಹನ ಚಲಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.