ಗುರೂಜಿ ಹತ್ಯೆಗೆ ಬೇನಾಮಿ ಆಸ್ತಿ ಮಾರಾಟ ನಂಟು?

ರಾಜಕೀಯ ಮುಖಂಡನಿಗೆ ಆಸ್ತಿ ಮಾರಿ ಹಣ ಪಡೆದಿದ್ದ ಆರೋಪಿ ; ಅಡ್ಡಿಯಾಗಿದ್ದ ಗುರೂಜಿ ಮೇಲೆ ದ್ವೇಷ ಸಾಧನೆ

Team Udayavani, Jul 12, 2022, 3:46 PM IST

14

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಆರೋಪಿತರು ಬೇನಾಮಿ ಆಸ್ತಿ ಮಾರಾಟ ಮಾಡಿದ್ದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಗುರೂಜಿ ಸಿಜಿ ಪರಿವಾರದ ಓರ್ವ ನೌಕರನ ಹೆಸರಲ್ಲಿ 5.11 ಎಕರೆ ಜಮೀನನ್ನು ಮಾಡಿದ್ದರು. ಈ ಬೇನಾಮಿ ಆಸ್ತಿಯನ್ನು ಧಾರವಾಡದ ರಾಜಕೀಯ ಮುಖಂಡರೊಬ್ಬರು ಖರೀದಿಸಿದ್ದರು. ನೌಕರ ಮತ್ತು ಮಧ್ಯವರ್ತಿ ಸೇರಿ ಮುಂಗಡವಾಗಿ 50ಲಕ್ಷ ರೂ. ಪಡೆದು ಹಂಚಿಕೊಂಡಿದ್ದರು. ಇದಕ್ಕೆ ಹತ್ಯೆ ಆರೋಪಿ ಮಹಾಂತೇಶ ಕೈಜೋಡಿಸಿ 20 ಲಕ್ಷ ರೂ. ಪಡೆದಿದ್ದ. ಇನ್ನುಳಿದ ಹಣ ನೋಂದಣಿ ವೇಳೆ ಕೊಡುವುದಾಗಿ ಖರೀದಿದಾರ ಹೇಳಿದ್ದ ಎನ್ನಲಾಗಿದೆ.

ಈ ವಿಷಯ ಗುರೂಜಿಗೆ ಗೊತ್ತಾಗಿ ಜಮೀನು ಖರೀದಿ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದರು. ಅಲ್ಲದೆ ಅಣ್ಣನ ಮಗನ ಮೂಲಕ ಕೋರ್ಟ್‌ನಲ್ಲಿ ತಡೆಯಾಜ್ಞೆ ಕೂಡ ತಂದಿದ್ದರು. ಹೀಗಾಗಿ ಖರೀದಿದಾರನು ತಾನು ಕೊಟ್ಟ ಮುಂಗಡ ಹಣವನ್ನು ಮರಳಿಸುವಂತೆ ಮಹಾಂತೇಶಗೆ ದುಂಬಾಲು ಬಿದ್ದಿದ್ದ. ಆದರೆ ಆಸ್ತಿ ಮಾರಾಟ ಮಾಡಿ ಮುಂಗಡವಾಗಿ ಪಡೆದಿದ್ದ ಹಣವನ್ನು ಮಹಾಂತೇಶ ಖರ್ಚು ಮಾಡಿದ್ದ. ಅಲ್ಲದೆ ಗುರೂಜಿ ಇದಕ್ಕೆ ಅಡ್ಡಿಪಡಿಸಿದ್ದರಿಂದ ಅವರ ಮೇಲೆ ಮತ್ತಷ್ಟು ಸಿಟ್ಟಾಗಿದ್ದ ಎನ್ನಲಾಗಿದೆ.

ಗುರೂಜಿ ಬೇನಾಮಿಯಾಗಿ ಮಾಡಿದ್ದ ಬಹುತೇಕ ಆಸ್ತಿಗಳನ್ನು ಮಹಾಂತೇಶ ಮರಳಿಕೊಡಿಸಿದ್ದ. ಆ ಸಂದರ್ಭದಲ್ಲಿ ಗುರೂಜಿ ಆಸ್ತಿ ಮರಳಿ ಕೊಡಿಸಿದರೆ 60 ಲಕ್ಷ ರೂ. ಕೊಡುವುದಾಗಿ, ತಿಂಗಳಿಗೆ 50 ಸಾವಿರ ರೂ. ಹಾಗೂ ಒಂದು ಪ್ಲಾಟ್‌ ನೀಡುವುದಾಗಿ ಹೇಳಿದ್ದರಂತೆ. ಆದರೆ ಕೆಲಸ ಮುಗಿದ ಮೇಲೆ ಹಣ ಕೊಡಲು ನಿರಾಕರಿಸಿದ್ದರಂತೆ. ಮಹಾಂತೇಶನು ತಾನು ಮಾಡುತ್ತಿದ್ದ ವ್ಯವಹಾರದಲ್ಲೂ ಕೈಸುಟ್ಟು ಕೊಂಡಿದ್ದರಿಂದ ಹಾಗೂ ಹಣವಿಲ್ಲದೆ ಕೈಖಾಲಿಯಾಗಿದ್ದರಿಂದ ಗುರೂಜಿ ಮೇಲೆ ವಿಪರೀತ ದ್ವೇಷ ಸಾಧಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಇದೇ ಕಾರಣವಿಟ್ಟುಕೊಂಡು ಅವರನ್ನು ಹತ್ಯೆ ಮಾಡಿದ್ದಾಗಿ ಹೇಳಲಾಗುತ್ತಿದೆ.

ಆರೋಪಿತರು ಇಂದು ನ್ಯಾಯಾಂಗ ವಶಕ್ಕೆ

ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿ ಬಂಧಿತರಾಗಿದ್ದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಜು. 6ರಿಂದ ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ಜು. 12ರಂದು ನ್ಯಾಯಾಲಯಕ್ಕೆ ಇಬ್ಬರನ್ನು ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಿದ್ದಾರೆ.

ಟಾಪ್ ನ್ಯೂಸ್

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

Hubli: ಸ್ಥಾನಮಾನ ಸಿಗದಿದ್ದವರಿಂದ ಪಕ್ಷ ವಿರೋಧಿ ಹೇಳಿಕೆ: ಜಿಟಿಡಿ ವಿರುದ್ದ ಜೋಶಿ ಕಿಡಿ

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್

8

Alnavar: ಸ್ನಾನಕ್ಕೆಂದು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

Successful Operation: ಅಪಘಾತದಲ್ಲಿ ಎದೆಗೆ ಹೊಕ್ಕ ಪೈಪ್‌-ಯುವಕನಿಗೆ ಮರುಜನ್ಮ

Successful Operation: ಅಪಘಾತದಲ್ಲಿ ಎದೆಗೆ ಹೊಕ್ಕ ಪೈಪ್‌-ಯುವಕನಿಗೆ ಮರುಜನ್ಮ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

vidya balan in bhool bhulaiya 3

Vidya Balan; ಮತ್ತೆ ಬಂದಳು ಮಂಜುಳಿಕಾ!

mumbai

Short Circuit; ಅಗ್ನಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.