ಪಾಲಕರ ಜತೆ ಹೋಗಲು ನಿರಾಕರಿಸಿದ ಯುವತಿ
ಅನ್ಯಧರ್ಮದ ಯುವಕನೊಂದಿಗೆ ಮದುವೆ ಪ್ರಕರಣ
Team Udayavani, Apr 8, 2022, 10:31 AM IST
ಹುಬ್ಬಳ್ಳಿ: ಅನ್ಯ ಧರ್ಮೀಯ ಯುವಕ- ಯುವತಿ ಪ್ರೀತಿಸಿ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕುಟುಂಬದವರೊಡನೆ ಹೋಗಲು ನಿರಾಕರಿಸಿದ ಘಟನೆ ನಡೆಯಿತು.
ಪ್ರತಿಭಟನೆಗೆ ಕಾರಣವಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಯುವತಿಯನ್ನು ಕೇಶ್ವಾಪುರ ಠಾಣೆಗೆ ಕರೆದುಕೊಂಡು ಬಂದಿದ್ದರು. ಈ ಸಮಯದಲ್ಲಿ ಯುವತಿ ಕುಟುಂಬದವರು ಹಾಗೂ ಎಸ್‌ಎಸ್‌ಕೆ ಸಮಾಜದ ಪ್ರಮುಖರನ್ನು ಠಾಣೆಗೆ ಕರೆಸಲಾಗಿತ್ತು. ಕುಟುಂಬದ ಸದಸ್ಯರು ಹಾಗೂ ಸಮಾಜದ ಪ್ರಮುಖರು ಯುವತಿಯ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಕಾರಣಕ್ಕೂ ಕುಟುಂಬದವರೊಡನೆ ಹೋಗಲು ಒಪ್ಪಲಿಲ್ಲ.
ಈ ಸಂದರ್ಭದಲ್ಲಿ ಯುವತಿಯ ತಾಯಿ ನೋವಿನಿಂದ ಬೇಡಿಕೊಂಡರೂ ಯುವತಿ ಅವರೊಂದಿಗೆ ತೆರಳಲಿಲ್ಲ. ಹೆಚ್ಚಿಗೆ ಒತ್ತಡ ಹಾಕಿದರೆ ಪೊಲೀಸ್ ಆಯುಕ್ತರ ಬಳಿ ರಕ್ಷಣೆ ಕೋರುವುದಾಗಿ ಪ್ರತಿಕ್ರಿಯಿಸಿದ್ದಾಳೆ ಎಂದು ತಿಳಿದು ಬಂದಿದೆ.
ಅನ್ಯಧರ್ಮವಾಗಿದ್ದರಿಂದ ಇದು ಲವ್ ಜಿಹಾದ್ ಪ್ರಕರಣವೆಂದು ಕುಟುಂಬದ ಸದಸ್ಯರ ನೇತೃತ್ವದಲ್ಲಿ ಎಸ್‌ಎಸ್‌ಕೆ ಸಮಾಜ ಹಾಗೂ ಕೆಲ ಹಿಂದೂಪರ ಸಂಘಟನೆಗಳ ಪ್ರಮುಖರು ಉಪನಗರ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಒಂದು ದಿನ ಗಡುವು ನೀಡಿ ಯುವತಿಯನ್ನು ಕರೆತಂದು ಒಪ್ಪಿಸದಿದ್ದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯುವತಿಯನ್ನು ಕೇಶ್ವಾಪುರ ಠಾಣೆಗೆ ಕರೆದುಕೊಂಡು ಬಂದಿದ್ದರು. ಯುವತಿ ಕುಟುಂಬದವರೊಡನೆ ಬಾರದ ಹಿನ್ನೆಲೆಯಲ್ಲಿ ಸಮಾಜದ ಕೆಲವರು ಆಕ್ರೋಶ ವ್ಯಕ್ತಪಡಿಸಿ ಇಂತಹ ಘಟನೆಗಳು ನಡೆದಾಗ ಸಮಾಜದ ಪ್ರಮುಖರ ಗಮನಕ್ಕೆ ತರುವ ಕೆಲಸ ಆಗಬೇಕು ಎಂದರು.
ಯುವತಿಯ ತಾಯಿ ಮಾತನಾಡಿ, ಮನೆಯಲ್ಲಿ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಾತನಾಡಿಸಲು ಬರುವಂತೆ ಗೋಗರೆದರೂ ಇನ್ನೊಂದು ದಿನ ಬರುವುದಾಗಿ ಹೇಳಿದ್ದಾಳೆ. ಮಗಳನ್ನು ಮನಪರಿವರ್ತಿಸಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಅವಳಿಗೆ ಯಾವುದೇ ಪ್ರೀತಿ ಇಲ್ಲದಂತೆ ಮಾಡಿದ್ದಾರೆ. ಅವನ ಜೊತೆಯಲ್ಲಿ ಇರುವುದಾಗಿ ಹೇಳುತ್ತಿದ್ದಾಳೆ. ಅವಳು ಇನ್ನೂ ಚಿಕ್ಕವಳಾಗಿದ್ದು, ಪ್ರೀತಿ ಹೆಸರಲ್ಲಿ ಮನ ಪರಿವರ್ತಿಸಲಾಗಿದ್ದು, ನನ್ನ ಮಗಳನ್ನು ನಮಗೆ ಕೊಡಿಸಬೇಕು ಎಂದು ಅಳಲು ತೋಡಿಕೊಂಡರು.
ಎಸ್‌ಎಸ್‌ಕೆ ಸಮಾಜದ ಧರ್ಮದರ್ಶಿ ನೀಲಕಂಠ ಸಾ ಜಡಿ ಮಾತನಾಡಿ, ಸಣ್ಣ ವಯಸ್ಸು ಏನೂ ಅರಿಯದೆ ಈ ಬಲೆಗೆ ಬಿದ್ದಿದ್ದಾಳೆ. ಇದನ್ನು ಸರಿಪಡಿಸಲು ಸಮಾಜದ ಮುಖಂಡರು, ಅವರ ಕುಟುಂಬದವರು ಕೂಡ ಪ್ರಯತ್ನ ಮಾಡಿದ್ದೇವೆ. ಎಷ್ಟೇ ಹೇಳಿದರೂ ನಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ. ಅವಳಿಗೆ ಯಾವುದರ ಬಗ್ಗೆ ಗೊತ್ತಿಲ್ಲ. ಒಂದೇ ಕಡೆ ಮಾತನಾಡುತ್ತಿದ್ದಾಳೆ. ಸಹಜ ಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ ಎಂದರು.
ಸಮಾಜದ ಪ್ರಮುಖರಾದ ಭಾಸ್ಕರ ಜಿತೂರಿ, ರಾಜೇಶ್ವರಿ ಜಡಿ, ಹನುಮಂತಸಾ ನಿರಂಜನ, ಸುನಿಲ, ರಾಜೇಶ, ಹನುಮಂತ ಸಾದಲಬಂಜನ ಸೇರಿದಂತೆ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.