ವಿಜಯನಗರ ಉತವಕ್ಕೆ ಭರದ ಸಿದ್ಧತೆ
Team Udayavani, Sep 27, 2021, 6:36 PM IST
ಹೊಸಪೇಟೆ: ನೂತನ ವಿಜಯನಗರ ಜಿಲ್ಲಾ ಉದಯಕ್ಕೆಈಗಾಗಲೇ ದಿನಾಂಕ ನಿಗದಿಯಾಗಿದ್ದು, ವಿಜಯನಗರಗತ ವೈಭವ ಮರುಕಳಿಸುವ ಮಾದರಿಯಲ್ಲಿವಿ ಜಯನಗರ ಉತ್ಸವಕ್ಕೆ ಜಿಲ್ಲಾ ಕೇಂದ್ರ ಹೊಸಪೇಟೆ ಅಣಿಯಾಗುತ್ತಿದೆ.
ವಿಜಯನಗರ ಜಿಲ್ಲಾ ಉದ್ಘಾಟನೆನಿಮಿತ್ತ ಅ.2 ಮತ್ತು 3ರಂದು ವಿಜಯನಗರ ಉತ್ಸವನಡೆಯಲಿದೆ. ಇದಕ್ಕಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿಭವ್ಯ ವೇದಿಕೆ ನಿರ್ಮಾಣ ಸಜ್ಜುಗೊಳಿಸಲಾಗುತ್ತಿದೆ.
ಬೃಹತ್ ವೇದಿಕೆ: ವೇದಿಕೆಯಲ್ಲಿ ಮಾತಂಗಪರ್ವತದ ವಿಹಂಗಮ ನೋಟ ಹಾಗೂ ಶ್ರೀವಿರೂಪಾಕ್ಷೇಶ್ವರ ದೇಗುಲದ ರಾಜ ಗೋಪುರ(60 ಅಡಿ)ವನ್ನು ಕಲಾವಿದರು ಸೃಜಿಸಲಿದ್ದಾರೆ.ಅಲ್ಲದೇ ಶ್ರೀಕೃಷ್ಣದೇವರಾಯರ 20 ಅಡಿ ಎತ್ತರದಪ್ರತಿಮೆಯನ್ನೂ ಕಲಾವಿದರು ಸೃಜಿಸಲಿದ್ದಾರೆ.
ವೇದಿಕೆಸುತ್ತ ಹಂಪಿ ಸ್ಮಾರಕಗಳನ್ನು ಸೃಜಿಸಲಾಗುತ್ತಿದೆ.ಬೆಂಗಳೂರಿನ ಎಂ.ವಿ. ಕನ್ಸಲ್ಟಂಟ್ ಸಂಸ್ಥೆ ಈ ವೇದಿಕೆನಿರ್ಮಾಣ ಮಾಡುತ್ತಿದೆ. ನೆಲದಿಂದ ಏಳು ಅಡಿಎತ್ತರದಲ್ಲಿ ವೇದಿಕೆ ಇರಲಿದ್ದು, 120 ಅಡಿ ಅಗಲ, 130ಅಡಿ ಉದ್ದ ಇರಲಿದೆ. ವೇದಿಕೆಗೆ ಗಣ್ಯರು ತೆರಳಲು400 ಅಡಿ ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ.
ವೇದಿಕೆಯಲ್ಲಿ ಆಂಜನೇಯ, ಕಲ್ಲಿನತೇರು, ಸಾಸಿವೆಕಾಳು ಗಣಪ, ಉಗ್ರನರಸಿಂಹ ಸೇರಿದಂತೆ ವಿವಿಧಸ್ಮಾರಕಗಳನ್ನು ಸೃಜಿಸುವ ಕಾರ್ಯವನ್ನು ಕಲಾವಿದರುಮಾಡಲಿದ್ದಾರೆ.
ಪ್ರವೇಶ ದ್ವಾರದಲ್ಲಿ ಭುವನೇಶ್ವರಿ ಪ್ರತಿಮೆ: ವೇದಿಕೆ ಪ್ರವೇಶದ್ವಾರದಲ್ಲೇ ತಾಯಿ ಭುವನೇಶ್ವರಿ ಮೂರ್ತಿ ಪ್ರತಿಷ್ಠಾಪನೆಮಾಡಲಾಗುತ್ತಿದ್ದು, ಸುತ್ತಲು ಕನ್ನಡ ನಾಡನ್ನುಪ್ರತಿಬಿಂಬಿಸುವ ಚಿತ್ರಗಳು ಅನಾವರಣಗೊಳ್ಳಲಿವೆ.ಅನತಿದೂರದಲ್ಲೇ ಅಗ್ನಿಕುಂಡ ನಿರ್ಮಿಸಲಾಗುತ್ತಿದ್ದು,ಹಂಪಿಯಿಂದ ಜ್ಯೋತಿ ತರಲಾಗುತ್ತದೆ. ಜತೆಗೆ ಎಲ್ಲತಾಲೂಕಿನಿಂದ ಆಗಮಿಸುವ ಜ್ಯೋತಿಯನ್ನು ಈಕುಂಡದಲ್ಲಿ ಬೆಳಗಿಸಲಾಗುತ್ತದೆ. ಈಗಾಗಲೇ 250 ಕಲಾವಿದರು ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಂಪಿ ಉತ್ಸವದಲ್ಲಿ ವೇದಿಕೆನಿರ್ಮಾಣದ ಅನುಭವ ಹೊಂದಿರುವ ಕಲಾವಿದರೇವೇದಿಕೆ ನಿರ್ಮಿಸುತ್ತಿದ್ದಾರೆ.
ಪುಸ್ತಕ ಮಳಿಗೆ: ವೇದಿಕೆ ಸುತ್ತ 30 ಸ್ಟಾಲ್‌ಗಳನ್ನುನಿರ್ಮಿಸಲಾಗುತ್ತಿದೆ. ಈ ಸ್ಟಾಲ್‌ಗಳಲ್ಲಿ ಅರಣ್ಯ,ಪರಿಸರ, ಪ್ರವಾಸೋದ್ಯಮ ಸೇರಿದಂತೆ ವಿವಿಧಇಲಾಖೆಗಳ ಕುರಿತು ಮಾಹಿತಿ ನೀಡುವ ಕಾರ್ಯಮಾಡಲಾಗುತ್ತದೆ.ಸಿಎಂ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಉದ್ಘಾಟಿಸಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಸಚಿವಆನಂದ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದು, ಹಲವುಸಚಿವರು ಭಾಗವಹಿಸಲಿದ್ದಾರೆ.
ಖ್ಯಾತ ಗಾಯಕರು: ಗಾಯಕಿ ಎಂ.ಡಿ. ಪಲ್ಲವಿ,ಅನನ್ಯ ಭಟ್ ಅವರು ಮೊದಲ ದಿನ ಹಾಡುಗಳನ್ನುಹಾಡಲಿದ್ದಾರೆ. ಖ್ಯಾತ ಡ್ರಮ್ ವಾದಕ ಶಿವಮಣಿ,ಪ್ರವೀಣ್ ಗೋಡಿRಂಡಿ ಆಗಮಿಸಲಿದ್ದಾರೆ. ನಿರುಪಮಾರಾಜೇಂದ್ರ ಅವರು ವಿಜಯನಗರ ನೃತ್ಯರೂಪಕಪ್ರದರ್ಶಿಸಲಿದ್ದಾರೆ. ಇನ್ನೂ ವೇದಿಕೆಯಲ್ಲಿ ಐತಿಹಾಸಿಕವಿಜಯನಗರ ಕಿರುಚಿತ್ರ ಮೂಡಿ ಬರಲಿದೆ. ಅ.3ರಂದುವಿಜಯಪ್ರಕಾಶ ಮತ್ತು ತಂಡ, ಲಕ್ಷ್ಮೀ ದುಬೆ, ಸತ್ಯವತಿಮಂಗ್ಲಿಬಾಯಿ ಆಗಮಿಸಲಿದ್ದಾರೆ.
ಪರಿಶೀಲನೆ: ನಗರದ ಜಿಲ್ಲಾ ಕ್ರೀಡಾಂಗಣಕ್ಕೆಸಚಿವ ಆನಂದ ಸಿಂಗ್ ಅವರು ಭೇಟಿ ನೀಡಿ,ನಿರ್ಮಾಣಗೊಳ್ಳುತ್ತಿರುವ ಭವ್ಯ ವೇದಿಕೆ ಸಿದ್ಧತೆ ಕಾರ್ಯವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿಸಂಸದ ವೈ.ದೇವೇಂದ್ರಪ್ಪ, ಮುಖಂಡ ನೇಮಿರಾಜುನಾಯ್ಕ, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಇನ್ನಿತರರಿದ್ದರು.
ಪಿ.ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.