ವೀರಯೋಧರ ಕಾರ್ಯ ಸದಾಸ್ಮರಿಸೋಣ: ಬಸವರೆಡ್ಡಿ
Team Udayavani, Oct 20, 2021, 6:56 PM IST
ಚಳ್ಳಕೆರೆ: ಕಳೆದ ಹಲವಾರು ದಶಮಾನಗಳಿಂದ ರಾಷ್ಟ್ರದ ಜನರನ್ನು ಅಪಾಯದಿಂದ ಪಾರು ಮಾಡಿದ ಸದಾಕಾಲ ದೇಶದ ರಕ್ಷಣೆಗೆ ಕಂಕಣ ಬದ್ದರಾಗಿ ನಿಂತಿರುವ ವೀರಸೈನಿಕರ ಕಾರ್ಯದಕ್ಷತೆಗೆ ನಾವೆಲ್ಲರೂ ಕೃತಜ್ಞತಾ ಪೂರ್ವಕವಾಗಿ ಅವರ ಸೇವೆಯನ್ನು ಸ್ಮರಿಸಬೇಕು. ಗ್ರಾಮದ ಎಲ್ಲರೂ ಸೇರಿ ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯವೆಂದು ಸಮಾಜ ಸೇವಕ ಹಾಗೂ ಮಾಜಿ ಸೈನಿಕ ಎಸ್.ಟಿ. ಬಸವರೆಡ್ಡಿ ತಿಳಿಸಿದರು.
ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಯಲು ರಂಗಮಂದಿರದಲ್ಲಿ ಗ್ರಾಮಸ್ಥರು ಗ್ರಾಮದ ವೀರಯೋಧರು ಮತ್ತು ಕೊರೊನಾ ವಿರುದ್ಧ ಹೋರಾಡಿದ ಕೊರೊನಾ ವಾರಿಯರ್ಸ್‌ನ್ನು ಅಭಿನಂದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶ ಭಕ್ತರ ರಾಷ್ಟ್ರವಾದ ಭಾರತ ಇಂತಹ ಸೈನಿಕರ ಕರ್ತವ್ಯ ಪ್ರಜ್ಞೆಯಿಂದ ನಾವೆಲ್ಲರೂ ನೆಮ್ಮದಿಯ ಬದುಕನ್ನು ಕಾಣುತ್ತಿದ್ದು, ನಮ್ಮ ಯೋಧರು ಸದಾ ಅಭಿನಂದನಾರ್ಹರು ಎಂದರು. ಮುಖ್ಯ ಅತಿಥಿ ಪಿಎಸ್‌ಐ ಎ.ಎಸ್. ಮಹೇಶ್‌ಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕಾರ್ಯಕ್ರಮ ಯೋಧರಿಗೆ ಸ್ಫೂರ್ತಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮ ರೂಪಿಸುವ ನಮ್ಮ ಗ್ರಾಮಸ್ಥರಿಗೆ ಯೋಧರು ಮತ್ತು ಕೊರೊನಾ ವಾರಿಯಸ್ ìನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವೆಂದರು.
ನಿವೃತ್ತ ಯೋಧರಾದ ಎನ್.ತಿಪ್ಪೇಸ್ವಾಮಿ, ಜಿ.ವರದರಾಜು, ಬಿ.ರಮೇಶ್, ಆಶಾ ಕಾರ್ಯಕರ್ತೆಯರಾದ ಎಸ್.ಎನ್. ಗಂಗಮ್ಮ, ಗುರುಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಂದಾಯಾ ಧಿಕಾರಿ ಲಿಂಗೇಗೌಡ, ಪಿಡಿಒ ಎಂ.ರಾಮಚಂದ್ರಪ್ಪ, ಗ್ರಾಪಂ ಸದಸ್ಯರಾದ ಎಸ್. ಕೆ. ಮಂಗಳಮ್ಮ, ರೇಣುಕಮ್ಮ, ಗೌರಮ್ಮ, ವಿಜಯಮ್ಮ, ದ್ಯಾಮಲಾಂಭ, ಪ್ರಭು ಯಾದವ್, ಈ.ಮಂಜುನಾಥ, ಕೆ.ರುದ್ರಮುನಿ, ಚನ್ನಿಗರಾಯ, ಮಹೇಶ್, ರಂಗಸ್ವಾಮಿ, ನಾಗರಾಜು, ಶ್ರೀಧರ, ದ್ಯಾಮಣ್ಣ, ಚಿದಾನಂದಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ಹೊಸ ಸೇರ್ಪಡೆ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.