ಬಲಿಷ್ಠ ಭಾರತಕ್ಕಾಗಿ ಯುವಜನ ಸಹಭಾಗಿತ್ವ

ಇತಿಹಾಸ ಸೃಷ್ಟಿ ಸಿದ ಸಂಕಲ ದ ಸಂಕಲ್ಪ ನಡಿಗೆ ಎ.ಎಸ್‌. ಪಾಟೀಲ್‌ ನಡಹಳ್ಳಿ ಕರ್ತೃತ್ವ ಶಕ್ತಿ

Team Udayavani, Aug 14, 2022, 9:12 AM IST

Add

ಭರತಗೌಡ ಪಾಟೀಲ ನೇತೃತ್ವದ ಧೀಶಕ್ತಿ

ಯುವ ಸಮೂಹದ ದೇಶಭಕ್ತಿ ಅನಾವರಣ-ಸ್ವಾ ತಂತ್ರ್ಯ ಅಮೃತಮಹೋತ್ಸವದ ಅನುರಣನ

ಶಾಸಕ ನಡಹಳ್ಳಿ ಮನದ ಮಾತು..

ನಮ್ಮ ದೇಶದ ಇತಿಹಾಸವನ್ನು ಒಂದು ಬಾರಿ ತಿರುಗಿ ನೋಡಬೇಕು. ಆರ್ಥಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಶೈಕ್ಷಣಿಕವಾಗಿ ಶ್ರೀಮಂತಿಕೆಯಿಂದಿದ್ದ ಸಂಸ್ಕಾರಯುತ ದೇಶ ಪರಕೀಯರ ಗುಲಾಮಗಿರಿಗೆ ಹೇಗೆ ಒಳಪಟ್ಟಿತು ಎನ್ನುವುದನ್ನು ಯೋಚನೆ ಮಾಡಿದಾಗ ನಮಗೆ ಕಂಡು ಬರುವುದು ಒಗ್ಗಟ್ಟಿನ ಮತ್ತು ದೇಶಾಭಿಮಾನದ ಕೊರತೆ. ಭೇದ ತೋರದೆ ಎಲ್ಲರಿಗೂ ನೆಲೆ ಕೊಟ್ಟವಳು ಭಾರತ ಮಾತೆ. ಅವಳನ್ನು ಮೊದಲ ಸ್ಥಾನದಲ್ಲಿಟ್ಟು ಪೂಜಿಸುವ, ಪ್ರೀತಿಸುವ ಸಂಕಲ್ಪದೊಂದಿಗೆ ಭಾರತೀಯ ಜೀವನ ಪದ್ಧತಿ ಅಳವಡಿಸಿಕೊಳ್ಳುವ ಯುವ ಜನಾಂಗವನ್ನು ಕಟ್ಟಬೇಕಿದೆ. ಇದರಲ್ಲಿ ಸ್ವಲ್ಪ ತಪ್ಪಾದರೂ ಇತಿಹಾಸ ಮರುಕಳಿಸುವ ಅಪಾಯದ ಆತಂಕ ಕಾಡುತ್ತದೆ.

ನಾನು ಮೊದಲು ಭಾರತೀಯ ನಂತರ ಕನ್ನಡಿಗ, ತಂದೆ ತಾಯಿಯ ಮಗ, ಹೆಂಡತಿ, ಮಕ್ಕಳು ನಾನು. ನನ್ನದು ಬರಬೇಕು. ದೇಶವೇ ಮೊದಲು, ದೇಶವೇ ಎಲ್ಲಾ, ದೇಶವಿದ್ದರೆ ನಾವೆಲ್ಲ, ದೇಶ ಬೆಳೆದರೆ ನಾವೆಲ್ಲಾ ಬೆಳೆದಂತೆ. ದೇಶದ ಅಭಿವೃದ್ಧಿಯೇ ನಮ್ಮ ಅಭಿವೃದ್ಧಿ ಎನ್ನುವ ಸಂಕಲ್ಪದೊಂದಿಗೆ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸದಾ ಸಿದ್ಧರಾಗಿರುವ ದೇಶದ ಜನಸಂಖ್ಯೆಯ ಶೇ.50ರಷ್ಟಿರುವ ಯುವ ಸಮುದಾಯವನ್ನು ಕಟ್ಟಬೇಕಿದೆ.

ಈ ಯುವಸಮೂಹವೇ ದೇಶದ ಸಂಪತ್ತು. ಜಗತ್ತಿನಲ್ಲಿಯೇ ಅತಿಹೆಚ್ಚು ಯುವಶಕ್ತಿಯ ಸಂಪತ್ತು ಹೊಂದಿರುವ ಒಂದೇ ಒಂದು ರಾಷ್ಟ್ರ ಭಾರತ. ಸ್ವಾತಂತ್ರ್ಯ ನಂತರ ಹುಟ್ಟಿದ ಭಾರತೀಯರಿಗೆ ಸ್ವಾತಂತ್ರ್ಯ ಸಂಗ್ರಾಮದ ಪರಿಚಯ ಮಾಡಿಸಿಕೊಡುವುದು, ಸ್ವಾತಂತ್ರ್ಯ ದೊರೆತ ನಂತರ ಅನಕ್ಷರಸ್ಥ ಬಡ ಭಾರತವನ್ನು ಶ್ರೀಮಂತವನ್ನಾಗಿಸಲು ಕೊಡುಗೆ ನೀಡಿದವರನ್ನು ಸ್ಮರಿಸಿ ಯುವಸಮೂಹಕ್ಕೆ ಪರಿಚಯಿಸಿಕೊಡುವುದು, ಭವಿಷ್ಯದ ಭಾರತ ಹೇಗಿರಬೇಕು ಎನ್ನುವ ಸಂಕಲ್ಪ ಮಾಡಿಸುವುದು ನಡಿಗೆಯ ಮುಖ್ಯ ಉದ್ದೇಶವಾಗಿತ್ತು. 8 ದಿನಗಳ ನಡಿಗೆಯಲ್ಲಿ ಯುವಸಮೂಹದ ಜೊತೆ ಹೆಜ್ಜೆ ಹಾಕಿ ನಡೆಯುವಾಗ ಅವರ ಭಾವನೆಗಳು, ಆಸೆಗಳು ತಿಳಿದು ಬಂದವು.

ಇದು 75 ಕಿಮೀಗೆ ಸೀಮಿತವಾಗಬಾರದು. ಕರ್ನಾಟಕದಲ್ಲಿ ಕನಿಷ್ಠ 750 ಕಿಮೀ ನಡಿಗೆ ಪ್ರತಿ ಹಂತದಲ್ಲಿ ನಡೆದರೆ ಭವಿಷ್ಯದಲ್ಲಿ ಭಾರತ ಕಟ್ಟಲು ಅತ್ಯಂತ ಪ್ರೇರಣಾದಾಯಕವಾಗುತ್ತಿತ್ತು ಅನ್ನಿಸಿತು. ಭವಿಷ್ಯದಲ್ಲಿ ನನ್ನದೊಂದು ಕನಸಿದೆ. ಅದು ಯುವಸಮೂಹದ ಸಂಘಟನೆ ಮಾಡಬೇಕು. ಅವಕಾಶ ಸಿಕ್ಕರೆ ರಾಜ್ಯಾದ್ಯಂತ ಯುವಕ-ಯವತಿಯರ ಸಂಘಟನೆ ಮಾಡಲು, ಅವರಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮೈಗೂಡಿಸುವಂತೆ ಮಾಡಲು ಪ್ರೇರೇಪಿಸುತ್ತೇನೆ. ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಯುವ ಜನತೆಗೆ ನಮ್ಮ ಭಾರತೀಯ ಪದ್ಧತಿಯ ಸರಳತೆ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಕ ನಾಗುತ್ತೇನೆ. ಒಂದು ಮಾತಂತೂ ಸ್ಪಷ್ಟ. ದೇಶವಿದ್ದರೆ ಧರ್ಮ, ದೇಶವಿದ್ದರೆ ಮಾತ್ರ ದೇಹ.

ಧರ್ಮದ ಆಚರಣೆ ಮತ್ತು ದೇಹದ ರಕ್ಷಣೆಗೂ ದೇಶ ಬಹಳ ಅವಶ್ಯ ಅನ್ನೋದನ್ನು ಮನಗಾಣಬೇಕಿದೆ. ದೇಶ ನೂರನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ಆಚರಿಸುವಾಗ ಜಗತ್ತಿನ ಸರ್ವ ಶ್ರೇಷ್ಠ ಶ್ರೀಮಂತ ಸಂಸ್ಕಾರವಂತ ದೇಶವಾಗಿರಬೇಕು. ಯಾವ ಯುವಕರಲ್ಲಿ ದೇಶಪ್ರೇಮ, ಸ್ವಾಭಿಮಾನ, ದೇಶಾಭಿಮಾನ ನುಡಿಯಲ್ಲಿತ್ತೋ ಅದನ್ನು ನಡೆಯಾಗಿ ಪರಿವರ್ತಿಸುವ ಕೆಲಸ ಯುವಜನ ಸಂಕಲ್ಪ ನಡಿಗೆಯಿಂದ ಆಗಿದೆ ಎಂಬ ವಿಶ್ವಾಸ ನನ್ನದು.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ವಾತಂತ್ರÂದ ಅಮೃತ ಮಹೋತ್ಸವ ಸಂಭ್ರಮ. ಆ.15ರ ಧ್ವಜಾರೋಹಣಕ್ಕೆ 10 ದಿನ ಮೊದಲಿನಿಂದಲೇ ದೇಶಪ್ರೇಮ ಹೆಚ್ಚಿಸುವ ಕಾರ್ಯ ನಡೆದಿದ್ದು ಹಬ್ಬದ ಕಳೆ ಮೂಡಿಸಿದೆ. ರಾಜ್ಯ ಸೇರಿ ದೇಶದ ಬಹುಭಾಗ ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮಗಳ ಮೂಲಕ ಎಲ್ಲರೂ ಇತ್ತ ತಿರುಗಿ ಬೆರಗಿನಿಂದ ನೋಡುವಂತಾಗಿದೆ. ದೇಶಭಕ್ತ ಯುವಸಮೂಹದ 75 ಕಿಮೀ ನಡಿಗೆ ಇದಕ್ಕೆ ಕಾರಣ.

ಜನರ ಸ್ವಯಂಪ್ರೇರಿತ ಸಹಭಾಗಿತ್ವದೊಂದಿಗೆ “ಬಲಿಷ್ಠ ಭಾರತಕ್ಕಾಗಿ ಯುವಜನ ಸಂಕಲ್ಪ ನಡಿಗೆ’ ಹೆಸರಲ್ಲಿ ಈ ದೇಶಭಕ್ತಿಯ ಅಭಿಯಾನ ಸಂಘಟಿಸಿದ್ದು ಕ್ರಿಯಾಶೀಲ ಹ್ಯಾಟ್ರಿಕ್‌ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ಪುತ್ರ, ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರವನ್ನು ಜನರಿಗೆ ತಲುಪಿಸಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಆಚರಿಸಲು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದೇ ಇದಕ್ಕೆ ಮೂಲ ಪ್ರೇರಣೆ. ಪ್ರಧಾನಿಯವರು ಕೊಟ್ಟ ಕರೆಯನ್ನು ಯಶಸ್ವಿಗೊಳಿಸಿದ ಹೆಮ್ಮೆ, ಕೀರ್ತಿ ಯುವ ಸಮೂಹ, ನಡಹಳ್ಳಿಯವರಿಗೆ ಸಲ್ಲಬೇಕು.

ಪಕ್ಷಾತೀತ, ಜಾತ್ಯತೀತ, ಧರ್ಮಾತೀತವಾಗಿ ಮೇಲು ಕೀಳೆನ್ನುವ ಭೇದವಿಲ್ಲದೆ ಆ.5ರಂದು ಕರ್ನಾಟಕ ಗಾಂಧಿ ಹರ್ಡೇಕರ್‌ ಮಂಜಪ್ಪನವರ ಕರ್ಮಭೂಮಿ ಆಲಮಟ್ಟಿಯಲ್ಲಿರುವ ಸ್ಮಾರಕದಿಂದ ಐತಿಹಾಸಿಕ ರಣಭೂಮಿ ತಾಳಿಕೋಟೆವರೆಗೆ 75ಕಿಮೀ ನಡಿಗೆ ಆರಂಭಗೊಂಡಿತ್ತು. ಆ.12ರಂದು ಸಮಾರೋಪಗೊಂಡ ನಡಿಗೆ ಹೊಸದೊಂದು ಇತಿಹಾಸ ನಿರ್ಮಿಸಿ ನಡಹಳ್ಳಿಯವರ ಹೆಸರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿತು. ಇಂಥದ್ದೊಂದು ಅಭೂತಪೂರ್ವ ದೇಶಭಕ್ತಿಯ ಕಾರ್ಯಕ್ರಮ ಆಯೋಜಿಸಿ ಜನಸಾಮಾನ್ಯರೂ ಅದರಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ ನಡಿಗೆ ಯಶಸ್ವಿಗೊಳಿಸಿ ಜನಸಾಮಾನ್ಯರೂ ಕೂಡ ಶಹಬ್ಟಾಸ್‌ ಎಂದು ಬೆನ್ನು ತಟ್ಟುವಂತಹ ವಾತಾವರಣ ನಿರ್ಮಿಸಿದ್ದು ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ.

ವಿನೂತನ, ವಿಶಿಷ್ಟ ಪರಿಕಲ್ಪನೆಯ ದೇಶಭಕ್ತಿ ಅನಾವರಣದ “ನ ಭೂತೋ ನ ಭವಿಷ್ಯತಿ’ ಎನ್ನುವಂತೆ “ಯುವಜನ ನಡಿಗೆ’ ಸಂಘಟಿಸಿ ದೇಶದ ಗಮನ ಇತ್ತ ಹರಿಯುವಂತೆ ಮಾಡಿದ್ದು ಸಾಮಾನ್ಯದ ಸಂಗತಿಯಲ್ಲ. ಗಟ್ಟಿತನ, ಛಲ, ದೂರದೃಷ್ಟಿ, ಮುಂದಾಲೋಚನೆ, ದೇಶಾಭಿಮಾನ, ಆರ್ಥಿಕ ಬಲಿಷ್ಠತೆ ಜೊತೆಗೆ ನಿಷ್ಠಾವಂತ ಕಾರ್ಯಕರ್ತರ ಪಡೆ ಹೊಂದಿ ಜನರ ಅಪಾರ ಪ್ರೀತಿ ಗಳಿಸಿದವರು ಮಾತ್ರ ಇಂಥ ಅತ್ಯದ್ಭುತ ಕಾರ್ಯಕ್ರಮ ಆಯೋಜಿಸಲು ಸಾಧ್ಯ. ಇಂಥವರ ಸಾಲಿನಲ್ಲಿ ನಡಹಳ್ಳಿಯವರು ಮೊದಲಿಗರಾಗಿ ನಿಂತದ್ದು ವಿಶೇಷ.

ಯುವಸಮೂಹದ ನಡಿಗೆಗೆ ಯುವಕರೇ ಚುಕ್ಕಾಣಿ ಹಿಡಿಯುವುದು ಸೂಕ್ತ ಎಂದು ಭಾವಿಸಿ ಇಂಗ್ಲೆಂಡಿನಲ್ಲಿ ಬಿಜಿನೆಸ್‌ ಮ್ಯಾನೇಜಮೆಂಟ್‌ ಪದವಿ ಪಡೆದಿದ್ದರೂ ಅಪ್ಪಟ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡಿರುವ ಭರತಗೌಡರಿಗೆ ನಡಿಗೆಯ ನೇತೃತ್ವ ವಹಿಸಿಕೊಟ್ಟು ನಡಹಳ್ಳಿಯವರು ಮಾರ್ಗದರ್ಶಕರಾಗಿ ಬೆನ್ನ ಹಿಂದೆ ನಿಂತು ಪ್ರೋತ್ಸಾಹಿಸಿದ್ದು ಒಬ್ಬ ದೇಶಾಭಿಮಾನಿಯ ಕರ್ತವ್ಯ ಪಾಲನೆಯಂತಿತ್ತು ಎಂಬ ಮಾತು ಜನರಿಂದ ಕೇಳಿಬರುತ್ತಿರುವುದು ವಿಶೇಷ.  „ಡಿ.ಬಿ.ವಡವಡಗಿ, ಮುದ್ದೇಬಿಹಾಳ

ನಡಿಗೆ ನಡೆದು ಬಂದ ದಾರಿ

ಅಮೃತ ಮಹೋತ್ಸವಕ್ಕೆ ಕೊಡುಗೆಯಾಗಿ ಯುವಶಕ್ತಿ ಜಾಗೃತಗೊಳಿಸುವ ಚಿಂತನೆ ನಡೆದಾಗ ಚಿಗುರಿದ್ದೇ ಬಲಿಷ್ಠ ಭಾರತಕ್ಕಾಗಿ ಯುವಜನ ಸಂಕಲ್ಪ ನಡಿಗೆ ಎಂಬ ಪರಿಕಲ್ಪನೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸ್ಮರಣಾರ್ಥ 75 ಕಿಮೀವರೆಗಿನ ನಡಿಗೆಗೆ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳಲಾಗಿತ್ತು. ಕರ್ನಾಟಕದ ಗಾಂಧಿ ಹರ್ಡೆàಕರ್‌ ಮಂಜಪ್ಪನವರ ಕರ್ಮಭೂಮಿ ಆಲಮಟ್ಟಿಯಲ್ಲಿರುವ ಸ್ಮಾರಕದಿಂದ ಆ.5ರಂದು ಆರಂಭಗೊಂಡು ಐತಿಹಾಸಿಕ ರಣಭೂಮಿ ತಾಳಿಕೋಟೆಯಲ್ಲಿ ಆ.12ರಂದು ಮುಕ್ತಾಯಗೊಂಡ ಅಭಿಯಾನದ ಯಶಸ್ಸಿನಲ್ಲಿ ಬಹಳಷ್ಟು ಜನರ ಪಾಲಿದೆ. ನಡಿಗೆಯಲ್ಲಿ ಭಾಗವಹಿಸಲು ಕಾಲೇಜು ವಿದ್ಯಾರ್ಥಿಗಳು, ಹಾಗೂ ಯುವ ಸಮೂಹದಿಂದ ಆನ್‌ಲೈನ್‌ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.

ಇದಕ್ಕಾಗಿ ನಡಹಳ್ಳಿಯವರ ತಂಡ ನಡಿಗೆ ಮಾರ್ಗವ್ಯಾಪ್ತಿಯ ಆಲಮಟ್ಟಿ, ನಿಡಗುಂದಿ, ಮುದ್ದೇಬಿಹಾಳ, ಬಸರಕೋಡ, ನಾಲತವಾಡ, ತಾಳಿಕೋಟೆ ಭಾಗದ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಸಂಚರಿಸಿದರೆ ಮತ್ತೂಂದು ಕಡೆ ಭರತಗೌಡರ ತಂಡ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಯುವಸಮೂಹದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿತು. ಇದರ ಫಲ ಎಂಬಂತೆ 20000 ಯುವ ಸಮೂಹದ ನೋಂದಣಿ ಗುರಿ 40000 ಕ್ಕೆ ತಲುಪಿತು. ಯುವತಿಯರು, ಮಹಿಳೆಯರು ಶ್ವೇತವರ್ಣದ ತಿರಂಗಾ ಸೀರೆ ಉಟ್ಟು, ಯುವಕರು ಶ್ವೇತವರ್ಣದ ಜುಬ್ಟಾ, ಪೈಜಾಮ ತೊಟ್ಟು ಸೂರತ್‌ನ ತಿರಂಗಾ ಪೇಟಾ ಧರಿಸಿ ರಾಷ್ಟ್ರಧ್ವಜ ಹಿಡಿದು ನಡೆದ ಸೊಬಗು ಕಣ್ಣಿಗೆ ಕಟ್ಟಿದಂತಿತ್ತು. ಮಾರ್ಗಮಧ್ಯೆ ಅಲ್ಲಲ್ಲಿ ಯುವಸಮೂಹ, ಶಾಲಾ ಮಕ್ಕಳು ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಮೆರುಗು ಹೆಚ್ಚಿಸಿದರು. ಭಾರತಾಂಬೆಯ ಪುತ್ಥಳಿ ಸಮೇತ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕೃತಿ, ಮಹಾನ್‌ ನಾಯಕರ ಭಾವಚಿತ್ರ ಅಳವಡಿಸಿದ ವಿಶಿಷ್ಟ ಟ್ಯಾಬ್ಲ್ಯೋ ನಡಿಗೆಯ ಪ್ರಮುಖ ಆಕರ್ಷಣೆಯಾಗಿತ್ತು. ಮಾಜಿ ಸೈನಿಕರಿಂದ ಕಾಲೇಜು ವಿದ್ಯಾರ್ಥಿಗಳಿಗೆ ನಡಿಗೆಯಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿಸುವ, ದೇಶಪ್ರೇಮದ ಅರಿವು ಮೂಡಿಸುವ ತರಬೇತಿ ಶಿಸ್ತುಬದ್ದ ನಡಿಗೆಗೆ ಉಪಯುಕ್ತವಾಯಿತು. ಯಾವುದೇ ರಾಜಕೀಯ ಪಕ್ಷ, ಧರ್ಮ, ಜಾತಿಯ ನಾಯಕರನ್ನು ಆಹ್ವಾನಿಸದೆ ಯುವಸಮೂಹ, ಜನಸಮೂಹಕ್ಕೆ ನಾಯಕತ್ವ ವಹಿಸಿ ಕೊಟ್ಟ ಪಕ್ಷಾತೀತ ನಡಿಗೆಯ ಮೊದಲ ದಿನವೇ 6000ಕ್ಕೂ ಹೆಚ್ಚು ಯುವಸಮೂಹ ಸಹಿತ ದೇಶಭಕ್ತರು ಪಾಲ್ಗೊಂಡು ಅದ್ಧೂರಿ ಪ್ರಾರಂಭಕ್ಕೆ ಮುನ್ನುಡಿ ಬರೆದರು.

ನಿಡಗುಂದಿ, ನಾಲತವಾಡ ಪಟ್ಟಣಗಳಲ್ಲಿ ನಿರೀಕ್ಷೆಗೂ ಮೀರಿದ ಜನಸ್ಪಂದನೆ, ಮುದ್ದೇಬಿಹಾಳದಲ್ಲಿ ಪಕ್ಷಾತೀತವಾಗಿ ಎಲ್ಲ ಸಮುದಾಯಗಳ ಮುಖಂಡರ ಸ್ವಾಗತದೊಂದಿಗೆ 12000-15000 ಜನ ಭಾಗಿಯಾಗಿ ಇತಿಹಾಸ ನಿರ್ಮಿಸಿದರೆ, ತಾಳಿಕೋಟೆಯಲ್ಲಿ ಸಮಾರೋಪದಂದು ಕಿಮೀಗಟ್ಟಲೆ ಉದ್ದದ 30000ಕ್ಕೂ ಅಧಿಕ ಜನರೊಂದಿಗೆ ಆನೆ ಮೇಲೆ ಭಾರತಮಾತೆಯ ಭಾವಚಿತ್ರ, ರಾಷ್ಟ್ರಧ್ವಜದ ಮೆರವಣಿಗೆ ನ ಭೂತೋ, ನ ಭವಿಷ್ಯತಿ ಎನ್ನುವಂತಿತ್ತು. ಜನಸಾಮಾನ್ಯರು, ರೈತರಿಗೆ ರಾಷ್ಟ್ರಧ್ವಜ ಉಚಿತವಾಗಿ ನೀಡಿ “ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೂ ಕೈಜೋಡಿಸಲಾಗಿತ್ತು. ಸಮಾರೋಪ ನಂತರವೂ ಆ.12, 13, 14ರ ಮಧ್ಯರಾತ್ರಿವರೆಗೂ ತಾಳಿಕೋಟೆ, ನಾಲತವಾಡ, ಮುದ್ದೇಬಿಹಾಳ ಪಟ್ಟಣಗಳಲ್ಲಿ ಕಿಕ್ಕಿರಿದ ಜನಸಾಗರಕ್ಕೆ ದೇಶದ ಸುಪ್ರಸಿದ್ಧ ಕಲಾ ತಂಡಗಳಿಂದ ದೇಶಭಕ್ತಿ ಬಿಂಬಿಸುವ ನಾಟಕ, ರೂಪಕ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಸಂಘಟಿಸಿ ಅಮೃತ ಮಹೋತ್ಸವದ ಸಂಭ್ರಮ ಹೆಚ್ಚಿಸಿತ್ತು. ಒಟ್ಟಾರೆ ಎಂಟು ದಿನಗಳ ಸಂಕಲ್ಪ ನಡಿಗೆಯಲ್ಲಿ ಅಂದಾಜು ಎರಡು ಲಕ್ಷ ಜನ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ದೇಶಭಕ್ತಿ ಹೆಚ್ಚಿಸಿದ ನಡಿಗೆ

75 ಕಿಮೀ ನಡಿಗೆ ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಕಾಲ್ನಡಿಗೆ ಜಾಥಾ ನೆನಪಿಸುವಂತಿತ್ತು. ಆಗೆಲ್ಲ ಸ್ವಾತಂತ್ರ್ಯದ ಕೂಗು, ದೇಶಭಕ್ತಿಯ ಭಾಷಣ ಕೇಳಿಬರುತ್ತಿದ್ದವು. “ಇಂಕ್ವಿಲಾಬ್‌ ಜಿಂದಾಬಾದ್‌’ ಕಹಳೆ ಮೊಳಗುತ್ತಿತ್ತು. ಸ್ವಾತಂತ್ರ್ಯ ಅಮೃತಮಹೋತ್ಸವದ ಈ ಕಾಲ್ನಡಿಗೆಯೂ ಸಂಗ್ರಾಮದ ಆದಿನಗಳನ್ನು ಸ್ಮರಿಸುವಂತಿತ್ತು. ಇಲ್ಲಿ ಸ್ವತಂತ್ರ ಭಾರತ ಮಾತೆಗೆ ಜೈಕಾರವಿತ್ತು. ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ಇತ್ತು. ನಡಿಗೆಯ ದಣಿವು ಗೊತ್ತಾಗದಿರಲಿ ಎಂದು ದೇಶಭಕ್ತಿ ಗೀತೆ ಸದಾ ಮುದಗೊಳಿಸುತ್ತಿತ್ತು. ಬಹುತೇಕರ ಕೈಯಲ್ಲಿ ರಾಷ್ಟ್ರಧ್ವಜ ರಾರಾಜಿಸುತ್ತಿತ್ತು. ಪ್ರತಿ 5, 10 ಕಿಮೀಗೊಮ್ಮೆ ದೇಶಭಕ್ತಿಯ, ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ನಡೆಯುತ್ತಿತ್ತು. ಶ್ವೇತವರ್ಣ ವಸ್ತ್ರಧಾರಿ ಯುವ ಸಮೂಹ ಶಿಸ್ತುಬದ್ಧವಾಗಿ ನಡೆಯುತ್ತಿದ್ದುದ್ದನ್ನು ನಿಂತು ನೋಡುವಂತಿತ್ತು. ಆರೋಗ್ಯ, ರಕ್ತದಾನ ಶಿಬಿರ, ಶಾಲಾ ಮಕ್ಕಳ ದೇಶಾಭಿಮಾನದ ಸಾಂಸ್ಕೃತಿಕ ಚಟುವಟಿಕೆ, ಜನಪದ ನೃತ್ಯಗಳು, ನಾಡಿನ ಸುಪ್ರಸಿದ್ಧ ಕಲಾತಂಡಗಳ ಅತ್ಯದ್ಭುತ ಪ್ರದರ್ಶನ, ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆಯುವ ಪರೇಡ್‌ನ‌ ಮಾದರಿ, ಭಾರತಾಂಬೆ, ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದವರ ಪುತ್ಥಳಿ ಸಮೇತ ಸ್ವಾತಂತ್ರ್ಯ ಸೇನಾನಿಗಳ ಪ್ರತಿಕೃತಿ, ದೇಶಕ್ಕೆ ಕೊಡುಗೆ ನೀಡಿದ ಮಹಾತ್ಮಾ ಗಾಂಧೀಜಿ, ಡಾ| ಬಿ.ಆರ್‌.ಅಂಬೇಡ್ಕರ್‌ ಸಹಿತ ಮಹಾನ್‌ ವ್ಯಕ್ತಿಗಳ ಭಾವಚಿತ್ರ ಹೊಂದಿದ ಜನಾಕರ್ಷಕ ಟ್ಯಾಬ್ಲೋ ಹೀಗೆ ಹತ್ತು ಹಲವು ವಿಶೇಷತೆಗಳು ನಡಿಗೆಯುದ್ದಕ್ಕೂ ಕಂಡಿದ್ದು ಗಮನಸೆಳೆದವು.

ನಡಹಳ್ಳಿಯವರ ಪರಿಕಲ್ಪನೆಯಲ್ಲಿ ಮೂಡಿಬಂದ ನಡಿಗೆಯ ಪ್ರಮುಖ ಗೀತೆಯಾಗಿದ್ದ “ಅಖಂಡ ಭಾರತ ಪ್ರಜೆಗಳೇ, ಮೊಳಗಲಿ ವೀರಕಹಳೆ’ ಎನ್ನುವ ಸಾಲಿನಿಂದ ಹೈಪಿಚ್‌ಗೆ ಯುವಸಮೂಹವನ್ನು ಕೊಂಡೊಯ್ದು ಮೋಡಿ ಮಾಡಿದ್ದ 6.32 ನಿಮಿಷಗಳ ದೇಶಭಕ್ತಿಯ ಹಾಡು ನಡಿಗೆಯ ಚೈತನ್ಯವಾಗಿತ್ತು. ಇವೆಲ್ಲಕ್ಕೂ ಪುಟವಿಟ್ಟಂತೆ ನಡಹಳ್ಳಿಯವರು, ಭರತಗೌಡರು ಪ್ರಾರಂಭದಿಂದ ಕೊನೆಯವರೆಗೂ ಜನರೊಟ್ಟಿಗೆ ಬೆರೆತು ನಡೆದದ್ದು, ಅವರ ಪರಿವಾರದವರೆಲ್ಲರೂ ಹೆಜ್ಜೆ ಹಾಕಿದ್ದು ಜನಸಾಮಾನ್ಯರ ಎನರ್ಜಿ ಹೆಚ್ಚಿಸಿದಂತಾಗಿತ್ತು. ನಡಿಗೆ ಸಾಗುವ ಮಾರ್ಗಮಧ್ಯೆ ಅಲ್ಲಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಬಳಿ, ಕೃಷಿಕರ ಬಳಿ, ಕುರಿಗಾಹಿಗಳ ಬಳಿ ತೆರಳಿ ರಾಷ್ಟ್ರಧ್ವಜ ನೀಡಿ “ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೂ ಸಾಥ್‌ ನೀಡಿ ದೇಶಪ್ರೇಮದ ಕಿಚ್ಚು ಹೆಚ್ಚಿಸಿದರು. ಒಟ್ಟಾರೆ ಒಂದು ಅಭೂತಪೂರ್ವ ಅನುಭೂತಿ, ವಿಶಿಷ್ಟ ಅನುಭವ ತಂದುಕೊಡುವಲ್ಲಿ, ದೇಶ ಮೊದಲು ಉಳಿದದ್ದೆಲ್ಲ ಆಮೇಲೆ ಎನ್ನುವ ಸಂದೇಶ ರವಾನಿಸುವಲ್ಲಿ ಈ ಭಾಗದ ಜನ ಮತ್ತು ನಡಹಳ್ಳಿ ಪರಿವಾರ ಯಶಸ್ವಿಯಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ನಡಿಗೆ ಸಂತೋಷ ತಂದಿದೆ: ಶರತಗೌಡ

ಭಾರತೀಯರಾದ ನಾವು 75 ವರ್ಷದಿಂದ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಆದರೆ ಈ ಸ್ವಾತಂತ್ರ್ಯ ನಮಗೆ ಹೇಗೆ ಸಿಕ್ತು? ಯಾರಿಂದ ಸಿಕ್ತು? ಅಂತ ತಿಳಕೋಳ್ಳೋದು ಬಹಳ ಪ್ರಮುಖವಾಗುತ್ತದೆ. ನಮಗೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ, ಶೂರತ್ವ, ವೀರತ್ವದದಿಂದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನಂತರ ಸಿಕ್ಕಿದೆ. ಆದರೂ ಭ್ರಷ್ಟಾಚಾರ, ಭಯೋತ್ಪಾದನೆ, ಬಡತನದಂಥ ವಿಷಯಗಳಲ್ಲಿ ಪರಿಹಾರ ಸಿಕ್ಕಿಲ್ಲ. ಪರಿಹಾರ ಸಿಗಬೇಕೆಂದರೆ ಭಾರತೀಯರು ಒಗ್ಗಟಾಗಿ ನಿಲ್ಲಬೇಕು. ನೇತಾಜಿ ಸುಭಾಸ್‌ಚಂದ್ರ ಭೋಸರಂತೆ ಮುನ್ನುಗ್ಗಬೇಕು. ಇವರಷ್ಟೇ ಅಲ್ಲ, ಭಗತ್‌ ಸಿಂಗ್‌, ಜವಾಹರಲಾಲ್‌ ನೆಹರು, ಮಹಾತ್ಮ ಗಾಂಧೀಜಿ, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಇವರೆಲ್ಲರ ತ್ಯಾಗ ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯದ ಅಮೃತಮಹೋತ್ಸವ ಇದಕ್ಕೆ ಸೂಕ್ತ ಸಂದರ್ಭ. ನೇತಾಜಿ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಹೇಗೆ ಹೆಜ್ಜೆ ಹಾಕಿದರೋ ಹಾಗೆ ನಮ್ಮ ಯುವಸಮೂಹ ಸಂಕಲ್ಪ ನಡಿಗೆಯಲ್ಲಿ ಹೆಜ್ಜೆ ಹಾಕಿದೆ. ಅವರೊಟ್ಟಿಗೆ ನಾವೂ ಹೆಜ್ಜೆ ಹಾಕಿದ್ದು ನಮಗೆ ಹೆಮ್ಮೆ. ನಮ್ಮ ಜನ ಭೇದಭಾವ ಮಾಡದೆ ಒಗ್ಗಟ್ಟಾಗಿ ಭಾರತೀಯರಾಗಿ ನಿಂತರೆ ಬಲಿಷ್ಠ ಭಾರತ ಕಟ್ಟುವುದು ಸುಲಭ.

 

ದೇಶ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಸಂಭ್ರಮದಲ್ಲಿರುವಾಗ ಯುವ ಸಮೂಹದಲ್ಲಿ ದೇಶಪ್ರೇಮ ಪುಟಿದೇಳಿಸಲು ಹಮ್ಮಿಕೊಂಡ ಈ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವುದು ಶಾಸಕ ನಡಹಳ್ಳಿ ಮತ್ತು ಭರತಗೌಡರ ಸಂಘಟನಾ ಶಕ್ತಿ, ಜನಪರ ನಿಲುವಿಗೆ ಕನ್ನಡಿ ಹಿಡಿದಂತಿದೆ. ಅವರಲ್ಲಿನ ಅದಮ್ಯ ಉತ್ಸಾಹ, ಚೆ„ತನ್ಯ ಕಂಡು ನಾನೂ ಬೆರಗಾಗಿದ್ದೇನೆ. ನಡಿಗೆಯುದ್ದಕ್ಕೂ ಶಾಸಕ ನಡಹಳ್ಳಿ, ಭರತ್‌ ಅವರು ಎನರ್ಜಿ ಬೂಸ್ಟರ್‌ನಂತೆ ಕಂಡುಬಂದರು. ಯುವಸಮೂಹದೊಂದಿಗೆ ಹೆಜ್ಜೆ ಹಾಕುವಾಗ ಎಲ್ಲರೊಟ್ಟಿಗೆ ತಾವೂ ಕುಣಿದರು, ಯಾವುದೇ ಹಮ್ಮು ಬಿಮ್ಮು ಇಲ್ಲದೆ ಅತ್ಯಂತ ಸರಳವಾಗಿ ಹೆಜ್ಜೆ ಹಾಕಿ ಜನರ ಪ್ರೀತಿ ಹೆಚ್ಚಿಸಿಕೊಂಡರು. –ಚಿಂದೋಡಿ ಬಂಗಾರೇಶ, ಕಲಾತಂಡಗಳ ಉಸ್ತುವಾರಿ, ಬೆಂಗಳೂರು.

ಎಲ್ಲರೊಂದಾಗಿ ಬಲಿಷ್ಠ ದೇಶ ಕಟ್ಟೋಣ

ನಮ್ಮ ದೇಶದ ಸ್ವತಂತ್ರಕ್ಕಾಗಿ ಅನೇಕರು ತಮ್ಮ ಅಮೂಲ್ಯವಾದ ಸಮಯ ಹಾಗೂ ಪ್ರಾಣ ತ್ಯಾಗ ಮಾಡಿದ್ದಾರೆ. ಭಾರತ ದೇಶದ ಸ್ವಾತಂತ್ರ್ಯ ಹೋರಾಟ ಸುಲಭವಾಗಿರಲಿಲ್ಲ. ಬಹಳ ರೋಚಕವಾಗಿತ್ತು. ಚಂದ್ರಶೇಖರ ತಿವಾರಿ ಚಂದ್ರಶೇಖರ ಆಜಾದ್‌ ಆಗಿ ಬದಲಾದ ಕಥೆ ನಮಗೆಲ್ಲ ಪ್ರೇರಣೆ. ಆಜಾದರಂತೆ ಸುಭಾಸ್‌ಚಂದ್ರ ಬೋಸ್‌, ಡಾ| ಝಾಕಿರ್‌ ಹುಸೇನ್‌, ಜವಾಹರಲಾಲ್‌ ನೆಹರು, ಭಗತ್‌ ಸಿಂಗ್‌, ಮಹಾತ್ಮಾ ಗಾಂಧಿ, ಸರ್ದಾರ ವಲ್ಲಭಬಾಯಿ ಪಟೇಲ, ಬಾಲ ಗಂಗಾಧರ ತಿಲಕ್‌, ವೀರ ಸಾವರ್ಕರ್‌, ಬಾಬಾಸಾಹೇಬ ಅಂಬೇಡ್ಕರ್‌, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕರ್ನಾಟಕದ ಗಾಂಧಿ ಹರ್ಡೆಕರ್‌ ಮಂಜಪ್ಪ, ಕಿತ್ತೂರು ರಾಣಿ ಚನ್ನಮ್ಮ, ಸದಾಶಿವರಾಯರು, ಒನಕೆ ಓಬವ್ವ ಎಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಅಮೃತ ಮಹೋತ್ಸವ ಸಂಭ್ರಮದಲ್ಲಿ ಅವರನ್ನು ಸ್ಮರಿಸಿಕೊಳ್ಳುವುದು ಯುವಸಮೂಹದ ಕರ್ತವ್ಯವಾಗಬೇಕು. ಜಗತ್ತಿನ ಅತ್ಯಂತ ಸಂಪದ್ಭರಿತ ರಾಷ್ಟ್ರವಾದ ಭಾರತದ ಸಂಪತ್ತನ್ನು ದೋಚಿಕೊಂಡು ಹೋಗೋಕೆ ಜಗತ್ತಿನ ಅನೇಕ ರಾಷ್ಟ್ರಗಳು ಭಾರತದ ಮೇಲೆ ಆಕ್ರಮಣ ಮಾಡಿವೆ. ದೇಶದ ಸಂಪತ್ತನ್ನು ಲೂಟಿ ಮಾಡಲು ಎಲ್ಲರೂ ದಂಡೆತ್ತಿ ಬಂದರು.

ಇತಿಹಾಸ ಓದುವಾಗ ನಾವು ಎಷ್ಟೊಂದು ಆಕ್ರಮಣಕ್ಕೆ ಬಲಿಯಾಗಿಬಿಟ್ರಲ್ಲಾ ಅನ್ನಿಸಿತ್ತು. ಇದಲ್ಲದೇ ಒಂದೇ ಆಕ್ರಮಣಕ್ಕೆ ಅನೇಕ ರಾಷ್ಟ್ರಗಳು ನಾಶವಾಗಿಬಿಟ್ಟವು. ಆದರೆ ಭಾರತ ಮಾತ್ರ ಆಕ್ರಮಣಗಳನ್ನು ತಡೆದುಕೊಂಡು ಬಲಿಷ್ಠವಾಗಿ ನಿಂತಿದೆ ಎಂಬುದೂ ಗೊತ್ತಾಯ್ತು. ನಮ್ಮ ದೇಶವನ್ನು ಯಾರಿಗಾದರೂ ಪರಿಚಯ ಮಾಡಿಕೊಡುವಾಗ ನಾವು ಭಾರತೀಯರು ಎಂದು ಎದೆಯುಬ್ಬಿಸಿ ಹೇಳಬೇಕು. ಜಗತ್ತಿನ 25 ದೇಶ ತಿರುಗಾಡಿದ್ದರೂ ನಾನಿವತ್ತು ಹೆಮ್ಮೆಯಿಂದ ಹೇಳ್ತೇನೆ ನಮ್ಮ ಭಾರತ ಭೂಮಿಯಷ್ಟು ಶ್ರೇಷ್ಠ ಭೂಮಿ ಇಡೀ ಜಗತ್ತಿನಲ್ಲಿ ಎಲ್ಲೂ ಇಲ್ಲ. ಜಗತ್ತಿನ ಯಾವುದೇ ರಾಷ್ಟ್ರವನ್ನು ಹೆಸರಿಸಿದರೂ ಅವುಗಳಲ್ಲಿನ ವಿಶೇಷತೆ ಭಾರತ ದೇಶದಲ್ಲಿ ತೋರಿಸುತ್ತೇನೆ. ಯುರೋಪ್‌ ನೋಡಬೇಕಂದ್ರೆ ನಮ್ಮ ದೇಶದ ಹಿಮಾಲಯ ಪರ್ವತ ಶ್ರೇಣಿ ನೋಡಿ. ಮರುಭೂಮಿಗೆ ರಾಜಸ್ತಾನಕ್ಕೆ ಹೋಗಿ, ಸಮುದ್ರ ನೋಡಲು ಭಾರತದ ದಕ್ಷಿಣಕ್ಕೆ ಹೋಗಿ ಒಂದಲ್ಲಾ ಎರಡಲ್ಲ ಮೂರು ಸಮುದ್ರಗಳು ಭಾರತ ಮಾತೆಯ ಕಾಲುಗಳನ್ನು ತೊಳೆಯುತ್ತಿವೆ.

ನದಿಗಳನ್ನು ನೋಡಬೇಕಂತೀರಾ ಈ ದೇಶದ ಯಾವುದೇ ರಾಜ್ಯದಲ್ಲಾದ್ರೂ ನೀವು ನಿಂತು ಅಕ್ಕಪಕ್ಕ ಕಣ್ಣು ಹಾಯಿಸಿ ನಿಮಗೆ ಹತ್ತಾರು ನದಿಗಳು ಕಾಣುತ್ತವೆ. ಜಗತ್ತಿನಲ್ಲಿ ಇಂಥ ರಾಷ್ಟ್ರ ಎಲ್ಲೂ ನೋಡೋಕೆ ಸಿಗೊಲ್ಲ. ಈ ರಾಷ್ಟ್ರದ ಮೇಲೆ ಭಗವಂತ, ಪ್ರಕೃತಿಯ ಕೃಪೆ ಇದೆ. ಎಲ್ಲ ಸಂಪತ್ತು ಭಗವಂತ ನಮ್ಮ ರಾಷ್ಟ್ರಕ್ಕೆ ಕೊಟ್ಟಿದ್ದಾನೆ. ನಮ್ಮ ದೇಶ ಎಷ್ಟೊಂದು ಶಕ್ತಿಶಾಲಿ, ಶ್ರೇಷ್ಠ ಅನ್ನೋದನ್ನು ಯುವಸಮೂಹ ತಿಳಿದುಕೊಳ್ಳಬೇಕು. ಇಡೀ ಜಗತ್ತಿಗೆ ಮೊದಲು ಗಣಿತ, ವಿಜ್ಞಾನ, ಜೀವನ ಪದ್ಧತಿ, ಆಯುರ್ವೇದ ಮಹತ್ವ, ಯೋಗ ಪರಿಚಯಿಸಿಕೊಟ್ಟ ದೇಶ ನಮ್ಮ ಭಾರತ. ಚಂದ್ರಯಾನದ ಸಾಮರ್ಥಯವಿರುವ 3 ದೇಶಗಳಲ್ಲಿ ಭಾರತವೂ ಒಂದು. ಸೂಪರ್‌ ಕಂಪ್ಯೂಟರ್‌ ತಯಾರಿಸುವ ಸಾಮರ್ಥಯ ಇರುವ ದೇಶಗಳಲ್ಲಿ ಭಾರತವೂ ಒಂದು.

ಜಗತ್ತಿನಲ್ಲಿ ಅತ್ಯಂತ ಹೆಚ್ಚು, ಕಬ್ಬು, ಹತ್ತಿ, ಭತ್ತ ಉತ್ಪಾದಿಸುವ ಎರಡನೇ ದೇಶ, ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ನಂಬರ್‌ 1 ದೇಶ ನಮ್ಮದು. ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಡಾಕ್ಟರ್‌, ಇಂಜಿನಿಯರ್‌, ಸೈಂಟಿಸ್ಟ್‌ಗಳ ತಯಾರು ಮಾಡಿ ಬೇರೆ ದೇಶಕ್ಕೆ ಕಳುಹಿಸುವ ದೇಶ ನಮ್ಮದು. ಇಡೀ ಜಗತ್ತಿಗೆ ಉದ್ಯೋಗ ನೀಡುತ್ತಿರುವ ಮಲ್ಟಿನ್ಯಾಶನಲ್‌ ಕಂಪನಿಗಳಾದ ಐಬಿಎಂ, ಗೂಗಲ್‌, ಸ್ಯಾನ್‌ ಡಿಸ್ಕ್, ಮೈಕ್ರೋಸಾಫ್ಟ್‌, ಕಂಪನಿಗಳನ್ನು ನಡೆಸುತ್ತಿರುವರು ಭಾರತೀಯರು. ಯಾವ ಬ್ರಿಟಿಷ್‌ರು ನಮ್ಮ ದೇಶವನ್ನು ನೂರಾರು ವರ್ಷಗಳ ಕಾಲ ಆಳಿ ನಮ್ಮ ಆಸ್ತಿ ದೋಚಿಕೂಂಡು ಹೋದರೋ ಅದೇ ಬ್ರಿಟಿಷ್‌ ದೇಶದ ಮುಂದಿನ ಪ್ರಧಾನಿಯಾಗುವ ರೇಸ್‌ನಲ್ಲಿರುವ ರಿಷಿ ಸುನಾಕ್‌ ಭಾರತದವರು ಎನ್ನುವ ಹೆಮ್ಮೆ ನಮ್ಮದು.

ಜಗತ್ತಿನಲ್ಲಿ, ಎರಡನೇ ಅತಿದೊಡ್ಡ ಸೈನ್ಯ ಭಾರತೀಯ ಸೈನ್ಯವಾಗಿದ್ದು ಯಾರಿಗೂ ಹೆದರಬೇಕಾಗಿಲ್ಲ, ತಲೆ ಬಾಗಬೇಕಿಲ್ಲ. ಹೀಗಿದ್ದರೂ ನಮ್ಮ ದೇಶ ನಮಗೆ ಸಂಸ್ಕೃತಿ ಕಲಿಸಿಕೊಟ್ಟಿದೆ. ಎನಗಿಂತ ಕಿರಿಯರಿಲ್ಲ, ಜಾತಿ, ಧರ್ಮ, ಮತ, ಪಂಥ ಭೇದ ಮಾಡದೆ ಶತ್ರುವಾದರೂ, ಸ್ನೇಹಿತರಾದರೂ ಎಲ್ಲರ ಮುಂದೆ ತಲೆ ಬಾಗಿ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡು ಅಂತ ಹೇಳಿಕೊಟ್ಟಂತಹ ಶ್ರೇಷ್ಠ ಭಾರತ ನಮ್ಮದು. ಅಮೃತಮಹೋತ್ಸವ ದಿನ ನಮ್ಮ ಜೀವನದ ಪರಮ ಶ್ರೇಷ್ಠ ದಿನ ಎನ್ನಲು ಹೆಮ್ಮೆಯಾಗುತ್ತಿದೆ.

ಪೂರ್ವಜರು 75 ವರ್ಷ ಕಟ್ಟಿರುವ ದೇಶವನ್ನು ಕಾಪಾಡಿಕೊಂಡು ಹೋಗುವ ಕರ್ತವ್ಯ ಯುವಸಮೂಹದ್ದಾಗಬೇಕು. 75 ವರ್ಷದಿಂದ ದೇಶ ರಕ್ಷಿಸುತ್ತಿರುವ ಸೈನಿಕರನ್ನು ಸ್ಮರಿಸಬೇಕು. ಹಿಂದಿನವರೆಲ್ಲರ ಇತಿಹಾಸದೊಂದಿಗೆ ಮುಂದಿನ 25 ವರ್ಷ ಯುವಸಮೂಹ ಸೇರಿಕೊಂಡು ನವಭಾರತ ನಿರ್ಮಿಸುವ ತೀರ್ಮಾನ ಮಾಡೋಣ. ಹೊಸ ಇತಿಹಾಸ ಬರೆದು ಭಾರತವನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವನ್ನಾಗಿ ಮಾಡೋಣ. ಬನ್ನಿ, ದೇಶದ ಹಿತಕ್ಕಾಗಿ ನಾವೆಲ್ಲರೂ ಸೇರಿ ದುಡಿಯೋಣ. ಹಳ್ಳಿ ಇರಲಿ, ದಿಲ್ಲಿ ಇರಲಿ ಏರಲಿ, ಹಾರಲಿ ಭಾರತ ದೇಶದ ಬಾವುಟ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್

ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

Alnavar: ಟಿಟಿ- ಕ್ಯಾಂಟರ್‌ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.