ನಾಲ್ವರು ಡಿಸ್ಚಾರ್ಜ್- 660ಮಂದಿ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಸಕ್ರಿಯ ಕೋವಿಡ್ ಸೋಂಕಿತರು 71 ; ಬಿಡುಗಡೆಯಾದವರು 50
Team Udayavani, May 26, 2020, 6:02 AM IST
ಸಾಂದರ್ಭಿಕ ಚಿತ್ರ
ದಾವಣಗೆರೆ: ಒಂದೇ ಸಮನೆ ಗಣನೀಯ ಪ್ರಮಾಣದಲ್ಲಿ ಏರುತ್ತಿದ್ದ ಕೋವಿಡ್ ವೈರಸ್ ಸೋಂಕಿತರ ಸಂಖ್ಯೆ ಈಗ ಒಂದಿಷ್ಟು ಇಳಿಕೆಯಾಗುತ್ತಿದ್ದು, ಈಗ ಸೋಂಕಿನಿಂದ ಗುಣಮುಖರಾದವರು ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಸೋಮವಾರ ಸಹ ಸೋಂಕಿನಿಂದ ಮುಕ್ತರಾದ ನಾಲ್ವರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದಾರೆ. ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಬೀಳ್ಕೊಟ್ಟರು.
ಚಿಕಿತ್ಸೆಯಿಂದ ಗುಣಮುಖರಾದ ರೋಗಿ- 630 (20 ವರ್ಷದ ಮಹಿಳೆ), ರೋಗಿ-631 (22 ವರ್ಷದ ಮಹಿಳೆ), ರೋಗಿ-668(45 ವರ್ಷದ ಪುರುಷ) ಹಾಗೂ ರೋಗಿ-755 (19 ವರ್ಷದ ಮಹಿಳೆ) ಇವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಇದುವರೆಗೂ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸಾcರ್ಜ್ ಆದವರ ಸಂಖ್ಯೆ ಈಗ 50ಕ್ಕೇರಿದೆ. ಕೋವಿಡ್ ಸೋಂಕು ಪತ್ತೆ ಸಂಬಂಧ ಲ್ಯಾಬ್‌ಗ ಕಳುಹಿಸಲಾಗಿದ್ದ ಗಂಟಲುದ್ರವ ಮಾದರಿ ಪರೀಕ್ಷೆಯಲ್ಲಿ ನಿನ್ನೆ 690 ಮಂದಿಯ ನೆಗೆಟಿವ್ ರಿಪೋರ್ಟ್ ಬಂದಿದೆ.
ಇದುವರೆಗೂ ಪರೀಕ್ಷೆಗೆ ಕಳುಹಿಸಲಾಗಿದ್ದ ಒಟ್ಟು 6964ರ ಪೈಕಿ 5287 ಮಂದಿಯ ವರದಿ ನೆಗೆಟಿವ್ ಎಂಬುದಾಗಿ ಬಂದಿದ್ದು,ಇನ್ನೂ 1043 ಮಂದಿಯ ಪರೀಕ್ಷಾ ವರದಿ ಬಾಕಿ ಇದೆ. ಸೋಮವಾರ ನಗರದ 13 ಕಂಟೇನ್ಮೆಂಟ್ ಝೋನ್ ಗಳಲ್ಲಿ ಆರೋಗ್ಯ ಇಲಾಖಾ ತಂಡ ಕೋವಿಡ್ ಸೋಂಕು ಪತ್ತೆ ಸಂಬಂಧ ಒಟ್ಟು 291 ಮಂದಿಯ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿದೆ.
ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಿರುವುದನ್ನು ಕಂಡು ತೀವ್ರ ಆತಂಕಗೊಂಡಿದ್ದ ದಾವಣಗೆರೆ ಜನತೆ ಈಗ ಒಂದಿಷ್ಟು
ನಿಟ್ಟುಸಿರು ಬಿಡುವಂತಾಗಿದೆ. ಸೋಮವಾರ ಸಹ ಕೋರೋನಾದಿಂದ ಗುಣಮುಖರಾದ ನಾಲ್ವರ ಬಿಡುಗಡೆ ಜತೆಗೆ ಆರೋಗ್ಯ ಇಲಾಖೆ ಕೈ ಸೇರಿದ ಲ್ಯಾಬ್ ಪರೀಕ್ಷಾ ವರದಿಯಲ್ಲಿ 660 ಮಂದಿಯದ್ದು ನೆಗೆಟಿವ್ ಎಂಬುದಾಗಿ ಇರುವುದು ಕೊಂಚ ಸಮಾಧಾನ ತಂದಿದೆ. ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಸೋಂಕಿತರಲ್ಲಿ ನಾಲ್ವರು ಮೃತಪಟ್ಟಿದ್ದರೆ, ಒಟ್ಟು 50 ಮಂದಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಈಗ ಸಕ್ರಿಯ ಕೋವಿಡ್ ಸೋಂಕಿತರು 71 ಮಂದಿ ಇದ್ದಾರೆ.
14 ಕಂಟೇನ್ಮೆಂಟ್ ಝೋನ್ ಸ್ಥಾಪನೆ
ದಾವಣಗೆರೆ ನಗರದಲ್ಲಿ 13 ಹಾಗೂ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14 ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ. ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲೂ ಹೊಸ ಕಂಟೇನ್ಮೆಂಟ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಮನೆ ಸುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಕಳೆದ ಶುಕ್ರವಾರ ಶಿವಕುಮಾರಸ್ವಾಮಿ ಬಡಾವಣೆ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ
ಅಧಿಕಾರಿ ದಾರುಕೇಶ್ ಆ ಕಂಟೇನ್ಮೆಂಟ್ ಝೋನ್‌ನ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.