ಅಕ್ಷರ ಜ್ಞಾನ-ಶಿಕ್ಷಣದಿಂದ ಭವಿಷ್ಯ ಉಜ್ವಲ
ಅದು ನಮ್ಮ ಜೀವನದ ಭವಿಷ್ಯ ರೂಪಿಸಿಕೊಳ್ಳುವುದಾಗಿದೆ ಎಂದರು.
Team Udayavani, Nov 4, 2021, 5:55 PM IST
ಹುಬ್ಬಳ್ಳಿ: ಕನ್ನಡ ಭಾಷೆ ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಎನ್. ಬಿರಾದಾರ ಹೇಳಿದರು.
ವಿಶ್ವೇಶ್ವರನಗರದ ಉಪ ಕಾರಾಗೃಹದಲ್ಲಿ 66ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ ನಿಮಿತ್ತ ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ, ಉಪ ಕಾರಾಗೃಹ ಹುಬ್ಬಳ್ಳಿ, ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂಧಿಗಳ “ಕಲಿಕೆಯಿಂದ ಬದಲಾವಣೆ’ಗಾಗಿ ಮೂಲ ಸಾಕ್ಷರತೆ ಹಾಗೂ ಕಲಿಕಾ ಬೋಧನಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನುಭವ ಓದಿನಿಂದ ಸಿಗುವುದಿಲ್ಲ. ಅದು ನಮ್ಮ ಅಂತರಾತ್ಮದಿಂದ ಬರುತ್ತದೆ. ಯಾವುದೇ ಕಷ್ಟ ಬರಲಿ ನಮ್ಮ ಭಾಷೆ ನಾವು ಬಿಟ್ಟು ಕೊಡುವುದಿಲ್ಲವೆಂಬ ಅಭಿಮಾನವಿರಬೇಕು. ಅದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ವಾಗಬೇಕು. ಅಕ್ಷರ ಜ್ಞಾನ ಮತ್ತು ಶಿಕ್ಷಣವು ನಮ್ಮ ಭವಿಷ್ಯ
ಉಜ್ವಲಗೊಳಿಸುತ್ತದೆ. ಅಲ್ಲದೆ ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಇದು ಬೇಕಾಗುತ್ತದೆ.
ಜೀವನದ ಅನುಭವ ಜೊತೆ ಕಲಿಕೆ ಮುಖ್ಯ. ಅದಕ್ಕೆ ಮನಸ್ಸು ಮತ್ತು ಪ್ರಯತ್ನ ಮಾಡಬೇಕು. ಕಲಿಕೆ ಬಗ್ಗೆ ಅಸಡ್ಡೆ ಭಾವನೆ ತೋರಬಾರದು. ಅಕ್ಷರ ಜ್ಞಾನ, ಶಿಕ್ಷಣವು ನೌಕರಿಗಾಗಿ ಅಲ್ಲ. ಅದು ನಮ್ಮ ಜೀವನದ ಭವಿಷ್ಯ ರೂಪಿಸಿಕೊಳ್ಳುವುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಬಂಧಿಗಳಿಗೆ ಕಲಿಕಾ ಬೋಧನಾ ಸಾಮಗ್ರಿಗಳನ್ನು ವಿತರಿಸಿದರು.
ತಹಶೀಲ್ದಾರ್ ಶಶಿಧರ ಮಾಡ್ಯಾಳ ಮಾತನಾಡಿ, ಅಕ್ಷರ ಜ್ಞಾನ ಜೀವನ ರೂಪಿಸುತ್ತದೆ. ಶಿಕ್ಷಣ ಇಲ್ಲದ್ದರಿಂದ ಕೆಲವರು ಅಪರಾಧಿ ಕೃತ್ಯ ಎಸಗುವ ಸಾಧ್ಯತೆಯಿದೆ. ಅಕ್ಷರ ಜ್ಞಾನದಿಂದ ಅರಿವು ಮತ್ತು ಜೀವನ ರೂಪಿಸಿಕೊಳ್ಳಬಹುದು. ಬದುಕಿನಲ್ಲಿ ಬದಲಾವಣೆ ಕಾಣಬಹುದು. ಸಮಾಜದಲ್ಲಿ ಗೌರವ ತಂದುಕೊಳ್ಳಬಹುದು ಎಂದರು. ಉಪ ಕಾರಾಗೃಹ ಅಧೀಕ್ಷಕ ಅಶೋಕ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಪ್ರಾಸ್ತಾವಿಕ ಮಾತನಾಡಿದರು.
ಎಸ್.ಆರ್. ರಾಚಣ್ಣ ಪ್ರತಿಜ್ಞಾವಿಧಿ ಬೋಧಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಪೊಲೀಸ್ ಇನ್ಸ್ ಪೆಕ್ಟರ್ ಅರುಣಕುಮಾರ ಸಾಳುಂಕೆ, ಪಿಎಸ್‌ಐ ವೆಂಕಟೇಶ, ಜಾನಪದ ತಜ್ಞ ಡಾ| ರಾಮು ಮೂಲಗಿ ಮೊದಲಾದವರಿದ್ದರು. ರೇಷ್ಮಾ ನದಾಫ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.