ಕಂಟೇನ್ಮೆಂಟ್ ಝೋನ್‌ನಲ್ಲಿ ಹೆಚ್ಚಿನ ನಿಗಾ
ನಿನ್ನೆ ಮೂವರಿಗೆ ಕೋವಿಡ್ ಪಾಸಿಟಿವ್, ಸೋಂಕು-ಸಾವು ತಡೆಗೆ ಸೂಕ್ತ ಕ್ರಮ: ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್
Team Udayavani, May 12, 2020, 8:09 AM IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಇತರರು ಇದ್ದರು.
ದಾವಣಗೆರೆ: ಮತ್ತೆ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ ವ್ಯಾಪಿಸದಂತೆ ಹಾಗೂ ಸೋಂಕಿನಿಂದ ಯಾವುದೇ ಸಾವು ಸಂಭವಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ತಿಳಿಸಿದ್ದಾರೆ.
ಕಂಟೇನ್ಮೆಂಟ್ ಝೋನ್‌ನಲ್ಲೇ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣ ಕಂಡು ಬರುತ್ತಿರುವುದನ್ನು ತಡೆಗಟ್ಟಲು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹದ ಜತೆಗೆ ಅಲ್ಲಿ ವ್ಯಾಪಕ ತಪಾಸಣೆಗೆ ಸೂಚಿಸಲಾಗಿದೆ. ಈಗ ಗಂಟಲುದ್ರವ ಸಂಗ್ರಹದ ಪ್ರಮಾಣ ದ್ವಿಗುಣಗೊಳಿಸಲಾಗುವುದು. ಜಿಲ್ಲಾ ತಜ್ಞ ವೈದ್ಯರ 2 ತಂಡದ ಉಸ್ತುವಾರಿಯಲ್ಲಿ ಎಲ್ಲಾ ಪ್ರಕ್ರಿಯೆ ನಡೆಯಲಿವೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಯಲ್ಲಿ 32 ದಿನ ಕೋವಿಡ್ ಪಾಸಿಟಿವ್ ಪ್ರಕರಣ ಇರಲಿಲ್ಲ. ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದು ಆತಂಕಕಾರಿ ಸಂಗತಿ. ನಾಲ್ವರ ಸಾವು ಸಹ ಸಂಭವಿಸಿದ್ದನ್ನು ತಪ್ಪಿಸಬಹುದಿತ್ತೇನೋ ಎಂಬ ತಪ್ಪಿತಸ್ಥ ಮನೋಭಾವ ಕಾಡುತ್ತಿದೆ. ಮುಂದೆ ಸಾವು ಸಂಭವಿಸಿದಂತೆ ತಜ್ಞರ ತಂಡ ರಚಿಸಲಾಗಿದೆ. ಅಗತ್ಯ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕಂಟೈನ್‌ಮೆಂಟ್ ಝೋನ್‌ನಲ್ಲಿ ಶೇ. 90 ಜನರಿಗೆ ಅಗತ್ಯ ವಸ್ತುಗಳ ತಲುಪಿಸಿದ್ದು, ಉಳಿದವರಿಗೂ ತಲುಪಿಸಲಾಗುವುದು ಎಂದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿರುವುದರಿಂದ ಹೆರಿಗೆ ವಿಭಾಗವನ್ನು ಚಾಮರಾಜಪೇಟೆಯ ಮಕ್ಕಳ ಆಸ್ಪತ್ರೆ, ಹೊರ ರೋಗಿಗಳ ವಿಭಾಗವನ್ನು ಬಾಪೂಜಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುವುದು. ಖಾಸಗಿ ಆಸ್ಪತ್ರೆ ಸಿಬ್ಬಂದಿ, ತಂತ್ರಜ್ಞರು ಯಾವುದಕ್ಕೂ ಹೆದರದೆ ಕೆಲಸಕ್ಕೆ ಹೋಗಬೇಕು. ಪ್ರತಿಯೊಬ್ಬರ ಸುರಕ್ಷತೆಗೆ ಜಿಲ್ಲಾಡಳಿತ
ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಕಂಟೈನ್ ಸರ್ವೇ ಪ್ರಕಾರ ಜಿಲ್ಲೆಯಲ್ಲಿ 524 ಕೋವಿಡ್ ಪಾಸಿಟಿವ್ ಪ್ರಕರಣಗಳಿಗೆ ಜಿಲ್ಲಾ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ. ಈಗಿನ 5 ಪ್ರಕರಣಗಳಲ್ಲಿ ಒಬ್ಬರ ಸ್ಥಿತಿ ಮಾತ್ರ ಗಂಭೀರವಾಗಿದ್ದು, ವೈದ್ಯರ ಪ್ರಕಾರ ಆ ರೋಗಿಯೂ ಚೇತರಿಸಿಕೊಳ್ಳಲಿದ್ದಾರೆ. ಪ್ರತಿಯೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ತಿಳಿಸಿದ ಅವರು, ಜೂಜಾಟದಲ್ಲಿ ತೊಡಗಿದ್ದ ಶಿಕ್ಷಣ ಇಲಾಖೆಯ 6 ಹಾಗೂ ತಾಪಂನ ಇಬ್ಬರ ವಿರುದ್ಧ ಮಂಗಳವಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕ ಉತ್ತರಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ಡಾ| ಜಿ.ಡಿ. ರಾಘವನ್, ಡಾ| ಪ್ರಮೋದ್ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.
ಸೋಂಕಿನ ಮೂಲ ಪತ್ತೆಗೆ ತನಿಖೆ
ದಾವಣಗೆರೆ ಜಿಲ್ಲೆಯಲ್ಲಿ ವಿದೇಶಗಳಿಂದ ಬಂದವರು ಇಲ್ಲ. ಜಿಲ್ಲೆಗೆ ಬಂದಿರುವ, ಇತರೆಡೆ ಹೋಗಿರುವ 70 ಜನರಲ್ಲೂ ಕೋವಿಡ್ ಸೋಂಕು ಇಲ್ಲ. ಈರುಳ್ಳಿ ವ್ಯಾಪಾರಕ್ಕೆ ಬೇರೆಡೆ ಹೋಗಿ ಬಂದಿರುವ ಮೂವರು ಸೋಂಕಿನ ಮೂಲ ಎಂಬ ಸುಳಿವು ಸಿಕ್ಕಿದೆಯಾದರೂ ಖಚಿತವಾಗಿ ಹೇಳುವಂತಿಲ್ಲ. ಆ ಬಗ್ಗೆ ತನಿಖೆ ನಡೆದಿದೆ. ಆಂಜನೇಯ ಬಡಾವಣೆಯಲ್ಲಿ ನೋಟು ಸಿಕ್ಕಿರುವುದು ನಿಜ. ಆದರೆ ದುರುದ್ದೇಶಪೂರ್ವಕವಾಗಿಯೇ ನೋಟು ಹಾಕಿದ್ದಾರೆ ಎಂಬುದಕ್ಕೆ ಸಾಕ್ಷಿ ಇಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ತಿಳಿಸಿದರು. ಮೂವರಿಗೆ ಕೊರೊನಾ ದೃಢ
ದಾವಣಗೆರೆಯಲ್ಲಿ ಸೋಮವಾರ ಮತ್ತೆ ಮೂವರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟಾರೆ 65 ಸಕ್ರಿಯ ಪ್ರಕರಣಗಳಿವೆ. ಮೂವರೂ ಜಾಲಿನಗರದವರೇ
ಆಗಿದ್ದಾರೆ. ಒಂದೇ ಮನೆಯವರು ಇಬ್ಬರು ಮತ್ತು ಮತ್ತೂಬ್ಬರು ಸಂಬಂಧಿಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ರೋಗಿ ಸಂಖ್ಯೆ 850(33 ವರ್ಷ) ರೋಗಿ 662ರ ಪ್ರಾಥಮಿಕ ಸಂಪರ್ಕ, ರೋಗಿ ನಂಬರ್ 851 ರೋಗಿ ನಂಬರ್ 663 ಹಾಗೂ ರೋಗಿ 852 ರೋಗಿ ನಂಬರ್ 667ರ ಪ್ರಾಥಮಿಕ
ಸಂಪರ್ಕದಲ್ಲಿದ್ದರು. ಮೂವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 12 ಜನರನ್ನು ಐಸೋಲೇಷನ್ ಮಾಡಲಾಗಿದೆ. ದ್ವಿತೀಯ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಲಾಗುತ್ತಿದೆ.
ಸೋಮವಾರ 240 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಒಟ್ಟು 404 ಗಂಟಲು ದ್ರವ ಮಾದರಿಗಳ ವರದಿ ಬರಬೇಕಾಗಿದೆ. ಎಸ್. ಎಸ್. ಹೈಟೆಕ್ ಆಸ್ಪತ್ರೆಯಲ್ಲಿನ ಪ್ರಯೋಗಾಲಯ ಸಜ್ಜಾಗಿದ್ದು, ಪರೀಕ್ಷೆಗೆ ಸಮ್ಮತಿಸಿದರೆ ಮಂಗಳವಾರದಿಂದಲೇ ಸ್ವಾಬ್ ಟೆಸ್ಟ್‌ಗೆ ಮಾದರಿ ಕಳಿಸಲಾಗುವುದು ಎಂದರು.
ರೋಗಿ ನಂಬರ್ 533ರ 14 ದಿನಗಳ ಅವಧಿ ಪೂರ್ಣಗೊಂಡಿದ್ದು, ಬಹಳಷ್ಟು ಚೇತರಿಸಿಕೊಂಡಿದ್ದಾರೆ. ಸೋಂಕಿತರಲ್ಲಿ ಬಹುತೇಕರು ಗುಣಮುಖರಾಗುತ್ತಿದ್ದಾರೆ. ನಾವು ಕೊರೊನಾ ಯುದ್ದದಲ್ಲಿ ಜಯ ಸಾಧಿಸಿಯೇ ತೀರುತ್ತೇವೆ. ಹಾಗಾಗಿ ಜನರು ಭಯಪಡುವ ಅಗತ್ಯವೇ ಇಲ್ಲ ಎಂದರು.
ಕೊರೊನಾ ಸೋಂಕಿತರು, ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿರುವರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಆಯುಷ್ ಇಲಾಖೆ ಶಿಫಾರಸು ಮಾಡಿರುವ ಖಾದ್ಯ, ಸಿರಪ್, ಮ್ಯಾಂಗೋಚಾಕೋ ಬಾರ್, ಚಿಕ್ಕಿ ನೀಡಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.