ಪ್ರತಿಯೊಬ್ಬರೂ ಒಗ್ಗೂಡಿದರೆ ಅದ್ಭುತ ಕಾರ್ಯ ಸಾಧನೆ ಸಾಧ್ಯ: ಚಿತ್ರನಟ ಶರತ್ ಲೋಹಿತಾಶ್ವ ಅಭಿಮತ
Team Udayavani, Dec 20, 2021, 4:34 PM IST
ದಾವಣಗೆರೆ:ಗ್ರಾಮಾಭಿವೃದ್ಧಿ ಹಾಗೂ ಮಹಿಳೆಯರು ಸುರಕ್ಷಿತವಾಗಿ ಬಾಳುವ ಪರಿಸರ ನಿರ್ಮಾಣವಾದಾಗ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದು ಹಿರಿಯ ಚಿತ್ರನಟ ಶರತ್ ಲೋಹಿತಾಶ್ವ ಹೇಳಿದರು. ದಾವಣಗೆರೆ ತಾಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಭಾನುವಾರ ಗ್ರಾಮಾಭ್ಯುದಯ ಸಂಘ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾದ ಕೆರೆ ಹಸ್ತಾಂತರ ಹಾಗೂ ವಿವಿಧೋದ್ದೇಶ ಸಮುಚ್ಚಯ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಎನ್ನುವುದರಿಂದ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸಮಷ್ಟಿ ಪ್ರಜ್ಞೆ ಬೇಕು. ಪ್ರತಿಯೊಬ್ಬರೂ ಒಗ್ಗೂಡಿ ಹಕ್ಕುಗಳನ್ನು ಪಡೆಯಲೇಬೇಕು ಎಂದು ಹೊರಟಾಗ ಮಾತ್ರ ಅದ್ಭುತ ಕೆಲಸಗಳನ್ನು ಮಾಡಲು ಸಾಧ್ಯ ಆಗುತ್ತದೆ ಎಂದರು.
ಕೋಲ್ಕುಂಟೆಯವರೇ ಆದ ಸುಚೇಂದ್ರಪ್ರಸಾದ್ ನನ್ನ 30 ವರ್ಷದ ಗೆಳೆಯ. ಎಂದಿಗೂ ಕೂಡ ತಮ್ಮ ಸ್ವಂತ ಕೆಲಸಕ್ಕಾಗಿ ಯೋಚನೆ ಮಾಡಿದವರಲ್ಲ. ಬದಲಾಗಿ ಸಮಷ್ಟಿ ಪ್ರಜ್ಞೆ ಇಟ್ಟುಕೊಂಡವರು. ಸಮಾಜದ ಬಗ್ಗೆ ಅಪರಿಮಿತ ಪ್ರೀತಿ ಇರಿಸಿಕೊಂಡ ಅವರು ಅದ್ಭುತ ಸಮಾಜ ನಿರ್ಮಾಣ ಆಗಬೇಕು ಎಂಬ ಬಗ್ಗೆ ದಿನನಿತ್ಯ ಯೋಚಿಸುತ್ತಿರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಕೆಲಸಗಳು ನಡೆಯಲಿ ಎಂದು ಆಶಿಸಿದರು. ಖ್ಯಾತ ಚಿತ್ರನಟ, ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದ ಗೌರವಾಧ್ಯಕ್ಷ ಸುಚೇಂದ್ರಪ್ರಸಾದ್ ಮಾತನಾಡಿ, ನಮ್ಮ ತಾಯಿಯ ಹಾಗೂ ತಾತನವರ ಊರಾದಕೋಲ್ಕುಂಟೆಯನ್ನುಮಾದರಿಗ್ರಾಮವನ್ನಾಗಿ ಮಾಡುವ ದೃಢ ಸಂಕಲ್ಪ ಹೊಂದಿದ್ದೇನೆ. ಸಮಸ್ತ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಬಿ.ಎನ್.ಗಿರೀಶ್ ಮಾತನಾಡಿ, ದಾವಣಗೆರೆತಾಲೂಕಿನಲ್ಲಿನಎಲ್ಲ53ಕೆರೆಗಳನ್ನುಮೊಟ್ಟ ಮೊದಲಿಗೆ ಸಮೀಕ್ಷೆ ಮಾಡಿಸಲಾಗಿದೆ. 17 ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಕೆರೆಗಳನ್ನು ಒತ್ತುವರಿ ಮಾಡುವ ಮೂಲಕ ಕೆರೆ ಜಾಗದಲ್ಲಿ ಮನೆಗಳನ್ನು ಕಟ್ಟಿದರೆ ಮನೆಗಳು ಹೇಗೆ ಬಾಳಿಕೆ ಬರಲು ಸಾಧ್ಯ. ಮನೆಗಳಿಗೆ ನೀರು ನುಗ್ಗಿ ಹಾನಿಗೊಂಡರೆ ಸರ್ಕಾರಕ್ಕೆ ಪರಿಹಾರ ನೀಡಲು ಹಣ ಎಲ್ಲಿಂದ ಬರಬೇಕು,ಕೆರೆಗಳ ಒತ್ತುವರಿಯಿಂದ ಪಶು, ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೆ ಶಾಪ ಹಾಕುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜನರು ಕೇವಲ ಹಕ್ಕುಗಳಿಗಾಗಿ ಹೋರಾಟ ಮಾಡದೆ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ನಮ್ಮ ಊರು, ಶಾಲೆ, ಹಾಗೂ ಪರಿಸರದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ಎಂ. ಬಸವರಾಜ ನಾಯ್ಕ,ಬಹುಭಾಷಾ ಚಿತ್ರ ನಿರ್ಮಾಪಕ ರಾಜಶೇಖರ್, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ, ಆರ್.ಆರ್. ರಮೇಶ್‌ಬಾಬು, ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಶ್ಯಾಗಲೆ, ಕುರ್ಕಿ ಸಾಯಿ ಸಮಿತಿ ಅಧ್ಯಕ್ಷ ಕೆ.ಎಚ್. ಕೊಟ್ರಪ್ಪ, ಕೈದಾಳೆ ಪಿಡಿಒ ವಿದ್ಯಾವತಿ, ಹದಡಿ ಜಿ.ಪಂ.ಮಾಜಿ ಸದಸ್ಯ ಜೆ.ಸಿ. ನಿಂಗಪ್ಪ, ತಾ.ಪಂ. ಮಾಜಿ ಸದಸ್ಯೆ ಮೀನಾ ಶ್ರೀನಿವಾಸ್, ಮಾನವ ಕಂಪೂÂಟರ್ ಬಸವರಾಜ್ ಉಮ್ರಾಣಿ, ಗ್ರಾಪಂ ಉಪಾಧ್ಯಕ್ಷೆ ಆಶಾ ಬಸವರಾಜ್, ಕೋಲ್ಕುಂಟೆ ಗಾಮಾಭ್ಯುದಯ ಸಂಘದ ಅಧ್ಯಕ್ಷ ಕೆ.ಜಿ. ಮಂಜುನಾಥ್, ನಗರಪಾಲಿಕೆ ಮಾಜಿ ಸದಸ್ಯ ಬಾ.ಮ. ಬಸವರಾಜಯ್ಯ ಇತರರು ಇದ್ದರು. ಗ್ರಾಮದ ಮುಖಂಡ ಎಸ್. ಲೋಕೇಶಪ್ಪ ಸ್ವಾಗತಿಸಿದರು, ಶಿಕ್ಷಕ ವೀರೇಶ್ ನಿರೂಪಿಸಿದರು.
ಕೆರೆಯನ್ನು ಕಲ್ಮಶಗೊಳಿಸಿದಿರಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ 370 ಕೆರೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಆಯಾ ಗ್ರಾಮಗಳಕೆರೆ ಅಭಿವೃದ್ಧಿ ಸಮಿತಿಗಳಿಗೆ ಹಸ್ತಾಂತರ ಮಾಡಲಾಗಿದೆ. ಜಿಲ್ಲೆಯಲ್ಲಿ 11 ಕೆರೆಗಳ ಹೂಳೆತ್ತಲಾಗಿದೆ. ಈ ವರ್ಷ 6 ಕೆರೆಗಳ ಅಭಿವೃದ್ಧಿಗೆ ಮಂಜೂರಾತಿ ಪಡೆಯಲಾಗಿದೆ. ಎಂದಿಗೂ ಕೆರೆಯನ್ನುಕಲ್ಮಶಗೊಳಿಸಬೇಡಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ಮನವಿ ಮಾಡಿದರು.
ಸ್ವಾರ್ಥ ಸಾಧನೆಗೆಬಂದಿಲ್ಲ
ನನ್ನ ತಾತಬಿಟ್ಟು ಹೋದ ದೊಡ್ಡಆಸ್ತಿಎಂದರೆ ಅದುಕೋಲ್ಕುಂಟೆ ಗ್ರಾಮಸ್ಥರ ಪ್ರೀತಿ. ಗ್ರಾಮದ ಜನರು ನೀಡುವಋಣದ ತೀರಿಸುವುದಕ್ಕಾಗಿ ನಾನು ಗ್ರಾಮಕ್ಕೆಬಂದಿದ್ದೇನೆಯೇ ಹೊರತುಯಾವುದೇ ಸ್ವಾರ್ಥ ಸಾಧನೆಗೆಬಂದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಗ್ರಾಮಕ್ಕೆಒಳ್ಳೆಯ ಕೆಲಸಮಾಡುತ್ತೇನೆ. ಕಲಾವಿದರಿಗೆ ಕಲಾ ಸೇವೆ ಸಾಕಾಗಿರಬೇಕು, ಚುನಾವಣೆ ಸಂದರ್ಭಕ್ಕಾಗಿಬಂದಿರಬೇಕು ಎಂದು ಜನರುಮಾತನಾಡಿಕೊಂಡಿರಬಹುದು.ಆದರೆ ನಾನು ರಾಜಕಾರಣಿಯಲ್ಲ,ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲಎಂದು ಸುಚೇಂದ್ರ ಪ್ರಸಾದ್ ವಾಗ್ಧಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.