ಪೊಲೀಸ್ ಪೇದೆಯ 14 ಜನ ಸಂಬಂಧಿಕರು ಕ್ವಾರಂಟೈನ್‌ಗೆ
Team Udayavani, Jun 3, 2020, 11:16 AM IST
ಸಾಂದರ್ಭಿಕ ಚಿತ್ರ
ಮಲೇಬೆನ್ನೂರು: ದಾವಣಗೆರೆಯ ಪೇದೆಯೊಬ್ಬರಿಗೆ ಕೋವಿಡ್ ಪಾಸಿಟೀವ್ ಬಂದಿದ್ದು, ಅವರು ಮಲೇಬೆನ್ನೂರಿಗೆ ಬಂದು ಹೋಗಿದ್ದರಿಂದ ಪೇದೆಯ ಸಂಬಂಧಿಕರ ಮನೆಯ ಸದಸ್ಯರನ್ನು ಮಂಗಳವಾರ ಕ್ವಾರಂಟೈನ್ ಮಾಡಲಾಗಿದೆ.
ದಾವಣಗೆರೆಯಲ್ಲಿ ಕ್ವಾರಂಟೈನ್ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಪೇದೆಗೆ ಕೋವಿಡ್ ಪಾಸೀಟೀವ್ ಬಂದಿದೆ. ಮಲೇ ಬೆನ್ನೂರಿನ ಗೌಸ್ ನಗರದಲ್ಲಿರುವ ಅವರ ಅಣ್ಣನ ಮನೆಗೆ ರಂಜಾನ್ ಹಬ್ಬಕ್ಕೆ ಬಂದಿದ್ದರು. ಪೇದೆಯ ಮಗನನ್ನು ಮಲೇಬೆನ್ನೂರಿನ ತನ್ನ ಅಣ್ಣನ ಮನೆಯಲ್ಲಿ ಬಿಟ್ಟಿದ್ದನು. ತನ್ನ ಮಗನ ಹುಟ್ಟುಹಬ್ಬಕ್ಕೆಂದು ಮಲೇಬೆನ್ನೂರಿಗೆ ಬಂದಾಗ ಆತನಿಗೆ ಕೋವಿಡ್ ಪಾಸೀಟೀವ್ ಬಂದಿದೆ ಎಂದು ಲ್ಯಾಬ್ ರಿಪೋರ್ಟ್ ಬಂದಿದೆ. ಪೇದೆ ಮತ್ತು ಮಗ ಸೇರಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಐಸೊಲೇಶನ್ ಮಾಡಲಾಗಿದೆ. ಮಲೇಬೆನ್ನೂರಿನ ಆತನ ಅಣ್ಣನ ಮನೆಯವರ ಮತ್ತು ಪಕ್ಕದ ಮನೆಯವರ ಸದಸ್ಯರನ್ನು ಪೇದೆಯ ದ್ವಿತೀಯ ಸಂಪರ್ಕದಲ್ಲಿದ್ದ 9ಜನ ಮತ್ತು ಐದು ಮಕ್ಕಳು, ಒಬ್ಬಳು ಬಾಣಂತಿ ಮತ್ತು 5 ತಿಂಗಳ ಹಸುಗೂಸು ಸೇರಿದಂತೆ ಒಟ್ಟು 14 ಜನರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 7 ಜನರ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ಉಳಿದ 7 ಜನರ ಗಂಟಲು ದ್ರವ ಸಂಗ್ರಹಿಸಲು ಹರಿಹರದ ಆಸ್ಪತ್ರೆಗೆ 108 ತುರ್ತು ವಾಹನದಲ್ಲಿ ಕಳುಹಿಸಿ ಕೊಡಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಉಪ ತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಮೋಹನ್, ಪಿಎಸ್‌ಐ ವೀರಬಸಪ್ಪ ಕುಸಲಾಪುರ್, ವಾರ್ಡ್ ಸದಸ್ಯ ಆರೀಪ್ ಅಲಿ ಅವರು ಪಟ್ಟಣದ ಗೌಸ್ ನಗರದಲ್ಲಿರುವ ಎರಡು ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅವರಿಗೆ ಧೈರ್ಯ ತುಂಬಿದ್ದಾರೆ. ಎರಡೂ ಮನೆಯ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿ ಮನೆಯ ಗೋಡೆಗೆ ಕ್ವಾರಂಟೈನ್ ಗೆ ಒಳಪಡಿಸಿದೆ ಎಂಬ ಸೂಚನಾ ಫಲಕ ಹಾಕಿಸಿದ್ದಾರೆ.
ಮನೆಯ ಸದಸ್ಯರಿಗೆ ಯಾವುದಕ್ಕೂ ಮನೆಯಿಂದ ಹೊರಗಡೆ ಬರಬೇಡಿ, ನಿಮಗೆ ಅವಶ್ಯಕ ವಸ್ತುಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ತಿಳಿಸಿದ್ದಾರೆ. ಪಟ್ಟಣದ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಅಂಗಡಿಗಳ ಮಾಲೀಕರು, ಗ್ರಾಹಕರು, ಗ್ರಾಮಸ್ಥರು ಸಂಪೂರ್ಣವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಜಾಥಾ ಮೂಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.