Wedding Story: ಕಂಕಣ ಕಾಲ-3: ವಿವಾಹ ಭೋಜನವಿದು.. ನಾರ್ತ್‌ ಭಕ್ಷ್ಯಗಳಿವು…

ಬದಲಾಗುತ್ತಿದೆ ಊಟದ ಟ್ರೆಂಡ್‌ ; ಚೈನೀಸ್‌, ಉ. ಭಾರತದ ಅಡುಗೆಗೆ ಡಿಮ್ಯಾಂಡ್‌ ; ಕಾಶ್ಮೀರಿ ಪಲಾವ್‌, ಫ್ಲೋಟಿಂಗ್‌ ಇಡ್ಲಿಗೆ ಬೇಡಿಕೆ

Team Udayavani, Nov 30, 2024, 12:22 PM IST

7-wedding

ರಾಜಧಾನಿಯಲ್ಲಿ ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವ ಕೇಟರಿಂಗ್‌ ಸರ್ವಿಸ್‌ ; ಅರಮನೆ ಮೈದಾನದಲ್ಲಿ 1 ಊಟಕ್ಕೆ 2,500 ರೂಪಾಯಿ

ಬೆಂಗಳೂರು: ವಿವಾಹ ಭೋಜನವಿದು… ವಿಚಿತ್ರ ಭಕ್ಷ್ಯಗಳಿವು… ಬೀಗರಿಗೆ ಔತಣವಿದು… ಮಾಯಾ ಬಜಾರ್‌ ಸಿನಿಮಾದ ಈ ಹಾಡು ಯಾರಿಗೆ ನೆನಪಿಲ್ಲ. ಮದುವೆ ಇತ್ಯಾದಿ ಶುಭ ಸಮಾರಂಭಗಳು ಅದ್ಧೂರಿಯಾದಂತೆ ಊಟ-ತಿಂಡಿಯೂ ನಾವೀನ್ಯತೆ ಪಡೆದುಕೊಳ್ಳುತ್ತಿದೆ.

ಒಂದು ಕಾಲದಲ್ಲಿ ಮನೆಯಲ್ಲೇ ಮದುವೆ ಮಾಡುವ ಪರಿಪಾಠವಿತ್ತು. ಮನೆಯವರು, ಊರಿನ ನೆರೆಹೊರೆಯವರೇ ಬಾಣಿಸಿಗರಾಗಿ ಅಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ವಿಶೇಷವಾದ ಅಡುಗೆ ಮಾಡಿ ಸಂಭ್ರಮಿಸುವ ಕಾಲವದು. ಆದರೆ ಇದೀಗ ಕಾಲಕ್ಕೆ ತಕ್ಕಂತೆ ಮದುವೆ ಮಹೋತ್ಸವದ ಊಟೋಪಚಾರಗಳೂ ಬದಲಾಗಿವೆ. ಮದುವೆ ಕೇಟರಿಂಗ್‌ ದೊಡ್ಡಮಟ್ಟ ದಲ್ಲಿ ಬೆಳೆಯುತ್ತಿದೆ. ಅಭಿರುಚಿಗೆ ತಕ್ಕಂತೆ ರುಚಿಕಟ್ಟಾದ ಹೊಸ ಆಹಾರಗಳು ಮೆನು ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದ್ದು, ಜನರು ಮದುವೆ ಊಟ ಹಾಕುವುದನ್ನು ಪ್ರಸ್ಟೀಜ್‌ ಆಗಿರುವುದರಿಂದ ಕೇಟರಿಂಗ್‌ ಉದ್ಯಮ ಮತ್ತಷ್ಟು ಬಲಗೊಂಡಿದೆ.

ಮದುವೆ ಎಂದರೆ ಬಾಳೆ ಎಲೆ ಊಟ ಎನ್ನುವ ಕಾಲವೊಂದಿತ್ತು. ಆಗ ಪಾಯಸ, ಕೋಸಂಬರಿ, ಪಲ್ಯ, ಉಪ್ಪು, ಉಪ್ಪಿನ ಕಾಯಿ, ಅನ್ನ, ಸಾಂಬಾರ್‌ ಜತೆಗೆ ಒಂದೆರಡು ಸಿಹಿ ಖಾದ್ಯವಿದ್ದರೆ ಅದೇ ಹೆಚ್ಚು. ಈಗ ಮದುವೆ ಮುಗಿದರೂ ಊಟದ ಮಾತು ಮುಗಿಯುವುದಿಲ್ಲ. ಮೆನು ಏನೇನಿತ್ತು ಎಂಬುದೇ ಚರ್ಚೆಯಾಗುತ್ತಿದೆ.

ಮಾಮೂಲಿ ತಿಂಡಿ-ಊಟಗಳನ್ನು ಕೈ ಬಿಟ್ಟು ಚೈನೀಸ್‌, ಉತ್ತರ ಭಾರತದ ಆಹಾರ ಸೇರಿದಂತೆ ತರಹೇವಾರಿ ತಿನಿಸುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ವರ್ಷದಿಂದ ವರ್ಷಕ್ಕೆ ಆಹಾರದ “ಟ್ರೆಂಡ್‌ ‘ ಹಾಗೂ “ಕಾಂಬೋ’ ಬದಲಾಗುತ್ತಿದ್ದು, ಉತ್ತರ ಕರ್ನಾಟಕ, ಕರಾವಳಿ ಭಾಗದ ಆಹಾರ, ದಕ್ಷಿಣ ಭಾರತದ ಆಹಾರ ಸೇರಿದಂತೆ ದೇಶದ ಎಲ್ಲಾ ಭಾಗದ ಆಹಾರಗಳೂ ಮೆನುವಿನಲ್ಲಿ ಬರಲಿವೆ. ಕಾಂಬೋ ಆಫ‌ರ್‌ಗಳು ಬಾಳೆ ಎಲೆ ಊಟದ ಪದ್ಧತಿಯನ್ನು ಆಕ್ರಮಿಸಿಬಿಟ್ಟಿದೆ.

ವಿಶೇಷವಾಗಿ 2 ಬಗೆಯ ಸೂಪ್‌, ಹಲವಾರು ವಿಧದ ಸಲಾಡ್ಸ್‌, ತಿಂಡಿ ತಿನಿಸುಗಳು, ಮಸಾಲೆ ದೋಸೆ ಜೊತೆಗೆ ದಾವಣಗೆರೆ ದೋಸೆಗೂ ಬೇಡಿಕೆಯಿದೆ.

ತಟ್ಟೆ ಇಡ್ಲಿ, ಫ್ಲೋಟಿಂಗ್‌ ಇಡ್ಲಿ (ಇಡ್ಲಿಗೆ ನೀರಾಗಿರುವ ಚಟ್ನಿಯನ್ನು ಸುರಿಯುವುದು) ಜತೆಗೆ 25 ವಿಧದ ಚಟ್ನಿ ಪುಡಿ ಸೇರಿಸಿ ಭೋಜನಪ್ರಿಯರಿಗೆ ಉಣಬಡಿಸುವ ಆಹಾರಕ್ಕೂ ಹೆಚ್ಚಿನ ಬೇಡಿಕೆಯಿದೆ. ಯಾವ ಸ್ಟಾರ್‌ ಹೋಟೆಲ್‌ಗ‌ಳ ಮೆನುವಿಗೂ ಕಡಿಮೆಯಿಲ್ಲದಂತೆ ಮದುವೆ ಊಟೋಪಚಾರಗಳು ನಡೆಯುತ್ತಿವೆ ಎಂದು ಕೇಟರಿಂಗ್‌ ಮಾಲಿಕರು ಹೇಳುತ್ತಾರೆ.

ವೆಲ್ಕಂ ಡ್ರೀಂಕ್ಸ್‌, ಕಾಶಿ ಹಲ್ವ, ಒಣ ಹಣ್ಣಿನ ದೋಸೆ, ಪನ್ನೀರ್‌ ದೋಸೆ, ಚೈನೀಸ್‌ ದೋಸೆ , ಗಾರ್ಲಿಕ್‌ ನೂಡೆಲ್ಸ್‌, ಕಾಶ್ಮೀರಿ ಪಲಾವ್‌, ಸ್ಯಾಂಡ್‌ವಿಚ್‌, ವೆಜ್‌ ಬರ್ಗರ್‌, ಪನೀರ್‌ ಸ್ಯಾಂಡ್‌ವಿಚ್‌, ಉತ್ತರದ ಭಾರತದ ಮೆನುನಲ್ಲಿ ಆಲೂ ಗೊಬಿ, ಡ್ರೈ ಜಾಮೂನ್‌ ಸೇರಿದಂತೆ ಹಲವು ಐಟಂಗಳು ಸೇರ್ಪಡೆಯಾಗಿವೆ ಎಂದು ತಿಳಿಸುತ್ತಾರೆ.

2,500 ರೂ.ಗೆ ಒಂದು ಊಟ: ಮದುವೆಗೆ ಸೇರುವ ಜನ ಹಾಗೂ ಮೆನುವಿನ ಮೇಲೆ ಕೇಟರಿಂಗ್‌ ಸರ್ವಿಸ್‌ನ ಶುಲ್ಕಗಳೂ ನಿಗದಿಯಾಗುತ್ತವೆ. ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಂತಹ ಸ್ಥಳಗಲ್ಲಿ ವಿವಾಹದ 1 ಊಟಕ್ಕೆ 2,500 ರೂ.ಶುಲ್ಕ ವಿಧಿಸಲಾಗುತ್ತದೆ ಎಂದು ಬೆಂಗಳೂರು ಹೋಟೆಲ್‌ ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌ ಹೇಳುತ್ತಾರೆ.

ಮದುವೆ ಎಂದರೆ 50 ನಮೂನೆಯ ಊಟ, 100 ಬಗೆಯ ತಿನಿಸುಗಳನ್ನು ಪರಿಚಯಿಸಿದ್ದು, 15-20 ವರ್ಷಗಳ ಹಿಂದೆ 1 ಊಟಕ್ಕೆ 400-500 ರೂ. ಇದ್ದದ್ದು ಈಗ ದುಪ್ಪಟ್ಟಾಗಿದೆ. ದಿನದಿಂದ ದಿನಕ್ಕೆ ಊಟದ ಮೆನುಗಳ ಐಟಂ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಗಾಯತ್ರಿ ವಿಹಾರ್‌ನ ಪಂಕಜ್‌ ಕೊಟಾರಿ ಅವರು.

ಕೇಟರಿಂಗ್‌ ಉದ್ಯಮದ ವಹಿವಾಟು ಶೇ.5 ಏರಿಕೆ

ಕೇಟರಿಂಗ್‌ ಉದ್ಯಮ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.5ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯ ಹೋಟೆಲ್‌ ಮಾಲಿಕರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್‌ ಹೆಬ್ಟಾರ್‌ ಹೇಳುತ್ತಾರೆ. ಕೇಟರಿಂಗ್‌ ವ್ಯವಹಾರ ಈ ವರ್ಷ ಇಂತಿಷ್ಟೇ ನಡೆದಿದೆ ಎಂದು ಲೆಕ್ಕಹಾಕಲಾಗದು. ಆದರೆ ಬೆಂಗಳೂರಿನಲ್ಲಿ ಹಲವು ಸಂಖ್ಯೆಯಲ್ಲಿ ಕೇಟರಿಂಗ್‌ಗಳಿದ್ದು ಸಾವಿರಾರು ಕೋಟಿ ರೂ. ವ್ಯವಹಾರ ನಡೆಯುತ್ತದೆ. ಇತ್ತೀಚೆಗೆ ಮದುವೆ ಊಟದ ಶೈಲಿ ಕೂಡ ಬದಲಾಗಿದೆ. ಮಧ್ಯಾಹ್ನದ ವೇಳೆ ದಕ್ಷಿಣ ಭಾರತದ ಖಾದ್ಯಗಳಿಗೆ ಬೇಡಿಕೆ ಹೆಚ್ಚಿದೆ. ಸಂಜೆ ವೇಳೆ ಉತ್ತರ ಭಾರತದ ಚಾಟ್ಸ್‌ ಸೇರಿದಂತೆ ಆಹಾರ ಖಾದ್ಯಗಳಿಗೆ ಬೇಡಿಕೆಯಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿರುಚಿ ಹೊಂದಿರುವುದರಿಂದ ಒಂದು ಸಮಾರಂಭದಿಂದ ಮತ್ತೂಂದು ಸಮಾರಂಭಕ್ಕೆ ಕಾಂಬೋ ಬದಲಾವಣೆ ಆಗುತ್ತಲೇ ಇರುತ್ತದೆ ಎಂದು ಹೇಳುತ್ತಾರೆ.

ಮದುವೆ ಕೇಟರಿಂಗ್‌ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಎಲ್ಲಾ ರೀತಿಯ ಆಹಾರ ಖಾದ್ಯಗಳು ಮೆನು ಪಟ್ಟಿ ಸೇರಿವೆ. ಸಂಪ್ರದಾಯಿಕ ಆಹಾರಗಳನ್ನು ಇಷ್ಟಪಡುವ ವರ್ಗದ ಜತೆಗೆ ಭಿನ್ನ ರೀತಿಯ ಆಹಾರ ಇಷ್ಟಪಡುವ ವರ್ಗವೂ ಸೇರಿದೆ. ಹಲವು ಜನರಿಗೆ ಕೇಟರಿಂಗ್‌ ಉದ್ಯೋಗ ನೀಡಿದೆ. ನಾಲ್ಕೈದು ವರ್ಷಕ್ಕೆ ಹೋಲಿಕೆ ಮಾಡಿದರೆ ಕೇಟರಿಂಗ್‌ ಉದ್ಯಮ ದುಪ್ಪಟ್ಟಾಗಿ ಬೆಳೆದಿದೆ. ಹೊಸ ಟ್ರೆಂಡ್‌ ಶುರುವಾಗಿದೆ. ●ಚಂದ್ರಶೇಖರ್‌ ಹೆಬ್ಟಾರ್‌, ರಾಜ್ಯ ಹೋಟೆಲ್‌ಗ‌ಳ ಸಂಘದ ಗೌರವಾಧ್ಯಕ್ಷ

■ ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಸೆಂಟ್ರಿಂಗ್‌ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.