ಗ್ರಾಮಾಭಿವೃದ್ಧಿಯೇ ಮೂಲ ಗುರಿಯಾಗಲಿ
Team Udayavani, Jan 7, 2021, 8:30 PM IST
ಚನ್ನಗಿರಿ: ಗ್ರಾಮಾಭಿವೃದ್ಧಿಯನ್ನೇ ಮೂಲ ಗುರಿನ್ನಾಗಿಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ತಾವಕೆರೆ ಶಿಲಾ ಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿಲಾಮಠದಲ್ಲಿ ರೇಣುಕ ಶಿವಾಚಾರ್ಯ ಸ್ವಾಮೀಜಿ ಮತ್ತು ಡಾ| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ನೂತನ ಸದಸ್ಯರಿಗೆ ಅಭಿನಂಧಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಾಜಕಾರಣದಲ್ಲಿ ಯಾರೊಬ್ಬರಿಗೂ ಅಧಿಕಾರ ಶಾಶ್ವತವಲ್ಲ.
ಅಧಿಕಾರ ಅವಧಿಯಲ್ಲಿ ನಾವು ಮಾಡಿದಂತಹ ಅಭಿವೃದ್ಧಿ ಕೆಲಸಗಳು ಶಾಶ್ವತವಾಗಿ ಜನಮಾಸದಲ್ಲಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆಯನ್ನು ನೀಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಥಾಣೆ: 15 ಕೊಕ್ಕರೆಗಳ ನಿಗೂಢ ಸಾವು
ಸರ್ಕಾರದಿಂದ ಬರುವಂತಹ ಅನುದಾನವನ್ನು ದುರುಪೋಗ ಆಗದಂತೆ ನೋಡಿಕೊಳ್ಳಿ, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಗೊಂಡರೆ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿಕೊಂಡು ಮುನ್ನಡೆಯುವಂತೆ ತಿಳಿಸಿದರು.
ತಾವರಕೆರೆ ಗ್ರಾಪಂ ವ್ಯಾಪ್ತಿಯ ಸದಸ್ಯರುಗಳಾದ ಟಿ.ಬಿ. ಮೃತ್ಯುಂಜಯಪ್ಪ, ಟಿ.ಪಿ. ಅಣ್ಣಾಮಲೈ, ಸಂದೀಪ್ ಎನ್.ಎಸ್., ಡಿ.ಕೆ. ಸಾವಿತ್ರಮ್ಮ, ನಾಜಿಯ ಬಾನು, ಫರ್ಜಾನ ಬಾನು, ಬಿ.ಕೆ. ಮಂಜುಳ ಹಾಗೂ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.