ಹರಿಹರ: 12 ಜನರಿಗೆ ಸೋಂಕು
Team Udayavani, Jul 10, 2020, 11:17 AM IST
ಹರಿಹರ: ಕ್ವಾರಂಟೈನ್ ಕೇಂದ್ರಗಳಲ್ಲಿದ್ದ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಹರಿಹರ: ಗ್ರಾಮೀಣ ಪ್ರದೇಶದಲ್ಲಿ ಎರಡು, ನಗರದಲ್ಲಿ 10 ಸೇರಿದಂತೆ ಗುರುವಾರ ಒಂದೇ ದಿನ ತಾಲೂಕಿನಲ್ಲಿ 12 ಕೋವಿಡ್ ಪ್ರಕರಣ ಪತ್ತೆಯಾಗಿವೆ. ಜು. 3 ರಂದು ಗಂಟಲು ದ್ರಾವಣ ಸಂಗ್ರಹಿಸಿದ್ದ ಗಾಂಧಿ ನಗರದ ಸೊಂಕಿತ ವ್ಯಕ್ತಿಯ ಸಂಪರ್ಕಿತ ಕುಟುಂಬಸ್ಥರು ಹಾಗೂ ನೆರೆಹೊರೆಯವರ ಪೈಕಿ ಸೋಂಕಿತರ ಕುಟುಂಬದ 55 ವರ್ಷದ ಪುರುಷ, 48 ವರ್ಷದ ಮಹಿಳೆ, 25 ವರ್ಷದ ಮಹಿಳೆ ಮತ್ತು 4 ವರ್ಷದ ಬಾಲಕ, ನೆರೆಹೊರೆಯ 32 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಧೃಢಪಟ್ಟಿದೆ.
ಜು. 4ರಂದು ಜ್ವರದ ಕಾರಣಕ್ಕೆ ಆಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗಿದ್ದ ನಗರದ ತೆಗ್ಗಿಕೇರಿಯ 22 ವರ್ಷದ ಯುವಕ, ಜು. 1 ರಂದು ಗಂಟಲು ದ್ರಾವಣ ಸಂಗ್ರಹಿಸಿದ್ದ ಅಗಸರ ಬೀದಿಯ ಕಂಟೇನ್ಮೆಂಟ್‌ನ 50 ವರ್ಷದ ಪುರುಷ, 23 ವರ್ಷದ ಮಹಿಳೆ ಹಾಗೂ ವಿದ್ಯಾನಗರದ 55 ವರ್ಷದ ಪುರುಷ, 31 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ತಾಲೂಕಿನ ಗಂಗನರಸಿ ಗ್ರಾಮಕ್ಕೆ ಮುಂಬೈನಿಂದ ಆಗಮಿಸಿದ್ದ ನಾಲ್ಕು ಜನ ಕುಟುಂಬ ಸದಸ್ಯರ ಗಂಟಲು ದ್ರವವನ್ನು ಜು. 6 ರಂದು ಸಂಗ್ರಹಿಸಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಗುರುವಾರ ವರದಿ ಬಂದಿದ್ದು 25 ವರ್ಷದ ಮಹಿಳೆ ಹಾಗೂ ಎರಡೂವರೆ ವರ್ಷದ ಮಗುವಿಗೆ ಕೋವಿಡ್ ದೃಢಪಟ್ಟಿದೆ.
ಕ್ವಾರಂಟೈನ್‌ನಲ್ಲಿದ್ದ ಎಲ್ಲಾ ಸೋಂಕಿತರನ್ನು ಸಂಜೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 44ಕ್ಕೇರಿದೆ. ಒಟ್ಟು 11 ಕಂಟೇನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ನಗರದ ಕಂಟೇನ್ಮೆಂಟ್ ಪ್ರದೇಶಗಳಿಗೆ ಗುರುವಾರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್, ತಾಪಂ ಇಒ ಲಕ್ಷ್ಮೀಪತಿ, ಆರೋಗ್ಯ ಇಲಾಖೆಯ ಡಾ| ಶಶಿಕಲಾ, ಎಂ. ಉಮ್ಮಣ್ಣ, ಎಂ.ವಿ. ಹೊರಕೇರಿ ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.