![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 8, 2020, 7:02 PM IST
ಬೆಳಗಾವಿ: ಯಶವಂತ ಕಾಸ್ಟಿಂಗ್ ಕಂಪನಿ ಸಿದ್ಧಪಡಿಸಿರುವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಚೇಂಬರ್.
ಬೆಳಗಾವಿ: ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಇಡೀ ದೇಹವನ್ನೇ ಸ್ಯಾನಿಟೈಸರ್‌ದಿಂದ ಸ್ವತ್ಛಗೊಳಿಸುವ ಸೋಂಕು ನಿವಾರಕ ಚೇಂಬರ್ ಬೆಳಗಾವಿಯಲ್ಲಿ ಸಿದ್ಧಗೊಳ್ಳುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಇದಕ್ಕೆ ಬೇಡಿಕೆ ಬರುತ್ತಿದೆ. ಬೆಳಗಾವಿಯ ಯಶವಂತ ಕಾಸ್ಟಿಂಗ್ ಕಂಪನಿಯವರು ಈ ಸೋಂಕು ನಿವಾರಕ ಚೇಂಬರ್ ತಯಾರಿಸಿದ್ದು, ಈ ಚೇಂಬರ್ ಒಳಗೆ ಪ್ರವೇಶೀಸಿದರೆ ಮೈತುಂಬಾ ಹಾಗೂ ಬಟ್ಟೆಗಳ ಮೇಲೆ ಸ್ಯಾನಿಟೈಸರ್ ಸಿಂಪಡಣೆ ಆಗುತ್ತದೆ.
ದೇಶಾದ್ಯಂತ ಲಾಕ್‌ಡೌನ್ ಇದ್ದರೂ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು ಸೇರಿದಂತೆ ಮಹತ್ವದ ಕಚೇರಿಗಳು ತೆರೆದಿವೆ. ಇಂಥ ಸ್ಥಳಗಳಿಗೆ ಹೋಗಬೇಕಾದರೆ ಆರೋಗ್ಯದ ಅಭದ್ರತೆ ಕಾಡುವುದು ಸಹಜ. ಹೀಗಾಗಿ ಹೊರ ಭಾಗದಲ್ಲಿ ಪ್ರವೇಶ ಮತ್ತು ನಿರ್ಗಮನದಲ್ಲಿ ಈ ಚೇಂಬರ್ ಅಳವಡಿಸಿದರೆ ಸ್ಯಾನಿಟೈಸರ್ ವ್ಯಕ್ತಿಗೆ ಸಿಂಪಡಣೆ ಆಗುತ್ತದೆ.
ನಿರ್ವಹಣೆ ಹೇಗೆ?: 4 ಅಡಿ ಅಗಲ, 8 ಅಡಿ ಉದ್ದ, 10 ಅಡಿ ಎತ್ತರವಾದ ಈ ಸೋಂಕು ನಿವಾರಕ ಚೇಂಬರ್ ಒಳ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು. ನಂತರ ಒಳ ಪ್ರವೇಶಿಸಿದರೆ ಸ್ವಯಂಚಾಲಿತವಾಗಿ ಸೆನ್ಸರ್ ಮೂಲಕ ವಿದ್ಯುತ್ ಚಾಲಿತ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಆರಂಭಗೊಳ್ಳುತ್ತದೆ. ಒಳಗಡೆ ಕೇವಲ 10 ಸೆಕೆಂಡ್ ನಿಂತರೆ ಮೈತುಂಬಾ ಸ್ಯಾನಿಟೈಸರ್ ಬೀಳುತ್ತದೆ. ಅಲ್ಲಿಂದ ನಿರ್ಗಮನವಾದರೆ ಸೆನ್ಸರ್ ಬಂದ್ ಆಗುತ್ತದೆ.
ಹೆಚ್ಚಿದ ಬೇಡಿಕೆ: ಈ ಚೇಂಬರ್‌ಗೆ ಮುಂಬೈ, ಪುಣೆ, ಕೊಲ್ಲಾಪುರ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಧಾರವಾಡ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಿಂದ ಬೇಡಿಕೆ ಬರುತ್ತಿದೆ. ಸದ್ಯ 120ಕ್ಕೂ ಹೆಚ್ಚು ಚೆಂಬರ್‌ಗಳ ಬೇಡಿಕೆ ಬಂದಿದೆ. ರಾಜ್ಯ ಸರ್ಕಾರವೇ 100ಕ್ಕೂ ಹೆಚ್ಚು ಚೇಂಬರ್‌ಗಳನ್ನು ಕೊಡುವಂತೆ ಹೇಳಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈ ಚೇಂಬರ್ ಅಳವಡಿಸುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಶಾಪಿಂಗ್ ಮಾಲ್‌ಗಳು, ಚಲನಚಿತ್ರ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ಅಪಾರ್ಟ್‌ಮೆಂಟ್‌ಗಳು, ಹೌಸಿಂಗ್ ಕಾಲೋನಿಗಳು, ಸರ್ಕಾರಿ ಕಚೇರಿಗಳಲ್ಲಿ ಈ ಚೇಂಬರ್‌ಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಇದರ ಉತ್ಪಾದನೆಯನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುವುದು ಎನ್ನುತ್ತಾರೆ ಕಂಪನಿ ಮಾಲೀಕ ಧೀರೆನ್ ಉಪಾಧ್ಯೆ. ಇದಕ್ಕೆ ಪಾಲಿಕಾಬೋìನೇಟೆಡ್ ಸೀಟ್‌ಗಳನ್ನು ಬಳಸಲಾಗುತ್ತದೆ. ಬೇರೆ ಸೀಟ್‌ಗಳನ್ನು ಬಳಸಿದರೆ ಸ್ಯಾನಿಟಸರ್ ಕೂಡಲೇ ಕರಗಿ ಹೋಗುತ್ತದೆ. ಒಂದು ಚೇಂಬರ್ ತಯಾರಿಸಲು 4-5 ಜನ ಬೇಕಾಗುತ್ತಾರೆ. ದಿನಾಲು 6-7 ಚೇಂಬರ್‌ಗಳು ತಯಾರಾಗುತ್ತಿವೆ. ಬೆಳಗಾವಿ ಜಿಲ್ಲಾಡಳಿತ 15 ಚೇಂಬರ್ ಗಳಿಗಾಗಿ ಆರ್ಡರ್ ಮಾಡಿದೆಂದು ಮಾಹಿತಿ ನೀಡಿದರು. ಶಾಸಕ ಅಭಯ ಪಾಟೀಲ, ಡಿಸಿ ಡಾ| ಬೊಮ್ಮನಹಳ್ಳಿ, ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ಚೇಂಬರ್ ಮಾದರಿ ವೀಕ್ಷಿಸಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರುವ ಸ್ಥಳಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಚೇಂಬರ್ ಅಭಿವೃದ್ಧಿ ಪಡಿಸಲಾಗಿದೆ. ನಿತ್ಯ ಬೇಡಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲು ಆಸ್ಪತ್ರೆಗಳು, ಸಕಾರಿ ಕಚೇರಿಗಳು, ಪೊಲೀಸ್ ಠಾಣೆಗಳಿಗೆ ಆದ್ಯತೆ ನೀಡಿ ಪೂರೈಸಲಾಗುವುದು. ಜನದಟ್ಟಣೆ ಹೆಚ್ಚಾಗಿ ಇರುವ ಕಡೆಗಳಲ್ಲಿ ಉಪಯುಕ್ತವಾಗಿದೆ.
ಧೀರೆನ್ ಉಪಾಧ್ಯೆ,
ಮಾಲೀಕರು, ಯಶವಂತ ಕಾಸ್ಟಿಂಗ್ ಕಂಪನಿ
ಭೈರೋಬಾ ಕಾಂಬಳೆ
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.