ಕರ್ನಾಟಕ “ಸುಜಲಾಂ ಸುಫಲಾಂ’ ಮಾಡಲು ಸಿದ್ಧ

Team Udayavani, Oct 6, 2021, 3:23 PM IST

hubballi news

ಹುಬ್ಬಳ್ಳಿ: “ಮಹಾರಾಷ್ಟ್ರದ ಹಲವು ಜಿಲ್ಲೆಗಳಷ್ಟೇ ಏಕೆ ಕರ್ನಾಟಕದರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಜಲಸಂವರ್ಧನೆನಿಟ್ಟಿನಲ್ಲಿ ಭಾರತೀಯ ಜೈನ ಸಂಘ(ಬಿಜೆಎಸ್‌) ಕೈಗೊಂಡಕಾರ್ಯ ಮಾದರಿಯಾಗಿದೆ.

ರೈತರ ಮನದಲ್ಲಿ ತೃಪ್ತಿ-ಆತ್ವವಿಶ್ವಾಸ ತಂದಿದೆ. ಕರ್ನಾಟಕ ಸರ್ಕಾರ ಅವಕಾಶ ನೀಡಿದರೆ ಇಡೀಕರ್ನಾಟಕವನ್ನೇ “ಸುಜಲಾಂ ಸಫಲಾಂ’ ಮಾಡಿ ತೋರಿಸುವೆ. ರೈತರ ಪಾಲ್ಗೊಳ್ಳುವಿಕೆಯೊಂದಿಗೆ ಬರವನ್ನು ಹೊಡೆದೊಡಿಸಲುಬದ್ಧರಾಗಿದ್ದೇವೆ.

ಜತೆಗೆ ಕರ್ನಾಟಕದ ಎಲ್ಲ ಹಳ್ಳಿಗಳನ್ನು ಕೋವಿಡ್‌ಮುಕ್ತ ಗ್ರಾಮಗಳನ್ನಾಗಿಸಲು ಕಂಕಣತೊಟ್ಟಿದ್ದೇವೆ’.- ಇದು ಭಾರತೀಯ ಜೈನ ಸಂಘ (ಬಿಜೆಎಸ್‌) ಸಂಸ್ಥಾಪಕ,ಸಮಾಜ ಸೇವೆಗಾಗಿಯೇ ಬದುಕನ್ನು ಮುಡಿಪಾಗಿಟ್ಟಿರುವ ಶಾಂತಿಲಾಲಮುಥಾ ಅವರ ಸ್ಪಷೋrಕ್ತಿ. ಕರ್ನಾಟಕದಲ್ಲಿ ಜಲಸಂವರ್ಧನೆ ನಿಟ್ಟಿನಲ್ಲಿನಮ್ಮ ಶ್ರಮ ಎಂತಹದ್ದು, ಅದರ ಪ್ರಯೋಜನ ಏನು ಎಂಬುದನ್ನುಕರ್ನಾಟಕದ ಜನತೆ ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಹೋಗಿನೋಡಬಹುದಾಗಿದೆ.

ಬಿಜೆಎಸ್‌ ನಡೆದು ಬಂದ ಯಶೋಗಾಥೆ, ಮನದೊಳಗೆತುಂಬಿಕೊಂಡಿರುವ ಅಭಿವೃದ್ಧಿ ಕ್ರಾಂತಿಯ ಚಿಂತನೆಗಳು,ಜಲಸ್ವಾವಲಂಬನೆ ಇನ್ನಿತರ ವಿಷಯಗಳ ಕುರಿತಾಗಿ ಶಾಂತಿಲಾಲಮುಥಾ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮಮನದಾಳದ ಚಿಂತನೆ-ಯೋಜನೆಗಳನ್ನು ಹಂಚಿಕೊಂಡಿದ್ದಾರೆ.ಬಿಜೆಎಸ್‌ ರೂಪಿಸಿದ ಸುಜಲಾಂ ಸುಫಲಾಂ ಜಲಸ್ವಾವಲಂಬಿ ಯೋಜನೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮುಂದಿರಿಸಲಾಗಿತ್ತು.

ಮಹಾರಾಷ್ಟ್ರದಲ್ಲಿ ಬರದ ವಿಚಾರದಲ್ಲಿ ಅತ್ಯಂತಕೆಟ್ಟ ಸ್ಥಿತಿ ಎದುರಿಸುತ್ತಿರುವ ಜಿಲ್ಲೆಯನ್ನು ನಮಗೆ ಕೊಡಿ. ಅಲ್ಲಿಮೂರು ವರ್ಷದಲ್ಲಿ ಜಲ ಸಂವರ್ಧನೆ ಹಾಗೂ ಜಲ ಸ್ವಾವಲಂಬನೆಮಾಡಿ ತೋರಿಸುತ್ತೇವೆ ಎಂದು ಮನವಿ ಮಾಡಿದ್ದೆವು.

ರಾಜ್ಯಸರ್ಕಾರದ ಒಪ್ಪಿಗೆ ಮೇರೆಗೆ ಯೋಜನೆ ಶುಭಾರಂಭ ಮಾಡಲಾಗಿತ್ತು.ಜಲಮೂಲಗಳ ನಿರ್ಮಾಣ, ದುರಸ್ತಿಗೆ ಬಿಜೆಎಸ್‌ ಯಂತ್ರಗಳನ್ನುನೀಡಿದ್ದರೆ, ಮಹಾರಾಷ್ಟ್ರ ಸರ್ಕಾರ ಡೀಸೆಲ್‌ ವ್ಯವಸ್ಥೆ ಮಾಡಿತ್ತು. ರೈತರುತಮ್ಮದೇ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತೆಗೆದುಕೊಂಡು ಹೋಗುವ ಒಪ್ಪಂದಮೇರೆಗೆ ಜಲಮೂಲಗಳ ಮ್ಯಾಪಿಂಗ್‌, ದಾಖಲೆಗಳ ಕ್ರೋಡೀಕರಣದಮೂಲಕ ಗುತ್ತಿಗೆದಾರರು ಇಲ್ಲದೆಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಲಸಂವರ್ಧನೆ ಕಾರ್ಯಕೈಗೊಳ್ಳಲಾಗಿತ್ತು.

ಬಿಜೆಎಸ್‌ ಕೈಗೊಂಡ ಸುಜಲಾಂ ಸುಫಲಾಂ ಯೋಜನೆ ಕೇಂದ್ರನೀತಿ ಆಯೋಗ ಹಾಗೂ ಕೇಂದ್ರ ಜಲಶಕ್ತಿ ಸಚಿವರು, ವಿವಿಧ ರಾಜ್ಯಗಳಮುಖ್ಯಮಂತ್ರಿಗಳ ಗಮನ ಸೆಳೆದಿತ್ತು. ನೀತಿ ಆಯೋಗ ತನ್ನ ಸಭೆಗೆನನ್ನನ್ನು ಆಹ್ವಾನಿಸಿ ಯೋಜನೆಯ ಮಾಹಿತಿ ಪಡೆದಿತ್ತು. ಉತ್ತರ ಪ್ರದೇಶ, ಜಾರ್ಖಂಡ್‌ ಇನ್ನಿತರ ಮುಖ್ಯಮಂತ್ರಿಗಳು ಸಂವಾದ ನಡೆಸಿದ್ದರು.

ರಾಯಚೂರುಯಾದಗಿರಿಯಲ್ಲಿ ಪ್ರಯೋಗ: 2018ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬಿಜೆಎಸ್‌ ರಾಜ್ಯ ಅಧಿವೇಶನ ನಡೆದಿತ್ತು. ಆಗಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅಂದಿನಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಸುಜಲಾಂಸುಫಲಾಂ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೆ. ಕರ್ನಾಟಕದಲ್ಲೂ ಅದನ್ನು ಕೈಗೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದೆ.

ಅದಕ್ಕೆ ಉತ್ತಮ ಸ್ಪಂದನೆವ್ಯಕ್ತವಾಗಿತ್ತಲ್ಲದೆ, ಡಿ.ಕೆ.ಶಿವಕುಮಾರ ಅವರು ಯೋಜನೆ ಅನುಷ್ಠಾನಕ್ಕೆಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕೈಗೊಳ್ಳುವಂತೆಸೂಚಿಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದ್ದರು.2019ರಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿಮಾಹಾರಾಷ್ಟ್ರ ಮಾದರಿಯಲ್ಲಿಯೇ ಜಲ ಸಂವರ್ಧನೆ ಕಾರ್ಯಕ್ಕೆಮುಂದಾದೆವು.

ಆರಂಭದಲ್ಲಿ ರೈತರು ಒಪ್ಪಿಕೊಳ್ಳುವ ಮನೋಭಾವತೋರಲಿಲ್ಲ. ಆ ಭಾಗದ ಶಾಸಕರು, ಇನ್ನಿತರ ಜನಪ್ರತಿನಿಧಿಗಳಸಹಕಾರ, ಅಧಿಕಾರಿಗಳ ಪ್ರೋತ್ಸಾಹದೊಂದಿಗೆ ಎರಡು ಜಿಲ್ಲೆಗಳಲ್ಲಿಯೋಜನೆ ಅನುಷ್ಠಾನಗೊಳಿಸಿದ್ದೇವೆ. ಇದೀಗ ಅಲ್ಲಿ ರೈತರುಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಶಿಲ್ಪಾಫಾರ್ಮಾಸಿಟಿಕಲ್‌ ಕಂಪನಿ ಸಹಕಾರ ಮಹತ್ವದ್ದಾಗಿತ್ತು.ಇನ್ನು ಆರು ತಿಂಗಳಲ್ಲಿ ಸುಜಲಾಂ ಸುಫಲಾಂ 2.0 ಮಾದರಿಅನುಷ್ಠಾನಕ್ಕೆ ಬರಲಿದೆ.

ಅದೇ ಮಾದರಿಯನ್ನು ಕರ್ನಾಟಕದಲ್ಲಿಅನುಷ್ಠಾನದ ಬಯಕೆ ನಮ್ಮದಾಗಿದೆ. ರಾಜ್ಯ ಸರ್ಕಾರ ಒಪ್ಪಿದರೆಇಡೀ ಕರ್ನಾಟಕದಲ್ಲಿ ಜಲ ಸಂವರ್ಧನೆ ಹಾಗೂ ಜಲ ಸ್ವಾವಲಂಬನೆಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತೇವೆ. ನನಗೆ ವಿಶ್ವಾಸವಿದೆ,ಮುಂಬರುವ ದಿನಗಳಲ್ಲಿ ಕರ್ನಾಟಕ ಪೂರ್ಣ ಪ್ರಮಾಣದಲ್ಲಿ ಬರಮುಕ್ತಗೊಳ್ಳಲಿದ್ದು, ಜಲ ಸ್ವಾವಲಂಬನೆ ಸಾಧಿಸಲಿದೆ.

ಐದು ಕಾರ್ಯಪಡೆಗಳ ರಚನೆ: ಕರ್ನಾಟಕದ 31 ಜಿಲ್ಲೆಗಳ ಸುಮಾರು30 ಸಾವಿರ ಗ್ರಾಮಗಳನ್ನು ಕೋವಿಡ್‌ ಮುಕ್ತವಾಗಿಸುವ ಸಂಕಲ್ಪವನ್ನುಬಿಜೆಎಸ್‌ ಮಾಡಿದೆ. ಕರ್ನಾಟಕ ಸರ್ಕಾರದ ಪ್ರೋತ್ಸಾಹ, ಸಹಕಾರ,ಬೆಂಬಲ ಅನನ್ಯ. ನಾವು ಆರಂಭದಲ್ಲಿ 9 ಜಿಲ್ಲೆಗಳಲ್ಲಿ ಈ ಕಾರ್ಯಕ್ಕೆಮುಂದಾಗಿದ್ದೆವು. ಆದರೆ, ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳ ಎಲ್ಲಗ್ರಾಮಗಳಲ್ಲಿಯೂ ಇದನ್ನು ಕೈಗೊಳ್ಳುವಂತೆ ತಿಳಿಸಿತ್ತಲ್ಲದೆ, ಈ ಬಗ್ಗೆಬಿಜೆಎಸ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಕುರಿತ ಅಧಿಸೂಚನೆಯನ್ನು ಹೊರಡಿಸಿದೆ.

ಅಕ್ಟೋಬರ್‌ನಲ್ಲಿ ಎದುರಾಗಬಹುದಾದ ಮೂರನೇ ಅಲೆಯನ್ನುಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಬಿಜೆಎಸ್‌ ಸರ್ಕಾರದ ಸಹಕಾರ,ಗ್ರಾಮಸ್ಥರ ಪಾಲುದಾರಿಕೆ, ವಿದ್ಯಾರ್ಥಿ-ಯುವಕರ ಸಹಕಾರದೊಂದಿಗೆಕಾರ್ಯನಿರ್ವಹಿಸಲಿದೆ. ಕೋವಿಡ್‌ಮುಕ್ತ ಗ್ರಾಮಗಳ ನಿರ್ಮಾಣಕ್ಕೆಪ್ರತಿ ಗ್ರಾಮದಲ್ಲೂ ಒಟ್ಟು ಐದು ಕಾರ್ಯಪಡೆಗಳನ್ನು ರಚಿಸಲಾಗುತ್ತದೆ.

ಗ್ರಾಪಂ ಅಧ್ಯಕ್ಷರು ಕಾರ್ಯಪಡೆಗಳ ಮುಖ್ಯಸ್ಥರಾಗಿರುತ್ತಾರೆ.ಗ್ರಾಪಂ ಸದಸ್ಯರು, ಗ್ರಾಮ ಸೇವಕರನ್ನೊಳಗೊಂಡ ಕಾರ್ಯಪಡೆಸೋಂಕಿತರನ್ನು ಗುರುತಿಸುವಿಕೆ, ಪರೀಕ್ಷಿಸಿ, ಚಿಕಿತ್ಸೆ ನೀಡಿಕೆಗೆ ಪೂರಕಕಾರ್ಯಪಡೆ, ಕ್ವಾರೆಂಟೈನ್‌ ಕೇಂದ್ರ, ಕೋವಿಡ್‌ ಕೇರ್‌ ಸೆಂಟರ್‌ಸ್ಥಾಪನೆಗೆ ಮಾರ್ಗಸೂಚಿ ಕಾರ್ಯಪಡೆ, ಕೋವಿಡ್‌ ಲಸಿಕೆ ನೀಡುವಸದಸ್ಯರಿಗೆ ಮಾರ್ಗಸೂಚಿ ಕಾರ್ಯಪಡೆ, ಕೋವಿಡ್‌ ಸಂಬಂಧಿತಸರ್ಕಾರಿ ಯೋಜನೆಗಳ ಜಾಗೃತಿಗೆ ಮಾಹಿತಿ ಕಾರ್ಯಪಡೆಗಳುಕಾರ್ಯನಿರ್ವಹಿಸಲಿವೆ.

ಗ್ರಾಮಗಳಲ್ಲಿ ಕಾರ್ಯಪಡೆ, ರಾಜ್ಯದಲ್ಲಿನ ವಿಶ್ವವಿದ್ಯಾಲಯ,ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಾಲೇಜುಗಳಲ್ಲಿನಸುಮಾರು 3 ಲಕ್ಷದಷ್ಟು ಎನ್‌ಎಸ್‌ಎಸ್‌ ಸ್ವಯಂ ಸೇವಕರಸಹಕಾರೊಂದಿಗೆ ಕೋವಿಡ್‌ ಮುಕ್ತ ಗ್ರಾಮಗಳ ಕಾರ್ಯ ನಡೆಯಲಿದೆ.ಇದೆಲ್ಲರ ನಿರ್ವಹಣೆ ಹಾಗೂ ಉಸ್ತುವಾರಿಗೆ ಸುಮಾರು 400 ಜನರನ್ನುಬಿಜೆಎಸ್‌ ನೇಮಕ ಮಾಡಿಕೊಳ್ಳಲಿದ್ದು,ಅವರಿಗೆ ಅಗತ್ಯ ತರಬೇತಿನೀಡಲಾಗುವುದು. ಕೋವಿಡ್‌ ಮುಕ್ತ ಗ್ರಾಮಗಳ ರೂಪನೆಯೊಂದಿಗೆಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಲಿದೆ.

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.