ವೀಸಾ ಇದ್ದರೂ ಮಹಿಳೆಗೆ ವಿಮಾನ ಹತ್ತಲು ಬ್ರಿಟಿಷ್ ಏರ್‌ವೇಸ್ ನಿರಾಕರಣೆ
2.3 ಲಕ್ಷ ರೂ ಪರಿಹಾರ ನೀಡುವಂತೆ ಕೋರ್ಟ್ ಸೂಚನೆ
Team Udayavani, Sep 14, 2022, 9:45 PM IST
ದೇವನಹಳ್ಳಿ : ಮಹಿಳೆಯೊಬ್ಬರ ಬಳಿ ಮಾನ್ಯವಾದ ವೀಸಾ ಇದ್ದರೂ ವಿಮಾನ ಹತ್ತಲು ನಿರಾಕರಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಏರ್‌ವೇಸ್ ವಿರುದ್ಧ ತೀರ್ಪು ಪ್ರಕಟಿಸಿರುವ ಗ್ರಾಹಕರ ಕೋರ್ಟ್, ಮಹಿಳಾ ಪ್ರಯಾಣಿಕರಿಗೆ 2.3 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಬೆಂಗಳೂರಿನ ನಾಗರಬಾವಿ ನಿವಾಸಿ ಧನಲಕ್ಷ್ಮೀ ಎಂಬುವರು 10 ದಿನಗಳ ಯುರೋಪ್ ಪ್ರವಾಸ ಮಾಡಲು ಸಿದ್ಧರಾಗಿದ್ದರು. 2019 ಎಪ್ರಿಲ್ 8 ರಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಮೂಲಕ ಬಾರ್ಸಿಲೋನಾಗೆ ಬ್ರಿಟಿಷ್ ಏರ್‌ವೇಸ್ ಮೂಲಕ ಪ್ರಯಾಣಿಸಲಿದ್ದರು. ಆದರೆ, ವಿಮಾನ ಹತ್ತುವ ಮುನ್ನ ಕೆಐಎಎಲ್ನಲ್ಲಿ ಬ್ರಿಟಿಷ್ ಏರ್ವೇಸ್ ಚೆಕ್ ಇನ್ ಕೌಂಟರ್ನಲ್ಲಿ ನೇರ ಏರ್‌ಸೈಡ್ ಟ್ರಾನ್ಸಿಟ್ ವೀಸಾ (DATV) ಇಲ್ಲ ಎನ್ನುವ ಕಾರಣ ನೀಡಿ ವಿಮಾನ ಹತ್ತಲು ನಿರಾಕರಿಸಿತ್ತು
ಹೆಚ್ಚುಏರ್‌ಸೈಡ್ ಟ್ರಾನ್ಸಿಟ್ ವೀಸಾ ಹೊಂದಿರುವ ಪ್ರಯಾಣಿಕರು ಲಂಡನ್ ಮೂಲಕ ಯಾವುದೇ ದೇಶಕ್ಕೆ ಪ್ರಯಾಣಿಸಬಹುದು. ಆದರೆ, ಆಸ್ಟ್ರೇಲಿಯಾ ವೀಸಾ ಮತ್ತು ಭಾರತೀಯ ಪಾರ್ಸ್ ಪೋರ್ಟ್ ಇದ್ದರೆ DATV ವೀಸಾದ ಅವಶ್ಯಕತೆ ಇರುವುದಿಲ್ಲ. ಧನಲಕ್ಷ್ಮೀಯವರ ಬಳಿ ಆಸ್ಟ್ರೇಲಿಯಾ ವೀಸಾ ಮತ್ತು ಭಾರತೀಯ ಪಾಸ್ ಪೋರ್ಟ್ ಇತ್ತು. ಬ್ರಿಟಿಷ್ ಏರ್ವೇಸ್ ಸಿಬಂದಿ ವರ್ತನೆಯಿಂದ ಮಾನಸಿಕ ಅಘಾತಕ್ಕೆ ಒಳಗಾದ ಅವರು, ಇಮೇಲ್ ಮೂಲಕ ಬ್ರಿಟಿಷ್ ಏರ್ವೇಸ್ಗೆ ದೂರು ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ಏರ್ವೇಸ್ ತನ್ನ ಸಿಬಂದಿ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ, ಕ್ಷಮೆ ಕೇಳಿತು. ಜೊತೆಗೆ 600 ಯುರೋಗಳನ್ನು ಕೊಡಲು ಮುಂದಾಗಿತ್ತು.
ಇಲಾಖೆ2021ರ ಏಪ್ರಿಲ್ನಲ್ಲಿ ಧನಲಕ್ಷ್ಮೀಯವರು ಶಾಂತಿನಗರದಲ್ಲಿರುವ ಬೆಂಗಳೂರು ಗ್ರಾಮಾಂತರ ಮತ್ತು ನಗರ 1 ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. 2022ರ ಆಗಸ್ಟ್ 20 ರಂದು ತೀರ್ಪು ನೀಡಿದ ಗ್ರಾಹಕ ನ್ಯಾಯಾಲಯ, ಬ್ರಿಟಿಷ್ ಏರ್‌ವೇಸ್ ಮತ್ತು ಕೆಐಎ ಯಲ್ಲಿನ ಅದರ ಪ್ರತಿನಿಧಿಗಳು ಜಂಟಿಯಾಗಿ 2.3 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ.
ಇದರಲ್ಲಿ 1 ಲಕ್ಷ ಹಾನಿ, 15,000 ರೂ. ಪ್ರಯಾಣಿಕರ ವ್ಯಾಜ್ಯ ವೆಚ್ಚಗಳು, 46,000 ಬಡ್ಡಿಯೊಂದಿಗೆ ಟಿಕೆಟ್ ಮರುಪಾವತಿ ಮತ್ತು 75,000 ವಿವಿಧ ಪ್ರವಾಸ ವೆಚ್ಚ ಸೇರಿದೆ. ಜೊತೆಗೆ 30 ದಿನಗಳೊಳಗೆ ಮೊತ್ತವನ್ನು ಪಾವತಿಸುವಂತೆ ಆದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.