ಸಾರಿಗೆ ಕಾರ್ಗೋ ಸೇವೆಗೆ 6.22 ಕೋಟಿ ಆದಾಯ
ಕೆಎಸ್‌ಆರ್‌ಟಿಸಿ 3,73,58,664 ರೂ., ಕಲ್ಯಾಣ ಸಾರಿಗೆ 1,22,84,814 ರೂ., ವಾಯವ್ಯ ಸಾರಿಗೆ 1,29,13,034 ರೂ. ಆದಾಯ
Team Udayavani, Apr 14, 2022, 11:33 AM IST
ಹುಬ್ಬಳ್ಳಿ: ಸಾರಿಗೆ ಆದಾಯದ ಹೊರತಾಗಿ ಪರ್ಯಾಯ ಆದಾಯವನ್ನಾಗಿ ಜಾರಿಗೆ ತಂದ ನಮ್ಮ ಕಾರ್ಗೋ ಸೇವೆ ಒಂದು ವರ್ಷ ಪೂರೈಸಿದ್ದು, ಮೂರು ನಿಗಮಗಳಿಗೆ ಸೇರಿ 6.22 ಕೋಟಿ ಆದಾಯ ಬಂದಿದೆ.
ಕೋವಿಡ್ ನಂತರದಲ್ಲಿ ಸಾರಿಗೆ ಆದಾಯ ಜತೆಗೆ ಇತರೆ ಆದಾಯದ ಮೂಲಗಳ ಬಗ್ಗೆ ಗಮನ ಹರಿಸುವಂತೆ ಮಾಡಿದೆ. ಕೋರಿಯರ್ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತಿತ್ತು. ಆದರೆ ಇದನ್ನು ಸಂಪೂರ್ಣವಾಗಿ ಸಂಸ್ಥೆ ನಿರ್ವಹಣೆ ಮಾಡುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು ಎನ್ನುವ ಕಾರಣಕ್ಕೆ 2021 ಮಾರ್ಚ್ ತಿಂಗಳಲ್ಲಿ ಪಾರ್ಸೆಲ್ ವ್ಯವಸ್ಥೆಗೆ ತಂತ್ರಜ್ಞಾನ ಸ್ಪರ್ಶ ನೀಡಿ ಜಾರಿಗೆ ತರಲಾಯಿತು. ತ್ವರಿತ ಹಾಗೂ ವಿಶ್ವಾಸಾರ್ಹತೆ ಕಾರಣದಿಂದ ಜನರು ನಮ್ಮ ಕಾರ್ಗೋ ವ್ಯವಸ್ಥೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 2021 ಮಾರ್ಚ್ ನಿಂದ 2022 ಮಾರ್ಚ್ ಅಂತ್ಯದವರೆಗೆ ಕೆಎಸ್‌ಆರ್‌ಟಿಸಿ, ವಾಕರಸಾ ಸಂಸ್ಥೆ, ಕಕರಸಾ ಸಂಸ್ಥೆಗಳಿಂದ 6.22 ಕೋಟಿ ರೂ. ಆದಾಯ ಬಂದಿದೆ.
ಮೂರು ನಿಗಮಗಳಿಂದ ಒಂದು ವರ್ಷದಲ್ಲಿ 3,86,269 ಪಾರ್ಸೆಲ್ ಗಳನ್ನು ರಾಜ್ಯ ಹಾಗೂ ಇತರೆ ರಾಜ್ಯಗಳಿಗೆ ತಲುಪಿಸಲಾಗಿದೆ. ಇದರಿಂದ 6,22,84,814 ರೂ. ಆದಾಯ ಬಂದಿದೆ. ಕೆಎಸ್‌ಆರ್‌ಟಿಸಿ-3,73,58,664 ರೂ. (18,03,367 ಪಾರ್ಸೆಲ್), ಕಲ್ಯಾಣ ಕರ್ನಾಟಕ ಸಾರಿಗೆ-1,22,84,814 ರೂ. (86,516), ವಾಯವ್ಯ ಸಾರಿಗೆ ಸಂಸ್ಥೆ-1,29,13,034 ರೂ. (1,19,386) ಆದಾಯ ಬಂದಿದೆ. ಕೆಎಸ್‌ಆರ್‌ಟಿಸಿಯಲ್ಲಿ 17 ವಿಭಾಗಗಳಿವೆ ಪ್ರಮುಖವಾಗಿ ಬೃಹತ್ ವಾಣಿಜ್ಯ ಕೇಂದ್ರ ಬೆಂಗಳೂರು ಈ ಸಂಸ್ಥೆ ವ್ಯಾಪ್ತಿಯಲ್ಲಿರುವ ಕಾರಣ ಆದಾಯ ಹಾಗೂ ಪಾರ್ಸೆಲ್ ಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಹುಬ್ಬಳ್ಳಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, 9 ವಿಭಾಗಗಳ ಪೈಕಿ 8 ವಿಭಾಗಗಳಲ್ಲಿ ಮಾತ್ರ ಕಾರ್ಗೋ ಸೇವೆಯಿದೆ.
ಕೋರಿಯರ್, ಸಾಮಾನ್ಯ ಸರಕು, ಹಾಳಾಗಬಹುದಾದ ಸರಕು ಎಂದು ವಿಂಗಡಿಸಿ ಪ್ರತ್ಯೇಕ ದರ ನಿಗದಿ ಪಡಿಸಲಾಗಿದೆ. ಬುಕ್ ಮಾಡುವುದರಿಂದ ಹಿಡಿದು ಸರಕು ತಲುಪುವವರೆಗೂ ಟ್ಯಾÅಕಿಂಗ್ ಮಾಡಬಹುದಾಗಿದೆ. ಮೌಲ್ಯಯುತ ಸರಕಾಗಿದ್ದರೆ ಅದರ ದರ ಹಾಗೂ ಇತರೆ ಮಾಹಿತಿ ತಿಳಿಸಿ ವಿಮೆ ಕೂಡ ಮಾಡಿಸಬಹುದಾಗಿದೆ. ಮೊದಲ ಹಂತದಲ್ಲಿ ಪ್ರಮುಖವಾಗಿ ನಿಲ್ದಾಣಗಳಲ್ಲಿ ಮಾತ್ರ ಪಾರ್ಸೆಲ್ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿತ್ತು. ನಂತರ ತಾಲೂಕು ಕೇಂದ್ರದ ಬಸ್ ನಿಲ್ದಾಣಗಳಿಗೂ ವಿಸ್ತರಿಸಲಾಗಿದೆ. ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 27 ಕೇಂದ್ರಗಳು ಎರಡನೇ ಹಂತದಲ್ಲಿ 15 ಕೇಂದ್ರಗಳನ್ನು ಕಾರ್ಯ ನಿರ್ವಹಿಸುತ್ತಿವೆ. ಬೇಡಿಕೆ ಬಂದ ನಿಲ್ದಾಣಗಳಲ್ಲಿ ಈ ಕೇಂದ್ರಗಳನ್ನು ಆರಂಭಿಸುವ ಚಿಂತನೆ ಅಧಿಕಾರಿಗಳಲ್ಲಿದೆ.
ರೈಲ್ವೆ ಸೇರಿದಂತೆ ಖಾಸಗಿ ಸಂಸ್ಥೆಗಳು ಪ್ರಯಾಣಿಕ ಸೇವೆಯ ಜತೆಗೆ ಹೆಚ್ಚು ಒತ್ತು ಸರಕು ಸಾಗಾಣಿಕೆಗೆ ನೀಡಿವೆ. ಮೂರು ಸಾರಿಗೆ ಸಂಸ್ಥೆಗಳಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳಿವೆ. ಇಷ್ಟೊಂದು ಪರಿಣಾಮಕಾರಿ ಸಾರಿಗೆ ಜಾಲವನ್ನು ಸಂಪೂರ್ಣ ಸದ್ಬಳಕೆ ಸಾಧ್ಯವಾಗಿಲ್ಲ. ಈ ವ್ಯವಸ್ಥೆಯನ್ನು ಹೆಚ್ಚುವರಿ ಆದಾಯದಂತೆ ಪರಿಗಣಿಸಲಾಗಿದ್ದು, ಪರ್ಯಾಯ ಆದಾಯದ ಮೂಲವನ್ನಾಗಿಸುವತ್ತ ಚಿಂತನೆ ನಡೆಯಬೇಕು ಎನ್ನುವ ಅಭಿಪ್ರಾಯಗಳಿವೆ.
ನಮ್ಮ ಕಾರ್ಗೋ ವ್ಯವಸ್ಥೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎರಡು ಹಂತದಲ್ಲಿ ಪಾರ್ಸ್‌ಲ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಎಲ್ಲಾ ಬಸ್ ನಿಲ್ದಾಣಗಳಿಗೂ ಮಾಡಬೇಕು ಎನ್ನುವ ಗುರಿಯಿದೆ. ಬೇಡಿಕೆಗೆ ತಕ್ಕಂತೆ ಕೇಂದ್ರ ಆರಂಭಕ್ಕೆ ಸಿದ್ಧರಿದ್ದೇವೆ. -ರಾಜೇಶ ಹುದ್ದಾರ, ಮುಖ್ಯ ಸಂಚಾರ ವ್ಯವಸ್ಥಾಪಕ, ವಾಕರಸಾ ಸಂಸ್ಥೆ
ಖಾಸಗಿ ಕಂಪನಿಗಳ ಮಾದರಿಯಲ್ಲಿ ಜಾರಿಗೊಳಿಸಿ ಒಂದು ವರ್ಷದ ಅವಧಿಯಲ್ಲಿ ಹಲವು ಹೊಸ ವಿಚಾರಗಳನ್ನು ಕಲಿತಿದ್ದೇವೆ. ಇನ್ನಷ್ಟು ಹೊಸ ಸೌಲಭ್ಯಗಳನ್ನು ಮುಂದಿನ ಹಂತದಲ್ಲಿ ಅಳವಡಿಸಿ ಮತ್ತಷ್ಟು ಜನರಿಗೆ ಹತ್ತಿರವಾಗಿಸ ಲಾಗುವುದು. ಸಮಗ್ರ ಸಾರಿಗೆ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ಅಕ್ರಮ ಹಾಗೂ ಅನಧಿಕೃತ ಪಾರ್ಸಲ್ ಸಾಗಾಟದ ಮೇಲೆ ನಿಗಾ ವಹಿಸಲಾಗಿದೆ. –ಗುರುದತ್ತ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ, ವಾಕರಸಾ ಸಂಸೆ
-ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.