ಕುಂಬಳಕಾಯಿ ಬೆಳೆದವರಿಗೆ ಸಿಹಿ ಉಣಿಸಿದ ರೈತ ಸೇತು
Team Udayavani, Apr 27, 2020, 11:35 AM IST
ಚಿತ್ರದುರ್ಗ: ಮಲ್ಲಪ್ಪನಹಳ್ಳಿ ರೈತರ ಜಮೀನಿನಲ್ಲಿ ಬೆಳೆದಿದ್ದ ಸಿಹಿ ಕುಂಬಳ ಖರೀದಿಸಿ ಲಾರಿಗೆ ತುಂಬಿಸಲಾಯಿತು.
ಚಿತ್ರದುರ್ಗ: ಕೋವಿಡ್ ತಡೆಗಾಗಿ ಲಾಕ್‌ಡೌನ್ ಘೋಷಿಸಿದ ನಂತರ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನೆರವು ನೀಡುವ ಉದ್ದೇಶದಿಂದ “ಉದಯವಾಣಿ’ ರೂಪಿಸಿದ “ರೈತಸೇತು’ ಜಿಲ್ಲೆಯ ರೈತರ ಬದುಕಿನಲ್ಲಿ ಸಿಹಿ ತಂದಿದೆ. ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಗ್ರಾಮದ ಆನಂದ್ ಹಾಗೂ ಎಂ.ಕೆ. ಕಾಂತರಾಜು ಎಂಬುವವರು ಒಟ್ಟು ಐದು ಎಕರೆಯಲ್ಲಿ ಬೆಳೆದಿದ್ದ ಸಿಹಿ ಕುಂಬಳಕ್ಕೆ ಮಾರುಕಟ್ಟೆ ಒದಗಿಸಿಕೊಟ್ಟಿದೆ. ಸಿಹಿ ಕುಂಬಳದ ಬೀಜ ನಾಟಿ ಮಾಡಿದ
ದಿನ ದಿಂದಲೂ ಉತ್ತಮ ಲಾಭದ ಕನಸು ಕಾಣುತ್ತಿದ್ದ ರೈತರಿಗೆ ಕೋವಿಡ್ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿಸಿತು. ಇದರಿಂದ ಕಂಗೆಟ್ಟಿದ್ದ ಆನಂದ್ ಹಾಗೂ ಕಾಂತರಾಜು ಪತ್ರಿಕೆಯನ್ನು ಸಂಪರ್ಕಿಸಿ ತಮ್ಮ ಬೆಳೆ ವಿವರಗಳನ್ನು ನೀಡಿದ್ದರು.
ಪತ್ರಿಕೆಯಲ್ಲಿ ರೈತರ ಊರು, ಬೆಳೆದಿರುವ ಬೆಳೆಯ ಹೆಸರು, ಅದರ ಪ್ರಮಾಣ ಹಾಗೂ ರೈತ ಅದಕ್ಕೆ ನಿಗ ದಿ ಮಾಡಿರುವ ಬೆಲೆ ಅವರ ಮೊಬೈಲ್ ಸಂಖ್ಯೆಯನ್ನು ರೈತಸೇತು ಅಂಕಣದಲ್ಲಿ ಪ್ರಕಟಿಸಿತ್ತು. ಈ ವಿಷಯವನ್ನು ಗಮನಿಸಿದ ಬೆಂಗಳೂರು ಮೂಲದ ಶರತ್ ಎಂಬುವವರು ಪ್ರತಿ ವಾರ ಮೂರು ಟನ್‌ನಂತೆ ಇಬ್ಬರೂ ರೈತರಿಂದ ಸಿಹಿ ಕುಂಬಳ ಖರೀದಿ ಮಾಡಿ ತಮ್ಮ ಹಂದಿ ಫಾರಂಗೆ ಬಳಕೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಹೊಸದುರ್ಗ ತಾಲೂಕಿನ ಮಲ್ಲಪ್ಪನಹಳ್ಳಿ ರೈತರು ಪ್ರತಿ ವರ್ಷವೂ ಸಿಹಿಕುಂಬಳ ಬೆಳೆಯುತ್ತಾರೆ. ಎಕರೆಗೆ 25 ರಿಂದ 30 ಸಾವಿರ ಖರ್ಚು ಬರುತ್ತದೆ. ಇದರಿಂದ ಒಂದು ಲಕ್ಷದವರೆಗೆ ಲಾಭ ಸಿಗುತ್ತದೆ. ಪ್ರತಿ ಎಕರೆಗೆ 6 ರಿಂದ 7 ಟನ್ ಇಳುವರಿ ಬಂದರೆ ಪ್ರತಿ ಕೆಜಿಗೆ 15 ರೂ.ವರೆಗೆ ಬೆಲೆ ಇರುತ್ತದೆ. ಮಲ್ಲಪ್ಪನಹಳ್ಳಿ ರೈತ ಆನಂದ್ ಮೂರು ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ. ಕಾಂತರಾಜು ಎರಡು ಎಕರೆಯಲ್ಲಿ ಬೆಳೆದಿದ್ದಾರೆ. ಸದ್ಯ 6 ರೂ.ನಂತೆ ಪ್ರತಿ ಕೆಜಿ ಸಿಹಿ ಕುಂಬಳ ಖರೀದಿಯಾಗುತ್ತಿದೆ.
ನಮ್ಮ ಬೆಳೆ ಹೊಲದಲ್ಲೇ ಕೊಳೆಯುತ್ತದೆ ಎಂಬ ಆತಂಕದಲ್ಲಿದ್ದಾಗ “ಉದಯವಾಣಿ’ ಪತ್ರಿಕೆಯ ರೈತಸೇತು ಅಂಕಣ ನಮಗೆ ಹೊಸ ದಾರಿ ತೋರಿಸಿದೆ. ಲಾಭ
ಬಾರದಿದ್ದರೂ ಪರವಾಗಿಲ್ಲ, ನಷ್ಟವಾಗದಂತೆ ಕಾಪಾಡಿದೆ. ರೈತರು ಮಾರಾಟಗಾರರ ನಡುವಿನ ಸೇತುವೆಯಾದ ಪತ್ರಿಕೆಗೆ ಆಭಾರಿ.
ಎಂ.ಕೆ. ಕಾಂತರಾಜು,
ಮಲ್ಲಪ್ಪನಹಳ್ಳಿ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.