ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಟ ಜೋರು

ನಿಗದಿತ ಸಮಯಕ್ಕೆ ಹಣವೂ ರೈತರ ಖಾತೆಗೆ ಜಮೆ ಆಗಲಿ ಎಂಬುದೇ ರೈತರ ಒತ್ತಾಸೆ.

Team Udayavani, Mar 18, 2022, 5:23 PM IST

ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಟ ಜೋರು

ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಹಾಗೂ ಕಾಳು ಮಾರಾಟಕ್ಕೆ ಈ ವರ್ಷ ರೈತರಿಂದ ಉತ್ತಮ ಸ್ಪಂದನೆ ಲಭಿಸಿದೆ. ಕಳೆದ ವರ್ಷ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದ ಜತೆಗೆ ಹೊರಗಡೆಯೇ ಅಧಿಕ ಬೆಲೆ ಲಭಿಸಿದ ಕಾರಣ ರೈತರು ಬೆಂಬೆಲೆಯ ಕೇಂದ್ರಗಳಲ್ಲಿ ಕಾಳು ಮಾರಾಟಕ್ಕೆ ಹಿಂದೇಟು ಹಾಕಿದ್ದರು.

ಆದರೆ ಈ ವರ್ಷ ನಿಗದಿತ ಸಮಯಕ್ಕೆ ನೋಂದಣಿ ಪ್ರಕ್ರಿಯೆ ಆರಂಭದ ಜತೆ ಜತೆಗೆ ಖರೀದಿ ಪ್ರಕ್ರಿಯೆಗೂ ಚಾಲನೆ ಸಿಕ್ಕಿದ್ದು, ಇದಲ್ಲದೇ ಮಾರುಕಟ್ಟೆಯಲ್ಲಿ ಬೆಂಬೆಲೆಗಿಂತ ಕಡಿಮೆ ಬೆಲೆ ಕಾರಣ ಕಡಲೆ ಬೆಳೆದ ರೈತರು ಬೆಂಬೆಲೆ ಖರೀದಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ.

2020ರಲ್ಲಿ ಬೆಂಬೆಲೆಯಡಿ ತೆರೆದಿದ್ದ ಖರೀದಿ ಕೇಂದ್ರಗಳಲ್ಲಿ 24 ಸಾವಿರಕ್ಕೂ ಹೆಚ್ಚು ರೈತರಿಂದ 2ಲಕ್ಷ 8ಸಾವಿರ ಕ್ವಿಂಟಲ್‌ನಷ್ಟು ಖರೀದಿಯಾಗಿತ್ತು. ಆದರೆ ಕಳೆದ ವರ್ಷ ಖರೀದಿಯ ವಿಳಂಬ ಪ್ರಕ್ರಿಯೆಯಿಂದ 16 ಕೇಂದ್ರಗಳಲ್ಲಿ 76, 148 ಕ್ವಿಂಟಲ್‌ನಷ್ಟು ಅಷ್ಟೇ ಖರೀದಿಯಾಗಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ತೆರೆದಿರುವ 22 ಕೇಂದ್ರಗಳಲ್ಲಿ ಮಾ.15 ರ ಅಂತ್ಯಕ್ಕೆ ಜಿಲ್ಲೆಯಲ್ಲಿ 16,537ರೈತರು ಕಡಲೆ ಬೆಳೆ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿದ್ದು, ಈ ಪೈಕಿ ಈಗಾಗಲೇ 29,726.5 ಕ್ವಿಂಟಲ್‌ನಷ್ಟು ಖರೀದಿಯಾಗಿದೆ. ಹೀಗಾಗಿ ಸಹಜವಾಗಿ ಈ ಸಲ ನೋಂದಣಿ, ಖರೀದಿ ಪ್ರಮಾಣ ಮತ್ತೆ ಏರುಮುಖ ಮಾಡುವ ನಿರೀಕ್ಷೆ ಇದೆ.

ಖರೀದಿ ಕೇಂದ್ರಗಳ ಹೆಚ್ಚಳ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳನ್ನು ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ 5,230 ರೂ.ಗಳಂತೆ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಕೇಂದ್ರಗಳನ್ನು ತೆರೆಯಲಾಗಿದೆ. ಫೆ.14ರಿಂದ ಆರಂಭಗೊಂಡ ಈ ಕೇಂದ್ರಗಳಲ್ಲಿ ಮಾರ್ಚ್‌ ತಿಂಗಳಾಂತ್ಯದವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 15 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು.

ಆದರೆ ಈ ವರ್ಷ ಆರಂಭದಲ್ಲಿ 19 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಆ ಬಳಿಕ ರೈತರ ಬೇಡಿಕೆ ಅನುಸಾರ ಇದೀಗ ಬರೋಬ್ಬರಿ 22 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಲ್‌ ಹಾಗೂ ಗರಿಷ್ಟ 15 (ಹದಿನೈದು) ಕ್ವಿಂಟಲ್‌ ಪ್ರಮಾಣದ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಖರೀದಿಗೆ ಅವಕಾಶ ನೀಡಲಾಗಿದೆ.

ಬೆಂಬೆಲೆಯತ್ತ ರೈತರು: ಕಳೆದ ವರ್ಷದಲ್ಲಿ ಪ್ರತಿ ಎಕರೆಗೆ 5-6 ಕ್ವಿಂಟಲ್‌ನಷ್ಟು ಕಡಲೆ ಬೆಳೆಯ ಇಳುವರಿ ಸಿಕ್ಕಿತ್ತು. ಈ ವರ್ಷ ಮಳೆಯ ಹೊಡೆತಕ್ಕೆ ಕಡಲೆ ನಿರೀಕ್ಷೆಯನ್ನೇ ಕೈಬಿಟ್ಟಿದ್ದ ರೈತರಿಗೆ ಕಡಲೆ ಬಂಪರ್‌ ಬೆಳೆ ನೀಡಿದೆ. ಹೀಗಾಗಿ ಕಳೆದ ಬಾರಿಗಿಂತ ಹೆಚ್ಚು ಇಳುವರಿ ಸಿಕ್ಕಿದ್ದು, ಪ್ರತಿ ಎಕರೆಗೆ 8-9 ಕ್ವಿಂಟಲ್‌ ಇಳುವರಿ ಬಂದಿದೆ. ಬಂಪರ್‌ ಬೆಳೆ ಸಿಕ್ಕರೂ ಬಂಪರ್‌ ಬೆಲೆ ಇಲ್ಲದಾಗಿದೆ. ಕಳೆದ ಬಾರಿಗಿಂತ ಬೆಲೆ ಕಡಿಮೆ ಇದ್ದು, ಕ್ವಿಂಟಲ್‌ ಗೆ 4600-4700 ರೂ. ದಾಟದಂತಾಗಿದೆ.

ಹಣದ ಅಡಚಣೆ ಇದ್ದವರು ಈಗಾಗಲೇ ಬಂದಷ್ಟಕ್ಕೆ ಕಾಳು ಮಾರಾಟ ಮಾಡಿದ್ದರೆ, ಸ್ವಲ್ಪ ಅನುಕೂಲ ಉಳ್ಳವರು ಬೆಂಬೆಲೆಯ ಕೇಂದ್ರಗಳತ್ತ ಈ ಸಲ ರೈತರು ಮುಖ ಮಾಡಿದ್ದಾರೆ. ಕಳೆದ ಬಾರಿಗೆ ಬೆಂಬೆಲೆಯಡಿ ಮಾರಾಟ ಮಾಡಿದ ರೈತರಿಗೆ ಹಣ ಜಮೆ ಆಗಲು ತೊಂದರೆ ಉಂಟಾಗಿತ್ತು. ಈ ಸಲ ಈ ತೊಂದರೆ ಆಗದಂತೆ ನಿಗದಿತ ಸಮಯಕ್ಕೆ ಹಣವೂ ರೈತರ ಖಾತೆಗೆ ಜಮೆ ಆಗಲಿ ಎಂಬುದೇ ರೈತರ ಒತ್ತಾಸೆ.

ಜಿಲ್ಲೆಯಲ್ಲಿ ತೆರೆದಿರುವ 22 ಬೆಂಬೆಲೆಯ ಖರೀದಿ ಕೇಂದ್ರಗಳಲ್ಲಿಯೇ ಮಾ.15 ಅಂತ್ಯಕ್ಕೆ ಪಿಕೆಪಿಎಸ್‌ ಉಪ್ಪಿನಬೆಟಗೇರಿ ಕೇಂದ್ರದಲ್ಲಿಯೇ ಅತೀ ಹೆಚ್ಚು 1702 ರೈತರು ಹೆಸರು ನೋಂದಣಿ ಮಾಡಿಸಿದ್ದರೆ, ಪಿಕೆಪಿಎಸ್‌ ಯರೇಬೂದಿಹಾಳ ಕೇಂದ್ರದಲ್ಲಿ ಅತೀ ಕಡಿಮೆ 173 ರೈತರಿಂದ ಅಷ್ಟೇ ನೋದಣಿಯಾಗಿದೆ. ಇನ್ನು ಎಫ್‌ಪಿಒ ಅಣ್ಣಿಗೇರಿ ಕೇಂದ್ರದಲ್ಲಿ 3489 ಕ್ವಿಂಟಲ್‌ನಷ್ಟು ಅಧಿಕ ಕಡಲೆ ಖರೀದಿಯಾಗಿದ್ದರೆ ಪಿಕೆಪಿಎಸ್‌ ಹಾಳಕುಸುಗಲ್‌ ಕೇಂದ್ರಗಳಲ್ಲಿ ಅತಿ ಕಡಿಮೆ 12 ಕ್ವಿಂಟನಲ್‌ನಷ್ಟು ಖರೀದಿಯಾಗಿದೆ. ಇದಲ್ಲದೇ ಪಿಕೆಪಿಎಸ್‌ ಯರೇಬೂದಿಹಾಳ ಹಾಗೂ ಪಿಕೆಪಿಎಸ್‌ ಯಲಿವಾಳ ಕೇಂದ್ರಗಳಲ್ಲಿ ಈವರೆಗೂ ಖರೀದಿ ಪ್ರಕ್ರಿಯೆ ಆರಂಭಗೊಂಡಿಲ್ಲ.

ಜಿಲ್ಲೆಯಲ್ಲಿ ತೆರೆದಿರುವ 22 ಕೇಂದ್ರಗಳಲ್ಲಿ ಮಾ.30 ರ ವರೆಗೆ ಹೆಸರು ನೋಂದಣಿ ಮಾಡಲು ಅವಕಾಶವಿದ್ದು, ಮೇ 14 ರವರೆಗೆ ಖರೀದಿ ಪ್ರಕ್ರಿಯೆ ಇರಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಈಗಾಗಲೇ 29,726.5 ಕ್ವಿಂಟಲ್‌ನಷ್ಟು ಖರೀದಿ ಮಾಡಲಾಗಿದೆ. ಇನ್ನು ಕಳೆದ ಬಾರಿ ರೈತರಿಗೆ ಹಣ ಜಮೆ ಆಗಲು ವಿಳಂಬವಾಗಿತ್ತು. ಈ ಸಲ ಅಗತ್ಯ ಕ್ರಮ ಕೈಗೊಂಡಿದ್ದು, ಆದಷ್ಟು ಬೇಗ ರೈತರ ಖಾತೆಗಳಿಗೂ ಹಣ ಜಮೆ ಆಗಲಿದೆ.
ವಿನಯ್‌ ಪಾಟೀಲ,
ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ

ಮಳೆಯ ಹೊಡೆತಕ್ಕೆ ಈ ವರ್ಷ ಇಳುವರಿಯ ನಿರೀಕ್ಷೆಯನ್ನೇ ಕೈಬಿಟ್ಟಿದ್ದೆವು. ಆದರೆ ಈ ವರ್ಷ ಕಳೆದ ಬಾರಿಗಿಂತ ಹೆಚ್ಚು ಇಳುವರಿ ಬಂದಿದ್ದು, ಬಂಪರ್‌ ಬೆಳೆ ಸಿಕ್ಕಿದೆ. ಆದರೆ ಕಳೆದ ಬಾರಿಗಿಂತ ಬೆಲೆ ಕಡಿಮೆ ಇದ್ದು, ಹೀಗಾಗಿ ಬೆಂಬೆಲೆಯ ಕೇಂದ್ರಗಳಲ್ಲಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿದ್ದೇನೆ. ಆದರೆ ಕಳೆದ ಬಾರಿ ಮಾಡಿದಂತೆ ಹಣಕ್ಕಾಗಿ ಕಾಯುವಂತೆ ಮಾಡದೇ ಆದಷ್ಟು ಬೇಗ ಹಣ ರೈತರ ಖಾತೆಗೆ ಜಮೆ ಮಾಡಬೇಕು.
ಬಿ.ಆರ್‌. ಮೃತ್ಯುಂಜಯ, ರೈತ

ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

NIkhil KUMMI

Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ

1-madaraa

CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.