ಪೈಪಲೈನ್ ಒಡೆದು ಚಿಮ್ಮಿದ ನೀರು
Team Udayavani, Jun 27, 2020, 11:27 AM IST
ದಾವಣಗೆರೆ: ಪೈಪ್‌ಲೈನ್ ಒಡೆದು ನೀರು ಚಿಮ್ಮುತ್ತಿರುವುದು.
ದಾವಣಗೆರೆ: ಜಿಲ್ಲೆಯ ಪೂರ್ವ ಭಾಗದ ಕೆರೆಗಳಿಗೆ ನೀರು ತುಂಬಿಸುವ ಮುಖೇನ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿತ 22 ಕೆರೆಗಳ ಏತ ನೀರಾವರಿ ಯೋಜನೆಗೆ ದಶಕವೇ ಕಳೆದರೂ ವಿಘ್ನಗಳು ಮಾತ್ರ ತಪ್ಪುತ್ತಿಲ್ಲ.
ಹತ್ತು ವರ್ಷಗಳ ಹಿಂದೆ ಸ್ವತಃ ಮಠಾಧೀಶರರು 22 ಕೆರೆಗಳ ಏತ ನೀರಾವರಿ ಜಾರಿಗೆ ಒತ್ತಾಯಿಸಿ ರೈತರು, ಜನಸಾಮಾನ್ಯರು ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಧಿಕಾರವಧಿಯಲ್ಲಿ ಯೋಜನೆಗೆ ಹಸಿರು ನಿಶಾನೆ ದೊರೆತು ಕಾಮಗಾರಿಯು ಪ್ರಾರಂಭವಾಗಿತ್ತು. ಆದರೆ, ಈವರೆಗೆ ಯೋಜನೆಯ ಮೂಲ ಉದ್ದೇಶ ಮಾತ್ರ ಈಡೇರಿಲ್ಲ. ಈಗ ಈಡೇರುವ ಲಕ್ಷಣಗಳು ಕಾಣುತ್ತಲೂ ಇಲ್ಲ. ಪೈಪ್ ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುವುದು ಸಾಮಾನ್ಯ ಎನ್ನುವಂತಾಗಿದೆ.
ಕಳೆದ ಸೋಮವಾರ(ಜೂ.22) ರಂದು ಸಂಸದ ಜಿ.ಎಂ. ಸಿದ್ದೇಶ್ವರ್ ಇತರೆ ಜನಪ್ರತಿನಿಧಿಗಳು ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ದಿನವೇ ಕೆಲವು ಕಡೆ ಪೈಪ್ ಒಡೆದು ನೀರು ಪೋಲಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಶುಕ್ರವಾರ ಹರಿಹರ-ದಾವಣಗೆರೆ ಮಧ್ಯೆ ಮತ್ತೆ ಪೈಪ್ ಒಡೆದು ನೀರು ಪೋಲಾಯಿತು. ಕಾರಂಜಿಯಂತೆ ನೀರು ಚಿಮ್ಮುವುದನ್ನ ಜನರು ಬೆಕ್ಕಸ ಬೆರಗಾಗುವಂತೆ ನೋಡಿದರು. ಪೈಪ್ ಲೈನ್ ಒಡೆಯುವುದು, ನೀರು ಪೋಲಾಗುವುದು ತಪ್ಪುವುದು ಯಾವಾಗ ಎನ್ನುವುದೇ ಜನ ಸಾಮಾನ್ಯರ ಪ್ರಶ್ನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.